Slider

ಟಾಪ್ ನೋಟ್ ತೆಗೆಯುವ ಅಪ್ಲಿಕೇಶನ್ ಗಳು

ನೀವು ಒಬ್ಬ ಕಂಪ್ಯೂಟರ್ ಇಂಜಿನಿಯರ್, ಬಳಕೆದಾರ ಯಾರೇ ಆಗಲಿ. ನೋಟ್ಸ್ ಅಪ್ಲಿಕೇಶನ್ ಗಳು ನಿಮ್ಮ ಕಂಟೆಂಟ್, ಮಾಹಿತಿ, ರೀಸರ್ಚ್ ಕಂಟೆಂಟ್ ಅನ್ನು ದಾಖಲಿಸಿಟ್ಟು ಬೇಕಾದಾಗ ಅದನ್ನು ಬಳಸಲು ನಿಮ್ಮಗೆ ಸಹಾಯ ಮಾಡುತ್ತದೆ.

ನೀವು ವಿದ್ಯಾರ್ಥಿ ಆಗಿದ್ದರೆ ನಿಮ್ಮ ಪ್ರಾಜೆಕ್ಟ್ ರಿಪೋರ್ಟ್, ವಿಜ್ಞಾನಿ ಆಗಿದ್ದರೆ ನಿಮ್ಮ ರೀಸರ್ಚ್, ವ್ಲಾಗ್ಗರ್ ಆಗಿದ್ದರೆ ನಿಮ್ಮ ವಿಡಿಯೋ ಸ್ಕ್ರಿಪ್ಟ್, ಲೇಖಕ ಆಗಿದ್ದರೆ ಲೇಖನಗಳು ಹೀಗೆ ಎಲ್ಲವನ್ನು ಬರೆದು ಕ್ಲೌಡ್ ಅಲ್ಲಿ ಸುರಕ್ಷಿತವಾಗಿ ಇಡಬಹುದು.

ಟಾಪ್ ನೋಟ್ಸ್ ಬರೆಯುವ ಅಪ್ಲಿಕೇಶನ್ ಯಾವವು ನೋಡೋಣ ಬನ್ನಿ. 

{tocify} $title={ವಿಷಯ ಸೂಚಿ}

ಮಾರುಕಟ್ಟೆಯಲ್ಲಿ ಹಲವು ನೋಟ್ಸ್ ಅಪ್ಲಿಕೇಶನ್ ಲಭ್ಯವಿದೆ. ನಿಮ್ಮ ಸ್ಮಾರ್ಟ್ ಫೋನ್ ಕಂಪನಿ ಕೂಡಾ ಬೇಸಿಕ್ ಎಪ್ ನೀಡಿರುತ್ತೆ. ಯಾವ ಯಾವ ಡಿವೈಸ್ ಸಪೋರ್ಟ್ ಇದೆ? ಎಲ್ಲಾ ಡಿವೈಸ್ ಸಿಂಕ್ ಮಾಡಬಹುದಾ ಅನ್ನುವದು ಮುಖ್ಯವಾಗುತ್ತೆ. ಅಷ್ಟೇ ಅಲ್ಲ ನಿಮ್ಮ ನೋಟ್ಸ್ ಒರ್ಗಾನೈಜ್ ಮಾಡಲು ನೀಡಿರುವ ಫೀಚರ್ ಗಳು ಸಹ ಮುಖ್ಯ.

ಬನ್ನಿ ಒಂದೊಂದಾಗಿ ಟಾಪ್ ನೋಟ್ಸ್ ಎಪ್ ಗಳ ಕಡೆ ನೋಡೋಣ.

ಮೈಕ್ರೊಸಾಫ್ಟ್ ಒನ್ ನೋಟ್

ಚಿತ್ರಕೃಪೆ: ಮೈಕ್ರೋ ಸಾಫ್ಟ್ ಒನ್ ನೋಟ್ ತಾಣ

ಮೊದಲನೆಯದಾಗಿ ಮೈಕ್ರೊಸಾಪ್ಟ್ ಒನ್ ನೋಟ್ ಅತ್ಯುತ್ತಮ ನೋಟ್ಸ್ ಎಪ್ ಅನ್ನಬಹುದು. ಇದನ್ನು ಸಿಂಪಲ್ ಕೆಲಸದಿಂದ ಹಿಡಿದು ಪುಸ್ತಕ ಬರೆಯುವ ಕೆಲಸಕ್ಕೂ ಬಳಸಬಹುದು.

