ಗಣಕಪುರಿ.ಕಾಂ - ಇದು ಕಂಪ್ಯೂಟರ್ ಜಗತ್ತು

ಗಣಕಪುರಿ.ಕಾಂ ತಾಣಕ್ಕೆ ಸ್ವಾಗತ ಸುಸ್ವಾಗತ.

ಗಣಕ ಯಂತ್ರ ಎಂದರೆ ಕಂಪ್ಯೂಟರ್, ಪುರಿ ಎಂದರೆ ನಗರ ಅಥವಾ ಸಿಟಿ ಎಂದರ್ಥ. 

ಈ ಎರಡು ಪದಗಳಿಂದ ಸ್ಪೂರ್ತಿ ಪಡೆದು ಗಣಕಪುರಿ ಎಂಬ ಹೆಸರು ಈ ತಾಣಕ್ಕೆ ಇಡಲಾಗಿದೆ. ಇದು ಒಂತರಾ ಕಂಪ್ಯೂಟರ್ ಸಿಟಿ ಅನ್ನಿ! 

ಕಂಪ್ಯೂಟರ್ ಗೆ ಸಂಬಂಧಿಸಿದ ವಿಷಯಗಳಿಗಾಗಿ ಮಾತ್ರ ಇರುವ ತಾಣ ಇದು. 

ಕಂಪ್ಯೂಟರ್ ಜಗತ್ತು ಒಂದು ವಿಸ್ಮಯ ಪ್ರಪಂಚ. ಇಂದು ನಮ್ಮ ನಿತ್ಯ ಜೀವನದಲ್ಲಿ ಅದು ಇಲ್ಲದಿದ್ದರೆ ಆಗದು ಎಂಬ ಮಟ್ಟಿಗೆ ಬಳಸುತ್ತಿದ್ದೇವೆ. ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್ ಹೀಗೆ ಅದರ ರೂಪ ಹಲವು.

ಸ್ಮಾರ್ಟ್ ಫೋನ್ ಬಗ್ಗೆ, ಕಂಪ್ಯೂಟರ್ ಬಗ್ಗೆ, ಕಂಪ್ಯೂಟರ್ ವಿಜ್ಞಾನದ ಬಗ್ಗೆ, ಗ್ಯಾಜೆಟ್ ಗಳ ಬಗ್ಗೆ, ಸಾಮಾಜಿಕ ತಾಣಗಳ ಬಗ್ಗೆ, ಇಂಟರ್ನೆಟ್ ಬಗ್ಗೆ, ಅಪ್ಲಿಕೇಶನ್ ಡೆವಲಪ್ ಮೆಂಟ್ ಬಗ್ಗೆ, ಅದಕ್ಕೆ ಸಂಬಂಧಿಸಿದ ಪ್ರಚಲಿತ ವಿಷಯಗಳ ಬಗ್ಗೆ ಹಾಗೂ ಕಂಪ್ಯೂಟರ್ ಇಂಜಿನಿಯರ್ /ವಿದ್ಯಾರ್ಥಿಗಳಿಗೆ ಉಪಯುಕ್ತ ವಿಷಯದ ಬಗ್ಗೆ ಗಣಕ ಪುರಿ ತಾಣದಲ್ಲಿ ಲೇಖನಗಳು ಬರಲಿದೆ.

ನಮ್ಮ ಮುಖ್ಯ ಗುರಿ

"ನಮ್ಮ ಕನ್ನಡ ಭಾಷೆಯಲ್ಲಿ ಕಂಪ್ಯೂಟರ್ ಬಗ್ಗೆ ಹಾಗೂ ಕಂಪ್ಯೂಟರ್ ಇಂಜಿನಿಯರ್ ಗೆ ಉಪಯುಕ್ತ ಹಾಗೂ ಮಾಹಿತಿ ಪೂರ್ಣ ಜ್ಞಾನ ಹಂಚುವದು" ಈ ತಾಣದ ಮುಖ್ಯ ಗುರಿ.

ಕಂಪ್ಯೂಟರ್ ಜ್ಞಾನ ಅನೇಕ ಕಡೆ ಉಪಯುಕ್ತ. ನಿಮಗೆ ಕೂಡಾ ಉಪಯುಕ್ತ ಆದರೆ ಅದುವೇ ನನಗೆ ಸಂತೋಷ.

ಈ ತಾಣ ಸಂಪೂರ್ಣ ಉಚಿತ! 

ಏನಿರಲಿದೆ ಈ "ಗಣಕಪುರಿ" ತಾಣದಲ್ಲಿ?


ಕಂಪ್ಯೂಟರ್, ಕಂಪ್ಯೂಟರ್ ಇಂಜಿನಿಯರ್ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಉಪಯುಕ್ತ ವಿಷಯಗಳ ಬಗ್ಗೆ ಲೇಖನ, ಮಾಹಿತಿ ಇಲ್ಲಿರಲಿದೆ. ಪ್ರಚಲಿತ ವಿಷಯಗಳ ಚರ್ಚೆ ಕೂಡಾ ನಡೆಯಲಿದೆ.

ಕಂಪ್ಯೂಟರ್ ವಿಜ್ಞಾನದ ಬಗ್ಗೆ, ಇತ್ತೀಚೆಗೆ ಕಂಪ್ಯೂಟರ್ ಜಗತ್ತಲ್ಲಿ ನಡೆಯುತ್ತಿರುವ ಬದಲಾವಣೆಗಳು, ಟ್ರೆಂಡ್, ಆಗು ಹೋಗುಗಳ ಪರಿಚಯ, ಕಂಪ್ಯೂಟರ್ ಬೇಸಿಕ್ಸ್,  ಅಪ್ಲಿಕೇಶನ್ ಡೆವೆಲಪ್ ಮೆಂಟ್, ಕ್ಲೌಡ್, ಮೈಕ್ರೋಸರ್ವೀಸಸ್, ಯುಐ ಹೀಗೆ ಹಲವು ವಿಷಯ ಈ ತಾಣ ಕವರ್ ಮಾಡಲಿದೆ.

ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್, ಕೋಡಿಂಗ್ ಹೀಗೆ ಕಂಪ್ಯೂಟರ್ ಗೆ ಸಂಬಂಧಿಸಿದ ಯಾವುದೇ ತಂತ್ರಜ್ಞಾನ ಹಾಗೂ ಕಂಪ್ಯೂಟರ್ ಇಂಜಿನಿಯರ್ ಇಂಟರ್ವ್ಯೂ, ಆರೋಗ್ಯ, ಹಣಕಾಸು ಬಗ್ಗೆ ಕೂಡಾ ಈ ತಾಣ ಚರ್ಚೆ ಮಾಡಲಿದೆ.

ಕೋಡಿಂಗ್ , ವಿಡಿಯೋ ಎಡಿಟಿಂಗ್, ಆಡಿಯೋ ಪ್ರಾಸೆಸಿಂಗ್, ಬ್ಲಾಗಿಂಗ್, ವ್ಲಾಗಿಂಗ್ ನಂತಹ ಕೆಲಸಕ್ಕೆ ಸಹಾಯಕ ವಿಷಯ ಕೂಡಾ ಇದರಲ್ಲಿರಲಿದೆ.

ಹೆಚ್ಚಿನ ವಿಷಯ ಕಂಪ್ಯೂಟರ್ ಇಂಜಿನಿಯರ್ ಅಥವಾ ವಿದ್ಯಾರ್ಥಿಗಳಿಗೆ ಉಪಯುಕ್ತ ಇದ್ದರೂ ಇಂದಿನ ಕಾಲದಲ್ಲಿ ಆ ಜ್ಞಾನ ಬೇರೆಯವರಿಗೂ ಉಪಯುಕ್ತ. ಬೇಸಿಕ್ಸ್ ನಿಂದ ಅಡ್ವಾನ್ಸ್ಡ್ ವಿಷಯವನ್ನು ಈ ತಾಣ ಕವರ್ ಮಾಡಲಿದೆ.

ಯಾರಿಗೆ ಈ ಗಣಕಪುರಿ?

ಕಂಪ್ಯೂಟರ್ ಇಂಜಿನಿಯರ್, ವಿದ್ಯಾರ್ಥಿ, ಆಸಕ್ತರು ಎಲ್ಲರಿಗೂ ಈ ತಾಣ ಉಪಯುಕ್ತ. ಒಮ್ಮೆ ಅನುಸರಿಸಿ ನೋಡಿ!

ನೀವೂ ಸಹಾಯ ಮಾಡಬಹುದು

ಈ ಪ್ರಯತ್ನಕ್ಕೆ ನೀವೂ ಕೂಡಾ ಕೈ ಜೋಡಿಸ ಬಹುದು. ಹೇಗೆ?
  •  ಗಣಕಪುರಿ ತಾಣ ಬಳಸಿ.
  • ಸಾಮಾಜಿಕ ಜಾಲ ತಾಣಗಳಲ್ಲಿ ಗಣಕಪುರಿ ಪುಟಕ್ಕೆ ಚಂದಾದಾರರಾಗಿ. ಇದು ಸಂಪೂರ್ಣ ಉಚಿತ!
  • ಇಷ್ಟವಾದ ಲೇಖನಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿ.
  • ತಾಣದಲ್ಲಿ ಯಾವುದೇ ರೀತಿಯ ದೋಷ ಇದ್ದರೆ ತಿಳಿಸಿ. ಆಯಾ ಲೇಖನಗಳಲ್ಲಿ ಕಮೆಂಟ್ ಹಾಕುವದರ ಮೂಲಕ ತಿಳಿಸಬಹುದು.
  • ಹೊಸ ಲೇಖನ ಸೇರಿಸಲು ಸಲಹೆ ನೀಡಿ. ನಿಮ್ಮ ಸಲಹೆ, ಮಾರ್ಗದರ್ಶನಕ್ಕೆ ಎಂದೂ ಸ್ವಾಗತ. 

ಮತ್ತೆ ಮತ್ತೆ ಕೇಳಲ್ಪಡುವ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಓದಿ ಇನ್ನೇನಾದ್ರೂ ಪ್ರಶ್ನೆ ಇದ್ರೆ ಕೇಳಿ.

ನೆನಪಿಡಿ ಗಣಕಪುರಿ ಬ್ಲಾಗ್ ಮಸ್ತಕಮಣಿ.ಕಾಂ ವೆಬ್ ತಾಣದ ಮಣಿಗಳಲ್ಲಿ ಒಂದಾಗಿದೆ. ಉಳಿದ ಮಣಿಗಳನ್ನು ನೋಡಲು ಮಸ್ತಕಮಣಿ.ಕಾಂ ತಪ್ಪದೇ ಭೇಟಿ ನೀಡಿ.

ವಂದನೆಗಳು... ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ.

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅನಿಸಿಕೆ ಏನು? ತಿಳಿಸಿ.

Advertisement

blogger
© ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ, ಅನುಮತಿ ಇಲ್ಲದೇ ಲೇಖನಗಳನ್ನು ನಕಲು ಮಾಡುವಂತಿಲ್ಲ.
ವಿಸ್ಮಯನಗರಿ.ಕಾಂ