ವಿಂಡೋಸ್ 11 ರಲ್ಲಿ ಹೊಸತೇನಿದೆ?

ವಿಂಡೋಸ್ ೧೦ ರಿಲೀಸ್ ಆಗಿ ಸುಮಾರು ೬ ವರ್ಷದ ನಂತರ ವಿಂಡೋಸ್ ೧೧ ರಿಲೀಸ್ ಆಯ್ತು. ಈ ಹೊಸ ವಿಂಡೋಸ್ ೧೧ ಅಲ್ಲಿ ಏನು ಹೊಸತಿದೆ? ಬನ್ನಿ ತಿಳಿಯೋಣ.

{tocify} $title={ವಿಷಯ ಸೂಚಿ}

ವಿಂಡೋಸ್ ೧೧ರಲ್ಲಿ ಹೊಸತು ಏನಿದೆ?

ರೌಂಡಡ್ ಕಾರ್ನರ್ ಗಳು


ಇಲ್ಲಿ ವಿಂಡೋ, ಪಾಪ್ ಅಪ್ ಗಳು ಎಲ್ಲವೂ ಮೂಲೆಗಳು ಗುಂಡಾಗಿವೆ ಇವೆ. ನೋಡೋದಕ್ಕೂ ಸುಂದರ ಅನ್ನಿಸುತ್ತದೆ.

ಪರದೆ ಮಧ್ಯದಲ್ಲಿ ಸ್ಟಾರ್ಟ್ ಐಕಾನ್

ಬಹುಶಃ ವಿಂಡೋಸ್ ಬಂದಾಗಿನಿಂದ ಸ್ಟಾರ್ಟ್ ಐಕಾನ್ ಎಡ ಭಾಗದಲ್ಲಿತ್ತು. ಈಗ ಮೈಕ್ರೊಸಾಫ್ಟ್ ಮಧ್ಯ ಭಾಗಕ್ಕೆ ತಂದಿದೆ. ಅದರಲ್ಲೇನಿದೆ ವಿಶೇಷ ಎಂದು ಮ್ಯಾಕ್ ಬಳಕೆದಾರರು ಮೂಗು ಮುರಿಯಬಹುದು. ಯಾಕೆಂದರೆ ಮ್ಯಾಕ್ ನಲ್ಲಿ ಹಲವು ದಶಕಗಳಿಂದ ಹಾಗೆ ಇತ್ತು.

ಹೊಸ ಸ್ಟಾರ್ಟ್ ಮೆನು

ಸ್ಟಾರ್ಟ್ ಮೆನು ಕೂಡಾ ಬದಲಾಗಿದೆ. ಐಕಾನ್ ಗಳನ್ನು ಜಾಸ್ತಿ ಬಳಸುವ ಈ ಮೆನು ತುಂಬಾ ಒರ್ಗನೈಸ್ಡ್ ಅನ್ನಿಸುತ್ತೆ. ಇವೆಲ್ಲ ಸ್ವಲ್ಪ ಮುಂಚೆ ಮಾಡಿದ್ದರೆ ಒಳ್ಳೆಯದಿತ್ತು ಅನ್ನಿಸಿದರೂ ಆಶ್ಚರ್ಯ ಇಲ್ಲ.

ಹೊಸ ಸೆಟ್ಟಿಂಗ್ ವಿಭಾಗ

ಸೆಟ್ಟಿಂಗ್ ವಿಭಾಗ ಕೂಡಾ ಬದಲಾಗಿದ್ದು ಈಗ ಹೆಚ್ಚಿನ ಸೆಟ್ಟಿಂಗ್ ಇಲ್ಲೇ ಮಾಡಬಹುದು. ಕಂಟ್ರೋಲ್ ಪ್ಯಾನೆಲ್ ಗೆ ಹೋಗ ಬೇಕಾಗಿಲ್ಲ. 

ನಿದಾನವಾಗಿ ಕಂಟ್ರೋಲ್ ಪ್ಯಾನೆಲ್ ನಲ್ಲಿ ಆಯ್ಕೆ ಕಡಿಮೆ ಮಾಡಲಾಗಿದೆ. ಬಹುಶಃ ಮುಂದಿನ ವರ್ಶನ್ ಅಲ್ಲಿ ಕಂಟ್ರೋಲ್ ಪ್ಯಾನೆಲ್ ಮಾಯವಾದ್ರೂ ಆಶ್ಚರ್ಯ ಇಲ್ಲ!

ಮಲ್ಟಿಪಲ್ ಡೆಸ್ಕ್ ಟಾಪ್ ಆಯ್ಕೆ

ಈ ಆಯ್ಕೆ ಕೂಡಾ ಲಿನಕ್ಸ್ ಹಾಗೂ ಮ್ಯಾಕ್ ಅಲ್ಲಿ ಹಲವು ದಶಕಗಳಿಂದ ಇತ್ತು. ಈಗ ವಿಂಡೋಸ್ ಗೆ ಬಂದಿದೆ. ಇದರ ಸಹಾಯದಿಂದ ನೀವು ಹಲವು ಡೆಸ್ಕ್ ಟಾಪ್ ಕ್ರಿಯೇಟ್ ಮಾಡಿ ಅದರ ನಡುವೆ ಯಾವಾಗ ಬೇಕಾದರೂ ಸ್ವಿಚ್ ಮಾಡಬಹುದು.

ವಿಜೆಟ್ ವಿಭಾಗ

ವಿಂಡೋಸ್ ನ ಫ್ಲಾಪ್ ವರ್ಶನ್ ಆದ ವಿಸ್ತಾದಲ್ಲಿ ಸಹ ವಿಜೆಟ್ ಡೆಸ್ಕ್ ಟಾಪ್ ಮೇಲೆ ಇತ್ತು. ಆದರೆ ಬ್ಯಾಟರಿ ಸಮಸ್ಯೆ, ಸ್ಲೋ ಹೀಗೆ ಹಲವು ಕಾರಣದಿಂದ ಜನಪ್ರಿಯ ಆಗಿರಲಿಲ್ಲ. 

ಈಗ ಮತ್ತೆ ವಿಂಡೋಸ್ ೧೧ ರಲ್ಲಿ ವಿಜೆಟ್ ಐಕಾನ್ ಟಾಸ್ಕ್ ಬಾರ್ ಮೇಲೆ ಬಂದಿದ್ದು ಅಲ್ಲಿ ಹವಾಮಾನ, ಸುದ್ದಿ, ಶೇರುಗಳ ವಾಚ್ ಲಿಸ್ಟ್ ಮೊದಲಾದವು ಬಂದಿದೆ. ಇದನ್ನು ನೋಡಲು ನೀವು ಐಕಾನ್ ಕ್ಲಿಕ್ ಮಾಡಬೇಕು.

ಸುಧಾರಿತ ಸ್ಪ್ಲಿಟ್ ಸ್ಕ್ರೀನ್ ಆಯ್ಕೆ

ಪರದೆಯ ಮೇಲೆ ಒಂದಕ್ಕಿಂತ ಹೆಚ್ಚು ಎಪ್ ತೆಗೆಯುವ ಸೌಲಭ್ಯ ವಿಂಡೋಸ್ ೮ ರ ಜಮಾನಾದಲ್ಲೇ ಬಂದಿತ್ತು. ಆದರೆ ಯೂಸರ್ ಫ್ರೆಂಡ್ಲಿ ಆಗಿರಲಿಲ್ಲ.  

ಈಗ ಪ್ರತಿ ವಿಂಡೋ ನ ರಿಸ್ಟೋರ್ ಐಕಾನ್ ಮೌಸ್ ಒವರ್ ಮಾಡಿದಾಗ ನಾಲ್ಕು ವಿಧದ ಲೇಔಟ್ ಅಲ್ಲಿ ಅಪ್ಲಿಕೇಶನ್ ಅನ್ನು ಮೂವ್ ಮಾಡುವ ಆಯ್ಕೆ ಇದೆ. ಇದು ಮೊದಲಿನ ಹಲವು ವಿಧಾನಕ್ಕಿಂತ ಬಳಕೆ ಸುಲಭ ಏನೋ ಅನ್ನಿಸುತ್ತೆ. ಜನ ಬಳಸುತ್ತಾರಾ? ಕಾದು ನೋಡ ಬೇಕು.

ಕ್ವಿಕ್ ಸೆಟ್ಟಿಂಗ್ ಗಳು

ಡೆಸ್ಕ್ ಟಾಪ್ ನಲ್ಲಿ ಟಾಸ್ಕ್ ಬಾರ್ ನ ಬಲ ಭಾಗದಲ್ಲಿ ಬ್ಯಾಟರಿ / ಸ್ಪೀಕರ್ / ವೈಫೈ ಐಕಾನ್ ಸೇರಿ ಕ್ವಿಕ್ ಸೆಟ್ಟಿಂಗ್ ಮೆನು ಓಪನ್ ಮಾಡುತ್ತವೆ. ಇಲ್ಲಿಂದ್ ಬ್ಯಾಟರಿ, ಬ್ಲೂ ಟೂತ್, ವೈ ಫೈ, ಎಕ್ಸೆಸ್ಸಿಬಿಲಿಟಿ ಸೆಟ್ಟಿಂಗ್ ಬದಲಾಯಿಸಬಹುದು.

ಸ್ಕ್ರೀನ್ ಬ್ರೈಟ್ನೆಸ್ಸ್ ಹಾಗೂ ವಾಲ್ಯೂಮ್ ಸಹ ಬದಲಾಯಿಸಬಹುದು.

ಥೀಮ್ ಬದಲಾವಣೆ

ವಿಂಡೋಸ್ ೧೧ ರಲ್ಲಿ ವಿಭಿನ್ನ ಥೀಮ್ ಲಭ್ಯವಿದೆ. ಎಲ್ಲವನ್ನೂ ನೀವೂ ಟ್ರೈ ಮಾಡಿ ನೋಡಿ.

ಹೊಸ ಸ್ಟೋರ್ ಎಪ್

ಹಳೆಯ ಎಲ್ಲ ವಿಂಡೋಸ್ ಅಲ್ಲಿ ೮ ಮತ್ತು ೧೦ ರಲ್ಲಿ ಅದರ ಸ್ಟೋರ್ ಎಪ್ ಇಷ್ಟ ಆಗಿರಲಿಲ್ಲ. ಒಂದು ಅಪ್ಲಿಕೇಶನ್ ಗಳ ಕೊರತೆ. ಅಪ್ಲಿಕೇಶನ್ ಇದ್ದರೂ ಅನೇಕ ಫೀಚರ್ ಅಂಡ್ರಾಯಿಡ್ / ಐಒಎಸ್ ಗೆ ಹೋಲಿಸಿದರೆ ಕಡಿಮೆ ಇರುವದು. 

ವಿಂಡೋಸ್ ೧೧ ಸದ್ಯದಲ್ಲೇ ಅಮೇಜಾನ್ ಎಪ್ ಸ್ಟೋರ್ ಮುಖಾಂತರ ಅಂಡ್ರಾಯಿಡ್ ಎಪ್ ಗಳನ್ನು ಸಪೋರ್ಟ್ ಮಾಡಲಿದೆ. ಅಂದರೆ ನೀವು ಅಂಡ್ರಾಯಿಡ್ ಎಪ್ ಗಳನ್ನು ವಿಂಡೋಸ್ ೧೧ ರಲ್ಲಿ ಬಳಸಬಹುದು.

ಹೊಸ ಎಪ್ ಗಳು


ಕ್ಯಾಲ್ಕುಲೇಟರ್, ಪೇಂಟ್, ರೆಕಾರ್ಡರ್, ಕ್ಲಾಕ್, ಕ್ಯಾಲೆಂಡರ್, ಸಾಲೀಟೇರ್ ಎಲ್ಲಾ ಎಪ್ ಗಳು ಅಪ್ ಡೇಟ್ ಆಗಿವೆ. ಆದರೆ ಸಾಲಿಟೇರ್ ಗೇಮ್ ನನ್ನ ಪಿಸಿಯಲ್ಲಿ ಓಪನ್ ಆಗಲೇ ಇಲ್ಲ, ಕೇವಲ ಸ್ಟಾರ್ಟ್ ಸ್ಕ್ರೀನ್ ಅಲ್ಲಿ ಹ್ಯಾಂಗ್ ಆಯ್ತು.

ವಿಂಡೋಸ್ ೧೧ ಅಪ್ ಗ್ರೇಡ್ ಮಾಡುವದು ಹೇಗೆ?

ಇತ್ತೀಚೆಗೆ ನಾನು ನನ್ನ ಲ್ಯಾಪ್ ಟಾಪ್ ಅಲ್ಲಿ ವಿಂಡೋಸ್ ೧೦ ರಿಂದ ೧೧ ಕ್ಕೆ ಅಪ್ ಗ್ರೇಡ್ ಮಾಡಿದೆ. ಇದು ಉಚಿತ ಹಾಗೂ ತುಂಬಾ ಸರಳವಾದ ಪ್ರಾಸೆಸ್.

ಸ್ಟಾರ್ಟ್ ಮೆನು ಗೆ ಹೋಗಿ ಅಲ್ಲಿ ಸೆಟ್ಟಿಂಗ್  ಅಲ್ಲಿ ಅಪ್ ಡೇಟ್ ವಿಭಾಗದಲ್ಲಿ ಹೋದರೆ ನಿಮ್ಮ ಲ್ಯಾಪ್ ಟಾಪ್ ಅಥವಾ ಡೆಸ್ಕ್ ಟಾಪ್ ವಿಂಡೋಸ್ ೧೧ ರ ಜೊತೆ ಕಂಪಾಟಿಬಲ್ ಇದೆಯಾ ಇಲ್ಲವಾ ಅದನ್ನು ತಿಳಿಸುತ್ತದೆ. ಅಕಸ್ಮಾತ್ ಕಂಪಾಟಿಬಲ್ ಇದ್ದರೆ ಡೌನ್ ಲೋಡ್ ಲಿಂಕ್ ಲಭ್ಯವಿರುತ್ತದೆ. 

೨೦೧೮ಕ್ಕಿಂತ ಹಳೆಯ ಹಾರ್ಡವೇರ್ ಜೊತೆ ಕಂಪಾಟಿಬಲ್ ಇರುವ ಸಾಧ್ಯತೆ ತುಂಬಾ ಕಡಿಮೆ.

ಕೊನೆಯ ಮಾತು

ಒಟ್ಟಿನಲ್ಲಿ ವಿಂಡೋಸ್ ೧೧ ವಿಂಡೋಸ್ ೧೦ ರ ಇಂಕ್ರಿಮೆಂಟಲ್ ಅಪ್ ಡೇಟ್ ಅನ್ನಬಹುದು. ವಿಂಡೋಸ್ ೧೦ರ ಎಲ್ಲ ಒಳ್ಳೆಯ ಗುಣ ಇಟ್ಟು ಕೊಂಡು ಅದರ ಮೇಲೆ ಇದನ್ನು ಡೆವೆಲಪ್ ಮಾಡಲಾಗಿದೆ ಹೇಳಬಹುದು. 

ಇದಕ್ಕೂ ಕಾರಣವಿದೆ. ವಿಂಡೋಸ್ ಎಂಟರ್ ಪ್ರೈಸ್ ಗಳಲ್ಲಿ ಅತಿ ಜನಪ್ರಿಯ ಆಪರೇಟಿಂಗ್ ಸಿಸ್ಟೆಮ್. ಎಂಟರ್ ಪ್ರೈಸ್ ಗಳಿಗೆ ತೀರಾ ಬದಲಾವಣೆ ಇದ್ದರೆ ಅಪ್ ಗ್ರೇಡ್ ಮಾಡುವದು ಕಷ್ಟ. ಅದಕ್ಕಾಗಿ ಹಂತ ಹಂತವಾಗಿ ಬದಲಾವಣೆ ತರಲಾಗುತ್ತಿದೆ.

ಅಂಡ್ರಾಯಿಡ್ ಎಪ್ ಸಪೋರ್ಟ್ ಒಂದು ರೀತಿಯಲ್ಲಿ ಕ್ರಾಂತಿ ಕಾರಿ ಆಗಿದ್ದು ಎಪ್ ಗಳು ಜಾಸ್ತಿ ಇಲ್ಲದೇ ಸೊರಗಿರುವ ವಿಂಡೋಸ್ ಎಪ್ ಸ್ಟೋರ್ ಗೆ ಜೀವಾಮೃತ ಆಗಬಹುದು.

ಅಕಸ್ಮಾತ್ ಹೊಸ ವಿಂಡೋಸ್ ಲ್ಯಾಪ್ ಟಾಪ್ ಖರೀದಿಸುತ್ತಿದ್ದರೆ ವಿಂಡೋಸ್ ೧೧ ಕಂಪಾಟಿಬಲ್ ಅನ್ನುವದನ್ನು ಖಚಿತ ಪಡಿಕೊಂಡು ಖರೀದಿಸಿ. ಈಗಾಗಲೇ ವಿಂಡೋಸ್ ೧೦ ಲ್ಯಾಪ್ ಟಾಪ್ ಇದ್ದು ಅಪ್ ಗ್ರೇಡ್ ಮಾಡುವ ಮುನ್ನ ನೀವು ಬಳಸುವ ಎಲ್ಲ ಎಪ್ ಗಳು, ಸಾಫ್ಟವೇರ್ ಗಳು ಸಪೋರ್ಟ್ ಆಗುತ್ತಾ ಒಮ್ಮೆ ನೋಡಿ.

ಈ ಲೇಖನ ಹೇಗನಿಸಿತು? ಹೇಗೆ ಇನ್ನೂ ಇಂಪ್ರೂವ್ ಮಾಡಬಹುದು? ಕಮೆಂಟ್ ಹಾಕ್ತೀರಾ? ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.

ಕಂಪ್ಯೂಟರ್ ಉಪಯೋಗಗಳು

ನಿಮ್ಮ ಕೈಯಲ್ಲಿರುವ ಸ್ಮಾರ್ಟ್ ಫೋನ್ ಇರಲಿ ಅಥವಾ ಟ್ಯಾಬ್ ಇರಲಿ ಅಥವಾ ಲ್ಯಾಪ್ ಟಾಪ್ ಇರಲಿ ಅಥವಾ ಶಕ್ತಿಶಾಲಿ ಡೆಸ್ಕ್ ಟಾಪ್ ಇರಲಿ ಎಲ್ಲದರಲ್ಲೂ ಹಲವು ರೀತಿಯ ಕೆಲಸ ಮಾಡಬಹುದು. 

ಸ್ಮಾರ್ಟ್ ಫೋನ್ ಹಾಗೂ ಟ್ಯಾಬ್ ಹೆಚ್ಚು ಕಂಟೆಂಟ್ ಬಳಕೆಗೆ ಸೂಕ್ತವಾದರೆ ಲ್ಯಾಪ್ ಟಾಪ್ / ಡೆಸ್ಕ್ ಟಾಪ್ ಕಂಟೆಂಟ್ ಕ್ರಿಯೇಶನ್ (ತಯಾರಿಕೆ) ಗೆ ಅನುಕೂಲ. ಕೆಲವು ಕಂಟೆಂಟ್ ಅನ್ನು ಸ್ಮಾರ್ಟ್ ಫೋನ್ ಹಾಗೂ ಟ್ಯಾಬ್ ಅಲ್ಲೂ ಕ್ರಿಯೇಟ್ ಮಾಡಲು ಕಷ್ಟಪಟ್ಟರೆ ಸಾಧ್ಯವಿದೆ.

ಎಷ್ಟೋ ಜನ ಮನೆಯಲ್ಲೇ ಕುಳಿತು ಕಂಪ್ಯೂಟರ್ ಬಳಸಿ ಹಣ ಸಂಪಾದನೆ ಕೂಡಾ ಮಾಡುತ್ತಾರೆ.

ಬನ್ನಿ ಗಣಕ ಯಂತ್ರ ಬಳಸಿ ಏನನ್ನು ಮಾಡಬಹುದು ಹೈ ಲೆವಲ್ ಅಲ್ಲಿ ತಿಳಿಯೋಣ. ಇವೆಲ್ಲದರ ಬಗ್ಗೆ ಪ್ರತ್ಯೇಕ ಲೇಖನದಲ್ಲಿ ವಿವರವಾಗಿ ಹೇಳ್ತಿನಿ ಆಯ್ತಾ?

{tocify} $title={ವಿಷಯ ಸೂಚಿ}

ವಿಡಿಯೋ ಎಡಿಟಿಂಗ್

ನೀವು ಕ್ಯಾಮೆರಾದಿಂದ ಶೂಟಿಂಗ್ ಮಾಡಿದ ವಿಡಿಯೋ ತುಣುಕುಗಳು, ಫೋಟೋ ಇವೆಲ್ಲವನ್ನೂ ವ್ಯವಸ್ಥಿತವಾಗಿ ಜೋಡಿಸಿ ಬೇಡದ್ದನ್ನು ಟ್ರಿಮ್ ಮಾಡಿ ಜೊತೆಗೆ ಮಾತು, ಹಿನ್ನೆಲೆ ಸಂಗೀತ (ಬ್ಯಾಕ್ ಗ್ರೌಂಡ್ ಮ್ಯೂಸಿಕ್), ಅಕ್ಷರ(ಟೆಕ್ಸ್ಟ್) ಎಲ್ಲವನ್ನೂ ಸೇರಿಸಿ ಒಂದು ಕಥೆ ಹೇಳುವ ಅಥವಾ ಸಂದೇಶ ನೀಡುವ ವಿಡಿಯೋ ಮಾಡುವ ಪ್ರಕ್ರಿಯೆಗೆ ವಿಡಿಯೋ ಎಡಿಟಿಂಗ್ ಮಾಡುವದು ಅನ್ನುತ್ತಾರೆ.

ವಿಡಿಯೋ ಎಡಿಟಿಂಗ್ ಸಾಫ್ಟವೇರ್ ಗೆ ಹೆಚ್ಚು ಸಾಮರ್ಥ್ಯದ ಲ್ಯಾಪ್ ಟಾಪ್ / ಡೆಸ್ಕ್ ಟಾಪ್ / ಟ್ಯಾಬ್ / ಸ್ಮಾರ್ಟ್ ಫೋನ್ ಬೇಕು. ಸಿಪಿಯು ಜೊತೆಗೆ ಜಿಪಿಯು ಸಹ ಇರಬೇಕು.

ವಿಡಿಯೋ ಗೇಮಿಂಗ್

ವಿಡಿಯೋ ಗೇಮ್ ಗಳನ್ನೂ ಸಹ ಆಡಬಹುದು. ಟೂಡಿ, ತ್ರೀಡಿ ಗೇಮ್ ಗಳು ಇದ್ದು ಜೊತೆಗೆ ನಮ್ಮ ಸಾಂಪ್ರಾದಾಯಿಕ ಆಟಗಳಾದ ಚೆಸ್, ಕ್ರಿಕೆಟ್, ಫೂಟ್ ಬಾಲ್, ಹಾವು ಮತ್ತು ಏಣಿಯಂತಹ ಆಟ ಕೂಡಾ ವರ್ಚುವಲ್ ಆಗಿ ಆಡಬಹುದು.

ಗೇಮಿಂಗ್ ಗಾಗೇ ವಿನ್ಯಾಸ ಮಾಡಿದ ಲ್ಯಾಪ್ ಟಾಪ್ / ಡೆಸ್ಕ್ ಟಾಪ್ ಇವೆ.

ಆಡಿಯೋ ಎಡಿಟಿಂಗ್ / ಮ್ಯೂಸಿಕ್ ಪ್ರಾಡಕ್ಷನ್

ಡಿಜಿಟಲ್ ಆಡಿಯೋ ಎಡಿಟಿಂಗ್ ಮಾಡಿ ಅದರಲ್ಲೂ ಹಲವು ಇಫೆಕ್ಟ್ ಗಳು, ರಿಮಾಸ್ಟರಿಂಗ್ ಕೂಡಾ ಮಾಡಬಹುದು. ಅಷ್ಟೇ ಅಲ್ಲ ಮ್ಯೂಸಿಕ್ ಪ್ರಾಡಕ್ಷನ್ , ಸಂಗೀತ ವಾದ್ಯಗಳ ಸೌಂಡ್ ರೂಪಿಸುವದು ಕೂಡಾ ಸಾಧ್ಯವಿದೆ.

ಬುಕ್ ಪಬ್ಲಿಶಿಂಗ್

ಹೊಸ ಪುಸ್ತಕ ಪ್ರಿಂಟ್ ಮಾಡ ಬೇಕೆ? ಅಥವಾ ಅಂತರ್ಜಾಲದಲ್ಲಿ ಪಬ್ಲಿಶ್ ಮಾಡ ಬೇಕೆ? ಇವೆರಡೂ ಕಂಪ್ಯೂಟರ್ ಅಲ್ಲಿ ಸಾಧ್ಯ. ಕೈಂಡಲ್ ಅಂತಹ ಪುಸ್ತಕ ಅಂಗಡಿಯಲ್ಲಿ ಪುಸ್ತಕ ಪ್ರಕಟಿಸಬಹುದು.
ಇದಕ್ಕೆ ಡೆಸ್ಕ್ ಟಾಪ್ ಪಬ್ಲಿಶಿಂಗ್ (ಡಿಟಿಪಿ) ಅನ್ನುತ್ತಾರೆ.

ಇಂಟರ್ನೆಟ್ ಬ್ರೌಸಿಂಗ್

ಇಂದು ನೂರಾರು ಕೋಟಿ ಲೇಖನಗಳು, ಚಿತ್ರಗಳು, ಮಾಹಿತಿ, ವಿಡಿಯೋಗಳು ಅಂತರ್ಜಾಲದಲ್ಲಿ ಇದೆ. ಎಲ್ಲವನ್ನೂ ನೋಡಬಹುದು. ಯಾವ ವಿಷಯದ ಬಗ್ಗೆ ಸಂದೇಹ ಇರಲಿ ಅದರ ಬಗ್ಗೆ ರೀಸರ್ಚ್ ಮಾಡಬಹುದು.

ಹಾಡು ಕೇಳುವದು

ಯಾವುದೇ ಸಿನಿಮಾ ಹಾಡು ಇರಲಿ ಶಾಸ್ತ್ರೀಯ ಸಂಗೀತ ಇರಲಿ ಭಾವಗೀತೆ ಇರಲಿ ಅವನ್ನು ಕಂಪ್ಯೂಟರ್ ಅಲ್ಲಿ ಕೇಳಬಹುದು. ಗಾನಾ, ಜಿಯೋಸಾವನ್, ಯೂಟ್ಯೂಬ್, ಅಮೇಜಾನ್ ಮ್ಯೂಸಿಕ್, ಸ್ಪೋಟಿಫೈ ನಂತಹ ತಾಣಗಳು ಎಪ್ ಗಳು ಇವೆ.

ಸೋಶಿಯಲ್ ಮಿಡಿಯಾ

ಫೇಸ್ ಬುಕ್, ಇನ್ಸ್ಟಾಗ್ರಾಂ, ವಾಟ್ಸ್ ಅಪ್, ಟಿಕ್ ಟಾಕ್ ನಂತಹ ಹಲವು ಸಾಮಾಜಿಕ ತಾಣಗಳು ಲಭ್ಯವಿದೆ. ಇವುಗಳ ಎಪ್ ಗಳೂ ಸಹ ಇದೆ.