ಒನ್ ನೋಟ್ ಅನ್ನು ವಿಂಡೋಸ್/ಮ್ಯಾಕ್ ಡೆಸ್ಕ್ ಟಾಪ್ ಅಪ್ಲಿಕೇಶನ್, ಬ್ರೌಸರ್, ಐಪ್ಯಾಡ್, ಅಂಡ್ರಾಯಿಡ್, ಐಒಎಸ್ ಹೀಗೆ ಎಲ್ಲ ಪ್ಲಾಟ್ ಪಾರ್ಮ್ ಅಲ್ಲೂ ಬಳಸಬಹುದು. ಕ್ಲೌಡ್ ಅನ್ನು ಮಾಹಿತಿ ಉಳಿಸುವ ಈ ಎಪ್ ಅದೇ ಕಂಟೆಂಟ್ ಅನ್ನು ಎಲ್ಲ ಕಡೆ ನೋಡಲು, ಎಡಿಟ್ ಮಾಡಲು ಅನುಕೂಲ ಮಾಡಿ ಕೊಡುತ್ತದೆ.

ನೋಟ್ಸ್ ಅಲ್ಲಿ ಹಲವು ನೋಟ್ ಬುಕ್ ರಚಿಸಬಹುದು. ಆ ನೋಟ್ ಬುಕ್ ಅಲ್ಲಿ ವಿಭಾಗ ರಚಿಸಿ ಅದರಲ್ಲಿ ಪುಟಗಳನ್ನು ಸೇರಿಸಬಹುದು. ಇದು ಕಾದಂಬರಿ, ಪುಸ್ತಕ ಬರೆಯುವವರಿಗೆ ತುಂಬಾ ಅನುಕೂಲ.

ಅಕ್ಷರದಲ್ಲಿ ಮಾಹಿತಿ, ಟ್ಯಾಬ್ಯುಲರ್ ಫಾರ್ಮಾಟ್, ಫೈಲ್, ಫೋಟೋ, ಲಿಂಕ್, ಆಡಿಯೋ, ಇಮೋಜಿಗಳು, ಚಿತ್ರ ಬಿಡಿಸುವದು ಹೀಗೆ ಎಲ್ಲ ಅನುಕೂಲ ಇದೆ.

ಪುಟದ ಬಣ್ಣ ಬದಲಾಯಿಸುವದು, ಝೂಮ್ ಮಾಡಿ ನೋಡುವದು ಹೀಗೆ ಎಲ್ಲ ಮಾಡಬಹುದು.

 ಒಂದಕ್ಕಿಂತ ಹೆಚ್ಚಿನ ಬರಹ ಗಾರರು ಕಂಟೆಂಟ್ ಎಡಿಟ್ ಮಾಡಿದ್ದರೆ ಯಾರು ಏನೆನು ಬದಲಾವಣೆ ಮಾಡಿದರು ಎಂಬುದನ್ನು ಟ್ರ್ಯಾಕ್ ಸಹ ಮಾಡಬಹುದು.

ಬರೆದ ನೋಟ್ಸ್ ಅನ್ನು ಅಂತರ್ಜಾಲದಲ್ಲಿ ಹಂಚಬಹುದು.

ಗೂಗಲ್ ಕೀಪ್


ಚಿತ್ರಕೃಪೆ: ಗೂಗಲ್ ಕೀಪ್ ತಾಣ

ಗೂಗಲ್ ಕೀಪ್ ಕೂಡಾ ಸಿಂಪಲ್ ಟುಡು ಲಿಸ್ಟ್ ಗೆ, ಚಿತ್ರ, ಡ್ರಾಯಿಂಗ್ ಹೀಗೆ ಹಲವು ನೋಟ್ಸ್ ಗಳಿಗೆ ಸೂಕ್ತ.

ಗೂಗಲ್ ಕೀಪ್ ಅಂಡ್ರಾಯಿಡ್, ಐಒಎಸ್ ಹಾಗೂ ವೆಬ್ ವರ್ಶನ್ ಅಲ್ಲಿ ಲಭ್ಯವಿದೆ. ಕ್ಲೌಡ್ ಅಲ್ಲಿ ಮಾಹಿತಿ ಉಳಿಸಿ ಎಲ್ಲ ಡಿವೈಸ್ ನಡುವೆ ಸಿಂಕ್ ಮಾಡಬಹುದು.

