ನಿಮ್ಮ ಸುತ್ತಮುತ್ತ ಇರುವ ಕಂಪ್ಯೂಟರ್ ಅನ್ನು ಹಲವು ರೀತಿಯಲ್ಲಿ ವಿಂಗಡಿಸ ಬಹುದು.
೧. ಕಂಪ್ಯೂಟರ್ ಪ್ರಾಸೆಸ್ (ಸಂಸ್ಕರಣೆ) ಮಾಡುವ ಮಾಹಿತಿಯ ಆಧಾರದ ಮೇಲೆ
೨. ಕಂಪ್ಯೂಟರ್ ನ ಗಾತ್ರ ಹಾಗೂ ಶಕ್ತಿಯ ಆಧಾರದ ಮೇಲೆ
ಬನ್ನಿ ವಿವರವಾಗಿ ನಿಮ್ಮ ಅಕ್ಕ ಪಕ್ಕ ಇರುವ ವಿಭಿನ್ನ ಕಂಪ್ಯೂಟರ್ ಬಗ್ಗೆ ತಿಳಿಯೋಣ.
{tocify} $title={ವಿಷಯ ಸೂಚಿ}
ಮಾಹಿತಿಯ ಆಧಾರದ ಮೇಲೆ
ಈ ಡಿಜಿಟಲ್ ಹಾಗೂ ಅನಾಲಾಗ್ ಬಗ್ಗೆ ಇನ್ನೊಂದು ಸಲ ವಿವರವಾಗಿ ಹೇಳ್ತಿನಿ. ಈಗ ಸದ್ಯಕ್ಕೆ ಡಿಜಿಟಲ್ ಅಂದ್ರೆ ಅಂಕೆಗಳ ರೂಪದ, ಅನಾಲಾಗ್ ಎಂದರೆ ಪ್ರಮಾಣದ ರೂಪದ ಮಾಹಿತಿ ಎಂದು ನೆನಪಿಡಿ.
ನಮ್ಮ ಸುತ್ತ ಮುತ್ತ ಇರುವ ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್, ಡೆಸ್ಕ್ ಟಾಪ್ ಕಂಪ್ಯೂಟರ್ ಎಲ್ಲ ಡಿಜಿಟಲ್ ಕಂಪ್ಯೂಟರ್ ಆಗಿವೆ.
೧. ಡಿಜಿಟಲ್ ಕಂಪ್ಯೂಟರ್
ಡಿಜಿಟಲ್ ಮಾಹಿತಿ ಮಾತ್ರ ಸಂಸ್ಕರಿಸುವ ಹಾಗೂ ಉಳಿಸುವ ಸಾಮರ್ಥ್ಯ ಇರುವ ಕಂಪ್ಯೂಟರ್ ಗೆ ಡಿಜಿಟಲ್ ಕಂಪ್ಯೂಟರ್ ಅನ್ನುತ್ತಾರೆ.
೨. ಅನಾಲಾಗ್ ಕಂಪ್ಯೂಟರ್
೩. ಹೈಬ್ರಿಡ್ (ಮಿಶ್ರ) ಕಂಪ್ಯೂಟರ್
ಗಾತ್ರ ಹಾಗೂ ಶಕ್ತಿಯ ಆಧಾರದ ಮೇಲೆ
ಕಂಪ್ಯೂಟರ್ ನ ಗಾತ್ರ, ರೂಪ ಹಾಗೂ ಅದರ ಶಕ್ತಿಯ ಆಧಾರದ ಮೇಲೆ ಈ ಮುಂದಿನ ರೀತಿಯಲ್ಲಿ ವಿಂಗಡಿಸಬಹುದು. ಬಹುಶಃ ಈ ಮುಂದಿನ ಹಲವು ರೀತಿಯ ಕಂಪ್ಯೂಟರ್ ನೀವು ಬಳಸಿರಬಹುದು ಅಥವಾ ಕನಿಷ್ಟ ನೋಡಿರಬಹುದು.