ಇವನ್ನು ಬಳಸಿ ದೇಶ ವಿದೇಶ ಎನ್ನದೆ ದೂರಗಳ ಮಿತಿ ಮರೆತು ಸಂಪರ್ಕಿಸಬಹುದು. ಅದೂ ಉಚಿತವಾಗಿ. ಡಾಟಾ ಪ್ಲಾನ್ ಇದ್ದರೆ ಸಾಕು.

ಒಟಿಟಿ

ಒಟಿಟಿ(ಒವರ್ ದ ಟಾಪ್) ತಾಣ / ಎಪ್ ಗಳನ್ನು ನೋಡಬಹುದು. ನೆಟ್ ಫ್ಲಿಕ್ಸ್, ಅಮೇಜಾನ್ ಪ್ರೈಮ್, ಡಿಸ್ನಿ ಹಾಟ್ ಸ್ಟಾರ್ ಮೊದಲಾದವು.

ಈಮೇಲ್

ಈಮೇಲ್ ಸೌಲಭ್ಯ ಬಳಸಬಹುದು.

ಕೋಡಿಂಗ್ / ಅಪ್ಲಿಕೇಶನ್ ಡೆವೆಲಪ್ ಮೆಂಟ್

ಕಂಪ್ಯೂಟರ್ ಬಳಕೆ ಸಾಧ್ಯವಾಗುವದೇ ಅಪ್ಲಿಕೇಶನ್ ಗಳ ಮೂಲಕ. ಅದರ ನಿರ್ಮಾಣಕ್ಕೆ ಕೋಡಿಂಗ್ ಬೇಕೆ ಬೇಕು. ಇದನ್ನೂ ಕೂಡಾ ಕಂಪ್ಯೂರ್ ಅಲ್ಲೇ ಸಾಧ್ಯವಿದೆ.

ಮಾನಿಟರಿಂಗ್ / ಕಂಟ್ರೋಲಿಂಗ್

ಬಾಹ್ಯಾಕಾಶದಲ್ಲಿರೋ ಸೆಟೆಲೈಟ್ , ಅಣು ವಿದ್ಯುತ್ ಸ್ಥಾವರ, ಆಕಾಶದಲ್ಲಿ ಹಾರುತ್ತಿರುವ ವಿಮಾನ, ಟ್ರೇನ್ ಹೀಗೆ ಹಲವು ಮಾನಿಟರಿಂಗ್ ಕಂಪ್ಯೂಟರ್ ನಿಂದ ಸಾಧ್ಯ. ಅಷ್ಟೇ ಅಲ್ಲ ಸರ್ವರ್, ಡಾಟಾ ಸೆಂಟರ್ ಗಳ ಮಾನಿಟರಿಂಗ್ ಸಹ ಮಾಡಬಹುದು. ಅವುಗಳನ್ನು ಕಂಟ್ರೋಲ್ ಸಹ ಮಾಡಬಹುದು.

ಬುಕ್ ರೀಡಿಂಗ್

ಪುಸ್ತಕ ಓದಲೂ ಸಹ ಕಂಪ್ಯೂಟರ್ ಸಹಾಯಕಾರಿ. ಕೈಂಡಲ್ ನಂತಹ ಬರಿ ಪುಸ್ತಕ ಓದಲು ನಿರ್ಮಿಸಿದ ಟ್ಯಾಬ್ ಗಳು ಲಭ್ಯವಿದೆ. ಅಷ್ಟೇ ಅಲ್ಲ ತೀರಾ ಹಳೆಯ ಪುಸ್ತಕಗಳನ್ನು ಡಿಜಿಟಲೀಕರಣ ಮಾಡಿ ಅವು ಸಹ ಲಭ್ಯವಿದೆ. ಒಟ್ಟಿನಲ್ಲಿ ಕೋಟ್ಯಂತರ ಪುಸ್ತಕಗಳನ್ನು ಮುದ್ರಣ ಮಾಡದೇ ಓದುವ ಅನುಕೂಲ ಕಂಪ್ಯೂಟರ್ ನೀಡುತ್ತದೆ. ಇದು ಪರಿಸರಕ್ಕೂ ಅನುಕೂಲ.

ಸಿನಿಮಾ / ಧಾರಾವಾಹಿ ವೀಕ್ಷಣೆ, ಮನೋರಂಜನೆ

ಸಿನಿಮಾ, ಧಾರಾವಾಹಿಗಳನ್ನು ವೀಕ್ಷಿಸಬಹುದು. ಮೊದಲು ಸಿಡಿ / ಡಿವಿಡಿ / ಬ್ಲ್ಯೂ ರೇ ತಟ್ಟೆ ಬಳಸುತ್ತಿದ್ದರು. ಅಂತರ್ಜಾಲದ ಕೃಪೆಯಿಂದ ಇಂದು ನೇರವಾಗಿ ಯೂಟ್ಯೂಬ್, ಓಟಿಟಿ ತಾಣ / ಎಪ್ ನಲ್ಲಿ ವೀಕ್ಷಿಸಬಹುದು.

ಪ್ರಸಂಟೇಶನ್

ನಿಮ್ಮ ಐಡಿಯಾ / ಪ್ಲಾನ್ / ಯೋಜನೆಯನ್ನು ಹಲವು ಜನರಿಗೆ ವಿವರಿಸಬೇಕಾ? ಇದಕ್ಕೆ ಪ್ರಸಂಟೇಶನ್ ಸ್ಲೈಡ್ ಗಳನ್ನು ಮಾಡಿ ವಿವರಿಸುವಾಗ ತೋರಿಸಿದರೆ ಇನ್ನೂ ಪರಿಣಾಮಕಾರಿ ಆಗಿರುತ್ತೆ.

ಡಾಟಾ ಎಂಟ್ರಿ

ಮಾಹಿತಿಯನ್ನು ಎಂಟರ್ ಮಾರಿ ಸುರಕ್ಷಿತವಾಗಿ ಇರಿಸಿ ಬೇಕಾದಾಗ ಸರ್ಚ್ ಮಾಡಿ ಪಡೆಯಬಹುದು.

ಫೋಟೋ ವೀಕ್ಷಣೆ

ಕ್ಯಾಮೆರಾದಲ್ಲಿ ತೆಗೆದ ಫೋಟೋ ಅಥವಾ ಅಂತರ್ಜಾಲದಲ್ಲಿ ಲಭ್ಯವಿರುವ ಚಿತ್ರಗಳ ವೀಕ್ಷಣೆ ಮಾಡಬಹುದು. ಒಂದು ಕಡೆಯಿಂದ ಇನ್ನೊಬ್ಬರಿಗೆ ಕಳುಹಿಸಬಹುದು.

ಲೆಕ್ಕಾಚಾರ

ವೈಜ್ಞಾನಿಕ ಲೆಕ್ಕಾಚಾರ, ಎಕೌಂಟಿಂಗ್ ಲೆಕ್ಕಾಚಾರಗಳಿಗೂ ಕೂಡಾ ಕಂಪ್ಯೂಟರ್ ಉಪಯೋಗಿ.

ಚಿತ್ರ  ಬಿಡಿಸುವದು

ಇಂದು ಕಂಪ್ಯೂಟರ್ ಅಲ್ಲೇ ಪೇಂಟಿಂಗ್ ಮಾಡಬಹುದು. ಬಣ್ಣ ಖರೀದಿಸುವ ಗೋಜಿಲ್ಲ. ಕೈ ರಾಡಿ ಆಗುವ ಚಿಂತಿಲ್ಲ. ವಾಟರ್ ಕಲರ್, ಕ್ರೇಯಾನ್ಸ್, ತ್ರೀಡಿ ಹೀಗೆ ಎಲ್ಲ ಬಗೆಯ ಪೇಂಟಿಂಗ್ ಸಾಧ್ಯ. ತಪ್ಪುಗಳನ್ನು ಅಳಿಸಿ ಸರಿ ಪಡಿಸುವದು ಸಹ ಸುಲಭ.

ನಿಮ್ಮ ಕಲ್ಪನೆ ಹಾಗೂ ಕೌಶಲ್ಯವೇ ಇದಕ್ಕೆ ಮಿತಿ.

ಎನಿಮೇಶನ್

೨ಡಿ / ೩ಡಿ ಎನಿಮೇಶನ್ ಕಾರ್ಟೂನ್ ಸಹ ನಿರ್ಮಿಸಬಹುದು.

ವಿಡಿಯೋ / ಆಡಿಯೋ ಪ್ಲೇ ಮಾಡುವದು

ವಿಡಿಯೋ / ಆಡಿಯೋ ಪ್ಲೇ ಮಾಡುವದು ಕಡತ ತೆರೆದು ಓದುವದು ಎಲ್ಲ ಸಾಧ್ಯ.

ಹವಾಮಾನ ಮುನ್ಸೂಚನೆ

ಹವಾಮಾನ ಒಂದು ಪ್ರದೇಶದಲ್ಲಿ ಮುಂದಿನ ಕೆಲವು ದಿನ ಹೇಗಿರಲಿದೆ ಎಂಬುದನ್ನು ಹಳೆಯ ಹವಾಮಾನ ಮಾಹಿತಿ ಹಾಗೂ ಈಗಿನ ಮಾಹಿತಿ ಬಳಸಿ ವಿಷ್ಲೇಶಿಸಿ ಕಂಪ್ಯೂಟರ್ ಹವಾಮಾನ ಮುನ್ಸೂಚನೆ ನೀಡಬಹುದು. 

ಈ ಮೂಲಕ ಮಳೆ, ಚಂಡಮಾರುತ, ತಾಪಮಾನ, ಸುಂಟರಗಾಳಿ ಮೊದಲಾದವುಗಳನ್ನು ಮೊದಲೇ ತಿಳಿದು ಮುನ್ನೆಚ್ಚರಿಕೆಯಿಂದ ಇರಬಹುದು.

ಆಟೋಮೇಶನ್

ಹಲವು ಕೆಲ್ಸ ಆಟೋಮೇಟ್ ಮಾಡಿ ಕೆಲಸಗಾರರ ಅವಶ್ಯಕತೆ ಕಡಿಮೆ ಮಾಡಬಹುದು. ಹೋಂ ಆಟೋಮೇಶನ್, ಫ್ಯಾಕ್ಟರಿ ಆಟೋಮೇಶನ್ ಇತ್ಯಾದಿ.

ರೊಬೋಟ್ ಗಳನ್ನು ನಡೆಸುವದೂ ಕೂಡಾ ಕಂಪ್ಯೂಟರ್ ತಂತ್ರಜ್ಞಾನ.

ಮನೆ / ವಸ್ತು ವಿನ್ಯಾಸ

ಮನೆ / ಬ್ರಿಡ್ಜ್ / ಬಿಲ್ಡಿಂಗ್ ವಿನ್ಯಾಸ ಕೂಡಾ ಸಾಧ್ಯ. ಕಾರ್ / ಸ್ಕೂಟರ್ / ಮಶೀನ್ ವಿನ್ಯಾಸ ಸಹ ಸಾಧ್ಯ.

ಸ್ನೇಹಿತರೊಂದಿಗೆ ಸಂಪರ್ಕ

ಒಂದು ಗುಂಡಿಯ ಕ್ಲಿಕ್‌ನೊಂದಿಗೆ, ಕಂಪ್ಯೂಟರ್‌ಗಳು ನಾವು ಸಂವಹನ (ಕಮ್ಯುನಿಕೇಶನ್) ಮಾಡುವ ವಿಧಾನವನ್ನು ಪರಿವರ್ತಿಸುತ್ತವೆ. ನಾವು ಇಮೇಲ್‌ಗಳನ್ನು ಕಳುಹಿಸಬಹುದು, ಸ್ನೇಹಿತರು ಮತ್ತು ಕುಟುಂಬದೊಂದಿಗೆ ಚಾಟ್ ಮಾಡಬಹುದು ಮತ್ತು ಪ್ರಪಂಚದ ಇತರ ಭಾಗದಲ್ಲಿರುವ ಸಹೋದ್ಯೋಗಿಗಳಿಗೆ ವೀಡಿಯೊ ಕರೆ ಮಾಡಬಹುದು.

ಶಿಕ್ಷಣ (ಎಜುಕೇಶನ್)

ಕಂಪ್ಯೂಟರ್‌ಗಳು ವಿದ್ಯಾರ್ಥಿಗಳಿಗೂ ಕಲಿಯಲು ಅನುಕೂಲ. ಇಂಟರ್ನೆಟ್‌ನ ಶಕ್ತಿಯೊಂದಿಗೆ, ವಿದ್ಯಾರ್ಥಿಗಳು ಪ್ರಪಂಚದ ಎಲ್ಲಿಂದಲಾದರೂ ವರ್ಚುವಲ್ ತರಗತಿಗಳು, ಆನ್‌ಲೈನ್ ಕೋರ್ಸ್‌ಗಳು ಮತ್ತು ಸಂವಾದಾತ್ಮಕ ಸಂಪನ್ಮೂಲಗಳನ್ನು ಪ್ರವೇಶಿಸಬಹುದು.

ವ್ಯಾಪಾರ (ಬ್ಯುಸಿನೆಸ್)

ವ್ಯಾಪಾರದ ಜಗತ್ತಿನಲ್ಲಿ, ಕಂಪ್ಯೂಟರ್ಗಳು ಅತ್ಯಗತ್ಯ. ದಾಸ್ತಾನುಗಳನ್ನು ಟ್ರ್ಯಾಕ್ ಮಾಡಲು, ಹಣಕಾಸುಗಳನ್ನು ನಿರ್ವಹಿಸಲು ಮತ್ತು ಗ್ರಾಹಕರು ಮತ್ತು ಸಹೋದ್ಯೋಗಿಗಳೊಂದಿಗೆ ಸಂವಹನ ನಡೆಸಲು ಸಹಾಯಕ.

ಬಿಲ್ಲಿಂಗ್, ಪ್ರಚಾರ, ಸಪ್ಲೈ ಚೇನ್ ಮ್ಯಾನೆಜ್ ಮೆಂಟ್, ಗ್ರಾಹಕರ ಸಂಪರ್ಕ ಹೀಗೆ ಹಲವು ಉಪಯೋಗ ಇದೆ.

ಸರಿಯಾದ ಸಾಫ್ಟ್‌ವೇರ್‌ನೊಂದಿಗೆ, ಬ್ಯುಸಿನೆಸ್ ತಮ್ಮ ಕಾರ್ಯಾಚರಣೆಗಳನ್ನು ಸುಗಮಗೊಳಿಸಬಹುದು ಮತ್ತು ಉತ್ಪಾದಕತೆಯನ್ನು ಹೆಚ್ಚಿಸಬಹುದು.

ಸಂಶೋಧನೆ (ರೀಸರ್ಚ್)

ಕಂಪ್ಯೂಟರ್‌ಗಳ ಬಳಕೆಯಿಂದ ಸಂಶೋಧನೆ ಹಿಂದೆಂದಿಗಿಂತಲೂ ಸುಲಭ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಮಾಡಬಹುದು. 

ವಿಶಾಲವಾದ ಡೇಟಾಬೇಸ್‌ಗಳು ಮತ್ತು ಆನ್‌ಲೈನ್ ಸಂಪನ್ಮೂಲಗಳ ಬಳಸಿ, ಸಂಶೋಧಕರು ಮಾಹಿತಿಯನ್ನು ತ್ವರಿತವಾಗಿ ಹುಡುಕಬಹುದು ಮತ್ತು ಡೇಟಾವನ್ನು ಸುಲಭವಾಗಿ ವಿಶ್ಲೇಷಿಸಬಹುದು. ಗೂಗಲ್ ಸರ್ಚ್ ಮೂಲಕ ವೆಬ್ ಅನ್ನು ಹುಡುಕ ಬಹುದು.

ಇಂದು ಚ್ಯಾಟ್ ಜಿಪಿಟಿ ಅಂತಹ ಏಐ ಟೂಲ್ ಗಳು ಸಹ ಸಂಶೋಧನೆ ಮಾಡಲು, ಲೇಖನಗಳ ಸಾರಾಂಶ ಬರೆಯಲು ಇತ್ಯಾದಿ ವಿಷಯಗಳಿಗೆ ಬಳಸ ಬಹುದು.

ಆರೋಗ್ಯ (ಹೆಲ್ತ್)

ಆರೋಗ್ಯ ಉದ್ಯಮವು ಕಂಪ್ಯೂಟರ್‌ಗಳಿಂದ ಕ್ರಾಂತಿಕಾರಿಯಾಗಿದೆ. ರೋಗಿಗಳ ರೆಕಾರ್ಡ್ ಕೀಪಿಂಗ್‌ನಿಂದ ವೈದ್ಯಕೀಯ ಚಿತ್ರಣದವರೆಗೆ, ಕಂಪ್ಯೂಟರ್‌ಗಳು ವೈದ್ಯರು ಮತ್ತು ದಾದಿಯರು ತಮ್ಮ ರೋಗಿಗಳಿಗೆ ಉತ್ತಮ ಆರೈಕೆಯನ್ನು ಒದಗಿಸಲು ಸಹಾಯ ಮಾಡುತ್ತವೆ.

ರೋಗಿಯ ಸ್ಕ್ಯಾನ್ ನಿಂದ ಹಿಡಿದು ರಕ್ತ ಪರಿಶೀಲನೆ ವರೆಗೆ ಎಲ್ಲವೂ ಕಂಪ್ಯೂಟರ್ ಬಳಕೆ ಆಗುತ್ತಿದೆ.

ಹಣಕಾಸು (ಫೈನಾನ್ಸ್)

ನಾವು ನಮ್ಮ ಹಣಕಾಸನ್ನು ನಿರ್ವಹಿಸುವ ವಿಧಾನವನ್ನು ಕಂಪ್ಯೂಟರ್‌ಗಳು ಮಾರ್ಪಡಿಸಿವೆ. ನಾವು ನಮ್ಮ ಖರ್ಚನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದು, ಆನ್‌ಲೈನ್‌ನಲ್ಲಿ ಬಿಲ್‌ಗಳನ್ನು ಪಾವತಿಸಬಹುದು ಮತ್ತು ಕೆಲವೇ ಕ್ಲಿಕ್‌ಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದು.

ಬ್ಯಾಂಕ್ ನಲ್ಲಿ ವ್ಯವಹಾರಗಳನ್ನು ನಮ್ಮ ಫೋನ್ ಅಲ್ಲಿನ ಬ್ಯಾಂಕ್ ಆಪ್ ಅಥವಾ ವೆಬ್ ತಾಣದ ಮೂಲಕ ಮನೆಯಲ್ಲೇ ಕುಳಿತು ಮಾಡಬಹುದು.

ಹೋಮ್ ಆಟೊಮೇಷನ್

ಸ್ಮಾರ್ಟ್ ಫೋನ್ ಬಳಸಿ ನಿಮ್ಮ ಮನೆಯ ಲೈಟ್ / ಫ್ಯಾನ್ / ಏಸಿ / ಟಿವಿ ಎಲ್ಲ ಆನ್ / ಆಫ್ ಹಾಗೂ ಕಂಟ್ರೋಲ್ ಮಾಡುವಂತೆ ಮನೆಯ ಆಟೋಮೇಶನ್ ಮಾಡಬಹುದು. 

ಕೆಲವೇ ಟ್ಯಾಪ್‌ಗಳ ಮೂಲಕ ನಾವು ಏಸಿಯ ತಾಪಮಾನದಿಂದ ಬೆಳಕಿನವರೆಗೆ ಎಲ್ಲವನ್ನೂ ನಿಯಂತ್ರಿಸಬಹುದು.

ಸಾರಿಗೆ (ಲಾಜಿಸ್ಟಿಕ್ಸ್)

ಇಂದು ಕಾರು, ಬಸ್, ರೈಲು ಹಾಗೂ ವಿಮಾನ ಮೊದಲಾದವುಗಳನ್ನು ಮನೆಯಲ್ಲೇ ಕುಳಿತು ಬುಕ್ ಮಾಡಬಹುದು. 

ಅಷ್ಟೇ ಅಲ್ಲ ಸಾರಿಗೆ ಉದ್ಯಮವು ಕಂಪ್ಯೂಟರ್‌ಗಳಿಂದ ಬದಲಾಗಿದೆ. ಟ್ರಾಫಿಕ್ ಅನ್ನು ನಿರ್ವಹಿಸುವುದರಿಂದ ಹಿಡಿದು ಸಾಗಣೆಗಳನ್ನು ಟ್ರ್ಯಾಕ್ ಮಾಡುವವರೆಗೆ, ಲಾಜಿಸ್ಟಿಕ್ಸ್ ಮತ್ತು ವಿತರಣೆಯಲ್ಲಿ ಕಂಪ್ಯೂಟರ್‌ಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.

ಕೊನೆಯ ಮಾತು

ಇವಿಷ್ಟು ಕೇವಲ ಕಂಪ್ಯೂಟರ್ ಬಳಸಿ ಏನೇನು ಮಾಡಬಹುದು ಎಂಬುದರ ಪಕ್ಷಿ ನೋಟ ಮಾತ್ರ. ಹುಡುಕಿದರೆ ಇನ್ನೂ ಹಲವು ಉಪಯೋಗಗಳು ಸಿಗುತ್ತವೆ.  ನೀವು ಕಂಪ್ಯೂಟರ್ ಬಳಕೆ ಏನೆನಕ್ಕೆ ಮಾಡುತ್ತೀರಾ? ಕಮೆಂಟ್ ಮಾಡ್ತೀರಾ?

ಕಂಪ್ಯೂಟರ್ ನ ಬಿಡಿ ಭಾಗಗಳು (ಪಾರ್ಟ್ಸ್) ಯಾವವು ಬನ್ನಿ ಮುಂದಿನ ಲೇಖನದಲ್ಲಿ ತಿಳಿಯೋಣ.

ಈ ಲೇಖನ ಹೇಗನಿಸಿತು? ಹೇಗೆ ಇನ್ನೂ ಇಂಪ್ರೂವ್ ಮಾಡಬಹುದು? ಕಮೆಂಟ್ ಹಾಕ್ತೀರಾ? ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.

ಚಿತ್ರಕೃಪೆ: honeycombhc ಇಂದ Pixabay

ಮತ್ತೆ ಮತ್ತೆ ಕೇಳುವ ಪ್ರಶ್ನೆಗಳು

ಪ್ರಶ್ನೆ: ವ್ಯವಹಾರಗಳಿಗೆ ಕಂಪ್ಯೂಟರ್‌ಗಳು ಹೇಗೆ ಸಹಾಯ ಮಾಡುತ್ತವೆ? 

ಉತ್ತರ: ವ್ಯವಹಾರಗಳಿಗೆ ಹಣಕಾಸು ನಿರ್ವಹಣೆ, ಬಿಲ್ಲಿಂಗ್, ವಸ್ತುಗಳ ದಾಸ್ತಾನು ನಿರ್ವಹಣೆ ಮತ್ತು ಗ್ರಾಹಕರ ಡೇಟಾವನ್ನು ನಿರ್ವಹಿಸಲು, ಕಾರ್ಯಾಚರಣೆಗಳನ್ನು ಸುವ್ಯವಸ್ಥಿತಗೊಳಿಸಲು, ಮಾರ್ಕೆಟಿಂಗ್ ಸಾಮಗ್ರಿಗಳನ್ನು ವಿನ್ಯಾಸಗೊಳಿಸಲು ಮತ್ತು ಹಣಕಾಸು ಡೇಟಾವನ್ನು ವಿಶ್ಲೇಷಿಸಲು ಹೀಗೆ ಹಲವು ರೀತಿಯಲ್ಲಿ ಕಂಪ್ಯೂಟರ್‌ಗಳು ಸಹಾಯ ಮಾಡುತ್ತವೆ.

ಪ್ರಶ್ನೆ: ಸಂವಹನಕ್ಕಾಗಿ ಕಂಪ್ಯೂಟರ್‌ಗಳನ್ನು ಬಳಸುವುದರಿಂದ ಏನು ಪ್ರಯೋಜನ? 

ಉತ್ತರ: ಕಂಪ್ಯೂಟರ್‌ಗಳು ನಮಗೆ ವಿವಿಧ ಸಂವಹನ ಚಾನೆಲ್‌ಗಳನ್ನು ಒದಗಿಸುತ್ತವೆ, ಪ್ರಪಂಚದಾದ್ಯಂತದ ಜನರೊಂದಿಗೆ ಸುಲಭವಾಗಿ ಮತ್ತು ವೇಗವಾಗಿ ಸಂವಹನ ನಡೆಸುತ್ತವೆ. ಇದು ಮಾಹಿತಿಯನ್ನು ಹಂಚಿಕೊಳ್ಳಲು ಮತ್ತು ಇತರರೊಂದಿಗೆ ಸಹಕರಿಸಲು ನಮಗೆ ಅನುವು ಮಾಡಿಕೊಡುತ್ತದೆ.

ಉದಾಹರಣೆಗೆ ಇಂದು ವಾಟ್ಸ್ ಆಪ್, ಸ್ಕೈಪ್, ಝೂಮ್ ಬಳಸಿ ಜಗತ್ತಿನ ಯಾವುದೇ ಮೂಲೆಯಲ್ಲಿರುವ ಜನರೊಂದಿಗೆ ಸಂಪರ್ಕ ಸಾಧ್ಯ.

ಪ್ರಶ್ನೆ: ಸಂಶೋಧನೆಗೆ ಕಂಪ್ಯೂಟರ್‌ಗಳು ಹೇಗೆ ಸಹಾಯ ಮಾಡುತ್ತವೆ? 

ಉತ್ತರ: ಕಂಪ್ಯೂಟರ್‌ಗಳು ಸಂಶೋಧಕರಿಗೆ ಡಿಜಿಟಲ್ ಲೈಬ್ರರಿಗಳು, ಆನ್‌ಲೈನ್ ಜರ್ನಲ್‌ಗಳು ಮತ್ತು ಸಂಶೋಧನಾ ಡೇಟಾಬೇಸ್‌ಗಳಿಗೆ ಪ್ರವೇಶವನ್ನು ಒದಗಿಸುತ್ತವೆ. ಎಲ್ಲವನ್ನೂ ಇದ್ದಲ್ಲಿಂದಲೇ ಇದು ದೊಡ್ಡ ಡೇಟಾ ಸೆಟ್‌ಗಳನ್ನು ವಿಶ್ಲೇಷಿಸಲು ಅನುಕೂಲ.

ಸಂಶೋಧನಾ ಲೇಖನ / ಪುಸ್ತಕ ಬರೆಯಲೂ ಕೂಡಾ ಬಳಸ ಬಹುದು.

ಅಷ್ಟೇ ಅಲ್ಲ ಪ್ರಪಂಚದಾದ್ಯಂತದ ಇತರ ಸಂಶೋಧಕರೊಂದಿಗೆ ಮಾತುಕತೆ ಆಡಲೂ ಸಹ ಅವರಿಗೆ ಅನುವು ಮಾಡಿಕೊಡುತ್ತದೆ.

