ಒಂದುವರೆ ದಶಕದ ಹಿಂದೆ ಬ್ಲ್ಯಾಕ್ ಬೆರ್ರಿ ಫೋನ್ ಅನೇಕ ಜನ ಕಂಪನಿಗಳಲ್ಲಿ ಆಫೀಸ್ ಫೋನ್ ಆಗಿ ಬಳಸುತ್ತಿದ್ದರು. ಕ್ವೆರ್ಟಿ (QWERTY) ಕೀಲಿಮಣೆ ಇರುತ್ತಿದ್ದ ಹಾಗೂ ಸುರಕ್ಷತೆಯಲ್ಲಿ ಅಪ್ರತಿಮವಾಗಿದ್ದ ಈ ಫೋನ್ ಗಳು ಎಂಟರ್ ಪ್ರೈಸ್ ಗಳ ಫೇವರಿಟ್ ಆಗಿತ್ತು.
{tocify} $title={ವಿಷಯ ಸೂಚಿ}
ಕೆಲವು ವರ್ಷಗಳ ಹಿಂದೆ ಟೆಕ್ಸಾಸ್ ನ ಸ್ಟಾರ್ಟ್ ಅಪ್ ಒನ್ ವಾರ್ಡ್ ಮೊಬಿಲಿಟಿ ಒಂದು ಬ್ಲ್ಯಾಕ್ ಬೆರ್ರಿ ಹೆಸರಲ್ಲಿ ೫ಜಿ ಅಂಡ್ರಾಯಿಡ್ ಫೋನ್ ಮಾಡುವ ಪ್ರಾಜೆಕ್ಟ್ ಮಾಡುತ್ತಲಿತ್ತು. 2021ರಲ್ಲಿ ಅದು ಹೊಸ ೫ಜಿ ಬ್ಲ್ಯಾಕ್ ಬೆರ್ರಿ ಫೋನ್ ಬಿಡುಗಡೆ ಮಾಡಬೇಕಿತ್ತು. ಈಗ ಆ ಕಂಪನಿ ಶಟ್ ಡೌನ್ ಆಗುತ್ತಿರುವ ಸುದ್ದಿ ಬಂದಿದೆ.
ಬನ್ನಿ ಒಂದು ಕಾಲದ ಜನಪ್ರಿಯ ಸ್ಮಾರ್ಟ್ ಫೋನ್ ಹೇಗೆ ಅಧಪತನ ಆಯ್ತು ನೋಡೋಣ. ನೆನಪಿಡಿ ಆ ಮೂಲ ಬ್ಲ್ಯಾಕ್ ಬೆರ್ರಿ ಕಂಪನಿ ಈಗಲೂ ಸುರಕ್ಷತೆ ಡೊಮೈನ್ ಅಲ್ಲಿ ಸಕ್ರಿಯ ವಾಗಿದೆ.
ಐಫೋನ್ / ಅಂಡ್ರಾಯಿಡ್ ಫೋನ್ ಜೊತೆ ಸೋಲು
ಐ ಫೋನ್ ಹಾಗೂ ಅಂಡ್ರಾಯಿಡ್ ಫೋನ್ ಯಶಸ್ಸಿಗೆ ನೊಕಿಯಾ ಹಾಗೂ ಬ್ಲ್ಯಾಕ್ ಬೆರ್ರಿ ಸ್ಪರ್ಧಿಸಲಾಗದೇ ಸೋತು ಹೋದವು.
ಅಂತಿಮ ಹಂತದಲ್ಲಿ ಬ್ಲ್ಯಾಕ್ ಬೆರ್ರಿ ಕಂಪನಿಯು ಝೆಡ್ 10 ಎಂಬ ಅಂಡ್ರಾಯಿಡ್ ಆಪರೇಟಿಂಗ್ ಸಿಸ್ಟೆಮ್ ಇದ್ದ ಫೋನ್ ಸಹ ಬಿಡುಗಡೆ ಮಾಡಿತ್ತು. ಆದರೆ ಅಷ್ಟರಲ್ಲಿ ಐಒಎಸ್ ಹಾಗೂ ಅಂಡ್ರಾಯಿಡ್ ಫೋನ್ ಗಳು ಎಂಟರ್ ಪ್ರೈಸ್ ಗೆ ಅಗತ್ಯ ಸುರಕ್ಷತೆ ಅಳವಡಿಸಿಕೊಂಡು ಬ್ಲ್ಯಾಕ್ ಬೆರ್ರಿ ಯನ್ನು ಸ್ಥಾನ ಪಲ್ಲಟ ಮಾಡಿ ಆಗಿತ್ತು.
