ನವೆಂಬರ್ ೨೦೨೦ರಂದು ಎಪಲ್ ತಾನೇ ವಿನ್ಯಾಸ ಮಾಡಿದ ಎಂ 1 ಚಿಪ್ ಬಿಡುಗಡೆ ಮಾಡಿತ್ತು.
ನಂತರ ನಿಧಾನವಾಗಿ ಒಂದೊಂದೇ ಕಂಪ್ಯೂಟರ್ ಗಳನ್ನು ಇಂಟೆಲ್ ಚಿಪ್ ಬಿಟ್ಟು ತನ್ನ ಎಂ 1 ಚಿಪ್ ಹಾಗೂ ಅದರ ರೂಪಾಂತರ ವರ್ಶನ್ ಗಳನ್ನು ಬಳಸಿ ಮ್ಯಾಕ್ ಏರ್, ಮ್ಯಾಕ್ ಬುಕ್ ಪ್ರೋ, ಮ್ಯಾಕ್ ಸ್ಟುಡಿಯೋ ಇತ್ಯಾದಿ ಗಳನ್ನು ಬಿಡುಗಡೆ ಮಾಡಿತು. ಕಳೆದ ಮಾರ್ಚ್ ೮ರಂದು ಮ್ಯಾಕ್ ಸ್ಟುಡಿಯೋ ಬಿಡುಗಡೆ ಆಗಿತ್ತು.
ಚಿತ್ರಕೃಪೆ: ಎಪಲ್
ಎಂ1 ಚಿಪ್ ಗಳು (ಎಂ೧ / ಎಂ೧-ಪ್ರೋ / ಎಂ೧-ಮ್ಯಾಕ್ಸ್ / ಎಂ೧-ಅಲ್ಟ್ರಾ) ಕಡಿಮೆ ವಿದ್ಯುತ್ ಬಳಸಿ ಹೆಚ್ಚಿನ ಪ್ರಾಸೆಸಿಂಗ್ ಪವರ್ ಹೊಂದಿದೆ. ಅವು ಜಾಸ್ತಿ ಬಿಸಿಯಾಗದೇ ಜಾಸ್ತಿ ಕೆಲಸ ಮಾಡುತ್ತವೆ.
ಎಂ1 ಚಿಪ್ ನಂತರ ಎಪಲ್ ಎಂ2 ವಿನ್ಯಾಸ, ನಿರ್ಮಾಣದಲ್ಲಿ ತೊಡಗಿಕೊಂಡಿತ್ತು. ಈಗ ಅದು ಮುಗಿದಿದೆ. ಎಂ2 ಎಂ೧ ಗಿಂತ ಸ್ವಲ್ಪ ಪ್ರಮಾಣದಲ್ಲಿ ಜಾಸ್ತಿ ಸಾಮರ್ಥ್ಯ ಹೊಂದಿರಲಿದೆ. ಅದೇ ರೀತಿ ಪ್ರೋ, ಮ್ಯಾಕ್ಸ್, ಅಲ್ಟ್ರಾ ವರ್ಶನ್ ಕೂಡಾ ಇರಲಿದೆ.
ಎಂ೨ ಚಿಪ್ ನಿರ್ಮಿತವಾಗಿ ಅದನ್ನು ಬಳಸಿ ಮ್ಯಾಕ್ ಏರ್, ಮ್ಯಾಕ್ ಬುಕ್, ಮ್ಯಾಕ್ ಬುಕ್ ಪ್ರೋ ನಿರ್ಮಿಸಲಾಗುತ್ತಿದೆ. ಅವು ಕೊನೆಯ ಹಂತದ ಪರೀಕ್ಷೆಯಲ್ಲಿದೆ ಎನ್ನಲಾಗುತ್ತಿದೆ.
ಇವುಗಳಲ್ಲಿ ಮ್ಯಾಕ್ ಬುಕ್ ಏರ್ - ಎಂ2 ಈ ವರ್ಷದಲ್ಲೇ (೨೦೨೨) ಬಿಡುಗಡೆ ಆಗಲಿದೆ ಎಂಬ ಗಾಳಿ ಮಾತಿದೆ.
ಏನೇ ಇರಲಿ ಬಿಡುಗಡೆ ಯಾವಾಗ ಆಗುತ್ತೆ ಅನ್ನುವದನ್ನು ಕಾದು ನೋಡೋಣ.
ಈ ಲೇಖನ ಹೇಗನಿಸಿತು? ಹೇಗೆ ಇನ್ನೂ ಇಂಪ್ರೂವ್ ಮಾಡಬಹುದು? ಕಮೆಂಟ್ ಹಾಕ್ತೀರಾ? ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.
ಚಿತ್ರಕೃಪೆ: Lukas Gehrer ಇಂದ Pixabay