ಪ್ರಶ್ನೆ: ಕೆಲಸದ ಸ್ಥಳದಲ್ಲಿ ಕಂಪ್ಯೂಟರ್‌ಗಳ ಕೆಲವು ಸಾಮಾನ್ಯ ಉಪಯೋಗಗಳು ಯಾವುವು?

ಉತ್ತರ: ಆಧುನಿಕ ಕೆಲಸದ ಸ್ಥಳಗಳಲ್ಲಿ ಕಂಪ್ಯೂಟರ್‌ಗಳು ಅತ್ಯಗತ್ಯ ಸಾಧನಗಳಾಗಿವೆ. ಅವುಗಳ ಉಪಯೋಗಗಳು ಹಲವು ಮತ್ತು ವೈವಿಧ್ಯಮಯ. 

ಕೆಲವು ಸಾಮಾನ್ಯ ಉದಾಹರಣೆಗಳೆಂದರೆ ಡಾಕ್ಯುಮೆಂಟ್‌ಗಳು ಮತ್ತು ಸ್ಪ್ರೆಡ್‌ಶೀಟ್‌ಗಳನ್ನು ರಚಿಸುವುದು, ಇಮೇಲ್ ಮತ್ತು ಕ್ಯಾಲೆಂಡರ್‌ಗಳನ್ನು ನಿರ್ವಹಿಸುವುದು.

ಸಂಶೋಧನೆ ಮತ್ತು ಡೇಟಾ ವಿಶ್ಲೇಷಣೆ ನಡೆಸುವುದು ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಸಹೋದ್ಯೋಗಿಗಳೊಂದಿಗೆ ಸಹಯೋಗ ಮಾಡುವುದು.

ಅಪ್ಲಿಕೇಶನ್ ಹಾಗೂ ವೆಬ್ ಸೈಟ್ ನಿರ್ಮಾಣ, ಸರ್ವರ್ ನಿರ್ವಹಣೆ ಹೀಗೆ ಉಪಯೋಗ ಹಲವು.

ಪ್ರಶ್ನೆ: ಕಂಪ್ಯೂಟರ್‌ಗಳ ಕೆಲವು ಮನರಂಜನಾ ಉಪಯೋಗಗಳು ಯಾವುವು? 

ಉತ್ತರ: ಕಂಪ್ಯೂಟರ್ ಕೇವಲ ಕೆಲಸಕ್ಕಾಗಿ ಅಲ್ಲ; ಅವುಗಳನ್ನು ಮನರಂಜನೆ ಮತ್ತು ವಿರಾಮ ಚಟುವಟಿಕೆಗಳಿಗೂ ಬಳಸಬಹುದು. ಕೆಲವು ಜನಪ್ರಿಯ ಉದಾಹರಣೆಗಳಲ್ಲಿ ವೀಡಿಯೊ ಗೇಮ್ ಗಳನ್ನು ಆಡುವುದು, ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳನ್ನು ಸ್ಟ್ರೀಮಿಂಗ್ ಮಾಡಿ ನೋಡುವದು, ಸಂಗೀತವನ್ನು ಕೇಳುವುದು ಮತ್ತು ಇಂಟರ್ನೆಟ್ ಬ್ರೌಸ್ ಮಾಡುವುದು ಸೇರಿವೆ.

ಪ್ರಶ್ನೆ: ಶಿಕ್ಷಣಕ್ಕೆ ಕಂಪ್ಯೂಟರ್‌ಗಳನ್ನು ಬಳಸಬಹುದೇ? 

ಉತ್ತರ: ಖಂಡಿತ! ಇತ್ತೀಚಿನ ವರ್ಷಗಳಲ್ಲಿ ಕಂಪ್ಯೂಟರ್ ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ. ಅವುಗಳನ್ನು ಸಂಶೋಧನೆಗೆ, ಪೇಪರ್‌ಗಳನ್ನು ಬರೆಯಲು, ಪ್ರಸ್ತುತಿಗಳನ್ನು ರಚಿಸಲು ಮತ್ತು ಆನ್‌ಲೈನ್ ಕೋರ್ಸ್‌ಗಳನ್ನು ತೆಗೆದುಕೊಳ್ಳಲು ಸಹ ಬಳಸಲಾಗುತ್ತದೆ. 

ಹೆಚ್ಚುವರಿಯಾಗಿ, ಅನೇಕ ಶಾಲೆಗಳು ಮತ್ತು ವಿಶ್ವವಿದ್ಯಾನಿಲಯಗಳು ಕಲಿಕೆಯ ನಿರ್ವಹಣಾ ವ್ಯವಸ್ಥೆಗಳನ್ನು ಅಳವಡಿಸಿಕೊಂಡಿವೆ, ಅದು ವಿದ್ಯಾರ್ಥಿಗಳಿಗೆ ಕೋರ್ಸ್ ವಸ್ತುಗಳನ್ನು ಪ್ರವೇಶಿಸಲು ಮತ್ತು ಆನ್‌ಲೈನ್‌ನಲ್ಲಿ ಗೆಳೆಯರೊಂದಿಗೆ ಮಾತು-ಕತೆ-ಚರ್ಚೆಗೆ ಅನುವು ಮಾಡಿಕೊಡುತ್ತದೆ.

ಪ್ರಶ್ನೆ: ನಿರ್ದಿಷ್ಟ ಕೈಗಾರಿಕೆಗಳಲ್ಲಿ ಕಂಪ್ಯೂಟರ್‌ಗಳ ಕೆಲವು ವಿಶೇಷ ಉಪಯೋಗಗಳು ಯಾವುವು? 

ಉತ್ತರ: ವಿಭಿನ್ನ ಕೈಗಾರಿಕೆಗಳು ಬೇರೆ ಬೇರೆ ಅಗತ್ಯಗಳನ್ನು ಹೊಂದಿವೆ. ಆ ಅಗತ್ಯಗಳನ್ನು ಪೂರೈಸಲು ಕಂಪ್ಯೂಟರ್‌ಗಳನ್ನು ಹಲವು ರೀತಿಯಲ್ಲಿ ಬಳಸಬಹುದು. 

ಉದಾಹರಣೆಗೆ, ಆರೋಗ್ಯ ವೃತ್ತಿಪರರು ರೋಗಿಗಳ ದಾಖಲೆಗಳನ್ನು ನಿರ್ವಹಿಸಲು ಮತ್ತು ಚಿಕಿತ್ಸೆಗಳನ್ನು ನಿರ್ವಹಿಸಲು ಕಂಪ್ಯೂಟರ್‌ಗಳನ್ನು ಬಳಸುತ್ತಾರೆ, ಆದರೆ ಎಂಜಿನಿಯರ್‌ಗಳು ಅವುಗಳನ್ನು ವಿನ್ಯಾಸ ಮತ್ತು ಸಿಮ್ಯುಲೇಶನ್‌ಗಾಗಿ ಬಳಸುತ್ತಾರೆ. 

ಚಿಲ್ಲರೆ ವ್ಯಾಪಾರಿಗಳು ದಾಸ್ತಾನು ನಿರ್ವಹಣೆಗಾಗಿ ಕಂಪ್ಯೂಟರ್‌ಗಳನ್ನು ಬಳಸುತ್ತಾರೆ.

ಹಣಕಾಸು ಉದ್ಯಮವು ಡೇಟಾವನ್ನು ವಿಶ್ಲೇಷಿಸಲು ಮತ್ತು ಹಣಕಾಸಿನ ನಿರ್ಧಾರಗಳನ್ನು ಮಾಡಲು ಕಂಪ್ಯೂಟರ್‌ಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ.

ಪ್ರಶ್ನೆ: ನಾವು ವ್ಯವಹಾರ ಮಾಡುವ ವಿಧಾನವನ್ನು ಕಂಪ್ಯೂಟರ್‌ಗಳು ಹೇಗೆ ಬದಲಾಯಿಸಿವೆ? 

ಉತ್ತರ: ವ್ಯವಹಾರಗಳು ಹಲವಾರು ರೀತಿಯಲ್ಲಿ ಕಾರ್ಯನಿರ್ವಹಿಸುವ ವಿಧಾನವನ್ನು ಕಂಪ್ಯೂಟರ್‌ಗಳು ಮಾರ್ಪಡಿಸಿವೆ. ದಿನನಿತ್ಯದ ಕಾರ್ಯಗಳನ್ನು ಸ್ವಯಂಚಾಲಿತ(ಆಟೋಮೇಟ್) ಮಾಡುವದರಿಂದ ಹಿಡಿದು ಉದ್ಯೋಗಿಗಳ ನಡುವೆ ಮಾತುಕತೆ ಮತ್ತು ಸಹಯೋಗವನ್ನು ಸುಲಭಗೊಳಿಸುವವರೆಗೆ, ಕಂಪ್ಯೂಟರ್‌ಗಳು ವಿಧಾನಗಳನ್ನು ಸುವ್ಯವಸ್ಥಿತಗೊಳಿಸಿವೆ ಮತ್ತು ವ್ಯವಹಾರಗಳನ್ನು ಹೆಚ್ಚು ಪರಿಣಾಮಕಾರಿ ಮತ್ತು ಉತ್ಪಾದಕವಾಗಿಸಿದೆ. 

ಅದು ಆನ್‌ಲೈನ್ ಮಾರ್ಕೆಟಿಂಗ್ ಮತ್ತು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಗ್ರಾಹಕರನ್ನು ತಲುಪಲು ವ್ಯವಹಾರಗಳಿಗೆ ಸುಲಭವಾಗಿಸಿದೆ.

ಅಲೆಕ್ಸಾ.ಕಾಂ ಶಟ್ಟಿಂಗ್ ಡೌನ್!

ಅಲೆಕ್ಸಾ.ಕಾಂ ಜಾಲತಾಣ ಮೇ ೧, ೨೦೨೨ ರಿಂದ ನಿವೃತ್ತಿ ಆಗಲಿದೆ. ಗಮನಿಸಿ ಅಲೆಕ್ಸಾ.ಕಾಂ ಎಂದರೆ ನಿಮ್ಮ ಟಿವಿ, ಮೊಬೈಲ್ ಹಾಗೂ ಅಮೇಜಾನ್ ಇಕೋ ಡಿವೈಸ್ ಅಲ್ಲಿ ಬರುವ ಅದೇ ಹೆಸರಿನ ವಾಯ್ಸ್ ಸೇವೆ ಅಲ್ಲ.

ಗಣಕ ಲೋಕದಲ್ಲಿ ಆಗುವದೇ ಹೀಗೆ. ಇಲ್ಲಿನ ಸೇವೆಗಳು ಯಾವಾಗ ಜನಪ್ರಿಯತೆ ಕಳೆದುಕೊಳ್ಳುತ್ತೋ ಅದನ್ನು ನಡೆಸಿಕೊಂಡು ಹೋಗುವ ಖರ್ಚು ಬರುವ ಆದಾಯ ಮೀರುತ್ತೋ ತಕ್ಷಣ ಅದನ್ನು ನಿಲ್ಲಿಸುವ ನಿರ್ದಾರ ಮಾಡಲಾಗುತ್ತೆ. ಆ ಒಂದು ಸಾಲಿಗೆ ಅಲೆಕ್ಸಾ.ಕಾಂ ಸಹ ಈಗ ಸೇರಿದೆ.

{tocify} $title={ವಿಷಯ ಸೂಚಿ}

ಏನಿದು ಅಲೆಕ್ಸಾ.ಕಾಂ?

ಇದು ಅಮೇಜಾನ್ ಅವರ ಕೀವರ್ಡ್ ಸಂಶೋಧನೆ, ಕಂಟೆಂಟ್ ರೀಸರ್ಚ್ ಮಾಡಲು ಸಹಾಯ ಮಾಡುವ ಜಾಲ ತಾಣವಾಗಿದೆ.

ಅಕಸ್ಮಾತ್ ಕಳೆದ ಇಪ್ಪತ್ತು ವರ್ಷಗಳಲ್ಲಿ ನೀವು ವೆಬ್ ತಾಣ ತೆರೆದು ಸರ್ಚ್ ಇಂಜಿನ್ ಆಪ್ಟಿಮೈಜೇಶನ್ ಏನಾದ್ರೂ ಮಾಡಿದ್ರೆ ಅಲೆಕ್ಸಾ.ಕಾಂ ಬಳಸಿರ್ತೀರಾ. ಕನಿಷ್ಟ ಇದರ ಹೆಸರನ್ನಾದರೂ ಕೇಳಿರ್ತೀರಾ.

ಹಿಂದೆ ಯಾರಾದ್ರು ತಮ್ಮ ವೆಬ್ ಸೈಟ್ ಎಷ್ಟು ಜನಪ್ರಿಯ, ಯಾವ ಸರ್ಚ್ ಮಾಡಿ ಬರ್ತಾರೆ ತಿಳಿಯಲು ಅಲೆಕ್ಸಾ.ಕಾಂ ಬ್ಲಾಗ್ಗರ್ ಗಳು ಬಳಸ್ತಾ ಇದ್ರು.

ಇದು ಹೇಗೆ ಕೆಲ್ಸ ಮಾಡುತ್ತೆ?

ಈ ಸೇವೆ ಆರಂಭವಾಗಿ ೨೫ ವರ್ಷ ಆಗಿದೆ.  ಅಲೆಕ್ಸಾ ಬ್ರೌಸರ್ ಎಕ್ಸ್ಟೆಂಶನ್ ಬಳಸುವ ಹಾಗೂ ಕೆಲವು ಸರ್ವರ್ ಮಾನಿಟರ್ ಟ್ರಾಫಿಕ್ ಅನ್ನು ಮಾನಿಟರ್ ಮಾಡಿ ಅಲೆಕ್ಸಾ ಜಾಲ ತಾಣಗಳನ್ನು ರಾಂಕ್ ಮಾಡುತ್ತದೆ. 

ವೆಬ್ ತಾಣದ ಜನಪ್ರಿಯತೆಯನ್ನು ಅಲೆಕ್ಸಾ ರಾಂಕಿನಿಂದ ಅಳೆಯುತ್ತಿದ್ದ ಕಾಲವೊಂದು ಇತ್ತು. ಆದರೆ ಕ್ರಮೇಣ ಅದರ ಜನಪ್ರಿಯತೆ ಕಡಿಮೆ ಆಯ್ತು.

ಈಗ ಏನು ಮಾಡಬೇಕು?

ಅಲೆಕ್ಸಾ.ಕಾಂ ಈಗಾಗಲೇ ಹೊಸ ಚಂದಾದಾರನ್ನು ತೆಗೆದುಕೊಳ್ಳುವದು ಹಾಗೂ ಈಗಿರುವ ಚಂದಾದಾರತ್ವ ರಿನ್ಯೂ ಮಾಡುವದನ್ನು ನಿಲ್ಲಿಸಿದೆ.

ಅಕಸ್ಮಾತ್ ನೀವು ಅವರ ಎಪಿಐ ಬಳಸುತ್ತಲಿದ್ರೆ ಡಿಸೆಂಬರ್ ೧೫ ೨೦೨೨ರವರೆಗೆ ಅವು ಕೆಲಸ ಮಾಡುತ್ತೆ. ಅಲ್ಲಿಯದರ ಒಳಗೆ ಪರ್ಯಾಯ ಎಪಿಐ ಜೊತೆ ಇಂಟಿಗ್ರೇಶನ್ ಅನ್ನೋ ಅಥವಾ ಬೇರಾವುದೋ ಮಾರ್ಗದ ಮೂಲಕ ಕೀವರ್ಡ್ ರೀಸರ್ಚ್ ಕೆಲಸ ಮುಗಿಸಿಕೊಳ್ಳಬೇಕು.

ಯಾವುದಾದರೂ ಡಾಟಾ ಅನ್ನು ಎಕ್ಷ್ಪೋರ್ಟ್ ಮಾಡಿ ಬ್ಯಾಕ ಅಪ್ ಇಡಲು ಸಹಾ ಅಲೆಕ್ಸಾ.ಕಾಂ ಅವಕಾಶ ಮಾಡಿ ಕೊಟ್ಟಿದೆ. ಅವಕ್ಕೆಲ್ಲಾ ಕೊನೆಯ ದಿನಾಂಕ ೧ ಮೇ ೨೦೨೨. ಅದಕ್ಕೂ ಮೊದಲು ಬ್ಯಾಕ ಅಪ್ ಮಾಡಿ ಕೊಳ್ಳಬೇಕು.

ಇದಕ್ಕೆ ಪರ್ಯಾಯ ಸೇವೆಗಳು

ಇದಕ್ಕೆ ಪರ್ಯಾಯ ಇದೇ ರೀತಿಯ ಸೇವೆ ನೀಡುವ ತಾಣಗಳ ಪಟ್ಟಿ ಕೆಳಗಿದೆ. ಅಲೆಕ್ಸಾ.ಕಾಂ ಬದಲಾಗಿ ಅವನ್ನು ಎಸ್ ಇ ಓ ಕಾರ್ಯಗಳಿಗೆ ಬಳಸಬಹುದು.

ಈ ಲೇಖನ ಹೇಗನಿಸಿತು? ಹೇಗೆ ಇನ್ನೂ ಇಂಪ್ರೂವ್ ಮಾಡಬಹುದು? ಕಮೆಂಟ್ ಹಾಕ್ತೀರಾ? ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.

ವ್ಲಾಗ್ಗಿಂಗ್ ಗೆ ಯಾವ ವಿಡಿಯೋ ಕ್ಯಾಮರಾ ಒಳ್ಳೆಯದು?


 ಇಂದು ವ್ಲಾಗ್ಗಿಂಗ್ ತುಂಬಾ ಸಾಮಾನ್ಯವಾಗಿದೆ. ಫೇಸ್ ಬುಕ್, ಯೂಟ್ಯೂಬ್, ಟಿಕ್ ಟಾಕ್ ತದ್ರೂಪಿಗಳು (ಜೋಶ್, ಲೈಕೀ, ಟಕಾ ಟಕ್, ಮೋಜ್), ಇನ್ಸ್ಟಾ ಗ್ರಾಂ ಎಲ್ಲ ಕಡೆ ವಿಡಿಯೋ ದೇ ರಾಜ್ಯಭಾರ.

ಇಂದು ೨೦೨೧ರಲ್ಲಿ ಹೆಚ್ಚಿನ ಜನ ಓದಲು ಬಯಸುವದಿಲ್ಲ. ವಿಡಿಯೋ ನೋಡಲು ಅಥವಾ ಆಡಿಯೋ ಕೇಳಲು ಬಯಸುತ್ತಾರೆ.

ಅಷ್ಟೇ ಅಲ್ಲ ನಟನೆ, ನೃತ್ಯ, ಹಾಸ್ಯ, ಕಲೆ, ಶಿಕ್ಷಣ ಹೀಗೆ ನಿಮ್ಮ ಪ್ರತಿಭೆ ತೋರಿಸಲು ವ್ಲಾಗ್ಗಿಂಗ್ ಉತ್ತಮ ಮಾರ್ಗ.

ಈ ಲೇಖನದಲ್ಲಿ ವ್ಲಾಗ್ಗಿಂಗ್ ಕ್ಯಾಮರಾ ಹೇಗಿರಬೇಕು? ಯಾವ ಯಾವ ರೀತಿಯ ಕ್ಯಾಮರಾ ಉತ್ತಮ ಅನ್ನುವದರ ಬಗ್ಗೆ ನೋಡೋಣ.

ಗಮನಿಸಿ ಈ ಲೇಖನದಲ್ಲಿ ಅಫಿಲಿಯೆಟ್ ಲಿಂಕ್ ಗಳಿದ್ದು ಅವುಗಳಿಂದ ಗಣಕ ಪುರಿ ತಾಣವು ಚಿಕ್ಕ ಕಮೀಶನ್ ಗಳಿಸುತ್ತದೆ. ಅದರಿಂದ ನಿಮಗೆ ಯಾವುದೇ ರೀತಿಯ ಬೆಲೆಯ ವ್ಯತ್ಯಾಸ ಆಗುವದಿಲ್ಲ. ಬದಲಾಗಿ ನಮ್ಮ ಕನ್ನಡ ಕೈಂಕರ್ಯಕ್ಕೆ ಹೆಚ್ಚಿನ ಬೆಂಬಲ ಸಿಗುವದು.

{tocify} $title={ವಿಷಯ ಸೂಚಿ}

ವ್ಲಾಗ್ಗಿಂಗ್ ಗೆ ಕ್ಯಾಮರಾ ಹೇಗಿರಬೇಕು?

ವ್ಲಾಗ್ಗಿಂಗ್ ಕ್ಯಾಮರಾದಲ್ಲಿ ಯಾವ ತರಹದ ಸೌಲಭ್ಯ ಇರಬೇಕು? ಬನ್ನಿ ನೋಡೋಣ.

ನೀವು ಯಾವ ಬಗೆಯ ವ್ಲಾಗ್ಗಿಂಗ್ ಮಾಡಲಿದ್ದೀರಾ? ಒಂದು ಕೋಣೆಯಲ್ಲಿ ಕುಳಿತು ವಿವರಿಸಲಿದ್ದೀರಾ? ಒಂದು ನಿಗದಿ ಪಡಿಸಿದ ಜಾಗದಲ್ಲಿ ಮಾತನಾಡಲಿದ್ದೀರಾ? ಇಲ್ಲಾ ಗುಡ್ಡ, ಬೆಟ್ಟ, ಸಮುದ್ರ ತೀರ, ಮಾರುಕಟ್ಟೆ, ಪ್ರವಾಸಿ ತಾಣ ಎಲ್ಲ ಕಡೆ ಜಿಗಿದು ಕುಪ್ಪಳಿಸುತ್ತಾ ವಿವರಿಸುತ್ತಾ ವ್ಲಾಗ್ಗಿಂಗ್ ಮಾಡಲಿದ್ದೀರಾ? ಇದರ ಆಧಾರದ ಮೇಲೆ ನಿಮ್ಮ ಕ್ಯಾಮೆರಾ ನಿರ್ಧಾರ ಆಗುತ್ತದೆ.

ವ್ಲಾಗ್ಗಿಂಗ್ ಕ್ಯಾಮೆರಾದಲ್ಲಿ ಈ ಮುಂದಿನ ಸೌಲಭ್ಯ ಇದ್ದರೆ ಉತ್ತಮ.

೪ಕೆ ರೆಕಾರ್ಡಿಂಗ್

ಇಂದು ೨೦೨೧ರಲ್ಲಿ ೪ಕೆ ರೆಕಾರ್ಡಿಂಗ್ ಅತಿ ಮುಖ್ಯ. ಇನ್ನು ಕೆಲವೇ ವರ್ಷದಲ್ಲಿ ೭೨೦ಪಿ ಅನ್ನು ಹೇಗೆ ಫುಲ್ ಎಚ್ ಡಿ ಸ್ಥಾನ ಪಲ್ಲಟ ಮಾಡಿತೋ ಹಾಗೆ ಒಮ್ಮೆ ೮ಕೆ ಜಾಸ್ತಿ ಬಳಕೆ ಆದ ಹಾಗೆ ಆಗಲಿದೆ.

೮ಕೆ ತೆರೆಯಲ್ಲಿ ೪ಕೆ ಗಿಂತ ಕಡಿಮೆ ರಿಸಾಲ್ಯೂಶನ್ ವಿಡಿಯೋ ಅಷ್ಟು ಉತ್ತಮ ಅನುಭವ ನೀಡದು!

ನಿಮ್ಮ ವ್ಲಾಗ್ಗಿಂಗ್ ಕ್ಯಾಮೆರಾದಲ್ಲಿ ೪ಕೆ ೩೦ಪಿ ರೆಕಾರ್ಡಿಂಗ್ ಇರಬೇಕು. ೪ಕೆ ೬೦ಪಿ ಇದ್ದರೆ ಇನ್ನೂ ಉತ್ತಮ.

ಅಕಸ್ಮಾತ್ ಬಜೆಟ್ ಕಾರಣದಿಂದ ೪ಕೆ ಸಾಧ್ಯವಾಗದಿದ್ದರೂ ಪರವಾಗಿಲ್ಲ ಕನಿಷ್ಟ ಫುಲ್ ಎಚ್ಡಿ ಆರಂಭಿಕವಾಗಿ ಬಳಸಿ ಕ್ರಮೇಣ ನಿಮ್ಮ ಚಾನೆಲ್ ಜನಪ್ರಿಯ ಆದ ಹಾಗೆ ೪ಕೆ ಗೆ ಅಪ್ ಗ್ರೇಡ್ ಮಾಡಿ.

ಆಪ್ಟಿಕಲ್ ಇಮೇಜ್ ಸ್ಟೆಬಿಲೈಜೇಶನ್

ಇದು ಇದ್ದರೆ ನಿಮಗೆ ನಡೆದಾಡುತ್ತಾ ವ್ಲಾಗ್ಗಿಂಗ್ ಮಾಡುತ್ತಾ ಇದ್ದರೆ ಕ್ಯಾಮೆರಾ ಶೇಕ್ ಆದರೂ ಉತ್ತಮ ವಿಡಿಯೋ ರೆಕಾರ್ಡಿಂಗ್ ಆಗುತ್ತೆ. ಇಲ್ಲದಿದ್ದರೆ ನೋಡುಗರಿಗೆ ಉತ್ತಮ ಅನುಭವ ನೀಡುವದಿಲ್ಲ. ಇಮೇಜ್ ಸ್ಟೆಬಿಲೈಜೇಶನ್ ಇದ್ದರೆ ಟ್ರೈಪಾಡ್ ಇಲ್ಲದಿದ್ದರೂ ನಿಮ್ಮ ಹೊರಾಂಗಣ ವಿಡಿಯೋ ಗುಣಮಟ್ಟ ಉತ್ತಮ ಆಗಿರುತ್ತದೆ.

ವೀವ್ ಫೈಂಡರ್

ಸೆಲ್ಫಿ ವಿಡಿಯೋ ತೆಗೆಯುವಾಗ ವೀವ್ ಫೈಂಡರ್ ನಲ್ಲಿ ನಿಮ್ಮ ಮುಖ ಕಾಣುವದು ಅವಶ್ಯಕ. ಇಲ್ಲವಾದ್ರೆ ನಿಮಗೆ ವಿಡಿಯೋ ಹೇಗೆ ಬರುತ್ತಿದೆ, ಕ್ಯಾಮರಾ ಹೇಗೆ ಹಿಡಿಯಬೇಕು ಅನ್ನುವದು ತಿಳಿಯದು. ಅದಕ್ಕಾಗಿ ವೀವ್ ಫೈಂಡರ್ ಫ್ಲೆಕ್ಸಿಬಲ್ ಆಗಿದ್ರೆ ಉತ್ತಮ.