ಬ್ಲ್ಯಾಕ್ ಬೆರ್ರಿಗೆ ತಕ್ಕ ಮಟ್ಟಿನ ಯಶಸ್ಸು ಅದರ ಅಂಡ್ರಾಯಿಡ್ ಫೋನಿಗೂ ಸಿಗಲಿಲ್ಲ.
ನೋಕಿಯಾ ಹಾಗೂ ಬ್ಲ್ಯಾಕ್ ಬೆರ್ರಿ ತಮ್ಮ ಬ್ರ್ಯಾಂಡ್ ಅನ್ನು ಬೇರೆ ಕಂಪನಿಗಳಿಗೆ ಸ್ಮಾರ್ಟ್ ಫೋನ್ ತಯಾರಿಸಲು ಲೈಸೆನ್ಸ್ ನೀಡಿ ತಾವು ಬೇರೆ ಕಡೆಗೆ ಗಮನ ಹರಿಸಿದವು.
ಒರಿಜಿನಲ್ ಬ್ಲ್ಯಾಕ್ ಬೆರ್ರಿ ಕಂಪನಿ ಈಗಲೂ ಇದ್ದು ಎಂಡ್ ಪಾಯಿಂಟ್ ಸುರಕ್ಷತೆ ಹಾಗೂ ಇನ್ನಿತರ ಸೇವೆಗಳನ್ನು ನೀಡುವ ಕಡೆ ಗಮನ ಹರಿಸುತ್ತಿದೆ. ಸ್ಮಾರ್ಟ್ ಫೋನ್ ನಿರ್ಮಾಣ ಅದು ಬಿಟ್ಟು ಬಿಟ್ಟಿದೆ.
ಲೈಸೆನ್ಸ್ ಪಡೆದ ಒನ್ ವಾರ್ಡ್ ಮೊಬಿಲಿಟಿ
ಹೀಗೆ ಒನ್ ವಾರ್ಡ್ ಮೊಬಿಲಿಟಿ ಎಂಬ ಸ್ಟಾರ್ಟ್ ಅಪ್ ಕಂಪನಿಯು ಈ ಸ್ಮಾರ್ಟ್ ಫೋನ್ ಲೈಸೆನ್ಸ್ ಪಡೆದಿತ್ತು. 2021ರಲ್ಲೇ ೫ಜಿ ಬ್ಲ್ಯಾಕ್ ಬೆರ್ರಿ ಫೋನ್ ಬಿಡುಗಡೆ ಮಾಡುವೆ ಎಂದು ಆ ಕಂಪನಿ ಪ್ಲ್ಯಾನ್ ಮಾಡಿತ್ತು.
ಆದರೆ 2021ರಲ್ಲಿ ಆ ೫ಜಿ ಬ್ಲ್ಯಾಕ್ ಬೆರ್ರಿ ಫೋನ್ ಬಿಡುಗಡೆ ಆಗಲಿಲ್ಲ. ಆದರೆ ಅಷ್ಟರಲ್ಲಿ ಬ್ಲ್ಯಾಕ್ ಬೆರ್ರಿ ಎಂಟರ್ ಪ್ರೈಸ್ ನ ಸಿ ಇ ಓ ಆದ ಜೋನ್ ಚೆನ್ ಮನಸ್ಸು ಬದಲಾಯಿಸಿ ಒನ್ ವಾರ್ಡ್ ಮೊಬಿಲಿಟಿಗೆ ಸ್ಮಾರ್ಟ್ ಫೋನ್ ಒಂದಕ್ಕೆ ಬ್ಲ್ಯಾಕ್ ಬೆರ್ರಿ ಹೆಸರು ಬಳಸಲು ನೀಡಿದ್ದ ಲೈಸೆನ್ಸ್ ರದ್ದು ಮಾಡಿದರು.
ಒನ್ ವಾರ್ಡ್ ಮೊಬಿಲಿಟಿ ಮುಚ್ಚಲಿದೆ
ಈಗ ಒನ್ ವಾರ್ಡ್ ಮೊಬಿಲಿಟಿ ಶಟ್ ಡೌನ್ ಆಗಲಿದೆ ಎಂದು ಕಂಪನಿ ತಿಳಿಸಿದ್ದು ಬ್ಲ್ಯಾಕ್ ಬೆರ್ರಿ ೫ಜಿ ಪ್ರಾಜೆಕ್ಟ್ ಅದರ ಜೊತೆಗೆ ಮುಚ್ಚಿ ಹೋಗಲಿದೆ. ಆ ಒನ್ ವಾರ್ಡ್ ಮೊಬಿಲಿಟಿ ಬ್ಯಾಂಕ್ಟ್ರಪ್ಸಿ ಅಂದ್ರೆ ದಿವಾಳಿತನದ ಘೋಷಣೆ ಮಾಡಲಿದೆ.