- ಸ್ಮಾರ್ಟ್ ವಾಚ್
- ಸ್ಮಾರ್ಟ್ ಕನ್ನಡಕ
- ಡೆಸ್ಕ್ ಟಾಪ್
- ನೋಟ್ ಬುಕ್
- ಲ್ಯಾಪ್ ಟಾಪ್
- ಪರ್ಸನಲ್ ಡಿಜಿಟಲ್ ಅಸಿಸ್ಟಂಟ್
- ಸ್ಮಾರ್ಟ್ ಫೋನ್ / ಮೊಬೈಲ್
- ಟ್ಯಾಬ್ಲೆಟ್ ಅಥವಾ ಟ್ಯಾಬ್
ಬನ್ನಿ ಪ್ರತಿಯೊಂದು ಕಂಪ್ಯೂಟರ್ ಬಗ್ಗೆ ಸ್ವಲ್ಪ ತಿಳಿಯೋಣ.
೧. ವಿಯರೇಬಲ್ ಕಂಪ್ಯೂಟರ್ (ಧರಿಸುವಂತಹ / ತೊಡುವಂತಹ / ಉಡುವಂತಹ ಕಂಪ್ಯೂಟರ್)
ಸ್ಮಾರ್ಟ್ ವಾಚ್
ಸ್ಟ್ಯಾಂಡ್ ಅಲೋನ್ ಸ್ಮಾರ್ಟ್ ವಾಚ್ ಅಲ್ಲಿ ಸಿಮ್ ಕಾರ್ಡ್ ಹಾಕಿ ಕಾಲ್, ಮೆಸೇಜ್ ಎಲ್ಲ ಮಾಡಬಹುದು. ಸ್ಮಾರ್ಟ್ ಫೋನ್ ಜೊತೆ ಜೋಡಿ ಮಾಡುವ ಅವಶ್ಯಕತೆ ಇಲ್ಲ. ಆದರೆ ಜೋಡಿ ಮಾಡಿ ಸಹ ಬಳಸಬಹುದು. ಇದರ ಬೆಲೆ ಜಾಸ್ತಿ ಹಾಗೂ ಇದು ಗಾತ್ರದಲ್ಲಿ ದೊಡ್ಡದು.
ರೆಗ್ಯುಲರ್ ಸ್ಮಾರ್ಟ್ ವಾಚ್ ಅಲ್ಲಿ ಸ್ಮಾರ್ಟ್ ಫೋನ್ ಜೊತೆ ಜೋಡಿ ಮಾಡಲೇ ಬೇಕು. ಇಲ್ಲದಿದ್ದರೆ ಅದರಲ್ಲಿನ ಹಲವು ಫೀಚರ್ ಬಳಸಲು ಸಾಧ್ಯವಿಲ್ಲ. ಬೆಲೆ ಕಡಿಮೆ ಹಾಗೂ ಚಿಕ್ಕ ಗಾತ್ರದಾಗಿರುತ್ತದೆ.
ಸ್ಮಾರ್ಟ್ ಕನ್ನಡಕ
ಕನ್ನಡಕದ ಒಂದು ಮೂಲೆಯಲ್ಲಿ ಕ್ಯಾಮೆರಾ, ಪರದೆ ಜೋಡಿಸಿ ಬ್ಯಾಟರಿ ಜೊತೆಗೆ ಇರುವ ಕಂಪ್ಯೂಟರ್ ಅನ್ನು ಸ್ಮಾರ್ಟ್ ಕನ್ನಡಕ ಅನ್ನುತ್ತಾರೆ. ಗೂಗಲ್ ಗ್ಲಾಸ್ ಇದಕ್ಕೆ ಉದಾಹರಣೆ. ಆದರೆ ಅದು ಅಷ್ಟೊಂದು ಜನಪ್ರಿಯ ಆಗಲಿಲ್ಲ.