ಜಾಸ್ತಿ ಮೆಮರಿ

೪ಕೆ ವಿಡಿಯೋ ಉತ್ತಮ ಗುಣಮಟ್ಟದಲ್ಲಿ ಉಳಿಸಲು ಜಾಸ್ತಿ ಮೆಮರಿ ಬೇಕು. ಮೆಮರಿ ತುಂಬಿದಾಗ ತಕ್ಷಣ ಬೇರೆ ಕಾರ್ಡ್ ಹಾಕುವ ಸೌಲಭ್ಯ ಇದ್ದರೆ ಇನ್ನೂ ಅನುಕೂಲ.

ಜೂಮ್ ಇನ್ / ಔಟ್

ನೀವು ಪ್ರವಾಸಿ ತಾಣಗಳನ್ನು ಜಾಸ್ತಿ ಶೂಟ್ ಮಾಡುತ್ತಿದ್ದರೆ ನಿಮಗೆ ಕೆಲವು ಬಾರಿ ಹತ್ತಿರದಿಂದ ಪ್ರೇಕ್ಷಣೀಯ ಜಾಗ ತೋರಿಸಲು ಜೂಮ್ ಇನ್ ಮಾಡುವ ಅವಶ್ಯಕತೆ ಇರಬಹುದು. ಆದ್ರೆ ಈ ಫೀಚರ್ ಆರಂಭಿಕ ದಿನಗಳಲ್ಲಿ ಇಲ್ಲದಿದ್ದರೂ ನಡೆದೀತು.

ವೈಡ್ ಎಂಗಲ್ (ಅಗಲವಾದ ಕೋನ)

ನಿಮ್ಮ ಕ್ಯಾಮರಾ ವಿಶಾಲವಾದ ಕೋನದಲ್ಲಿ ವಿಡಿಯೋ ತೆಗೆಯುವ ಸಾಮರ್ಥ್ಯ ಇದ್ದರೆ ಉತ್ತಮ. ಇದು ನೋಡುಗರಿಗೆ ಆ ಜಾಗದ ಪೂರ್ಣ ಚಿತ್ರವನ್ನು ನೀಡುತ್ತದೆ.

ಜಾಸ್ತಿ ಬ್ಯಾಟರಿ ಲೈಫ್

ಬ್ಯಾಟರಿ ಲೈಫ್ ಚೆನ್ನಾಗಿದ್ದು ಅಥವಾ ಕನಿಷ್ಟ ಬೇರೆ ಬ್ಯಾಟರಿ ಬದಲಾಯಿಸುವ ಸೌಲಭ್ಯ ಇದ್ದರೆ ಉತ್ತಮ ಆಗ ಸ್ಪೇರ್ ಬ್ಯಾಟರಿ ಬಳಸಬಹುದು. ಪ್ರಯಾಣದ ವ್ಲಾಗ್ಗಿಂಗ್ ಗೆ ಇದು ತುಂಬಾ ಅನುಕೂಲ.

ವ್ಲಾಗ್ಗಿಂಗ್ ಗೆ ಕ್ಯಾಮರಾ ಆಯ್ಕೆಗಳು

ವ್ಲಾಗ್ಗಿಂಗ್ ಗೆ ಹಲವು ಬಗೆಯ ಕ್ಯಾಮರಾ ಆಯ್ಕೆಗಳಿವೆ. ಯಾವವು ಬನ್ನಿ ನೋಡೋಣ.

ಜಾಸ್ತಿ ಹಣ ಕ್ಯಾಮೆರಾ ಅಥವಾ ಇನ್ನಿತರ ಗ್ಯಾಜೆಟ್ ಮೇಲೆ ಆರಂಭಿಕದ ದಿನದಲ್ಲಿ ಬಂಡವಾಳ ಹೂಡದಿರುವದು ಒಳ್ಳೆಯದು. ಒಮ್ಮೆ ಯಶಸ್ಸಿನ ರಾಣಿ ನಿಮ್ಮ ಕೈ ಹಿಡಿದ ಮೇಲೆ ಬೇಕಿದ್ದರೆ ಕಾಸ್ಟ್ಲಿ ಕ್ಯಾಮರಾ ಗ್ಯಾಜೆಟ್ ತೆಗೆದು ಕೊಳ್ಳುವದರ ಬಗ್ಗೆ ಯೋಚಿಸಿ.

ಒಂದು ವಿಷಯ ನೆನಪಿಡಿ ಜನ ಬೇಸಿಕ್ ಕ್ಯಾಮೆರಾದಲ್ಲಿ ನೀವು ಮಾಡಿದ ಕಂಟೆಂಟ್ ನೋಡುತ್ತಿಲ್ಲವಾದರೇ ಅದ್ಯಾವ ಸೀಮೆಯ ಫೋನ್ / ಕ್ಯಾಮರಾದಲ್ಲಿ ವ್ಲಾಗ್ಗಿಂಗ್ ಮಾಡಿದರೂ ಜನ ನೋಡುವದಿಲ್ಲ.

ಆಯ್ಕೆ ೧: ಸ್ಮಾರ್ಟ್ ಫೋನ್


ವ್ಲಾಗ್ಗಿಂಗ್ ಗೆ ಅತಿ ಉತ್ತಮ ನಮ್ಮ ನಿಮ್ಮ ಕೈಯಲ್ಲೇ ಇರುವ ಸ್ಮಾರ್ಟ್ ಫೋನ್.

ಇಂದು ೯ ಸಾವಿರದಿಂದ ಹಿಡಿದು ಲಕ್ಷದವರೆಗೆ ಹಲವು ಸ್ಮಾರ್ಟ್ ಫೋನ್ ಲಭ್ಯವಿದೆ. ನನ್ನ ಪ್ರಕಾರ ೧೫ ರಿಂದ ೨೦ ಸಾವಿರ ಬೆಲೆಯ ಸ್ಮಾರ್ಟ್ ಫೋನ್ ವ್ಲಾಗ್ಗಿಂಗ್ ಗೆ ಸೂಕ್ತ. ಯಾಕೆಂದರೆ ಇಂತಹ ಫೋನ್ ಅಲ್ಲಿ ವಿಡಿಯೋ ಎಡಿಟಿಂಗ್ ಅಷ್ಟೇ ಅಲ್ಲ ಲೈವ್ ಸ್ಟ್ರೀಮಿಂಗ್ ಸಹ ಮಾಡಬಹುದು.

ನಾನು ಜನವರಿ ೨೦೨೨ರಲ್ಲಿ ನನ್ನ ಆಯ್ಕೆಯ ಸ್ಮಾರ್ಟ್ ಫೋನ್ ಅನ್ನು ಇಲ್ಲಿ ನೀಡಿದ್ದೇನೆ. ಬಜೆಟ್, ಮಿಡಲ್ ಹಾಗೂ ಪ್ರಿಮಿಯಂ ರೇಂಜ್ ಫೋನ್ ಇಲ್ಲಿವೆ. ಆರಂಭಿಕವಾಗಿ ಬಜೆಟ್ ಫೋನ್ ಸಾಕು. ಆಮೇಲೆ ಯಶಸ್ಸು ಸಿಕ್ಕರೆ ಬೇರೆ ಫೋನ್ ಕೊಳ್ಳುವಿರಂತೆ.

ವಿವರಗಳಿಗೆ ಆಯಾ ಲಿಂಕ್ ಕ್ಲಿಕ್ ಮಾಡಿ.

ಬಜೆಟ್ ೪ಕೆ ಕ್ಯಾಮೆರಾ ಇರುವ ಫೋನ್ ಗಳು

ರೆಡ್ ಮಿ 10s 128GB

ರಿಯಲ್ ಮಿ ನಾರ್ಜೋ 30

ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ 21 - 2021

ಮಿಡಲ್ ರೇಂಜ್ ೪ಕೆ ಕ್ಯಾಮೆರಾ ಇರುವ ಫೋನ್ ಗಳು

ಪ್ರಿಮಿಯಂ ೪ಕೆ ಕ್ಯಾಮೆರಾ ಇರುವ ಫೋನ್ ಗಳು

ಆಯ್ಕೆ ೨: ಎಕ್ಷನ್ ಕ್ಯಾಮೆರಾ

ಅಕಸ್ಮಾತ್ ನೀವು ಟ್ರಾವೆಲ್ ವ್ಲಾಗ್ಗಿಂಗ್ ಮಾಡುತ್ತಿದ್ದರೆ ಗೋ ಪ್ರೋ ಅಂತಹ ಎಕ್ಷನ್ ಕ್ಯಾಮೆರಾ ತುಂಬ ಉತ್ತಮ. ಅದನ್ನು ನೀವು ಓಡುತ್ತಾ, ಸೈಕಲ್ ಅಥವಾ ಬೈಕ್ ಗೆ ಫಿಕ್ಸ್ ಮಾಡಿ ವಿಡಿಯೋ ಶೂಟ್ ಮಾಡಿದರೂ ವಿಡಿಯೋ ಚೆನ್ನಾಗಿ ಬರುವಂತೆ ವಿನ್ಯಾಸ ಮಾಡಿದ್ದಾರೆ.

ಆದರೆ ಈ ಕ್ಯಾಮೆರಾ ಉತ್ತಮ ವಾಗಿ ವೈಡ್ ಎಂಗಲ್ ತೆಗೆದರೂ ಚಿತ್ರ ವಿರೂಪ ಅಥವಾ ವಕ್ರವಾಗಿ ಬರುತ್ತದೆ. ಆದರೆ ಪ್ರವಾಸಿ ತಾಣ ತೋರಿಸಲು ವೈಡ್ ಎಂಗಲ್ ನೋಟ ಅತಿ ಮುಖ್ಯ ಆದುದರಿಂದ ಅದರ ಜೊತೆ ಹೊಂದಾಣಿಕೆ ಮಾಡಿ ಕೊಳ್ಳಬೇಕು.

ಗೋ ಪ್ರೋ ನಂತಹ ಎಕ್ಷನ್ ಕ್ಯಾಮೆರಾ ತುಂಬಾ ದುಬಾರಿ ಆದರೆ ಅದರಷ್ಟು ಚೆನ್ನಾಗಿರುವ ಬೇರೆ ಎಕ್ಷನ್ ಕ್ಯಾಮೆರಾ ಕಡಿಮೆ. 

ಅದರದ್ದೇ ಹಳೆಯ ಮಾಡೆಲ್ ಗಳು ಕಡಿಮೆ ಬೆಲೆಗೆ ಸಿಗುತ್ತವೆ. ಬಜೆಟ್ ಸಮಸ್ಯೆ ಇದ್ದರೆ ಅದನ್ನು ಖರೀದಿಸಿ.

ಗೋಪ್ರೋ ಹೀರೋ10 (ಉತ್ತಮ)

ಗೋಪ್ರೋ ಹೀರೋ 8

ಆಯ್ಕೆ ೩: ಮಿರರ್ ಲೆಸ್ ಡಿಎಸ್ ಎಲ್ ಆರ್ ಕ್ಯಾಮೆರಾ

ಮಿರರ್ ಲೆಸ್ ಡಿಎಸ್ಎಲ್ ಆರ್ (DSLR) ಕ್ಯಾಮೆರಾ ಕಂಪ್ಯಾಕ್ಟ್ ಆಗಿದ್ದು ಅತ್ಯುತ್ತಮ  ವಿಡಿಯೋ ಗುಣಮಟ್ಟ ನೀಡುತ್ತದೆ. ಆದರೆ ನಿಮಗೆ ಆಫ್ಟಿಕಲ್ ಸ್ಟೆಬಿಲೈಜೇಶನ್ ಬೇಕಾದ್ರೆ ತುಂಬಾ ಕಾಸ್ಟ್ಲೀ ಆಗುತ್ತೆ.

ಇದು ಸ್ಮಾರ್ಟ್ ಫೋನ್ ಅಥವಾ ಎಕ್ಷನ್ ಕ್ಯಾಮೆರಾದಷ್ಟು ಪೋರ್ಟಬಲ್ ಅಲ್ಲ.

ಆದರೆ ಲೆನ್ಸ್ ಬದಲಾಯಿಸಿ ವೈಡ್ ಎಂಗಲ್ ಅಥವಾ ಬೇರೆ ಬೇರೆ ಸನ್ನಿವೇಶಗಳಿಗೆ ದೃಶ್ಯ ಬದಲಾಯಿಸ ಬಹುದು.

ನನ್ನ ಆಯ್ಕೆಯ ಬಜೆಟ್ ಹಾಗೂ ಪ್ರಿಮಿಯಂ ಮಿರರ್ ಲೆಸ್ ಕ್ಯಾಮೆರಾ ಕೆಳಗಿದೆ. ಆಯಾ ಲಿಂಕ್ ಕ್ಲಿಕ್ ಮಾಡಿ ವಿವರ ನೋಡಿ.

ಉತ್ತಮ ಬಜೆಟ್ ಆಯ್ಕೆ

ಸೋನಿ ಜೆಡ್ ವಿ ೧ ವ್ಲಾಗ್ಗಿಂಗ್ ಕ್ಯಾಮೆರಾ

ಕ್ಯಾನೊನ್ ಇಒಎಸ್ ಎಂ 50 ಮಿರರ್ ಲೆಸ್ ಕ್ಯಾಮೆರಾ

ಪ್ರಿಮಿಯಂ ಆಯ್ಕೆ

ಸೋನಿ ಅಲ್ಪಾ ೭ III

ಕೊನೆಯ ಮಾತು


ವ್ಲಾಗಿಂಗ್ ಮಾಡುವ ಪ್ಲಾನ್ ಇದ್ದರೆ ಮೊದ ಮೊದಲು ನಿಮ್ಮ ವ್ಲಾಗ್ಗಿಂಗ್ ಸ್ಮಾರ್ಟ್ ಫೋನ್ ನಿಂದ ಆರಂಭಿಸಿ. ಆಮೇಲೆ ನಿದಾನವಾಗಿ ವ್ಲಾಗಿಂಗ್ ಜನಪ್ರಿಯ ಆದ್ರೆ ಅದರ ಆದಾಯದಿಂದ ಎಕ್ಷನ್ ಕ್ಯಾಮೆರಾ ಸೇರ್ಪಡೆ ಮಾಡಿ. ಆಮೇಲೆ ಡಿಎಸ್ ಎಲ್ ಆರ್ ಅನ್ನು ನಿಮ್ಮ ಸ್ಟುಡಿಯೋ ಸೆಟ್ ಅಪ್ ಗಳಿಗೆ ಬಳಸಿ. 

ಕ್ಯಾಮರಾ ಯಾವುದೇ ಇರಲಿ ಯಾವಾಗಲೂ ಪ್ರತ್ಯೇಕ ಮೈಕ್ ಬಳಸುವದು ಒಳ್ಳೆಯದು.

ಒಂದು ಮುಖ್ಯ ಮಾತನ್ನು ನೆನಪಿಡಿ. ನಿಮ್ಮ ಕಂಟೆಂಟ್ ಆಸಕ್ತಿಕರ, ಉಪಯುಕ್ತ ಇದ್ದರೆ ಅದೆಂತ ಕ್ಯಾಮೆರಾ ಬಳಸಲಿ ಜನ ನೋಡುತ್ತಾರೆ, ವೈರಲ್ ಆಗುತ್ತದೆ. ಚೆನ್ನಾಗಿಲ್ಲ ಎಂದರೆ ಯಾರೂ ನೋಡೊಲ್ಲ. ತೀರಾ ಹೈ ಎಂಡ್ ಕ್ಯಾಮರಾ ಬಳಸಿದರೆ ಜನ ನೋಡುತ್ತಾರೆ ಎನ್ನುವದು ನಿಮ್ಮ ಭ್ರಮೆ ಮಾತ್ರ.

ಯಾವ ಯಾವ ಮೈಕ್ ಆಯ್ಕೆ ಇದೆ ಎಂಬುದನ್ನು ಇನ್ನೊಂದು ಲೇಖನದಲ್ಲಿ ತಿಳಿಸುವೆ.

ಈ ಲೇಖನ ಹೇಗನಿಸಿತು? ಹೇಗೆ ಇನ್ನೂ ಇಂಪ್ರೂವ್ ಮಾಡಬಹುದು? ಕಮೆಂಟ್ ಹಾಕ್ತೀರಾ? ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.

ಚಿತ್ರಕೃಪೆ: Harry Cunningham on Unsplash

ಚಿತ್ರಕೃಪೆ: Jelleke Vanooteghem on Unsplash

ಚಿತ್ರಕೃಪೆ: Harrison Kugler on Unsplash

ಚಿತ್ರಕೃಪೆ: Jordan Opel on Unsplash

ಚಿತ್ರಕೃಪೆ: Jakob Owens on Unsplash

ಚಿತ್ರಕೃಪೆ: Jan Vašek from Pixabay

ಸಾಫ್ಟವೇರ್ ಕಂಪನಿಯಲ್ಲಿ ಯಾವ ರೋಲ್ ಇರುತ್ತೆ?

ಇಂದು ಎಷ್ಟೋ ಜನಕ್ಕೆ ಸಾಫ್ಟವೇರ್ ಕಂಪನಿಯಲ್ಲಿ ಯಾವ ಯಾವ ರೀತಿಯ ಕೆಲ್ಸ ಇರುತ್ತೆ ಅನ್ನುವ ಕುತೂಹಲ ಇದೆ ಅಲ್ವಾ? ದಿನವಿಡಿ ಎಸಿ ರೂಂ ಅಲ್ಲಿ ಕುಳಿತು ಏನು ಮಾಡ್ತಾರೆ? ಅದೇನು ಕಡಿದು ಗುಡ್ಡೆ ಹಾಕ್ತಾರೆ ಅನ್ನುವ ಪ್ರಶ್ನೆ. ಅಲ್ವಾ? ಬನ್ನಿ ಈ ಲೇಖನದಲ್ಲಿ ಇಲ್ಲಿ ಕೆಲ್ಸ ಮಾಡುವವರ ರೋಲ್  ಬಗ್ಗೆ ತಿಳಿಯೋಣ.

{tocify} $title={ವಿಷಯ ಸೂಚಿ}

ಸಾಫ್ಟವೇರ್ ಕಂಪನಿ ಅರ್ಥಾತ್ ಐಟಿ ಕಂಪನಿ ಯೂ ಕೂಡಾ ಬೇರೆ ಕಂಪನಿ ತರಹನೇ. ಆದರೆ ಇಲ್ಲಿ ಕಂಪ್ಯೂಟರ್ ಗಳೇ ಮಶೀನುಗಳು. ಇಲ್ಲಿ ದೊಡ್ಡ ಕಂಪ್ಯೂಟರ್ ಎಂದರೆ ಒಂದು ಎಸಿ ರೂಂ ಅಲ್ಲಿ ಮೇನ್ ಫ್ರೇಂ ಅನ್ನೋ ಬ್ಲೇಡ್ ಸರ್ವರ್ ಗಳನ್ನೋ ಅಥವಾ ಡಾಟಾ ಸೆಂಟರ್ ಗಳನ್ನು ಇಡುತ್ತಾರೆ.

ಉದ್ಯೋಗಿಗಳು ಇವುಗಳನ್ನು ರಿಮೋಟ್ ಕನೆಕ್ಷನ್ ಮೂಲಕ ಲ್ಯಾಪ್ ಟಾಪ್ ಅಥವಾ ಡೆಸ್ಕ್ ಟಾಪ್ ಮೂಲಕ ಎಕ್ಸೆಸ್ ಮಾಡುತ್ತಾರೆ.

ಸಾಫ್ಟವೇರ್ ಕಂಪನಿಗಳ ಬಿಲ್ಡಿಂಗ್ ಅಲ್ಲಿ ಹಲವು ಮಹಡಿ ಅಂದರೆ ಅಂತಸ್ತುಗಳಿದ್ದು ಪ್ರತಿ ಫ್ಲೋರ್ ಅಲ್ಲಿ ಕ್ಯುಬಿಕ್ ಗಳು ಹಾಗೂ ಒಂದು ಕಡೆ ಗ್ಲಾಸ್ ಬಾಗಿಲು / ಗೋಡೆ ಇರುವ ರೂಮುಗಳಿರುತ್ತದೆ.

ವಿಡಿಯೋ ಪ್ರಾಜೆಕ್ಟರ್  ಇರುವ ಕಾನ್ಫೆರನ್ಸ್ ರೂಂ ಇದ್ದು ಜಗತ್ತಿನ ಬೇರೆ ಮೂಲೆಯಲ್ಲಿರುವ ಬ್ರ್ಯಾಂಚ್ ಗಳಿಗೆ ವಿಡಿಯೋ ಮೀಟಿಂಗ್ ಮಾಡಬಹುದು.

ಇಲ್ಲಿ ಕೂಡಾ ಕಾಫಿ-ಟೀ ಕುಡಿಯಲು, ತಿಂಡಿ ತಿನ್ನಲು, ಊಟ ಮಾಡಲು ಕೆಫಿಟೇರಿಯಾ, ಪ್ಯಾಂಟ್ರಿ ಇರುತ್ತೆ. ಬಂದವರ ಸ್ವಾಗತ ಮಾಡಲು ರಿಸಿಪ್ಶನ್ ಇರುತ್ತೆ. ಸೆಕ್ಯುರಿಟಿ ಗಾರ್ಡ್ ಗಳು, ಪಾರ್ಕಿಂಗ್ ಮ್ಯಾನೆಜ್ ಮೆಂಟ್ ಸಹ ಇದೆ.

ಸಾಫ್ಟವೇರ್ ಕಂಪನಿಗಳ ಕೆಲಸಗಾರರ ಹೆಚ್ಚಿನ ರೋಲ್ ಗಳು ಬೇರೆ ಕಂಪನಿಯನ್ನೇ ಹೋಲುತ್ತವೆ. 

ಬನ್ನಿ ಒಂದೊಂದಾಗಿ ರೋಲ್ ಹಾಗೂ ಕೆಲಸವನ್ನು ತಿಳಿಯೋಣ.

ಇಂಟರ್ನ್

ಕಾಲೇಜಲ್ಲಿ ಡಿಗ್ರೀ ಅಥವಾ ಪೋಸ್ಟ್ ಗ್ರಾಜುಯೇಶನ್ ಮಾಡುತ್ತಾ ಜೊತೆಗೆ ಕಂಪನಿಯಲ್ಲಿ ಕೆಲ್ಸ ಮಾಡಿ ಕೆಲಸದ ಅನುಭವ ಪಡೆಯಲು ಬಂದಿರುವ ವಿದ್ಯಾರ್ಥಿಗಳಿಗೆ ಇಂಟರ್ನ್ ಅನ್ನುತ್ತಾರೆ. ಕೆಲವೊಮ್ಮೆ ಇದು ಅವರ ಡಿಗ್ರೀ ಸರ್ಟಿಫಿಕೇಟ್ ಪಡೆಯಲು ಈ ಅನುಭವ ಅವಶ್ಯಕ ಆಗಿರುತ್ತದೆ.

ಇಂಜಿನಿಯರಿಂಗ್ ಅಲ್ಲಿನ ಕೊನೆಯ ಸೆಮಿಸ್ಟರ್ ವಿದ್ಯಾರ್ಥಿಗಳು ಸಾಮಾನ್ಯವಾಗಿ ಕಂಪನಿಗಳಲ್ಲಿ ಇಂಟರ್ನ್ ಆಗಿ ಪ್ರಾಜೆಕ್ಟ್ ಮಾಡುತ್ತಾರೆ. 

ಎಷ್ಟೋ ಬಾರಿ ಮಾಸ್ಟರ್ ಡಿಗ್ರೀ ಮಾಡಲು ಕಂಪನಿಗಳಲ್ಲಿ ಇಂಟರ್ನ್ ಶಿಪ್ ಕೆಲಸದ ಅನುಭವ ಇರಬೇಕು.

ಎಷ್ಟೋ ಬಾರಿ ಇಂಟರ್ನ್ ಗಳ ಚಾಣಾಕ್ಷತೆ ಅಥವಾ ಕೌಶಲ್ಯ ನೋಡಿ ಕಂಪನಿಗಳು ಫುಲ್ ಟೈಮ್ ಎಂಪ್ಲೋಯೀ (ಪೂರ್ಣ ಕೆಲಸಗಾರ) ಆಫರ್ ನೀಡುವದೂ ಇದೆ.

ಇಂಟರ್ನ್ ಗಳಿಗೆ ಕೆಲವೊಮ್ಮೆ ಕಂಪನಿಗಳು ಸ್ವಲ್ಪ ಸಂಬಳ ಕೊಡುತ್ತವೆ. ಇನ್ನು ಕೆಲವೊಮ್ಮೆ ಉಚಿತವಾಗಿಯೇ ಕೆಲಸ ಮಾಡುತ್ತಾರೆ. ಯಾಕೆಂದರೆ ಇಲ್ಲಿ ಇಂಟರ್ನ್ ಗಳಿಗೆ ಹಣ ಮುಖ್ಯ ಅಲ್ಲ. ವೃತ್ತಿಪರ ಕೆಲಸದ ಅನುಭವ ಮುಖ್ಯ.

ಟ್ರೇನೀ / ಫ್ರೆಶರ್

ಟ್ರೇನೀ ಅಥವಾ ಟ್ರೇನಿ ಇಂಜನಿಯರ್ ಅಥವಾ ಫ್ರೆಶರ್ ಎಂದರೆ ಕ್ಯಾಂಪಸ್ ಇಂಟರ್ವ್ಯೂ ಮೂಲಕ ಕೆಲಸಕ್ಕೆ ತೆಗೆದು ಕೊಂಡು ಕಂಪನಿಗಳು ಹಲವು ತಿಂಗಳ ಕಾಲ ಟ್ರೇನಿಂಗ್ ನೀಡುತ್ತವೆ. ಆಮೇಲೆ ನಿದಾನವಾಗಿ ನಿಜವಾದ ಪ್ರಾಜೆಕ್ಟ್ ಅಲ್ಲಿ ಕೆಲಸ ಮಾಡಿಸಿ ಅನುಭವಿಗಳಾಗುವಂತೆ ನೋಡಿ ಕೊಳ್ಳುತ್ತವೆ. ಇಂತಹ ಉದ್ಯೋಗಿಗಳನ್ನು ಟ್ರೇನಿಗಳು ಅಥವಾ ಫ್ರೆಶರ್ ಎನ್ನುತ್ತಾರೆ.

ಇವರಿಗೆ ಹಿಂದೆ ಆ ತಂತ್ರಜ್ಞಾನದಲ್ಲಿ ಅಥವಾ ಯಾವುದೇ ರೀತಿಯ ಕೆಲಸ ಮಾಡಿ ಅನುಭವ ಇರುವದಿಲ್ಲ.

ಡೆವಲಪರ್ / ಪ್ರೋಗ್ರಾಮರ್ / ಕೋಡರ್

ಡೆವಲಪರ್ ಮುಖ್ಯ ಕೆಲಸ ಏನೆಂದರೆ ಗ್ರಾಹಕರ ಬೇಡಿಕೆ ಅರಿತು ಅಪ್ಲಿಕೇಶನ್ ಕೋಡಿಂಗ್ ಮಾಡಿ ಯುನಿಟ್ ಟೆಸ್ಟಿಂಗ್ ಮಾಡಿ ಡಿಪ್ಲಾಯ್ ಮಾಡುವದು. ಹಾಗೂ ಕ್ಯೂಎ ಇಂಜಿನಿಯರ್ ನೀಡಿದ ಸಮಸ್ಯೆಗಳನ್ನು ಪರಿಹರಿಸುವದು. ಇವರನ್ನು ಬರಿ ಇಂಜಿನಿಯರ್ ಅಥವಾ ಸಾಫ್ಟವೇರ್ ಇಂಜಿನಿಯರ್ ಎಂದೂ ಕರೆಯುತ್ತಾರೆ.