ಒಟ್ಟಿನಲ್ಲಿ ಇದು ಮೂರನೆ ಬಾರಿ ಬ್ಲ್ಯಾಕ್ ಬೆರ್ರಿ ಸ್ಮಾರ್ಟ್ ಫೋನ್ ಪ್ರೊಜೆಕ್ಟ್ ಮುಚ್ಚಲ್ಪಡುತ್ತಿರುವದು.
ಟಿಸಿಎಲ್ ಸಹ ಬ್ಲ್ಯಾಕ್ ಬೆರ್ರಿ ಫೋನ್ ಮಾಡಿತ್ತು
ಈ ಹಿಂದೆ ಟಿಸಿಎಲ್ ಎಂಬ ಚೈನೀಸ್ ಉತ್ಪಾದಕರು ಬ್ಲ್ಯಾಕ್ ಬೆರ್ರಿ ಹೆಸರಿನ ಅಂಡ್ರಾಯಿಡ್ ಫೋನ್ ಅನ್ನು ನಿರ್ಮಿಸಿ ಮಾರುಕಟ್ಟೆಗೆ ಬಿಟ್ಟಿದ್ದರು. ಆದರೆ ಆಮೇಲೆ ಲೈಸೆನ್ಸ್ ಅನ್ನು ಮತ್ತೆ ನವೀಕರಿಸಿರಲಿಲ್ಲ.
ಕೊನೆಯ ಮಾತು
ಒಟ್ಟಿನಲ್ಲಿ ಈಗ ಇನ್ನೊಂದು ಕಂಪನಿಯೂ ಕೂಡಾ ಸೋತಿರುವದು ಹಾಗೂ ಮೂಲ ಬ್ಲ್ಯಾಕ್ ಬೆರ್ರಿ ಕಂಪನಿ ಸ್ಮಾರ್ಟ್ ಫೋನಿಗೆ ತಮ್ಮ ಬ್ರ್ಯಾಂಡ್ ಬಳಸ ಬಾರದು ಎಂದು ನಿರ್ಧರಿಸಿರುವದು. ಇನ್ನು ಬ್ಲ್ಯಾಕ್ ಬೆರ್ರಿ ಮತ್ತೆ ಪುನರುಜ್ಜೀವನ ಆಗುವದು ಡೌಟು!
ಏನೆ ಇರಲಿ ಬ್ಲ್ಯಾಕ್ ಬೆರ್ರಿ ಫೋನ್ ಅನೇಕ ಜನರ ಕಣ್ಮಣಿ ಆಗಿತ್ತು. ಅದರ ಬಳಸಿದ ಹಲವರಿಗೆ ಆ ಬ್ಲ್ಯಾಕ್ ಬೆರ್ರಿ ಫೋನ್ ಜೊತೆ ಭಾವನಾತ್ಮಕ ನಂಟಿದೆ, ಮಧುರ ನೆನಪಿನ ಗಂಟಿದೆ.
ಆದರೆ ಕಾಲನ ಮಹಿಮೆಗೆ ಯಾರೂ ಏನೂ ಮಾಡಲು ಆಗದು. ಸದ್ಯಕ್ಕಂತೂ ಶುಭ ವಿದಾಯ.
ಯಾರಿಗೆ ಗೊತ್ತು ಇನ್ನೊಮ್ಮೆ ಯಾರಾದರೂ ಈ ಬ್ರ್ಯಾಂಡ್ ಬಳಸಿ ಸ್ಮಾರ್ಟ್ ಫೋನ್ ತರುವ ಸಾಹಸಕ್ಕೆ ಭವಿಷ್ಯದಲ್ಲಿ ಕೈ ಹಾಕಿದರೂ ಆಶ್ಚರ್ಯ ಇಲ್ಲ. ಅದಕ್ಕೆ ಮೂಲ ಕಂಪನಿ ಮನಸ್ಸು ಮಾಡಬೇಕು.
ಆದರೆ ಈಗ ಬ್ಲ್ಯಾಕ್ ಬೆರ್ರಿ ೫ಜಿ ಸ್ಮಾರ್ಟ್ ಫೋನ್ ಬರುವದಿಲ್ಲ ಎಂಬುದು ಮಾತ್ರ ಖಚಿತ.
ಈ ಲೇಖನ ಹೇಗನಿಸಿತು? ಹೇಗೆ ಇನ್ನೂ ಇಂಪ್ರೂವ್ ಮಾಡಬಹುದು? ಕಮೆಂಟ್ ಹಾಕ್ತೀರಾ? ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.
ಚಿತ್ರಕೃಪೆ: ArtificialOG ಇಂದ Pixabay