ಲಿಸ್ಟ್, ಚಿತ್ರ ಬಿಡಿಸುವದು, ಫೋಟೋ ಇತ್ಯಾದಿ ಇರುವ ನೋಟ್ಸ್ ಮಾಡಬಹುದು. ರಿಮೈಂಡರ್ (ಎಚ್ಚರ ಗಂಟೆ) ಸಹ ಸೆಟ್ ಮಾಡಬಹುದು.

ಒಂದಕ್ಕಿಂತ ಹೆಚ್ಚು ಬರಹಗಾರರ ಸೇರಿಸಿ ಒಟ್ಟಿಗೆ ಬರೆಯಬಹುದು. ಹಳೆಯ ನೋಟ್ಸ್ ಅನ್ನು ಒಟ್ಟುಗೂಡಿಸಿ ಮೂಲೆಯಲ್ಲಿ ಇಡಬಹುದು.

ಆದರೆ ಇದರ ಇಂಟರ್ ಫೇಸ್ ಚಿಕ್ಕ ಚಿಕ್ಕ ನೋಟ್ಸ್ ಗೆ ಜಾಸ್ತಿ ಸೂಕ್ತ ಅನ್ನುವದು ನನ್ನ ಅನಿಸಿಕೆ.

ಎವರ್ ನೋಟ್

ಚಿತ್ರಕೃಪೆ: ಎವರ್ ನೋಟ್ ತಾಣ

ಎವರ್ ನೋಟ್ ವೆಬ್ ವರ್ಶನ್, ವಿಂಡೋಸ್ ಎಪ್, ಅಂಡ್ರಾಯಿಡ್, ಐಒಎಸ್ ಎಲ್ಲಾ ಲಭ್ಯವಿದೆ.

ಟಾಸ್ಕ್ಸ್ ಅಥವಾ ಕೆಲಸಗಳ ಪಟ್ಟಿ ಮೆಂಟೇನ್ ಮಾಡಬಹುದು. ಕ್ಯಾಲೆಂಡರ್ ಸಹಾ ಇದೆ. ಅಟ್ಯಾಚ್ ಮೆಂಟ್, ಫೋಟೋ, ಸ್ಕೆಚ್, ಟೇಬಲ್, ಕ್ಯಾಲೆಂಡರ್, ಗೂಗಲ್ ಡ್ರೈವ್ ಕಂಟೆಂಟ್ ಎಲ್ಲಾ ಸೇರಿಸಬಹುದು. ವಿವಿಧ ನೋಟ್ಸ್ ಗಳಿಗೆ ಟೆಂಪ್ಲೇಟ್ ಲಭ್ಯ ಇದೆ.

ಇದನ್ನು ಬಳಸಲು ಸಬ್ಸ್ಕ್ರೈಬ್ ಆಗಬೇಕು.

ಮೈಕ್ರೊಸಾಫ್ಟ್ ೩೬೫

ವರ್ಡ್, ಎಕ್ಸೆಲ್, ಪವರ್ ಪಾಯಿಂಟ್ ಜನಪ್ರಿಯ ಸಾಫ್ಟ್ ವೇರ್ ಗಳನ್ನು ಕ್ಲೌಡ್ ಅಲ್ಲಿ ಮೈಕ್ರೊಸಾಫ್ಟ್ ೩೬೫ ನೀಡುತ್ತದೆ. ಬ್ರೌಸರ್ ನಿಂದಲೇ ನೇರವಾಗಿ ಈ ಎಪ್ ಗಳನ್ನು ಬಳಸಬಹುದು. 

ವಿಂಡೋಸ್, ಮ್ಯಾಕ್, ಅಂಡ್ರಾಯಿಡ್, ಐಒಎಸ್ ಎಪ್ ಕೂಡಾ ಲಭ್ಯವಿದೆ. ಡಾಕ್ಯುಮೆಂಟ್ ಉಳಿಸಲು ಒನ್ ಡ್ರೈವ್ ಅನ್ನು ಬಳಸಬಹುದು.

ನೀವು ನೋಟ್ಸ್ ಬರೆಯಲು ವರ್ಡ್ ಬಳಸಬಹುದು. ಎಕ್ಸೆಲ್ ಅಲ್ಲಿ ಹಲವು ಟೆಂಪ್ಲೇಟ್ ಇದ್ದು ಅದನ್ನೂ ಕೂಡಾ ಬಳಸಬಹುದು.