ಡೆವಲಪರ್ ಅಲ್ಲಿ ಹಲವು ರೀತಿಯ ಡೆವಲಪರ್ ಇದ್ದಾರೆ.

  • ಫ್ರಂಟ್ ಎಂಡ್ ಅಥವಾ ಯುಐ ಡೆವಲಪರ್
  • ಬ್ಯಾಕೆಂಡ್ ಡೆವಲಪರ್
  • ಫುಲ್ ಸ್ಟಾಕ್ ಡೆವಲಪರ್

ಫ್ರಂಟ್ ಎಂಡ್ ಅಥವಾ ಯುಐ ಡೆವಲಪರ್

ಇವ್ರ ಕೆಲಸ ಮುಖ್ಯವಾಗಿ ಒಂದು ಅಪ್ಲಿಕೇಶನ್ ನ ಯೂಸರ್ ಇಂಟರ್ ಫೇಸ್ ಕೋಡಿಂಗ್ ಮಾಡಿ ಡೆವಲಪ್ ಮಾಡುವದು. ಅದಕ್ಕೆ ಯುನಿಟ್ ಟೆಸ್ಟಿಂಗ್ ಮಾಡುವದು.

ಇವರು ಸಾಮಾನ್ಯವಾಗಿ ಈ ಮುಂದಿನ ಯಾವುದಾದರೂ ಒಂದು ಅಥವಾ ಅದಕ್ಕಿಂತ ಹೆಚ್ಚು ಬಗೆಯ ಯುಐ ಮಾಡುತ್ತಾ ಇರ್ತಾರೆ

  • ವೆಬ್ ಅಪ್ಲಿಕೇಶನ್
  • ಅಂಡ್ರಾಯಿಡ್
  • ಐಒಎಸ್
  • ಥಿಕ್ ಕ್ಲೈಂಟ್ / ಡೆಸ್ಕ್ ಟಾಪ್ ಅಪ್ಲಿಕೇಶನ್

ಈ ಮುಂದಿನ ಭಾಷೆ / ತಂತ್ರಜ್ಞಾನ ಬಳಕೆ ಜಾಸ್ತಿ

  • ಜಾವಾ ಸ್ಕ್ರಿಪ್ಟ್
  • ರಿಯಾಕ್ಟ್
  • ಎಂಗ್ಯುಲರ್
  • ಕೋಟ್ಲಿನ್
  • ಸ್ವಿಪ್ಟ್

ಬ್ಯಾಕೆಂಡ್ ಡೆವಲಪರ್

ಇವ್ರು ರೆಸ್ಟ್ ಎಪಿಐ (Rest API) , ಮೈಕ್ರೋ ಸರ್ವೀಸಸ್, ಕ್ಲೌಡ್ ಅಲ್ಲಿ ಸಾಮಾನ್ಯವಾಗಿ ಕೆಲಸ ಮಾಡುತ್ತಿರುತ್ತಾರೆ. ಆರ್ಟಿ ಫಿಶಿಯಲ್ ಇಂಟೆಲಿಜೆನ್ಸ್, ಬಿಗ್ ಡಾಟಾ, ಮಶೀನ್ ಲರ್ನಿಂಗ್, ಡಾಟಾಬೇಸ್ ಬಳಕೆ ಕೂಡಾ ಮಾಡುತ್ತಿರುತ್ತಾರೆ.

ಇವರು ಸಾಮಾನ್ಯವಾಗಿ ಈ ಮುಂದಿನ ತಂತ್ರಜ್ಞಾನ ಬಳಸುವದು ಜಾಸ್ತಿ.

  • ಜಾವಾ
  • ಡಾಟ್ ನೆಟ್
  • ಪೈಥಾನ್
  • ಕ್ಲೌಡ್ ಕಂಪ್ಯೂಟಿಂಗ್

ಫುಲ್ ಸ್ಟಾಕ್ ಡೆವಲಪರ್

ಫುಲ್ ಸ್ಟ್ಯಾಕ್ ಎಂದರೆ ಫ್ರಂಟ್ ಎಂಡ್ ಹಾಗೂ ಬ್ಯಾಕ್ ಎಂಡ್ ಎರಡರ ಡೆವಲಪ್ ಮೆಂಟ್ ಬಲ್ಲ ಡೆವಲಪರ್. ಇವರು ಸಾಮಾನ್ಯವಾಗಿ ಇಡೀ ಅಪ್ಲಿಕೇಶನ್ ಡೆವಲಪ್ ಮೆಂಟ್ ಮಾಡುತ್ತಾರೆ. ಸಕಲಕಲಾ ವಲಭರು ಇವರು.

ಕೆಲವೊಮ್ಮೆ ಸಾಸ್ ಕ್ಲೌಡ್ ಆದ ಸೇಲ್ಸ್ ಫೋರ್ಸ್, ಅಪ್ಪಿಯನ್ ಹೀಗೆ ಮೊದಲಾದ ಸಿಆರ್ ಎಂ, ಬಿಪಿಎಂ ಸಹ ಬಳಸುತ್ತಾರೆ.

ಕ್ವಾಲಿಟಿ ಅನಾಲಿಸ್ಟ್ / ಗುಣಮಟ್ಟ ಪರೀಕ್ಷಕ / ಟೆಸ್ಟಿಂಗ್ ಇಂಜಿನಿಯರ್

ಇವರ ಕೆಲಸ ಡೆವಲಪರ್ ಕೋಡಿಂಗ್ ಮಾಡಿದ ಅಪ್ಲಿಕೇಶನ್ ಅನ್ನು ಟೆಸ್ಟ್ ಮಾಡಿ ಬಳಕೆದಾರರ ಬೇಡಿಕೆಗೆ ತಕ್ಕಂತೆ ಇದೆಯಾ, ಏನಾದರೂ ದೋಷಗಳು ಇವೆಯಾ? ಎಂದು ಪತ್ತೆ ಹಚ್ಚುವದು.

ಇವರಲ್ಲೂ ಎರಡು ಬಗೆ.

  • ಮಾನ್ಯುವಲ್
  • ಆಟೋಮೇಶನ್

ಮಾನ್ಯುವಲ್ ಟೆಸ್ಟರ್ ಸ್ವತಃ ತಾನೇ ಅಪ್ಲಿಕೇಶನ್ ಓಪನ್ ಮಾಡಿ ಟೆಸ್ಟ್ ಮಾಡಿದರೆ, ಆಟೋಮೇಶನ್ ಅಲ್ಲಿ ಟೆಸ್ಟ್ ಕೇಸ್ ಗಳಿಗೆ ಕೋಡಿಂಗ್ ಮಾಡಿ ಅದರ ಸಹಾಯದಿಂದ ಟೆಸ್ಟ್ ಮಾಡುತ್ತಾರೆ. ಇಂದು ಆಟೋಮೇಶನ್ ಕ್ಯೂ ಎ ಗಳಿಗೆ ಎಲ್ಲಿಲ್ಲದ ಬೇಡಿಕೆ. 

ಡೆವ್ ಒಪ್ಸ್

ಅಪ್ಲಿಕೇಶನ್ ಡೆವೆಲಪ್ ಆದ ಮೇಲೆ ಅದನ್ನು ಕೋಡ್ ರಿವೀವ್ ಮಾಡಿ ಡೆವ್, ಕ್ಯೂ ಎ ಸರ್ವರ್ ಗೆ ಮ್ಯಾನುವಲ್ ಆಗಿ ಡಿಪ್ಲಾಯ್ (Deploy) ಮಾಡುವದು ತುಂಬಾ ಪ್ರಯಾಸದ ಕೆಲಸ.

ಆ ಕೆಲಸವನ್ನು ಆಟೋಮೇಟ್ ಮಾಡುವದು ಡೆವ್ ಆಪ್ಸ್ ಕೆಲಸ. ಜೆಂಕಿನ್ಸ್, ಸೋನಾರ್ ಮೊದಲಾದ ಟೂಲ್ ಬಳಸಿ ಒಂದು ಸಿಐಸಿಡಿ (CICD) ಪೈಪ್ ಲೈನ್ ಮಾಡಿ ಅದು ದೋಷವಿಲ್ಲದೇ ಕೆಲಸ ಮಾಡುವಂತೆ ನೋಡಿ ಕೊಳ್ಳುವದೇ ಈ ಡೆವ್ ಒಪ್ಸ್ (DevOps) ಕೆಲಸ.

ಡಿಬಿಎ (ಡಾಟಾಬೇಸ್ ಅಡ್ಮಿನಿಸ್ಟ್ರೇಟರ್)

ಪ್ರತಿ ಅಪ್ಲಿಕೇಶನ್ ನ ಬೆನ್ನೆಲುಬು ಡಾಟಾ ಬೇಸ್. ಇದರಲ್ಲೇ ಮಾಹಿತಿ ಎಲ್ಲ ರಕ್ಷಿಸಿಟ್ಟು ಬೇಕಾದಾಗ ಹೊರ ತೆಗೆಯುವದು. ಇಂತಹ ಡಾಟಾಬೇಸ್ ಅನ್ನು ನೋಡಿ ಕೊಳ್ಳುವ ಇಂಜಿನಿಯರ್ ಅನ್ನು ಡಿಬಿಎ (ಡಾಟಾಬೇಸ್ ಅಡ್ಮಿನಿಸ್ಟ್ರೇಟರ್) ಅನ್ನುತ್ತಾರೆ.

ಇವರ ಮುಖ್ಯ ಕೆಲಸ
  • ಡಾಟಾ ಬೇಸ್ ಇನ್ಸ್ಟಾಲೇಶನ್ / ಪ್ಯಾಚ್ ಅಪಡೇಟ್
  • ಯೂಸರ್ ಮೆಂಟೆನನ್ಸ್
  • ಡಾಟಾ ಮೊಡೆಲಿಂಗ್ ಮತ್ತು ವಿನ್ಯಾಸ
  • ಡಾಟಾ ಬೇಸ್ ಸ್ಕೀಮಾ ಮ್ಯಾನೆಜ್ ಮೆಂಟ್
  • ಅಪ್ಲಿಕೇಶನ್ ಡೆವೆಲಪರ್ ಗೆ ಕ್ವೆರಿ ಬರೆಯಲು ಸಹಾಯ ಮಾಡುವದು.
  • ಡಾಟಾಬೇಸ್ ಆಪ್ಟಿಮೈಜ್ ಮಾಡುವದು
  • ಡಾಟಾಬೇಸ್ ಬದಲಾವಣೆಗಳನ್ನು ಪ್ರಾಡಕ್ಷನ್ ವರೆಗೆ ಒಯ್ಯುವದು.

ಯುಎಕ್ಸ್ ಡಿಸೈನರ್

ಯುಎಕ್ಸ್ ಡಿಸೈನರ್ ಕೆಲಸ ಅಪ್ಲಿಕೇಶನ್ ಗಳ ಯುಸರ್ ಇಂಟರ್ ಫೇಸ್ ಹೇಗಿರಬೇಕು ಅನ್ನುವದನ್ನು ಡಿಸೈನ್ ಮಾಡುತ್ತಾರೆ. ಅಷ್ಟೇ ಅಲ್ಲ ಲೋಗೋ, ಅಡ್ವೆರ್ಟೈಸ್ ಮೆಂಟ್ (ಜಾಹೀರಾತು), ವಿಡಿಯೋ, ಪ್ರಸಂಟೇಶನ್, ಮಾಕ್ ಅಪ್, ವೈರ್ ಫ್ರೇಮ್ ಹೀಗೆ ಸಂಪೂರ್ಣ ಬಳಕೆದಾರದ ಅನುಭವಕ್ಕೆ ಸಂಬಂಧಿಸಿದ ಕೆಲಸ ಮಾಡುತ್ತಾರೆ.

ನೆಟ್ ವರ್ಕ್ ಅಡ್ಮಿನಿಸ್ಟ್ರೇಟರ್

ನೆಟ್ ವರ್ಕ್ ಅಡ್ಮಿನಿಸ್ಟ್ರೇಟರ್ ಕೆಲಸ ಕಂಪನಿಯ ಕಂಪ್ಯೂಟರ್ ನೆಟವರ್ಕ್ ಸುಲಲಿತವಾಗಿ ಕೆಲಸ ಮಾಡುವಂತೆ ನೋಡಿ ಕೊಳ್ಳುವದು. ಎಲ್ಲ ಸರ್ವರ್ ಗಳಿಗೆ ಪ್ಯಾಚ್ / ಅಪಡೇಟ್ ಇನ್ಸ್ಟಾಲ್ ಮಾಡುವದು. ರೌಟರ್ / ಮಾಡೆಮ್ / ವೈರಿಂಗ್ ನಿರ್ವಹಣೆ.

ಸಿಸ್ಟೆಮ್ ಅಡ್ಮಿನಿಸ್ಟ್ರೇಟರ್

ಸಿಸ್ಟೆಮ್ ಅಡ್ಮಿನಿಸ್ಟ್ರೇಟರ್ ಮುಖ್ಯ ಕೆಲಸ ಲ್ಯಾಪ್ ಟಾಪ್, ಟ್ಯಾಬ್, ಸ್ಮಾರ್ಟ್ ಫೋನ್ ಹಾಗೂ ಡೆಸ್ಕ್ ಟಾಪ್ ಮೇಲ್ವಿಚಾರಣೆ. ಹೊಸ ಡಿವೈಸ್ ನೀಡುವದು, ಎಕ್ಸೆಸ್ ಕೊಡುವದು, ಡಿವೈಸ್ ವಾಪಸ್ ಪಡೆಯುವದು, ರಿಪೇರಿ, ವಾರಂಟಿ ಹ್ಯಾಂಡಲ್ ಮಾಡುವದು ಇತ್ಯಾದಿ.

ಪ್ರಾಡಕ್ಷನ್ ಸಪೋರ್ಟ್

ಪ್ರಾಡಕ್ಷನ್ ಅಲ್ಲಿ ಏನೇ ಸಮಸ್ಯೆ ಇರಲಿ ಹಾರ್ಡವೇರ್ / ಸಾಫ್ಟವೇರ್ / ಅಪ್ಲಿಕೇಶನ್ ಇವೆಲ್ಲದರ ಜವಾಬ್ದಾರಿ ಪ್ರಾಡಕ್ಷನ್ ಸಪೋರ್ಟ್ ಇಂಜಿನಿಯರ್.

ಇವರು ಸಾಮಾನ್ಯವಾಗಿ ಈ ಮುಂದಿನ ಕೆಲಸ ಮಾಡುತ್ತಾರೆ.

  • ಆಪರೇಟಿಂಗ್ ಸಿಸ್ಟೆಮ್ ಇನ್ಸ್ಟಾಲೇಶನ್ / ಅಪಡೇಟ್
  • ಸಾಫ್ಟವೇರ್ ಇನ್ಸ್ಟಾಲೇಶನ್ / ಅಪಡೇಟ್
  • ಅಪ್ಲಿಕೇಶನ್ ಇನ್ಸ್ಟಾಲೇಶನ್ / ಅಪಡೇಟ್
  • ಹಾರ್ಡವೇರ್ ಸಮಸ್ಯೆ ಪರಿಹಾರ
  • ಹಾರ್ಡವೇರ್ ಇನ್ಸ್ಟಾಲೇಶನ್ / ಅಪಡೇಟ್
  • ಯೂಸರ್ ಮ್ಯಾನೆಜ್ ಮೆಂಟ್
  • ಎಲ್ಲ ಸರ್ವರ್ / ಅಪ್ಲಿಕೇಶನ್ ಮಾನಿಟರಿಂಗ್

ಸ್ಕ್ರಮ್ ಮಾಸ್ಟರ್

ಇಂದು ಹೆಚ್ಚಿನ ಕಂಪನಿಗಳಲ್ಲಿ ಸಾಫ್ಟವೇರ್ ಪ್ರಾಜೆಕ್ಟ್ ಬಳಸುವದು ಅಜೈಲ್ ವಿಧಾನ. ಈ ಅಜೈಲ್ ನಲ್ಲಿ ಸ್ಕ್ರಮ್ ಅನ್ನುವದು ಒಂದು ಬಗೆ. ಈ ಸ್ಕ್ರಮ್ ಬಗೆಯಲ್ಲಿ ಮುಖ್ಯ ರೂವಾರಿ ಸ್ಕ್ರಮ್ ಮಾಸ್ಟರ್.

ಇದೇನೂ ಕಂಪನಿ ಮಟ್ಟದ ರೋಲ್ ಅಲ್ಲ. ಯಾವುದೋ ಮ್ಯಾನೆಜರ್ ಅಥವಾ ಟೀಂ ಲೀಡ್ ಸ್ಕ್ರಮ್ ಮಾಸ್ಟರ್ ಆಗಿ ಕೆಲ್ಸ ಮಾಡುತ್ತಾರೆ.

ಅಜೈಲ್ ವಿಧಿಗಳನ್ನು ನಡೆಸುವದು ಈ ಸ್ಕ್ರಮ್ ಮಾಸ್ಟರ್ ಜವಾಬ್ದಾರಿ. ಈ ಅಜೈಲ್ ಬಗ್ಗೆ ಇನ್ನೊಂದು ಲೇಖನದಲ್ಲಿ ವಿವರ ಆಗಿ ತಿಳಿಸ್ತೀನಿ ಆಯ್ತಾ?

ಪ್ರಾಡಕ್ಟ್ ಓನರ್

ಅಜೈಲ್ ಸ್ಕ್ರಮ್ ವಿಧಾನದಲ್ಲಿ ಪ್ರಾಡಕ್ಟ್ ಓನರ್ ಎಂದರೆ ಬ್ಯುಸಿನೆಸ್ ಬಳಕೆದಾರರೊಂದಿಗೆ ಚರ್ಚೆ ಮಾಡಿ ಅವರ ಅವಶ್ಯಕತೆಯನ್ನು ಪಟ್ಟಿ ಮಾಡಿ ಪ್ರಾಡಕ್ಟ್ ಬ್ಯಾಕಲಾಗ್ ಕ್ರಿಯೇಟ್ ಮಾಡುತ್ತಾನೆ.

ಅದನ್ನು ಡೆವಲಪ್ ಮೆಂಟ್ ತಂಡಕ್ಕೆ ಯಾವುದನ್ನು ಮೊದಲು ಮಾಡಬೇಕು ಎಂಬ ಸಲಹೆ ಕೊಟ್ಟು ಉಪಯುಕ್ತ ಅಪ್ಲಿಕೇಶನ್ ಅನ್ನು ತಯಾರಿಸಲು ಸಹಾಯ ಮಾಡುತ್ತಾನೆ. ಈ ಹಿಂದೆ ಇದೇ ಕೆಲಸ ಮಾಡುವವರನ್ನು ಬ್ಯುಸಿನೆಸ್ ಅನಾಲಿಸ್ಟ್ ಅನ್ನುತ್ತಿದ್ದರು.

ಟೀಂ ಲೀಡ್

ಅಜೈಲ್ ವಿಧಾನದಲ್ಲಿ ಟೀಂ ಲೀಡ್ ಅನ್ನುವ ಪರಿಕಲ್ಪನೆ ಇಲ್ಲ. ಆದರೂ ಸಾಫ್ಟವೇರ್ ಕಂಪನಿಗಳಲ್ಲಿ ಸಿನಿಯರ್ ಡೆವಲಪರ್ ಅನ್ನು ಟೀಂ ಲೀಡ್ ಆಗಿ ಗುರುತಿಸಿ ಕೆಲವು ಜವಾಬ್ದಾರಿಯನ್ನು ಕೊಡುತ್ತಾರೆ.

ಜೂನಿಯರ್ ಡೆವಲಪರ್ ಗೆ ಮಾರ್ಗದರ್ಶನ, ಹೊಸಬರು ಟೀಂ ಗೆ ಬಂದಾಗ ಅವರಿಗೆ ಸಹಾಯ ಮಾಡುವದು, ಇಂಪ್ಲೆಮೆಂಟೇಶನ್ ವಿಧಾನ, ವಿನ್ಯಾಸ, ಕೋಡ್ ರಿವೀವ್ ಹೀಗೆ ಹಲವು ಕೆಲಸ ಅವರದ್ದು.

ಪ್ರಾಜೆಕ್ಟ್ ಮ್ಯಾನೆಜರ್

ಅಜೈಲ್ ವಿಧಾನದಲ್ಲಿ ಪ್ರಾಜೆಕ್ಟ್ ಮ್ಯಾನೆಜರ್ ಅನ್ನುವ ಪರಿಕಲ್ಪನೆ ಇಲ್ಲ. ಆದರೂ ಸಾಫ್ಟವೇರ್ ಕಂಪನಿಗಳಲ್ಲಿ ಮ್ಯಾನೆಜರ್ ಆಗಿ ಗುರುತಿಸಿ ಕೆಲವು ಜವಾಬ್ದಾರಿಯನ್ನು ಕೊಡುತ್ತಾರೆ.

ಇವರ ಮುಖ್ಯ ಕೆಲಸಗಳು
  • ಪ್ರಾಜೆಕ್ಟ್ ಗುರಿ, ಟ್ರ್ಯಾಕಿಂಗ್, ಮಾರ್ಗದರ್ಶನ, ಪ್ಲಾನಿಂಗ್
  • ಟೈಮ್ ಶೀಟ್, ರಜಾ, ಅಪ್ರೈಸಲ್, ಹೈರಿಂಗ್
  • ಟೀಮ್ ಬಿಲ್ಡಿಂಗ್ ಚಟುವಟಿಕೆಗಳು
ಮುಖ್ಯವಾಗಿ ಇವರಲ್ಲಿ ಎರಡು ಬಗೆ
  • ಪೀಪಲ್ ಮ್ಯಾನೆಜರ್
  • ಟೆಕ್ನೊಲೊಜಿ ಮ್ಯಾನೆಜರ್

ಆರ್ಕಿಟೆಕ್ಟ್

ಆರ್ಕಿಟೆಕ್ಟ್ ಮುಖ್ಯ ಕೆಲಸ ಅಪ್ಲಿಕೇಶನ್ ಆರ್ಕಿಟೆಕ್ಚರ್, ವಿನ್ಯಾಸ, ತಂತ್ರಜ್ಞಾನದ ಆಯ್ಕೆ, ಅಪ್ಲಿಕೇಶನ್ ಸಾಮರ್ಥ್ಯ, ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಇತ್ಯಾದಿ.

ಇವರಲ್ಲಿ ಮುಖ್ಯವಾಗಿ ಎರಡು ವಿಧ.

  • ಅಪ್ಲಿಕೇಶನ್ ಆರ್ಕಿಟೆಕ್ಟ್
  • ಸೊಲ್ಯೂಶನ್ ಆರ್ಕಿಟೆಕ್ಟ್

ಪ್ರೋಗ್ರಾಮ್ ಮ್ಯಾನೆಜರ್

ಪ್ರೊಗ್ರಾಮ್ ಮ್ಯಾನೆಜರ್ ಕಂಪನಿಯ ಹಾಗೂ ಬ್ಯುಸಿನೆಸ್ ನ ದೂರಗಾಮಿ ಗುರಿಯನ್ನು ಗಮನದಲ್ಲಿಟ್ಟು ಆ ಪ್ರೊಗ್ರಾಮ್ ಕೆಳಗೆ ಬರುವ ಹಲವು ಪ್ರೊಜೆಕ್ಟ್ ನಡುವೆ ಕೊರ್ಡಿನೇಟ್ (ಸಂಯೋಜಿಸು) ಮಾಡುತ್ತಾರೆ.

ಪ್ರೋಗ್ರಾಮ್ ಮ್ಯಾನೆಜರ್ ಪ್ರತ್ಯೇಕವಾಗಿ ಪ್ರಾಜೆಕ್ಟ್ ನಿರ್ವಹಣೆ ಮಾಡುವದಿಲ್ಲ.

ಡೆಲಿವರಿ ಮ್ಯಾನೆಜರ್

ಡೆಲಿವರಿ ಮ್ಯಾನೆಜರ್ ಬಜೆಟ್ ಬಳಸಿ, ಸಮಯಕ್ಕೆ ಸರಿಯಾಗಿ ಬ್ಯುಸಿನೆಸ್ ಗೆ ವ್ಯಾಲ್ಯೂ ನೀಡುವಂತೆ ಅಪ್ಲಿಕೇಶನ್ ಅಥವಾ ಪ್ರಾಡಕ್ಟ್ ನ ಫೀಚರ್ ಗಳ ಡೆಲಿವರಿಗೆ ಜವಾಬ್ದಾರನಾಗಿರುತ್ತಾನೆ. 

ಪ್ರಾಜೆಕ್ಟ್ ಡೆಲಿವರಿಯಲ್ಲಿ ಅಡೆತಡೆಯನ್ನು ಗಮನಿಸಿ ಅದನ್ನು ಪ್ರಾಜೆಕ್ಟ್ ಮ್ಯಾನೆಜರ್ ಜೊತೆ ಚರ್ಚಿಸಿ ನಿವಾರಿಸುವದು ಹಾಗೂ ಆಟೋಮೇಶನ್, ಎಐ ಮೊದಲಾದ ಇತ್ತೀಚಿನ ತಂತ್ರಜ್ಞಾನ ಬಳಕೆ ಮುಖ್ಯ ಕೆಲಸ.

ಸಿಟಿಒ (ಚೀಫ್ ಟೆಕ್ನಿಕಲ್ ಆಫೀಸರ್)

ಯಾವುದೇ ಕಂಪನಿಯ ಸಿಟಿಓ ಆ ಕಂಪನಿಯ ತಂತ್ರಜ್ಞಾನ ಅಥವಾ ಇಂಜಿನಿಯರಿಂಗ್ ವಿಭಾಗವನ್ನು ಮುನ್ನಡೆಸುತ್ತಾರೆ. ಇವರ ಮುಖ್ಯ ಗುರಿ ಬ್ಯುಸಿನೆಸ್ ನ ಅವಶ್ಯಕತೆಯನ್ನು ತಂತ್ರಜ್ಞಾನ ಬಳಸಿ ಕಾರ್ಯಗತ ಗೊಳಿಸುವದು.

ಸಿಐಓ (ಚೀಫ್ ಇನ್ಫಾರ್ಮೇಶನ್ ಆಫೀಸರ್)

ಸಿಐಓ ಒಂದು ಕಂಪನಿಯ ಮಾಹಿತಿ ತಂತ್ರಜ್ಞಾನದ ಅವಶ್ಯಕತೆಯ ಮೇಲ್ವಿಚಾರಣೆ ನಡೆಸುತ್ತಾರೆ.