೨. ಮೈಕ್ರೋ ಕಂಪ್ಯೂಟರ್ (ಪರ್ಸನಲ್ ಕಂಪ್ಯೂಟರ್)
ಕಂಪ್ಯೂಟರ್ ತಂತ್ರಜ್ಞ ಅಲ್ಲದವರೂ ಜನ ಸಾಮಾನ್ಯರು ಬಳಸುವಂತೆ ವಿನ್ಯಾಸ ಗೊಳಿಸಿದ ತುಂಬಾ ದುಬಾರಿ ಅಲ್ಲದ ಗಾತ್ರದಲ್ಲೂ ಚಿಕ್ಕದಾಗಿರುವ ಕಂಪ್ಯೂಟರ್ ಅನ್ನು ಪರ್ಸನಲ್ ಕಂಪ್ಯೂಟರ್ ಅಥವಾ ಮೈಕ್ರೋ ಕಂಪ್ಯೂಟರ್ ಅನ್ನುತ್ತಾರೆ.
ಈ ಕಂಪ್ಯೂಟರ್ ಅನ್ನು ಗೇಮಿಂಗ್, ಸಂವಹನ, ಬ್ರೌಸಿಂಗ್, ವಿಡಿಯೋ/ಆಡಿಯೋ ವೀಕ್ಷಣೆ, ಕೋಡಿಂಗ್, ಮಾನಿಟರಿಂಗ್ ಹೀಗೆ ಹಲವು ಕಾರಣಗಳಿಗೆ ಬಳಸಬಹುದು.
ಪರ್ಸನಲ್ ಕಂಪ್ಯೂಟರ್ ಬಳಸಲು ನಿಮಗೆ ಕೋಡಿಂಗ್ ಅಥವಾ ಇನ್ನಿತರ ತಂತ್ರಜ್ಞಾನದ ಅರಿವು ಬೇಕಿಲ್ಲ. ಕೇವಲ ಅಪ್ಲಿಕೇಶನ್ ಹಾಗೂ ಆಪರೇಟಿಂಗ್ ಸಿಸ್ಟೆಮ್ ಬಳಸುವದು ತಿಳಿದು ಇದ್ದರೆ ಸಾಕು.
ಆದ್ದರಿಂದಲೇ ಇವು ಜನಪ್ರಿಯವಾದವು.
ಡೆಸ್ಕ್ ಟಾಪ್
ಒಂದೇ ಜಾಗದಲ್ಲಿಟ್ಟು ಬಳಸಲು ವಿನ್ಯಾಸ ಮಾಡಿದ ವಿಶೇಷತಃ ಮಾನಿಟರ್ ಅನ್ನು ಡೆಸ್ಕ್ ಮೇಲೆ ಇಟ್ಟು ಬಳಸಲು ಅನುಕೂಲವಾಗಿರುವ ಕಂಪ್ಯೂಟರ್ ಗೆ ಡೆಸ್ಕ್ ಟಾಪ್ ಕಂಪ್ಯೂಟರ್ ಎನ್ನುತ್ತಾರೆ.
ಡೆಸ್ಕ್ ಟಾಪ್ ಅಲ್ಲಿ ಮುಖ್ಯವಾಗಿ ಹಲವು ಬಗೆಗಳಿವೆ
೧. ಆಲ್ ಇನ್ ಒನ್ (ಎಲ್ಲವನ್ನೂ ಒಳಗೊಂಡ)
೨. ಗೇಮಿಂಗ್ ಕಂಪ್ಯೂಟರ್
ಸಾಮಾನ್ಯವಾಗಿ ಈ ತರಹದ ಕಂಪ್ಯೂಟರ್ ಗಳನ್ನು ಗೇಮಿಂಗ್ ಆಡಲು ಹಾಗೂ ವಿಡಿಯೋ ಎಡಿಟಿಂಗ್ ಗೆ ಬಳಸುತ್ತಾರೆ .
೩. ವರ್ಕ್ ಸ್ಟೇಶನ್
ವರ್ಕ್ ಸ್ಟೇಶನ್ ಕೂಡಾ ಶಕ್ತಿಶಾಲಿ ಪ್ರಾಸೆಸರ್ ಗಳನ್ನು ಹೊಂದಿದ್ದು ಹೈ ರಿಸೊಲ್ಯೂಶನ್ ಮಾನಿಟರ್ ಹೊಂದಿರುತ್ತದೆ.