ಇದು ಒಂದು ಮಟ್ಟಿಗೆ ಬ್ರೌಸರ್ ಅಲ್ಲಿ ಬಳಸಲು ಉಚಿತ. ಜಾಸ್ತಿ ಸ್ಟೋರೇಜ್ ಬೇಕಾದ್ರೆ ಹಣ ಕೊಡಬೇಕು.

ಗೂಗಲ್ ಡಾಕ್ಸ್

ಆಫೀಸ್ ೩೬೫ ಹಾಗೇ ಗೂಗಲ್ ಡಾಕ್ಸ್ ಕೂಡಾ ಡಾಕ್ಯುಮೆಂಟ್ಸ್, ಪ್ರಸಂಟೇಶನ್, ಸ್ಪ್ರೆಡ್ ಶೀಟ್, ಫಾರ್ಮ್ ಹಾಗೂ ಡ್ರಾಯಿಂಗ್ ತಯಾರಿಸಲು ಅನುವು ಮಾಡಿಕೊಡುತ್ತದೆ. ಇವೆಲ್ಲವನ್ನೂ ಗೂಗಲ್ ಡ್ರೈವ್ ಅಲ್ಲಿ ಉಳಿಸಬಹುದು.

ಇದು ಒಂದು ಮಟ್ಟಿಗೆ ಬ್ರೌಸರ್ ಅಲ್ಲಿ ಬಳಸಲು ಉಚಿತ. ಜಾಸ್ತಿ ಸ್ಟೋರೇಜ್ ಬೇಕಾದ್ರೆ ಹಣ ಕೊಡಬೇಕು.

ಕೊನೆಯ ಮಾತು

ಇವೆಲ್ಲ ನೋಟ್ಸ್ ಅಪ್ಲಿಕೇಶನ್ ಅಲ್ಲಿ ಮೈಕ್ರೋಸಾಪ್ಟ್ ಹಾಗೂ ಗೂಗಲ್ ಅವರ ಅಪ್ಲಿಕೇಶನ್ ಗಳು ಬೇಸಿಕ್ ಫೀಚರ್ ಉಚಿತವಾಗಿ ನೀಡುತ್ತಿವೆ. ಎಲ್ಲ ಒಮ್ಮೆ ಟ್ರೈ ಮಾಡಿ. ಲಿಂಕ್ ಗಳು ಲೇಖನದಲ್ಲಿದೆ.

ನೀವು ಕಾದಂಬರಿ, ಪುಸ್ತಕ ಬರೆಯುವವರಾದರೆ, ತುಂಬಾ ಡಾಕ್ಯುಮೆಂಟ್ ಕ್ರಿಯೆಟ್ ಮಾಡುವವರಾದರೆ ಒನ್ ನೋಟ್, ಮೈಕ್ರೊಸಾಫ್ಟ್ ೩೬೫, ಗೂಗಲ್ ಡಾಕ್ಸ್ ಸೂಕ್ತ. 

ಚಿಕ್ಕ ನೋಟ್ಸ್ ಗೆ ಗೂಗಲ್ ಕೀಪ್, ಎವರ್ ನೋಟ್ ಸೂಕ್ತ.

ನಿಮ್ಮ ಫೋನ್ ಅಲ್ಲೂ ಸ್ಯಾಮ್ಸಂಗ್ ನೋಟ್ಸ್, ಎಪಲ್ ನೋಟ್ಸ್ ಅಪ್ಲಿಕೇಶನ್ ಇತ್ಯಾದಿ ಇರಬಹುದು. ಅವೂ ಕೂಡಾ ಕಿರಾಣಿ ಸಾಮಾನು ಪಟ್ಟಿ ಇತ್ಯಾದಿ ಗಳಿಗೆ ಬಳಸಬಹುದು.

ಈ ಲೇಖನ ಹೇಗನಿಸಿತು? ಹೇಗೆ ಇನ್ನೂ ಇಂಪ್ರೂವ್ ಮಾಡಬಹುದು? ಕಮೆಂಟ್ ಹಾಕ್ತೀರಾ? ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅನಿಸಿಕೆ ಏನು? ತಿಳಿಸಿ.

Advertisement

blogger
© ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ, ಅನುಮತಿ ಇಲ್ಲದೇ ಲೇಖನಗಳನ್ನು ನಕಲು ಮಾಡುವಂತಿಲ್ಲ.
ವಿಸ್ಮಯನಗರಿ.ಕಾಂ