ಸಿಎಫ್ ಓ (ಚೀಫ್ ಫೈನಾನ್ಸ್ ಆಫೀಸರ್)

ಕಂಪನಿಯ ಹಣಕಾಸಿನ ಟ್ರ್ಯಾಕಿಂಗ್, ವರದಿ ಮಾಡುವದು, ಹಣಕಾಸಿನ ಪ್ಲಾನಿಂಗ್, ರಿಸ್ಕ್ ಪ್ಲಾನಿಂಗ್ ಇತ್ಯಾದಿ ಸಿಎಫ್ ಓ ಕೆಲಸ. 

ಎಚ್ ಆರ್( ಹ್ಯೂಮನ್ ರಿಸೋರ್ಸ್ / ಮಾನವ ಸಂಪತ್ತು)

ಎಚ್ ಆರ್ ಗಳ ಮುಖ್ಯ ಕೆಲಸ

  • ಜನರನ್ನು ಕೆಲಸಕ್ಕೆ ತೆಗೆದುಕೊಳ್ಳುವದು
  • ಜನರ ಸಾಮರ್ಥ್ಯದ ಟ್ರ್ಯಾಕಿಂಗ್
  • ಟ್ರೇನಿಂಗ್
  • ಜಗಳ ಇತ್ಯಾದಿ ಸಮಾಧಾನ
  • ಬಹುಮಾನ ನೀಡುವದು
  • ಉದ್ಯೋಗಿಗಳ ಸುರಕ್ಷತೆ
  • ಆರೋಗ್ಯ
  • ಪಾಲಿಸಿ ಅಭಿವೃದ್ದಿ
  • ಪ್ರೊಮೋಶನ್, ಸಂಬಳ ನಿರ್ವಹಣೆ

ಸಿ ಇ ಓ (ಚೀಪ್ ಎಕ್ಸೆಕ್ಯೂಶನ್ ಆಫೀಸರ್)

ಸಿ ಇ ಓ ಇದು ಒಂದು ಕಂಪನಿಯ ಅತಿ ಉನ್ನತ ಹುದ್ದೆ ಅಥವಾ ರೋಲ್ ಆಗಿದೆ.

ಇವರ ಮುಖ್ಯ ಕೆಲಸ
  • ಕಂಪನಿ ಯಾವ ದಾರಿಯಲ್ಲಿ ಸಾಗಬೇಕು ಎಂಬ ನಿರ್ಧಾರ ಹಾಗೂ ಪ್ಲಾನಿಂಗ್
  • ಪ್ಲಾನ್ ಅನ್ನು ಇಂಪ್ಲೆಮೆಂಟ್ ಮಾಡುವದು
  • ಕಂಪನಿಯ ಸಾಮರ್ಥ್ಯ ನೋಡಿಕೊಳ್ಳುವದು
  • ಬಜೆಟಿಂಗ್ ಹಾಗೂ ಮುನ್ಸೂಚನೆ
  • ಪಬ್ಲಿಕ್ ಹಾಗೂ ಬೋರ್ಡ್ ಆಫ್ ಡೈರೆಕ್ಟರ್ ಬಳಿ ಜೊತೆ ಸಂವಹನ
  • ಕಂಪನಿಯ ಸಂಸ್ಕೃತಿ, ಮಾರ್ಗದರ್ಶನ

ಡೈರೆಕ್ಟರ್

ಸಾಮಾನ್ಯವಾಗಿ ಕಂಪನಿ ಹೇಗೆ ಸಾಗಬೇಕು? ಯಾವ ರೀತಿಯ ಕೆಲಸ ಮಾಡಬೇಕು. ಹೀಗೆ ಇಡೀ ಕಂಪನಿ ಅಥವಾ ಅಂದು ದೊಡ್ಡ ವಿಭಾಗಕ್ಕೆ ಮಾರ್ಗದರ್ಶನ ಮಾಡಲು ಒಬ್ಬ ಡೈರೆಕ್ಟರ್ ಅಥವಾ ಹಲವು ಡೈರೆಕ್ಟರ್ ಗಳ ಗುಂಪು ಇರುತ್ತೆ.ಆ ಗುಂಪಿಗೆ ಬೋರ್ಡ್ ಆಫ್ ಡೈರೆಕ್ಟರ್ ಎಂದು ಕರೆಯುತ್ತಾರೆ. 

ಕಾಲ ಕಾಲಕ್ಕೆ ಇವರೆಲ್ಲಾ ಸೇರಿ ಕಂಪನಿಯ ಆಗು ಹೋಗುಗಳ ಚರ್ಚೆ ನಡೆಸುತ್ತಾರೆ.

ಹಲವು ಕೆಲಸಗಳಿಗೆ ಇವರ ಅನುಮತಿ ಅತ್ಯಗತ್ಯ. ಅನೇಕ ಬಾರಿ ಟಾಪ್ ಲೆವಲ್ ಎಕ್ಸೆಕ್ಯೂಟಿವ್ ಆಯ್ಕೆ ಹಾಗೂ ಬೇರೆ ಕಂಪನಿಗಳ ಮರ್ಜರ್ / ಖರೀದಿ ಇವರ ಸಹಮತ ಇಲ್ಲದೇ ಸಾಗುವದಿಲ್ಲ.

ಚೇರ್ ಮನ್

ಚೇರ್ ಮನ್ ಬೋರ್ಡ್ ಆಫ್ ಡೈರೆಕ್ಟರ್ ಅವರ ಲೀಡರ್ ಆಗಿದ್ದು ಪ್ರತಿ ಡೈರೆಕ್ಟರ್ ಗಳು ಸರಿಯಾಗಿ ಕೆಲಸವನ್ನು ನಿರ್ವಹಿಸುವಂತೆ ನೋಡಿಕೊಳ್ಳುತ್ತಾರೆ. 

ಅಷ್ಟೇ ಅಲ್ಲ ಬೇರೆ ಎಲ್ಲ ಟಾಪ್ ಲೆವಲ್ ಎಕ್ಸೆಕ್ಯೂಟಿವ್ ಗಳು ಸರಿಯಾಗಿ ಕೆಲಸ ನಿರ್ವಹಿಸುವಂತೆ, ಅವರ ನೇಮಕ ಇತ್ಯಾದಿ ಕೆಲ್ಸಗಳಲ್ಲಿ ಪಾಲ್ಗೊಳ್ಳುತ್ತಾರೆ.

ಅನುಭವದ ಆಧಾರದ ಮೇಲಿನ ರೋಲ್

ಅನುಭವದ ಆಧಾರದ ಮೇಲೆ ಎಲ್ಲ ಕೆಲಸಗಾರರಿಗೆ ಈ ಮುಂದಿನ ಟ್ಯಾಗ್ ಇರುತ್ತೆ.

ಜ್ಯೂನಿಯರ್

ಜ್ಯೂನಿಯರ್ ಎಂದ್ರೆ ಆ ಕೆಲಸ ಅವನಿಗೆ ಹೊಸತು, ಜಾಸ್ತಿ ಅನುಭವ ಇನ್ನೂ ಆಗಿಲ್ಲ ಎಂದರ್ಥ. ಸಿನಿಯರ್ ಅಥವಾ ಪ್ರಿನ್ಸಿಪಲ್ ಮೊದಲಾದ ಟ್ಯಾಗ್ ಇಲ್ಲಾಂದ್ರೆ ಸಾಮಾನ್ಯವಾಗಿ ಜ್ಯೂನಿಯರ್ ಎಂದೇ ಅರ್ಥ!

ಉದಾ: ಜೂನಿಯರ್ ಡೆವಲಪರ್

ಸಿನಿಯರ್

ಸಿನಿಯರ್ ಎಂದ್ರೆ ಆ ಕೆಲಸದಲ್ಲಿ ತುಂಬಾ ವರ್ಷ ಕೆಲಸ ಮಾಡಿ ಪಳಗಿದವ ಎಂದರ್ಥ.

ಉದಾ: ಸಿನಿಯರ್ ಡೆವಲಪರ್, ಸಿನಿಯರ್ ಪ್ರಾಜೆಕ್ಟ್ ಮ್ಯಾನೆಜರ್, ಸಿನಿಯರ್ ಆರ್ಕಿಟೆಕ್ಟ್

ಪ್ರಿನ್ಸಿಪಲ್

ಪ್ರಿನ್ಸಿಪಲ್ ಎಂದ್ರೆ ಹಲವು ಸಿನಿಯರ್ ಗಳು ಆತನ ಕೆಳಗೆ ಕೆಲಸ ಮಾಡ್ತಾ ಇದ್ದಾರೆ ಅಥವಾ ಇನ್ನೂ ಹೆಚ್ಚಿನ ಜವಾಬ್ದಾರಿಯುತ ಪ್ರಮುಖ ಕೆಲಸ ಮಾಡ್ತಾ ಇರೋರು ಎಂದರ್ಥ.

ಉದಾ: ಪ್ರಿನ್ಸಿಪಲ್ ಆರ್ಕಿಟೆಕ್ಟ್

ವೈಸ್ ಅಥವಾ ಅಸಿಸ್ಟಂಟ್

ವೈಸ್ ಅಥವಾ ಅಸಿಸ್ಟಂಟ್ ಎಂದ್ರೆ ಅವರು ಇನ್ನೊಬ್ಬನ ಕೆಳಗೆ ಕೆಲಸ ಮಾಡುತ್ತಿರುವವನು ಎಂದರ್ಥ.

ಉದಾ: ವೈಸ್ ಚೇರ್ ಮನ್, ವೈಸ್ ಪ್ರೆಸಿಡೆಂಟ್, ಅಸಿಸ್ಟಂಟ್ ಮ್ಯಾನೆಜರ್, ಅಸಿಸ್ಟಂಟ್ ಡೈರೆಕ್ಟರ್

ಇಂಟರಿಮ್

ಇಂಟರಿಮ್ ಎಂದರೆ ಹಂಗಾಮಿ ಅಥವಾ ತಾತ್ಕಾಲಿಕ ಅಥವಾ ಟೆಂಪರರಿ ರೋಲ್ ನಿಭಾಯಿಸುವವ. ಸ್ವಲ್ಪ ದಿನ ಅಥವಾ ತಿಂಗಳಲ್ಲಿ ಆ ಕೆಲಸಕ್ಕೆ ತಕ್ಕ ವ್ಯಕ್ತಿ ಸಿಕ್ಕರೆ, ಇನ್ನೊಬ್ಬನು ಆತನ ಜಾಗವನ್ನು ತೆಗೆದುಕೊಳ್ಳುತ್ತಾನೆ ಎಂದರ್ಥ.

ಉದಾ: ಇಂಟರಿಮ್ ಸಿ ಇ ಓ, ಇಂಟರಿಮ್ ಸಿ ಟಿ ಓ

ಕೊನೆಯ ಮಾತು

ಅಂತೂ ಸಾಫ್ಟವೇರ್ ಕಂಪನಿಯಲ್ಲಿ ಯಾವ ಯಾವ ರೀತಿಯ ರೋಲ್ ಇರುತ್ತೆ ಅನ್ನುವದನ್ನು ನೋಡಿದ್ವಿ ಅಲ್ವಾ? ಹೆಚ್ಚಿನ ಟಾಪ್ ಲೆವಲ್ ಎಕ್ಸೆಕ್ಯೂಟಿವ್ ರೋಲ್ ಗಳು ಬೇರೆ ಕಂಪನಿಯ ಹಾಗೆ ಇರುತ್ತೆ.

ಕೇವಲ ತಳಮಟ್ಟದ ಕೆಲಸಗಾರರ ರೋಲ್ ಬೇರೆ ಅಷ್ಟೇ! ಯಾವುದಾದರೂ ರೋಲ್ ಈ ಮೇಲೆ ಮಿಸ್ ಆಗಿದೆಯಾ? ಆಗಿದ್ರೆ ಕಮೆಂಟ್ ಮಾಡಿ ಆಯ್ತಾ?

ಈ ಲೇಖನ ಹೇಗನಿಸಿತು? ಹೇಗೆ ಇನ್ನೂ ಇಂಪ್ರೂವ್ ಮಾಡಬಹುದು? ಕಮೆಂಟ್ ಹಾಕ್ತೀರಾ? ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.

ಚಿತ್ರಕೃಪೆ: Innova Labs ಇಂದ Pixabay

ನಿಮ್ಮ ಸುತ್ತ ಯಾವ ಯಾವ ರೀತಿಯ ಕಂಪ್ಯೂಟರ್ ಇದೆ? ನಿಮಗೆ ಗೊತ್ತಾ?

ನಿಮ್ಮ ಸುತ್ತಮುತ್ತ ಇರುವ ಕಂಪ್ಯೂಟರ್ ಅನ್ನು ಹಲವು ರೀತಿಯಲ್ಲಿ ವಿಂಗಡಿಸ ಬಹುದು.

೧. ಕಂಪ್ಯೂಟರ್ ಪ್ರಾಸೆಸ್ (ಸಂಸ್ಕರಣೆ) ಮಾಡುವ ಮಾಹಿತಿಯ ಆಧಾರದ ಮೇಲೆ

೨. ಕಂಪ್ಯೂಟರ್ ನ ಗಾತ್ರ ಹಾಗೂ ಶಕ್ತಿಯ ಆಧಾರದ ಮೇಲೆ

ಬನ್ನಿ ವಿವರವಾಗಿ ನಿಮ್ಮ ಅಕ್ಕ ಪಕ್ಕ ಇರುವ ವಿಭಿನ್ನ ಕಂಪ್ಯೂಟರ್ ಬಗ್ಗೆ ತಿಳಿಯೋಣ.

{tocify} $title={ವಿಷಯ ಸೂಚಿ}

ಮಾಹಿತಿಯ ಆಧಾರದ ಮೇಲೆ

ಒಂದು ಕಂಪ್ಯೂಟರ್ ಯಾವ ರೀತಿಯ ಮಾಹಿತಿ ಸಂಸ್ಕರಿಸುತ್ತೆ ಅದರ ಆಧಾರದ ಮೇಲೆ ಕಂಪ್ಯೂಟರ್ ಅನ್ನು ಹೀಗೆ ವಿಂಗಡಿಸಬಹುದು.
೧. ಡಿಜಿಟಲ್ ಕಂಪ್ಯೂಟರ್
೨. ಅನಾಲಾಗ್ ಕಂಪ್ಯೂಟರ್
೩. ಹೈಬ್ರಿಡ್ (ಮಿಶ್ರ) ಕಂಪ್ಯೂಟರ್

ಯಾವ ರೀತಿಯ ಮಾಹಿತಿ ಕಂಪ್ಯೂಟರ್ ಸಂಸ್ಕರಿಸುತ್ತದೆ ಅದರ ಆಧಾರದ ಮೇಲೆ ಕಂಪ್ಯೂಟರ್ ಅನ್ನು ಹೆಸರಿಸಬಹುದು. ಮಾಹಿತಿ ಒಂದೇ ಡಿಜಿಟಲ್ ಆಗಿರಬಹುದು ಅಥವಾ ಅನಾಲಾಗ್ ಆಗಿರಬಹುದು.

ಈ ಡಿಜಿಟಲ್ ಹಾಗೂ ಅನಾಲಾಗ್ ಬಗ್ಗೆ ಇನ್ನೊಂದು ಸಲ ವಿವರವಾಗಿ ಹೇಳ್ತಿನಿ. ಈಗ ಸದ್ಯಕ್ಕೆ ಡಿಜಿಟಲ್ ಅಂದ್ರೆ ಅಂಕೆಗಳ ರೂಪದ, ಅನಾಲಾಗ್ ಎಂದರೆ ಪ್ರಮಾಣದ ರೂಪದ ಮಾಹಿತಿ ಎಂದು ನೆನಪಿಡಿ.

ನಮ್ಮ ಸುತ್ತ ಮುತ್ತ ಇರುವ ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್, ಡೆಸ್ಕ್ ಟಾಪ್ ಕಂಪ್ಯೂಟರ್ ಎಲ್ಲ ಡಿಜಿಟಲ್ ಕಂಪ್ಯೂಟರ್ ಆಗಿವೆ.

೧. ಡಿಜಿಟಲ್ ಕಂಪ್ಯೂಟರ್

ಡಿಜಿಟಲ್ ಮಾಹಿತಿ ಮಾತ್ರ ಸಂಸ್ಕರಿಸುವ ಹಾಗೂ ಉಳಿಸುವ ಸಾಮರ್ಥ್ಯ ಇರುವ ಕಂಪ್ಯೂಟರ್ ಗೆ ಡಿಜಿಟಲ್ ಕಂಪ್ಯೂಟರ್ ಅನ್ನುತ್ತಾರೆ.

೨. ಅನಾಲಾಗ್ ಕಂಪ್ಯೂಟರ್

ಕೇವಲ ಅನಾಲಾಗ್ ಮಾಹಿತಿ ಪ್ರಾಸೆಸ್ ಮಾಡುವ ಹಾಗೂ ಉಳಿಸುವ ಕಂಪ್ಯೂಟರ್ ಗೆ ಅನಾಲಾಗ್ ಕಂಪ್ಯೂಟರ್ ಎನ್ನುತ್ತಾರೆ.

೩. ಹೈಬ್ರಿಡ್ (ಮಿಶ್ರ) ಕಂಪ್ಯೂಟರ್

ಡಿಜಿಟಲ್ ಹಾಗೂ ಅನಾಲಾಗ್ ಎರಡೂ ರೀತಿಯ ಮಾಹಿತಿಯನ್ನು ಪ್ರಾಸೆಸ್ ಮಾಡುವ ಸಾಮರ್ಥ್ಯ ಇರುವ ಕಂಪ್ಯೂಟರ್ ಗೆ ಹೈಬ್ರಿಡ್ ಕಂಪ್ಯೂಟರ್ ಅಥವಾ ಮಿಶ್ರ ಕಂಪ್ಯೂಟರ್ ಎನ್ನಬಹುದು.

ಗಾತ್ರ ಹಾಗೂ ಶಕ್ತಿಯ ಆಧಾರದ ಮೇಲೆ

ಕಂಪ್ಯೂಟರ್ ನ ಗಾತ್ರ, ರೂಪ ಹಾಗೂ ಅದರ ಶಕ್ತಿಯ ಆಧಾರದ ಮೇಲೆ ಈ ಮುಂದಿನ ರೀತಿಯಲ್ಲಿ ವಿಂಗಡಿಸಬಹುದು. ಬಹುಶಃ ಈ ಮುಂದಿನ ಹಲವು ರೀತಿಯ ಕಂಪ್ಯೂಟರ್ ನೀವು ಬಳಸಿರಬಹುದು ಅಥವಾ ಕನಿಷ್ಟ ನೋಡಿರಬಹುದು.

೧. ವಿಯರೇಬಲ್ ಕಂಪ್ಯೂಟರ್ (ಧರಿಸುವಂತಹ / ತೊಡುವಂತಹ / ಉಡುವಂತಹ ಕಂಪ್ಯೂಟರ್)
  • ಸ್ಮಾರ್ಟ್ ವಾಚ್
  • ಸ್ಮಾರ್ಟ್ ಕನ್ನಡಕ
೨. ಮೈಕ್ರೋ ಕಂಪ್ಯೂಟರ್ (ಪರ್ಸನಲ್ ಕಂಪ್ಯೂಟರ್)
  • ಡೆಸ್ಕ್ ಟಾಪ್
  • ನೋಟ್ ಬುಕ್
  • ಲ್ಯಾಪ್ ಟಾಪ್
  • ಪರ್ಸನಲ್ ಡಿಜಿಟಲ್ ಅಸಿಸ್ಟಂಟ್
  • ಸ್ಮಾರ್ಟ್ ಫೋನ್ / ಮೊಬೈಲ್
  • ಟ್ಯಾಬ್ಲೆಟ್ ಅಥವಾ ಟ್ಯಾಬ್
೩. ವರ್ಕ್ ಸ್ಟೇಶನ್
೪. ಮಿನಿ ಕಂಪ್ಯೂಟರ್
೫. ಸರ್ವರ್
೬. ಮೇನ್ ಫ್ರೇಮ್ 
೭. ಸೂಪರ್ ಕಂಪ್ಯೂಟರ್

ಬನ್ನಿ ಪ್ರತಿಯೊಂದು ಕಂಪ್ಯೂಟರ್ ಬಗ್ಗೆ ಸ್ವಲ್ಪ ತಿಳಿಯೋಣ.

೧. ವಿಯರೇಬಲ್ ಕಂಪ್ಯೂಟರ್ (ಧರಿಸುವಂತಹ / ತೊಡುವಂತಹ / ಉಡುವಂತಹ ಕಂಪ್ಯೂಟರ್)

ದೇಹಕ್ಕೆ ತೊಡುವಂತಹ ಚಿಕ್ಕ ಕಂಪ್ಯೂಟರ್ ಗಳನ್ನು ವಿಯರೇಬಲ್ ಕಂಪ್ಯೂಟರ್ ಎಂದು ಕರೆಯುತ್ತಾರೆ. ಉದಾಹರಣೆಗೆ ಕೈ ಗೆ ತೊಡುವ ಕಂಪ್ಯೂಟರ್  ವಾಚ್ ಅಥವಾ ಕನ್ನಡಕದಲ್ಲಿ ಕಂಪ್ಯೂಟರ್ ಇದ್ದರೆ ಅವು ಎಲ್ಲ ಧರಿಸುವಂತಹ ಕಂಪ್ಯೂಟರ್ ಗಳೇ.

ಸ್ಮಾರ್ಟ್ ವಾಚ್


ಇಂದು ಹಲವಾರು ರೀತಿಯ ಸ್ಮಾರ್ಟ್ ವಾಚ್ ಗಳು ಬಂದಿವೆ. ಮುಖ್ಯವಾಗಿ ಸ್ಮಾರ್ಟ್ ವಾಚ್ ಅಲ್ಲಿ ಎರಡು ವಿಧ. 
೧. ಸ್ಟ್ಯಾಂಡ್ ಅಲೋನ್ ಸ್ಮಾರ್ಟ್ ವಾಚ್
೨. ರೆಗ್ಯುಲರ್ ಸ್ಮಾರ್ಟ್ ವಾಚ್

ಸ್ಟ್ಯಾಂಡ್ ಅಲೋನ್ ಸ್ಮಾರ್ಟ್ ವಾಚ್ ಅಲ್ಲಿ ಸಿಮ್ ಕಾರ್ಡ್ ಹಾಕಿ ಕಾಲ್, ಮೆಸೇಜ್ ಎಲ್ಲ ಮಾಡಬಹುದು. ಸ್ಮಾರ್ಟ್ ಫೋನ್ ಜೊತೆ ಜೋಡಿ ಮಾಡುವ ಅವಶ್ಯಕತೆ ಇಲ್ಲ. ಆದರೆ ಜೋಡಿ ಮಾಡಿ ಸಹ  ಬಳಸಬಹುದು. ಇದರ ಬೆಲೆ ಜಾಸ್ತಿ ಹಾಗೂ ಇದು ಗಾತ್ರದಲ್ಲಿ ದೊಡ್ಡದು.

ರೆಗ್ಯುಲರ್ ಸ್ಮಾರ್ಟ್ ವಾಚ್ ಅಲ್ಲಿ ಸ್ಮಾರ್ಟ್ ಫೋನ್ ಜೊತೆ ಜೋಡಿ ಮಾಡಲೇ ಬೇಕು. ಇಲ್ಲದಿದ್ದರೆ ಅದರಲ್ಲಿನ ಹಲವು ಫೀಚರ್ ಬಳಸಲು ಸಾಧ್ಯವಿಲ್ಲ. ಬೆಲೆ ಕಡಿಮೆ ಹಾಗೂ ಚಿಕ್ಕ ಗಾತ್ರದಾಗಿರುತ್ತದೆ.

ಸ್ಮಾರ್ಟ್ ಕನ್ನಡಕ

ಕನ್ನಡಕದ ಒಂದು ಮೂಲೆಯಲ್ಲಿ ಕ್ಯಾಮೆರಾ, ಪರದೆ ಜೋಡಿಸಿ ಬ್ಯಾಟರಿ ಜೊತೆಗೆ ಇರುವ ಕಂಪ್ಯೂಟರ್ ಅನ್ನು ಸ್ಮಾರ್ಟ್ ಕನ್ನಡಕ ಅನ್ನುತ್ತಾರೆ. ಗೂಗಲ್ ಗ್ಲಾಸ್ ಇದಕ್ಕೆ ಉದಾಹರಣೆ. ಆದರೆ ಅದು ಅಷ್ಟೊಂದು ಜನಪ್ರಿಯ ಆಗಲಿಲ್ಲ.

೨. ಮೈಕ್ರೋ ಕಂಪ್ಯೂಟರ್ (ಪರ್ಸನಲ್ ಕಂಪ್ಯೂಟರ್)

ಕಂಪ್ಯೂಟರ್ ತಂತ್ರಜ್ಞ ಅಲ್ಲದವರೂ ಜನ ಸಾಮಾನ್ಯರು ಬಳಸುವಂತೆ ವಿನ್ಯಾಸ ಗೊಳಿಸಿದ ತುಂಬಾ ದುಬಾರಿ ಅಲ್ಲದ ಗಾತ್ರದಲ್ಲೂ ಚಿಕ್ಕದಾಗಿರುವ ಕಂಪ್ಯೂಟರ್ ಅನ್ನು ಪರ್ಸನಲ್ ಕಂಪ್ಯೂಟರ್ ಅಥವಾ ಮೈಕ್ರೋ ಕಂಪ್ಯೂಟರ್ ಅನ್ನುತ್ತಾರೆ.

ಈ ಕಂಪ್ಯೂಟರ್ ಅನ್ನು ಗೇಮಿಂಗ್, ಸಂವಹನ, ಬ್ರೌಸಿಂಗ್, ವಿಡಿಯೋ/ಆಡಿಯೋ ವೀಕ್ಷಣೆ, ಕೋಡಿಂಗ್, ಮಾನಿಟರಿಂಗ್ ಹೀಗೆ ಹಲವು ಕಾರಣಗಳಿಗೆ ಬಳಸಬಹುದು.

ಪರ್ಸನಲ್ ಕಂಪ್ಯೂಟರ್ ಬಳಸಲು ನಿಮಗೆ ಕೋಡಿಂಗ್ ಅಥವಾ ಇನ್ನಿತರ ತಂತ್ರಜ್ಞಾನದ ಅರಿವು ಬೇಕಿಲ್ಲ. ಕೇವಲ ಅಪ್ಲಿಕೇಶನ್ ಹಾಗೂ ಆಪರೇಟಿಂಗ್ ಸಿಸ್ಟೆಮ್ ಬಳಸುವದು ತಿಳಿದು ಇದ್ದರೆ ಸಾಕು.

ಆದ್ದರಿಂದಲೇ ಇವು ಜನಪ್ರಿಯವಾದವು.