ವಿಡಿಯೋ ಅಥವಾ ಆಡಿಯೋ ಎಡಿಟಿಂಗ್ ಗೆ, ಅಪ್ಲಿಕೇಶನ್ ಡೆವೆಲಪ್ ಮೆಂಟ್, ವೈಜ್ಞಾನಿಕ ಲೆಕ್ಕಾಚಾರಕ್ಕೆ ಗೆ ಬಳಸುತ್ತಾರೆ
ಲ್ಯಾಪ್ ಟಾಪ್ ಅಥವಾ ನೋಟ್ ಬುಕ್ ಕಂಪ್ಯೂಟರ್
ಬಳಕೆ ಹಾಗೂ ಗಾತ್ರದ ಆಧಾರದ ಮೇಲೆ ಲ್ಯಾಪ್ ಟಾಪ್ ಅನ್ನು ಹೀಗೆ ವಿಂಗಡಿಸುತ್ತಾರೆ.
- ಸಾಮಾನ್ಯ ಲ್ಯಾಪ್ ಟಾಪ್
- ಅಲ್ಟ್ರಾ ಬುಕ್ : ಇದು ಸಾಮಾನ್ಯ ಲ್ಯಾಪ್ ಟಾಪ್ ಗಿಂತ ಜಾಸ್ತಿ ಕಂಪ್ಯಾಕ್ಟ್ ಆಗಿದ್ದು ಶಕ್ತಿಶಾಲಿ ಕೂಡಾ ಆಗಿರುತ್ತದೆ. ಬೆಲೆ ಕೂಡಾ ಜಾಸ್ತಿ.
- ಗೇಮಿಂಗ್ ಲ್ಯಾಪ್ ಟಾಪ್: ಇದು ಗೇಮಿಂಗ್ ಆಡಲು ಅನುಕೂಲ ಆಗುವಂತೆ ಶಕ್ತಿಶಾಲಿ ಗ್ರಾಫಿಕ್ಸ್ ಪ್ರಾಸೆಸರ್ ಹಾಗೂ ಸ್ವಲ್ಪ ದಪ್ಪ ಹಾಗೂ ಭಾರ ಕೂಡಾ ಇರುತ್ತದೆ. ಇದರ ವೇಗ ಜಾಸ್ತಿ.
- ಕ್ರೋಮ್ ಬುಕ್: ಗೂಗಲ್ ಅವರ ಕ್ರೋಮ್ ಆಪರೇಟಿಂಗ್ ಸಿಸ್ಟೆಮ್ ಇರುವ ಇದು ಕೆಲವು ಅಂತರ್ಜಾಲ ಸಂಬಂಧಿಸಿದ ಕೆಲಸಕ್ಕೆ ಮಾತ್ರ ಯೋಗ್ಯ. ಇದರ ಬೆಲೆ ಸಾಮಾನ್ಯವಾಗಿ ಕಡಿಮೆ.
- ರಗ್ಗೆಡ್ ಲ್ಯಾಪ್ ಟಾಪ್: ಮಿಲಿಟರಿ ಅಥವಾ ತುಂಬಾ ಪ್ರತಿಕೂಲ ವಾತಾವಾರಣ ಸನ್ನಿವೇಶಗಳಲ್ಲಿ ಬಳಸಲು ಗಟ್ಟಿಯಾದ ಕೋಶ ಇರುವ ಈ ಲ್ಯಾಪ್ ಟಾಪ್ ಬಳಸಲಾಗುತ್ತದೆ.
- ಕನ್ವರ್ಟಿಬಲ್ : ಲ್ಯಾಪ್ ಟಾಪ್ ನಂತೆಯೂ ಬೇಕಾದಾಗ ಟ್ಯಾಬ್ಲೆಟ್ ತರಾನೂ ಬಳಸುವಂತೆ ಈ ಲ್ಯಾಪ್ ಟಾಪ್ ವಿನ್ಯಾಸ ಮಾಡಿರುತ್ತಾರೆ.
ಪರ್ಸನಲ್ ಡಿಜಿಟಲ್ ಅಸಿಸ್ಟಂಟ್
ಸ್ಮಾರ್ಟ್ ಫೋನ್ / ಮೊಬೈಲ್
ಇಂದು ಸ್ಮಾರ್ಟ್ ಫೋನ್ ನಗರದಿಂದ ಹಳ್ಳಿಯವರೆಗೆ ಜನಪ್ರಿಯವಾಗಿದೆ. ಕೈಯಗಲದ ಈ ಯಂತ್ರದಲ್ಲಿ ವಿಡಿಯೋ ಕಾಲ್, ಫೋಟೋಗ್ರಾಫಿ, ಬ್ರೌಸಿಂಗ್, ಮೆಸೇಜಿಂಗ್, ಗೇಮಿಂಗ್, ಯೂಟ್ಯೂಬ್, ಫೇಸ್ ಬುಕ್ ಎಲ್ಲ ಸಾಧ್ಯ.
ಟ್ಯಾಬ್ಲೆಟ್ ಅಥವಾ ಟ್ಯಾಬ್
೪. ಮಿನಿ ಕಂಪ್ಯೂಟರ್
೫. ಸರ್ವರ್
ಸರ್ವರ್ ಒಂದು ವಿಶಿಷ್ಟ ಕಂಪ್ಯೂಟರ್ ಆಗಿದ್ದು ಯಾವುದೇ ನಿಲುಗಡೆ ಇಲ್ಲದೇ ವರ್ಷವಿಡೀ ರನ್ ಆಗುವಂತೆ ವಿನ್ಯಾಸ ಗೊಳಿಸಲಾಗಿರುತ್ತದೆ. ಆದಷ್ಟು ವೇಗವಾಗಿ ಗ್ರಾಹಕರಿಗೆ ವೆಬ್ ಸೈಟ್, ರೆಸ್ಟ್ ಸರ್ವೀಸ್, ವೆಬ್ ಸರ್ವೀಸ್ ಸೇವೆಯನ್ನು ಒದಗಿಸುವಂತೆ ಟ್ಯೂನ್ ಮಾಡಲಾಗಿರುತ್ತದೆ.
ಕೂಲಿಂಗ್ ಹಾಗೂ ನಿರಂತರ ಅಡೆತಡೆ ಇಲ್ಲದ ವಿದ್ಯುತ್ ಸಂಪರ್ಕ ಸೌಲಭ್ಯವನ್ನು ಹೊಂದಿರುತ್ತದೆ.
ಹಲವು ಸರ್ವರ್ ಗಳ ಗುಂಪನ್ನು ಕ್ಲಸ್ಟರ್ ಎನ್ನುತ್ತಾರೆ. ಒಂದು ಸರ್ವರ್ ನ ಶಕ್ತಿಗೆ ಮೀರಿದ ಕೆಲಸಗಳನ್ನು ಮಾಡಲು ಈ ಕ್ಲಸ್ಟರ್ ಗಳನ್ನು ಬಳಸಲಾಗುತ್ತದೆ. ಅಕಸ್ಮಾತ್ ತಾಂತ್ರಿಕ ಸಮಸ್ಯೆಯಿಂದ ಒಂದೋ ಎರಡೂ ಸರ್ವರ್ ಹಾಳಾದರೂ ಕ್ಲಸ್ಟರನ ಸೇವೆಗೆ ತೊಂದರೆ ಆಗುವದಿಲ್ಲ.
೬. ಮೇನ್ ಫ್ರೇಮ್
೭. ಸೂಪರ್ ಕಂಪ್ಯೂಟರ್
ಅತ್ಯಂತ ಶಕ್ತಿಶಾಲಿಯಾದ ಕಂಪ್ಯೂಟರ್ ಗಳಿಗೆ ಸೂಪರ್ ಕಂಪ್ಯೂಟರ್ ಅನ್ನುತ್ತಾರೆ. ಸೂಪರ್ ಕಂಪ್ಯೂಟರ್ ಗಳನ್ನು ವೈಜ್ಞಾನಿಕ ಸಂಶೋಧನೆ, ಖಗೋಳ ಶಾಸ್ತ್ರ ಮೊದಲಾದ ಕೆಲಸಗಳಿಗೆ ಬಳಸಲಾಗುತ್ತದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅನಿಸಿಕೆ ಏನು? ತಿಳಿಸಿ.