ಡೆಸ್ಕ್ ಟಾಪ್


ಒಂದೇ ಜಾಗದಲ್ಲಿಟ್ಟು ಬಳಸಲು ವಿನ್ಯಾಸ ಮಾಡಿದ ವಿಶೇಷತಃ ಮಾನಿಟರ್ ಅನ್ನು ಡೆಸ್ಕ್ ಮೇಲೆ ಇಟ್ಟು ಬಳಸಲು ಅನುಕೂಲವಾಗಿರುವ ಕಂಪ್ಯೂಟರ್ ಗೆ ಡೆಸ್ಕ್ ಟಾಪ್ ಕಂಪ್ಯೂಟರ್ ಎನ್ನುತ್ತಾರೆ.
ಡೆಸ್ಕ್ ಟಾಪ್ ಅಲ್ಲಿ ಮುಖ್ಯವಾಗಿ ಹಲವು ಬಗೆಗಳಿವೆ

೧. ಆಲ್ ಇನ್ ಒನ್ (ಎಲ್ಲವನ್ನೂ ಒಳಗೊಂಡ)

ಈ ತರಹದ ಕಂಪ್ಯೂಟರ್ ಗಳಲ್ಲಿ ಡಿಸ್ಪ್ಲೇ ಮಾನಿಟರ್ ಅಲ್ಲೇ ಪ್ರಾಸೆಸರ್, ಮೆಮರಿ, ಪವರ್ ಸಪ್ಲೈ, ಜಿಪಿಯು ಎಲ್ಲ ಇದ್ದು ಕಂಪ್ಯಾಕ್ಟ್ ಆಗಿದ್ದು ಕಡಿಮೆ ಜಾಗ ತೆಗೆದು ಕೊಳ್ಳುತ್ತದೆ.
ಈ ತರಹದ ಡೆಸ್ಕ್ ಟಾಪ್ ಅಲ್ಲಿ ಅಪ್ ಗ್ರೇಡ್ ಹಾಗೂ ರಿಪೇರಿ ಕಷ್ಟ.

೨. ಗೇಮಿಂಗ್ ಕಂಪ್ಯೂಟರ್

ಗೇಮಿಂಗ್ ಕಂಪ್ಯೂಟರ್ ಗಳು ಹೈ ಎಂಡ್ ಗ್ರಾಫಿಕ್ಸ್ ಕಾರ್ಡ್, ಮಲ್ಟಿ ಕೋರ್ ಪ್ರಾಸೆಸರ್ ಹೊಂದಿದ್ದು ಜಾಸ್ತಿ ಮೆಮರಿ ಸಹ ಇರುತ್ತೆ. ಹೈ ಫ್ರೇಮ್ ರೇಟ್ ಹ್ಯಾಂಡಲ್ ಮಾಡುವ ಈ ಕಂಪ್ಯೂಟರ್ ಬಿಸಿ ಆಗದಂತೆ ತಡೆಯಲು ವಾಟರ್ ಕೂಲಿಂಗ್ ಅಥವಾ ಫ್ಯಾನ್ ಕೂಲಿಂಗ್ ಸೌಲಭ್ಯ ಸಹ ಇರುತ್ತೆ. ಇದು ಸಾಮಾನ್ಯ ಕಂಪ್ಯೂಟರ್ ಗಿಂತ ದುಬಾರಿ ಕೂಡ. ಅಪ್ ಗ್ರೇಡ್ ಹಾಗೂ ರಿಪೇರಿ ಈ ತರಹದ ಕಂಪ್ಯೂಟರ್ ಸುಲಭ.

ಸಾಮಾನ್ಯವಾಗಿ ಈ ತರಹದ ಕಂಪ್ಯೂಟರ್ ಗಳನ್ನು ಗೇಮಿಂಗ್ ಆಡಲು ಹಾಗೂ ವಿಡಿಯೋ ಎಡಿಟಿಂಗ್ ಗೆ ಬಳಸುತ್ತಾರೆ .

೩. ವರ್ಕ್ ಸ್ಟೇಶನ್

ವರ್ಕ್ ಸ್ಟೇಶನ್ ಕೂಡಾ ಶಕ್ತಿಶಾಲಿ ಪ್ರಾಸೆಸರ್ ಗಳನ್ನು ಹೊಂದಿದ್ದು ಹೈ ರಿಸೊಲ್ಯೂಶನ್ ಮಾನಿಟರ್ ಹೊಂದಿರುತ್ತದೆ.

ವಿಡಿಯೋ ಅಥವಾ ಆಡಿಯೋ ಎಡಿಟಿಂಗ್ ಗೆ, ಅಪ್ಲಿಕೇಶನ್ ಡೆವೆಲಪ್ ಮೆಂಟ್, ವೈಜ್ಞಾನಿಕ ಲೆಕ್ಕಾಚಾರಕ್ಕೆ ಗೆ ಬಳಸುತ್ತಾರೆ

ಲ್ಯಾಪ್ ಟಾಪ್ ಅಥವಾ ನೋಟ್ ಬುಕ್ ಕಂಪ್ಯೂಟರ್

ಆರಾಮವಾಗಿ ತೊಡೆಯ ಮೇಲೂ ಇಟ್ಟು ಬಳಸಬಹುದಾದ ಎಲ್ಲಿಂದರೆಲ್ಲಿ ಒಯ್ಯಬಲ್ಲ ಕೀಲಿಮಣೆ, ಪರದೆ ಎರಡೂ ಇರುವ ಕಂಪ್ಯೂಟರ್ ಅನ್ನು ಲ್ಯಾಪ್ ಟಾಪ್ ಅನ್ನುತ್ತಾರೆ.

ಬಳಕೆ ಹಾಗೂ ಗಾತ್ರದ ಆಧಾರದ ಮೇಲೆ ಲ್ಯಾಪ್ ಟಾಪ್ ಅನ್ನು ಹೀಗೆ ವಿಂಗಡಿಸುತ್ತಾರೆ.

  • ಸಾಮಾನ್ಯ ಲ್ಯಾಪ್ ಟಾಪ್
  • ಅಲ್ಟ್ರಾ ಬುಕ್ : ಇದು ಸಾಮಾನ್ಯ ಲ್ಯಾಪ್ ಟಾಪ್ ಗಿಂತ ಜಾಸ್ತಿ ಕಂಪ್ಯಾಕ್ಟ್ ಆಗಿದ್ದು ಶಕ್ತಿಶಾಲಿ ಕೂಡಾ ಆಗಿರುತ್ತದೆ. ಬೆಲೆ ಕೂಡಾ ಜಾಸ್ತಿ.
  • ಗೇಮಿಂಗ್ ಲ್ಯಾಪ್ ಟಾಪ್: ಇದು ಗೇಮಿಂಗ್ ಆಡಲು ಅನುಕೂಲ ಆಗುವಂತೆ ಶಕ್ತಿಶಾಲಿ ಗ್ರಾಫಿಕ್ಸ್ ಪ್ರಾಸೆಸರ್ ಹಾಗೂ ಸ್ವಲ್ಪ ದಪ್ಪ ಹಾಗೂ ಭಾರ ಕೂಡಾ ಇರುತ್ತದೆ. ಇದರ ವೇಗ ಜಾಸ್ತಿ.
  • ಕ್ರೋಮ್ ಬುಕ್: ಗೂಗಲ್ ಅವರ ಕ್ರೋಮ್ ಆಪರೇಟಿಂಗ್ ಸಿಸ್ಟೆಮ್ ಇರುವ ಇದು ಕೆಲವು ಅಂತರ್ಜಾಲ ಸಂಬಂಧಿಸಿದ ಕೆಲಸಕ್ಕೆ ಮಾತ್ರ ಯೋಗ್ಯ. ಇದರ ಬೆಲೆ ಸಾಮಾನ್ಯವಾಗಿ ಕಡಿಮೆ.
  • ರಗ್ಗೆಡ್ ಲ್ಯಾಪ್ ಟಾಪ್: ಮಿಲಿಟರಿ ಅಥವಾ ತುಂಬಾ ಪ್ರತಿಕೂಲ ವಾತಾವಾರಣ ಸನ್ನಿವೇಶಗಳಲ್ಲಿ ಬಳಸಲು ಗಟ್ಟಿಯಾದ ಕೋಶ ಇರುವ ಈ ಲ್ಯಾಪ್ ಟಾಪ್ ಬಳಸಲಾಗುತ್ತದೆ.
  • ಕನ್ವರ್ಟಿಬಲ್ : ಲ್ಯಾಪ್ ಟಾಪ್ ನಂತೆಯೂ ಬೇಕಾದಾಗ ಟ್ಯಾಬ್ಲೆಟ್ ತರಾನೂ ಬಳಸುವಂತೆ ಈ ಲ್ಯಾಪ್ ಟಾಪ್ ವಿನ್ಯಾಸ ಮಾಡಿರುತ್ತಾರೆ.

ಪರ್ಸನಲ್ ಡಿಜಿಟಲ್ ಅಸಿಸ್ಟಂಟ್



ಸ್ಮಾರ್ಟ ಫೋನ್ ಜನಪ್ರಿಯ ಆಗುವ ಮೊದಲು ಸ್ಟೈಲಸ್ ಬಳಸಿ ಆಪರೇಟ್ ಮಾಡುವ ಪಿಡಿಎ ಗಳು ಜನಪ್ರಿಯ ಆಗಿದ್ದವು. ಸ್ಮಾರ್ಟ್ ಫೋನ್ ಬಂದ ನಂತರ ಇವು ಮರೆಯಾದವು.

ಸ್ಮಾರ್ಟ್ ಫೋನ್ / ಮೊಬೈಲ್

ಮೊಬೈಲ್ ಫೋನ್ ಹಾಗೂ ಕಂಪ್ಯೂಟರ್ ನ ಎರಡೂ ಸೌಲಭ್ಯ ಹೊಂದಿರುವ ಯಂತ್ರಕ್ಕೆ ಸ್ಮಾರ್ಟ್ ಫೋನ್ ಎನ್ನುತ್ತಾರೆ. ಈ ಸ್ಮಾರ್ಟ್ ಫೋನ್ ಕೂಡಾ ಕಂಪ್ಯೂಟರ್ ನ ಒಂದು ರೂಪ.

ಇಂದು ಸ್ಮಾರ್ಟ್ ಫೋನ್ ನಗರದಿಂದ ಹಳ್ಳಿಯವರೆಗೆ ಜನಪ್ರಿಯವಾಗಿದೆ. ಕೈಯಗಲದ ಈ ಯಂತ್ರದಲ್ಲಿ ವಿಡಿಯೋ ಕಾಲ್, ಫೋಟೋಗ್ರಾಫಿ, ಬ್ರೌಸಿಂಗ್, ಮೆಸೇಜಿಂಗ್, ಗೇಮಿಂಗ್, ಯೂಟ್ಯೂಬ್, ಫೇಸ್ ಬುಕ್ ಎಲ್ಲ ಸಾಧ್ಯ.

ಟ್ಯಾಬ್ಲೆಟ್ ಅಥವಾ ಟ್ಯಾಬ್


ಟಚ್ ಸ್ಕ್ರೀನ್ ಪರದೆ ಇದ್ದು ಮೊಬೈಲ್ ಆಪರೇಟಿಂಗ್ ಸಿಸ್ಟೆಮ್ ನಿಂದ ನಡೆಯುವ, ಗಾತ್ರದಲ್ಲಿ ಸ್ಮಾರ್ಟ್ ಫೋನ್ ಗಿಂತ ದೊಡ್ಡ ದಾಗಿರುವ ಕಂಪ್ಯೂಟರ್ ಗೆ ಟ್ಯಾಬ್ ಅಥವಾ ಟ್ಯಾಬ್ಲೆಟ್ ಕಂಪ್ಯೂಟರ್ ಅನ್ನುತ್ತಾರೆ.

೪. ಮಿನಿ ಕಂಪ್ಯೂಟರ್

ಒಂದು ಕಾಲದಲ್ಲಿ ೧೯೬೦ರ ಸುಮಾರಿಗೆ ಮೇನ್ ಫ್ರೇಮ್ ಗಳು ಇಡೀ ರೂಂ ಆವರಿಸಿರುತ್ತಿದ್ದವು. ಈ ಸಂದರ್ಭದಲ್ಲಿ ಟ್ರಾನ್ಸಿಸ್ಟರ್ ಬಳಸಿ  ಚಿಕ್ಕ ಗಾತ್ರದ ಕಡಿಮೆ ಬೆಲೆಯ ಮಿನಿ ಕಂಪ್ಯೂಟರ್ ಗಳು ಬಳಕೆಗೆ ಬಂದವು. 

೫. ಸರ್ವರ್

ಸರ್ವರ್ ಒಂದು ವಿಶಿಷ್ಟ ಕಂಪ್ಯೂಟರ್ ಆಗಿದ್ದು ಯಾವುದೇ ನಿಲುಗಡೆ ಇಲ್ಲದೇ ವರ್ಷವಿಡೀ ರನ್ ಆಗುವಂತೆ ವಿನ್ಯಾಸ ಗೊಳಿಸಲಾಗಿರುತ್ತದೆ. ಆದಷ್ಟು ವೇಗವಾಗಿ ಗ್ರಾಹಕರಿಗೆ ವೆಬ್ ಸೈಟ್, ರೆಸ್ಟ್ ಸರ್ವೀಸ್, ವೆಬ್ ಸರ್ವೀಸ್ ಸೇವೆಯನ್ನು ಒದಗಿಸುವಂತೆ ಟ್ಯೂನ್ ಮಾಡಲಾಗಿರುತ್ತದೆ.

ಕೂಲಿಂಗ್ ಹಾಗೂ ನಿರಂತರ ಅಡೆತಡೆ ಇಲ್ಲದ ವಿದ್ಯುತ್ ಸಂಪರ್ಕ ಸೌಲಭ್ಯವನ್ನು ಹೊಂದಿರುತ್ತದೆ.

ಹಲವು ಸರ್ವರ್ ಗಳ ಗುಂಪನ್ನು ಕ್ಲಸ್ಟರ್ ಎನ್ನುತ್ತಾರೆ. ಒಂದು ಸರ್ವರ್ ನ ಶಕ್ತಿಗೆ ಮೀರಿದ ಕೆಲಸಗಳನ್ನು ಮಾಡಲು ಈ ಕ್ಲಸ್ಟರ್ ಗಳನ್ನು ಬಳಸಲಾಗುತ್ತದೆ. ಅಕಸ್ಮಾತ್ ತಾಂತ್ರಿಕ ಸಮಸ್ಯೆಯಿಂದ ಒಂದೋ ಎರಡೂ ಸರ್ವರ್ ಹಾಳಾದರೂ ಕ್ಲಸ್ಟರನ ಸೇವೆಗೆ ತೊಂದರೆ ಆಗುವದಿಲ್ಲ.

೬. ಮೇನ್ ಫ್ರೇಮ್

ಭಾರಿ ಪ್ರಮಾಣದ ಮೆಮರಿ ಹಾಗೂ ಹಲವು ಪ್ರಾಸೆಸರ್ ಗಳನ್ನು ಬಳಸಿ ಮಾಡಿದ ಶಕ್ತಿಶಾಲಿ  ಕಂಪ್ಯೂಟರ್ ಅನ್ನು ಮೇನ್ ಫ್ರೇಮ್ ಕಂಪ್ಯೂಟರ್ ಅನ್ನುತ್ತಾರೆ. ಇದನ್ನು ಸಾಮಾನ್ಯವಾಗಿ ದೊಡ್ಡ ದೊಡ್ಡ ಕಂಪನಿಗಳಲ್ಲಿ ಬಳಸುತ್ತಾರೆ.

೭. ಸೂಪರ್ ಕಂಪ್ಯೂಟರ್

ಅತ್ಯಂತ ಶಕ್ತಿಶಾಲಿಯಾದ ಕಂಪ್ಯೂಟರ್ ಗಳಿಗೆ ಸೂಪರ್ ಕಂಪ್ಯೂಟರ್ ಅನ್ನುತ್ತಾರೆ. ಸೂಪರ್ ಕಂಪ್ಯೂಟರ್ ಗಳನ್ನು ವೈಜ್ಞಾನಿಕ ಸಂಶೋಧನೆ, ಖಗೋಳ ಶಾಸ್ತ್ರ ಮೊದಲಾದ ಕೆಲಸಗಳಿಗೆ ಬಳಸಲಾಗುತ್ತದೆ.

ಮುಂದಿನ ಲೇಖನದಲ್ಲಿ ಕಂಪ್ಯೂಟರ್ ನ ವಿವಿಧ ಉಪಯೋಗ ತಿಳಿಯೋಣ.

ಈ ಲೇಖನ ಹೇಗನಿಸಿತು? ಹೇಗೆ ಇನ್ನೂ ಇಂಪ್ರೂವ್ ಮಾಡಬಹುದು? ಕಮೆಂಟ್ ಹಾಕ್ತೀರಾ? ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.

ಚಿತ್ರ ಕೃಪೆ: fancycrave1 ಇಂದ Pixabay 
ಚಿತ್ರ ಕೃಪೆ: ಗೂಗಲ್ 
ಚಿತ್ರ ಕೃಪೆ: PublicDomainPNG ಇಂದ Pixabay
ಚಿತ್ರ ಕೃಪೆ: Norbert Levajsics on Unsplash
ಚಿತ್ರ ಕೃಪೆ: Alienware on Unsplash
ಚಿತ್ರ ಕೃಪೆ: XPS on Unsplash
ಚಿತ್ರ ಕೃಪೆ: OpenClipart-Vectors from Pixabay
ಚಿತ್ರ ಕೃಪೆ: Rahul Chakraborty on Unsplash
ಚಿತ್ರ ಕೃಪೆ: dlohner from Pixabay
ಚಿತ್ರ ಕೃಪೆ: Agitalizr on Unsplash
ಚಿತ್ರ ಕೃಪೆ: Kevin Phillips from Pixabay

ಉತ್ತಮ ವಿಡಿಯೋ ಎಡಿಟಿಂಗ್ ಸಾಫ್ಟವೇರ್ ಹಾಗೂ ಸ್ಕ್ರೀನ್ ರೆಕಾರ್ಡರ್ ಯಾವುದು?

ನೀವು ವಿಡಿಯೋ ಕಂಟೆಂಟ್ ಕ್ರಿಯೆಟ್ ಮಾಡ್ತೀರಾ? ಅಥವಾ ಕಲಿಯಲು ಆಸೆ ಇದೆಯಾ? ನೀವು ಆನ್ ಲೈನ್ ಕಲಿಸಲು ನೋಡ್ತಾ ಇದೀರಾ? ಬನ್ನಿ ಒಂದೆರಡು ವಿಡಿಯೋ ಎಡಿಟಿಂಗ್ ಹಾಗೂ ಸ್ಕ್ರೀನ್ ರೆಕಾರ್ಡಿಂಗ್ ಸಾಫ್ಟವೇರ್ ಬಗ್ಗೆ ತಿಳಿಯೋಣ. ಕೊನೆಯ ವರೆಗೆ ತಪ್ಪದೇ ಓದಿ.

{tocify} $title={ವಿಷಯ ಸೂಚಿ}

ಇಂದು ವ್ಲಾಗ್ಗಿಂಗ್ ಒಂದು ಟ್ರೆಂಡ್ ಆಗಿದೆ. ಎಲ್ಲರಿಗೂ ತಮ್ಮ ಅನುಭವ ಯೂಟ್ಯೂಬ್, ಇನ್ಸ್ಟಾಗ್ರಾಂ, ಟಿಕ್ ಟಾಕ್ ತದ್ರೂಪಿಗಳಲ್ಲಿ ವಿಡಿಯೋ ಹಂಚಿ ಸ್ಟಾರ್ ಆಗ ಬೇಕೆಂಬ ತವಕ.

ಅಷ್ಟೇ ಅಲ್ಲ ಇಂದು ಆನ್ ಲೈನ್ ಶಿಕ್ಷಣ ಕೂಡಾ ಜನಪ್ರಿಯ ಆಗಿದೆ. ಪ್ರಪಂಚದ ಯಾವುದೇ ಮೂಲೆಯಲ್ಲಿರುವ ವಿದ್ಯಾರ್ಥಿಗಳಿಗೂ ಅಂತರ್ಜಾಲ (ಇಂಟರ್ನೆಟ್) ಬಳಸಿ ಯೂಟ್ಯೂಬ್, ಉಡೆಮಿ ನಂತಹ ತಾಣಗಳಲ್ಲಿ ಕಲಿಸ ಬಹುದು.

ಇದಕ್ಕೆ ಮುಖ್ಯವಾಗಿ ಬೇಕಿರುವದು ವಿಡಿಯೋ ಎಡಿಟಿಂಗ್ ಹಾಗೂ ಸ್ಕ್ರೀನ್ ರೆಕಾರ್ಡಿಂಗ್ ಸಾಫ್ಟವೇರ್ ಗಳು.

ಆಫ್ ಲೈನ್ ವಿಡಿಯೋ ಎಡಿಟಿಂಗ್ ಮಾಡಿ ನಂತರ ಅಪ್ ಲೋಡ್ ಮಾಡಲು ನಿಮಗೆ ಬೇಕಿರುವದು ವಿಡಿಯೋ ಎಡಿಟಿಂಗ್ ಸಾಫ್ಟವೇರ್. ಕಂಪ್ಯೂಟರ್ ತೆರೆಯ ಮೇಲೆ ಮಾಡುವ ಚಟುವಟಿಕೆಯನ್ನು ದಾಖಲಿಸಲು ಬೇಕು ಸ್ಕ್ರೀನ್ ರೆಕಾರ್ಡರ್.

ಇಂದು ನೀವು ಅದಕ್ಕೆ ಲ್ಯಾಪ್ ಟಾಪ್ ಅಥವಾ ಸ್ಮಾರ್ಟ್ ಫೋನ್ ಬಳಸಿ ವಿಡಿಯೋ ಎಡಿಟಿಂಗ್ ಮಾಡಬಹುದು. 

ಸ್ಮಾರ್ಟ್ ಫೋನ್ ಬಳಸಿ ಬೀದಿಯಲ್ಲೇ ನಿಂತು ಲೈವ್ ಸ್ಟ್ರೀಮಿಂಗ್ ಮಾಡಬಹುದು. ಬೇಸಿಕ್ ಎಡಿಟಿಂಗ್ ಸಹ ಸ್ಮಾರ್ಟ್ ಫೋನ್ ಅಲ್ಲೇ ಮಾಡಬಹುದು. ಆದರೆ ಅಡ್ವಾನ್ಸ್ಡ್ ಎಡಿಟಿಂಗ್ ಮಾಡಲು ಲ್ಯಾಪ್ ಟಾಪ್ ಅನುಕೂಲಕರ.

ಸ್ಮಾರ್ಟ್ ಫೋನ್ ಎಪ್ ಗಳು

ಸಿಂಪಲ್ ವಿಡಿಯೋ ಎಡಿಟಿಂಗ್ ಕೆಲಸಗಳಿಗೆ ಸ್ಮಾರ್ಟ್ ಫೋನ್ ಒಂದೇ ಸಾಕು. ಅದರಲ್ಲೇ ವಿಡಿಯೋ ರೆಕಾರ್ಡ್ ಮಾಡಿ ಎಡಿಟಿಂಗ್ ಸಹ ಮಾಡಬಹುದು. ಖರ್ಚೂ ಸಹ ಕಡಿಮೆ. 

ಆರಂಭಿಕ ದಿನಗಳಲ್ಲಿ ಸ್ಮಾರ್ಟ್ ಫೋನ್ ಬಳಸಿ ನಿಮ್ಮ ಚಾನೆಲ್ ಬೆಳೆದಾಗ ಲ್ಯಾಪ್ ಟಾಪ್ / ಡೆಸ್ಕ್ ಟಾಪ್ ಬಳಸುವದು ಉತ್ತಮ.ಇದರಿಂದ ಕಡಿಮೆ ಬಂಡವಾಳ ಸಾಕು. 

ಶಕ್ತಿ ಶಾಲಿ ಜಿಪಿಯು ಇರುವ ಸ್ಮಾರ್ಟ್ ಫೋನ್ ಇದಕ್ಕೆ ಬಳಸಿ. ಇಲ್ಲದಿದ್ದರೆ ಸ್ಮಾರ್ಟ್ ಫೋನ್ ಅಲ್ಲಿ ವಿಡಿಯೋ ಎಡಿಟರ್ ಕ್ರ್ಯಾಶ್ ಆಗುವದು ಜಾಸ್ತಿ.

ಸ್ಮಾರ್ಟ್ ಫೋನ್ ಅಲ್ಲಿ ಕೈನ್ ಮಾಸ್ಟರ್, ಪವರ್ ಡೈರೆಕ್ಟರ್ ಹೀಗೆ ಹಲವು ಹಣ ನೀಡಿ ಬಳಸುವ ಎಪ್ ಗಳಿವೆ. 

ಆದರೆ ಹಲವು ಮಿತಿಗಳು ಪ್ರತಿ ಎಪ್ ಅಲ್ಲಿವೆ. ಒಂದೇ ದುಬಾರಿ, ಇಲ್ಲಾಂದ್ರೆ ಯೂಸರ್ ಫ್ರೆಂಡ್ಲಿ ಅಲ್ಲ. ಎಲ್ಲ ಸರಿ ಇದ್ದರೆ ೪ಕೆ ವಿಡಿಯೋ ಎಡಿಟಿಂಗ್ ಮಾಡಲಾಗದು ಆದ್ರೂ ಪದೇ ಪದೇ ಕ್ರ್ಯಾಶ್ ಆಗುತ್ತೆ.

ಹಲವು ಎಪ್ ಬಳಸಿ ಪರಾಮರ್ಶಿಸಿದಾಗ ನನಗೆ ಇಷ್ಟ ಆಗಿದ್ದು ಈ ಕೆಳಗಿನ  ಎಪ್ ಗಳು. ಟ್ರೈ ಮಾಡಿ. ಎಪ್ ಸ್ಟೋರ್ ಅಲ್ಲಿರೋ ಇನ್ನಿತರ ಎಪ್ ಸಹ ಬಳಸಿ ಆಮೇಲೆ ಒಂದನ್ನು ಫೈನಲ್ ಆಗಿ ಆರಿಸಿ.

೧. ವಿಎಲ್ ಎಲ್ ಓ ವಿಡಿಯೋ ಎಡಿಟರ್

ಇದು ಒಂದು ಉತ್ತಮ ಎಡಿಟರ್ ಆಗಿದ್ದು ೪ಕೆ ವಿಡಿಯೋ ಸಹ ಎಡಿಟ್ ಮಾಡಬಹುದು. ಟೆಕ್ಸ್ಟ್, ಸ್ಮೈಲೀ, ಎನಿಮೇಶನ್, ಟ್ರಾನ್ಸಿಶನ್, ಗ್ರೀನ್ ಸ್ಕ್ರೀನ್ ಕ್ರೋಮಾ ಕೀ ಹೀಗೆ  ಎಲ್ಲ ಸೌಲಭ್ಯ ಇದರಲ್ಲಿದೆ. ಇದರಲ್ಲಿನ ಎಲ್ಲ ಸೌಲಭ್ಯ ಬಳಸಲು ಸುಮಾರು ೭೦೦ ರೂ ನೀಡಬೇಕು.


೨. ವಿಎನ್ ವಿಡಿಯೋ ಎಡಿಟರ್

೪ಕೆ ವಿಡಿಯೋ ಎಡಿಟಿಂಗ್, ಟೆಕ್ಸ್ಟ್, ಸ್ಮೈಲೀ, ಎನಿಮೇಶನ್, ಟ್ರಾನ್ಸಿಶನ್, ಗ್ರೀನ್ ಸ್ಕ್ರೀನ್ ಕ್ರೋಮಾ ಕೀ ಹೀಗೆ  ಎಲ್ಲ ಸೌಲಭ್ಯ ಇದರಲ್ಲಿದೆ. ಉತ್ತಮ ವಿಡಿಯೋ ಎಡಿಟರ್. ಬಳಸಿ ನೋಡಿ. ಇದು ಸಂಪೂರ್ಣ ಉಚಿತ ಎಪ್.

ಲ್ಯಾಪ್ ಟಾಪ್ ಸಾಫ್ಟವೇರ್ ಗಳು

ಈಗ ಲ್ಯಾಪ್ ಟಾಪ್ ನಲ್ಲಿ ಯಾವ ಯಾವ ವಿಡಿಯೋ ಎಡಿಟರ್ ಆಯ್ಕೆ ಇದೆ ತಿಳಿಯೋಣ.

ನೆನಪಿಡಿ ವಿಡಿಯೋ ಎಡಿಟಿಂಗ್ ಮಾಡಲು ಹೈ ಎಂಡ್ ಗ್ರಾಫಿಕ್ಸ್ ಕಾರ್ಡ್  ಹಾಗೂ ಉತ್ತಮ ಸ್ಕ್ರೀನ್ ಇರುವ ಉತ್ತಮ ಕಂಪ್ಯೂಟರ್ ಇರಬೇಕು. ಕಡಿಮೆ ಸಾಮರ್ಥ್ಯದ ಕಂಪ್ಯೂಟರ್ ಗಳಲ್ಲಿ ೪ಕೆ ಎಡಿಟಿಂಗ್ ಕಷ್ಟ, ಜಾಸ್ತಿ ಸಮಯ ತೆಗೆದು ಕೊಂಡೀತು.

ಲ್ಯಾಪ್ ಟಾಪ್ ವಿಡಿಯೋ ಎಡಿಟಿಂಗ್ ಸಾಫ್ಟವೇರ್ ಗಳು

ಮಾರುಕಟ್ಟೆಯಲ್ಲಿ ಹಲವು ವಿಡಿಯೋ ಏಡಿಟರ್ ಲಭ್ಯವಿದೆ. ಅವುಗಳಲ್ಲಿ ಮುಖ್ಯವಾದವು

ಲ್ಯಾಪ್ ಟಾಪ್ ಸ್ಕ್ರೀನ್ ರೆಕಾರ್ಡರ್ ಸಾಫ್ಟವೇರ್ ಗಳು

ಮಾರುಕಟ್ಟೆಯಲ್ಲಿ ಹಲವು ಸ್ಕ್ರೀನ್ ರೆಕಾರ್ಡರ್ ಲಭ್ಯವಿದೆ. ಇವು ಸ್ವಲ್ಪ ಮಟ್ಟಿಗೆ ವಿಡಿಯೋ ಎಡಿಟಿಂಗ್ ಫೀಚರ್ ಸಹ ಹೊಂದಿದ್ದು ಕೆಲವು ಕೆಲ್ಸಗಳಿಗೆ ಅಷ್ಟೇ ಸಾಕು. ಅವುಗಳಲ್ಲಿ ಮುಖ್ಯವಾದವು

ನನ್ನ ಆಯ್ಕೆಯ ಲ್ಯಾಪ್ ಟಾಪ್  ಸಾಫ್ಟವೇರ್ ಗಳು

ಇವೆಲ್ಲದರಲ್ಲಿ ನನ್ನ ಆಯ್ಕೆಯ ಎಡಿಟಿಂಗ್ ಹಾಗೂ ಸ್ಕ್ರೀನ್ ರೆಕಾರ್ಡಿಂಗ್ ಸಾಫ್ಟವೇರ್ ಗಳು ಹೀಗಿವೆ:

ಸ್ಕ್ರೀನ್ ರೆಕಾರ್ಡಿಂಗ್ ಹಾಗೂ ಲೈವ್ ಸ್ಟ್ರೀಮಿಂಗ್ - ಒಬಿಎಸ್ ಸ್ಟುಡಿಯೋ

ಈ ಎರಡೂ ಸಾಫ್ಟವೇರ್ ಗಳ ಲಾಭಗಳು ಹೀಗಿವೆ:
  • ೪ಕೆ ಎಡಿಟಿಂಗ್ ಉಚಿತವಾಗಿ ಸಾಧ್ಯ .
  • ಉಚಿತ ವರ್ಶನ್ ಗಳಲ್ಲಿ ಯಾವುದೇ ಮಿತಿ ಇಲ್ಲ. ೬ಕೆ ವಿಡಿಯೋ ಮಾಡಲು ಡಾವಿನ್ಸಿ ಲೈಸೆನ್ಸ್ ಖರೀದಿ ಮಾಡಬೇಕು.
  • ವಿಂಡೋಸ್ / ಮ್ಯಾಕ್ / ಲಿನಕ್ಸ್ ಮೂರೂ ಆಪರೇಟಿಂಗ್ ಸಿಸ್ಟೆಮ್ ಅಲ್ಲಿ ಕೆಲಸ ಮಾಡುತ್ತವೆ.
ಮೇಲೆ ತಿಳಿಸಿರುವ ಹೆಚ್ಚಿನ ಎಲ್ಲ ವಿಡಿಯೋ ಏಡಿಟಿಂಗ್ ಸಾಫ್ಟವೇರ್ ಗಳ ಉಚಿತ ಟ್ರಯಲ್ ಲಭ್ಯವಿದೆ. ಟ್ರೈ ಮಾಡಿ ನೋಡಿ ನೀವೇ ನಿರ್ಧರಿಸಿ.

ನೀವು ಯಾವ ಸಾಫ್ಟವೇರ್ ವಿಡಿಯೋ ಎಡಿಟಿಂಗ್ ಬಳಸುತ್ತೀರಾ? ಕಮೆಂಟ್ ಮಾಡಿ.

ಈ ಲೇಖನ ಹೇಗನಿಸಿತು? ಹೇಗೆ ಇನ್ನೂ ಇಂಪ್ರೂವ್ ಮಾಡಬಹುದು? ಕಮೆಂಟ್ ಹಾಕ್ತೀರಾ? ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು

ಕಂಪ್ಯೂಟರ್ ಎಂದರೇನು?

ಬಹುಶಃ ೨೦೨೨ರಲ್ಲಿ ಕಂಪ್ಯೂಟರ್ ಇರದ ಮನೆ ಕಡಿಮೆ ಎಂದರೆ ಅತಿಶಯೋಕ್ತಿ ಅಲ್ಲ. ನಿಮ್ಮ ಮನೆಯಲ್ಲೂ ಕಂಪ್ಯೂಟರ್ ಹಲವು ರೂಪಗಳಲ್ಲಿ ಇರಬಹುದು. ಈ ಕಂಪ್ಯೂಟರ್ ಎಂದರೆ ಏನು ನಿಮಗೆ ಗೊತ್ತಾ? ನಮ್ಮ ಸುತ್ತ ಮುತ್ತ ಎಲ್ಲೆಲ್ಲಿ ಕಂಪ್ಯೂಟರ್ ಬಳಕೆ ಆಗ್ತಾ ಇದೆ ಹೇಳಬಲ್ಲಿರಾ? ಅದರಿಂದ ಯಾವ ಅನುಕೂಲ? ಏನು ತೊಂದರೆ? ಈ ವಿಷಯಗಳ ಬಗ್ಗೆ ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ತಪ್ಪದೇ ಓದಿ.

{tocify} $title={ವಿಷಯ ಸೂಚಿ}

ಮೊದ ಮೊದಲು ಮನುಷ್ಯ ಎಲ್ಲ ಕೆಲಸಗಳನ್ನೂ ಕೈಯಾರೆ ಮಾಡುತ್ತಿದ್ದ. ಆದರೆ ಕಾಲ ಕ್ರಮೇಣ ಬಟ್ಟೆ ತೊಳೆಯುವದಕ್ಕೆ ವಾಷಿಂಗ್ ಮಶೀನ್, ಅರೆಯಲು / ಪುಡಿ ಮಾಡಲು ಮಿಕ್ಸರ್ ಹಾಗೂ ಗ್ರೈಂಡರ್, ತಣ್ಣಗಿರಿಸಲು ಫ್ರಿಡ್ಜ್, ಎತ್ತಲು ಕ್ರೇನ್ ಹೀಗೆ ಹಲವು ಹೊಸ ಯಂತ್ರಗಳ ಕಂಡು ಹಿಡಿದ ಅಲ್ವಾ?

ಇದೇ ರೀತಿ ಲೆಕ್ಕಾಚಾರ ಮಾಡಲು, ತರ್ಕ ಬಳಸಿ ಕೆಲಸ ಮಾಡಲು ಹಾಗೂ ಮಾಹಿತಿಗಳನ್ನು ಸಂರಕ್ಷಿಸಲು ಕಂಡು ಹಿಡಿದ ಯಂತ್ರವೇ ಕಂಪ್ಯೂಟರ್! 

ಈ ಯಂತ್ರಗಳ ಉಗಮಕ್ಕೆ ಸೋಮಾರಿತನ ಅಲ್ಲ, ಕಡಿಮೆ ಸಮಯದಲ್ಲಿ ಇವು ಹೆಚ್ಚು ಕೆಲ್ಸ ಒಂಚೂರೂ ತಪ್ಪಿಲ್ಲದೇ ಮಾಡಬಹುದು ಅನ್ನುವದೇ ಕಾರಣ.

ಕಂಪ್ಯೂಟರ್ ಕೇವಲ ಅಂಕೆಗಳನ್ನು ತೆಗೆದುಕೊಂಡು ರಕ್ಷಿಸುವ, ಸಂಸ್ಕರಿಸುವ ಹಾಗೂ ಪ್ರದರ್ಶಿಸುವ ಕೆಲಸ ಮಾಡುತ್ತದೆ. ಇಂದಿನ ಕಂಪ್ಯೂಟರ್ ಶಕ್ತಿಶಾಲಿ ಆಗಿದ್ದು ವಿಡಿಯೋ, ಆಡಿಯೋ, ೩ಡಿ ಗ್ರಾಫಿಕ್ಸ್ ದಂತಹ ಅಗಾಧ ಮಾಹಿತಿ ಪ್ರಾಸೆಸ್ ಮಾಡುವ ಶಕ್ತಿ ಹೊಂದಿದೆ.

ಹಾಗಿದ್ದರೆ ಬರಹ, ವಿಡಿಯೋ, ಆಡಿಯೋ ಇವೆಲ್ಲ ಬರಿ ಸಂಖ್ಯೆಗಳ ರೂಪದಲ್ಲಿ ಕಂಪ್ಯೂಟರ್ ಪ್ರಾಸೆಸ್ (ಸಂಸ್ಕರಣ) ಹೇಗೆ ಮಾಡುತ್ತೆ ಎಂಬ ಸಂದೇಹ ನಿಮಗೆ ಕಾಡಬಹುದು. ಮುಂಬರುವ ಲೇಖನಗಳಲ್ಲಿ ಅವೂ ಕೂಡಾ ಹೇಗೆ ಲೆಕ್ಕಾಚಾರಕ್ಕೆ ಸಂಬಂಧಿಸಿದ್ದು ಅನ್ನುವ ಬಗ್ಗೆ ತಿಳಿಸುತ್ತೇನೆ.

ಬನ್ನಿ ಮೊದಲು ಗಣಕ ಯಂತ್ರ ಎಂದರೇನು? ಎಲ್ಲೆಲ್ಲಿದೆ? ಏನು ಕೆಲಸ ಮಾಡುತ್ತೆ? ಅದರಿಂದ ಏನು ಲಾಭ? ನಷ್ಟ? ಅರಿಯೋಣ.

ಕಂಪ್ಯೂಟರ್ ಎಂಬ ಹೆಸರು ಹೇಗೆ ಬಂತು?

ಕಂಪ್ಯೂಟರ್ ಎಂಬ ಪದದ ಮೊದಲ ಬಳಕೆ ಆಗಿದ್ದು ಸುಮಾರು 1613ರ (೧೬೧೩ರ)  ಸುಮಾರಿಗೆ. ಆಗೆಲ್ಲ ಇರುತ್ತಿದ್ದುದು ಬರೀ ಮಾನವ ಕಂಪ್ಯೂಟರ್ ಗಳು! 

ಆಮೇಲೆ ಮೆಕಾನಿಕಲ್ ಕಂಪ್ಯೂಟರ್ ೧೯ನೇ ಶತಮಾನದಲ್ಲಿ (೧೮೦೧-೧೯೦೦) ಬಂತು.  ೧೯೪೦ರ ಸುಮಾರಿಗೆ ಇಲೆಕ್ಟ್ರಿಕ್ ಕಂಪ್ಯೂಟರ್ ಹಾಗೂ ಕ್ರಮೇಣ ಎಲೆಕ್ಟ್ರಾನಿಕ್ ಕಂಪ್ಯೂಟರ್ ಅವಿಷ್ಕಾರ ಆಯ್ತು.

ಲ್ಯಾಟಿನ್ ಭಾಷೆಯಲ್ಲಿ ಕಂಪ್ಯೂಟರೆ ಎಂದರೆ ಕೂಡಿಸುವದು ಅಥವಾ ಲೆಕ್ಕ ಮಾಡುವದು ಎಂಬರ್ಥ ಇದೆ. ಈ ಪದದ ಆಧಾರದ ಮೇಲೆ ಕಂಪ್ಯೂಟರ್ ಪದ ಬಳಕೆಗೆ ಬಂತು. ಮೊದಲು ಕಂಪ್ಯೂಟರ್ ಎಂದರೆ ಲೆಕ್ಕ ಮಾಡುವವರು, ಲೆಕ್ಕ ಮಾಡುವ ವ್ಯಕ್ತಿ ಎಂಬ ಅರ್ಥವಿತ್ತು.

ಆಮೇಲೆ ಕಂಡು ಹಿಡಿದ ಲೆಕ್ಕ ಮಾಡುವ ಯಂತ್ರಕ್ಕೆ ಕೂಡಾ ಕಂಪ್ಯೂಟರ್ ಎಂಬ ಹೆಸರು ಬಂತು.

ನಮ್ಮ ಕನ್ನಡದಲ್ಲಿ ಕಂಪ್ಯೂಟರ್ ಗೆ ಗಣಕ ಯಂತ್ರ ಎಂದು ಕರೆಯಬಹುದು. ಗಣಕ ಎಂದರೆ ಲೆಕ್ಕ ಮಾಡುವದು, ಎಣಿಸುವದು ಎಂಬರ್ಥ ಇದೆ. ಯಂತ್ರ ಎಂದರೆ ಮಶೀನು ಎಂದರ್ಥ.

ಕಂಪ್ಯೂಟರ್ ಎಂದರೇನು?

ಮಾಹಿತಿಗಳನ್ನು ರಕ್ಷಿಸಿ, ಪ್ರೋಗ್ರಾಮ್ ನಲ್ಲಿ ನೀಡಲಾದ ಸೂಚನೆಯಂತೆ ಮಾಹಿತಿಗಳನ್ನು ಸಂಸ್ಕರಿಸಿ ಅಂದರೆ ಪ್ರಾಸೆಸ್ ಮಾಡುವ ಯಂತ್ರಕ್ಕೆ ಕಂಪ್ಯೂಟರ್ ಅರ್ಥಾತ್ ಗಣಕ ಯಂತ್ರ ಎನ್ನುತ್ತಾರೆ.
ಮಾಹಿತಿ ಅಂಕೆಗಳು, ಅಕ್ಷರಗಳು, ವಿಡಿಯೋ, ಆಡಿಯೋ ಹೀಗೆ ಇನ್ಯಾವುದೇ ರೂಪದಲ್ಲೂ ಇರಬಹುದು.

ಕಂಪ್ಯೂಟರ್ ನಲ್ಲಿ ಮುಖ್ಯವಾಗಿ ಎರಡು ರೀತಿಯ ಭಾಗಗಳಿರುತ್ತವೆ. 

೧. ಒಂದು ಇಲೆಕ್ಟ್ರಾನಿಕ್ ಕಂಪೋನೆಂಟ್ ಗಳು. ಉದಾ: ಮಾನಿಟರ್, ಕೀಲಿಮಣೆ, ಮೌಸ್, ಮದರ್ ಬೋರ್ಡ್, ಸಿಪಿಯು, ಮೆಮರಿ - ಇವನ್ನು ಹಾರ್ಡವೇರ್ ಅನ್ನುತ್ತಾರೆ.

೨. ಇನ್ನೊಂದು ಅದರ ಪ್ರಾಸೆಸರ್ ಗಳಲ್ಲಿ ರನ್ ಆಗುವ ಪ್ರೋಗ್ರಾಮಿಂಗ್ ಕೋಡ್ ಗಳು. ಉದಾ: ಆಪರೇಟಿಂಗ್ ಸಿಸ್ಟೆಮ್, ಅಪ್ಲಿಕೇಶನ್ ಗಳು, ವರ್ಡ್ ಪ್ರಾಸೆಸರ್, ವಿಡಿಯೋ ಎಡಿಟರ್ - ಇವನ್ನು ಸಾಫ್ಟವೇರ್ ಅನ್ನುತ್ತಾರೆ.

ಈ ಹಾರ್ಡವೇರ್ ಹಾಗೂ ಸಾಫ್ಟವೇರ್ ಸಂಗಮವೇ ಕಂಪ್ಯೂಟರ್. ಇವೆರಡೂ ಬೇಕು ಕಂಪ್ಯೂಟರ್ ಸರಿಯಾಗಿ ಕೆಲಸ ಮಾಡಲು. ಸಾಫ್ಟವೇರ್ ಇಲ್ಲದಿದ್ದರೆ ಹಾರ್ಡವೇರ್ ಒಂದರಿಂದ ಯಾವುದೇ ಕೆಲಸ ಆಗದು. ಏನು ಕೆಲ್ಸ ಮಾಡಬೇಕು ಎಂಬ ಅಪ್ಪಣೆ ಸಾಫ್ಟವೇರ್ ಕೋಡ್ ನಿಂದಲೇ ಬರಬೇಕು.
ಅದೇ ರೀತಿ ಹಾರ್ಡವೇರ್ ಇಲ್ಲದಿದ್ದರೆ ಪ್ರಾಸೆಸರ್ ಇಲ್ಲದಿದ್ದರೆ ಸಾಫ್ಟವೇರ್ ಕೋಡ್ ಎಕ್ಸಿಕ್ಯೂಟ್ ಅಂದರೆ ರನ್ ಆಗುವದಿಲ್ಲ.

ಸಾಫ್ಟವೇರ್ ಹಾಗೂ ಹಾರ್ಡವೇರ್ ಗಳ ಬಗ್ಗೆ ವಿವರವಾಗಿ ಇನ್ನೊಂದು ಲೇಖನದಲ್ಲಿ ಬರೀತೇನೆ ಆಯ್ತಾ?

ಕಂಪ್ಯೂಟರ್ ನಮ್ಮ ಸುತ್ತಮುತ್ತ ಎಲ್ಲಿದೆ?


ಬನ್ನಿ ನಮ್ಮ ಸುತ್ತಮುತ್ತ ಕಂಪ್ಯೂಟರ್ ಎಲ್ಲಿದೆ ಅನ್ನುವದನ್ನು ನೋಡೋಣ.

ಲ್ಯಾಪ್ ಟಾಪ್, ಡೆಸ್ಕ್ ಟಾಪ್ ಅನ್ನು ನಿಮ್ಮಲ್ಲಿ ಹೆಚ್ಚಿನವರು ನೋಡಿರುತ್ತೀರಿ. ನಿಜ ಅವೆಲ್ಲ ಕಂಪ್ಯೂಟರ್ ಗಳು. ಆದರೆ ಅವಷ್ಟೇ ಅಲ್ಲ ನಿಮ್ಮ ಕೈಯಲ್ಲಿರುವ ಸ್ಮಾರ್ಟ್ ಫೋನು, ಸ್ಮಾರ್ಟ್ ವಾಚ್ ಹಾಗೂ ಟ್ಯಾಬ್ ಗಳು ಸಹ ಕಂಪ್ಯೂಟರ್ ಆಗಿದೆ.

ಇನ್ನು ಸರ್ವರ್ ಗಳು, ಮೇನ್ ಫ್ರೇಮ್ ಗಳು, ಡಾಟಾ ಸೆಂಟರ್ ಗಳು ಸಹ ಕಂಪ್ಯೂಟರ್ ಆಗಿದ್ದು ನೀವು ದೊಡ್ಡ ಕಂಪನಿಯ ಒಳಗೆ ಹೋದ ಹೊರತು ಅವನ್ನು ನೋಡಿರಲ್ಲ. ನೀವು ಕಂಪ್ಯೂಟರ್ ಅಲ್ಲಿ ಗೂಗಲ್ ಸರ್ಚ್ ಮಾಡಿದಾಗ  ಕಂಪ್ಯೂಟರ್ ಗಳ ನೆಟವರ್ಕ್ ನಿಮ್ಮ ಸರ್ಚ್ ಉತ್ತರವನ್ನು ಕೊಡುತ್ತದೆ. ಅವೆಲ್ಲ ಸರ್ವರ್ ಹಾಗೂ ಡಾಟಾ ಸೆಂಟರ್ ಕಂಪ್ಯೂಟರ್ ಗಳ ಮಹಿಮೆ.

ಇನ್ನು ನಿಮ್ಮ ಮನೆಯಲ್ಲಿ ಸ್ಮಾರ್ಟ ಟಿವಿ ಇದ್ದರೆ ಅದರಲ್ಲೂ ಕಂಪ್ಯೂಟರ್ ಇದೆ. ಸ್ಮಾರ್ಟ್ ಪ್ರಿಡ್ಜ್, ಡಿಜಿಟಲ್ ಕ್ಯಾಮೆರಾ, ಡಿಶ್ ವಾಶರ್, ಸ್ಮಾರ್ಟ್ ವಾಶಿಂಗ್ ಮಶೀನ್ ಎಲ್ಲ ಕಂಪ್ಯೂಟರ್ ಹೊಂದಿದ್ದು ಅದರ ಸಹಾಯದಿಂದ ಕೆಲಸ ಮಾಡುತ್ತವೆ.

ನಿಮ್ಮ ಕ್ಯಾಲ್ಕುಲೇಟರ್ ಅಲ್ಲಿ ಪ್ರೋಗ್ರಾಮಿಂಗ್ ಸೌಲಭ್ಯ ಇದ್ದರೆ ಅದೂ ಕೂಡಾ ಕಂಪ್ಯೂಟರ್ ಎನ್ನಿಸಿಕೊಳ್ಳುತ್ತದೆ.

ಸುಮಾರು ೬೦ ವರ್ಷಗಳ ಹಿಂದೆ ಇಡೀ ಕೋಣೆ (ರೂಂ) ಆವರಿಸಿರುತ್ತಿದ್ದ ಕಂಪ್ಯೂಟರ್ ಇಂದು ನಮ್ಮ ಅಂಗೈಯಗಲ ಗಾತ್ರದಷ್ಟು ಕಿರಿದಾಗಿದೆ! ಎಷ್ಟು ವಿಸ್ಮಯ ಅಲ್ವಾ?

ಈ ಕಂಪ್ಯೂಟರ್ ನ ವಿವಿಧ ರೂಪಗಳ ಬಗ್ಗೆ ವಿವರವಾಗಿ ಪ್ರತ್ಯೇಕವಾಗಿ ಆಮೇಲೆ ಹೇಳ್ತಿನಿ ಸರಿನಾ?

ಕಂಪ್ಯೂಟರ್ ಅನುಕೂಲ ಏನು?

ಕಂಪ್ಯೂಟರ್ ನಿಂದ ಮನುಷ್ಯರಿಗೆ ತುಂಬಾ ಅನುಕೂಲ ಇದೆ. ಬಹುಶಃ ಅದು ಇಲ್ಲದಿದ್ದರೆ ಈಗ ನಾವು ಸುಲಭವಾಗಿ ಮಾಡುತ್ತಿರುವ ಹಲವು ಕೆಲಸ ಸಾಧ್ಯವೇ ಇರಲಿಲ್ಲ. ಯಾವ ಅನುಕೂಲಗಳಿವೆ? ಬನ್ನಿ ನೋಡೋಣ.

ಅನುಕೂಲ ೧. ಅತ್ಯಂತ ವೇಗವಾಗಿ ಕೆಲಸ ಮಾಡುತ್ತದೆ

ಈಗಿನ ಆಧುನಿಕ ಇಲೆಕ್ಟ್ರಾನಿಕ್ ಕಂಪ್ಯೂಟರ್ ಬಹಳ ಫಾಸ್ಟ್ ಆಗಿ ಕೆಲಸ ಮಾಡುತ್ತದೆ. ಪ್ರತಿ ಕ್ಷಣ ಲಕ್ಷಾಂತರ ಆಜ್ಞೆಗಳನ್ನು, ಲೆಕ್ಕಾಚಾರ ಮಾಡಬಲ್ಲುದು. 

ಈ ಕಾರಣದಿಂದ ಹೆಚ್ಚು ಹೆಚ್ಚು ಮಾಹಿತಿಗಳನ್ನು ಸಂಸ್ಕರಿಸಬಹುದು. ಬಾಹ್ಯಾಕಾಶದ ವಿಶ್ಲೇಷಣೆ, ಹವಾಮಾನ ವಿಶ್ಲೇಷಣೆ, ೪ಕೆ / ೮ಕೆ ಯಂತಹ ಉನ್ನತ ಗುಣಮಟ್ಟದ ವಿಡಿಯೋ ಸಂಸ್ಕರಣೆ ಹೀಗೆ ಹಲವು ಕೆಲಸಗಳಿಗೂ ಬಳಸ ಬಹುದು.

ಇಂದು ನಮ್ಮ ಕೈಯಲ್ಲಿರುವ ಸ್ಮಾರ್ಟ್ ಫೋನಲ್ಲೂ ಸಹ ಗಣನೀಯ ಪ್ರಮಾಣದ ಮಾಹಿತಿ ಸಂಸ್ಕರಿಸುವ ಸಾಮರ್ಥ್ಯ ಇದೆ. ಕಂಪ್ಯೂಟರ್ ಶಕ್ತಿಶಾಲಿ ಆದ ಹಾಗೆ ಅಪ್ಲಿಕೇಶನ್ ಗಳ / ಮಾಹಿತಿಯ ಗಾತ್ರ ಹಾಗೂ ಬೇಡಿಕೆ ಕೂಡಾ ಹಾಗೆಯೇ ಹೆಚ್ಚುತ್ತಾ ಇದೆ.

ಅನುಕೂಲ ೨. ಸಂಪರ್ಕ

ಗಣಕ ಯಂತ್ರ ಇತರ ಸಂಪರ್ಕ ವಿಧಾನಗಳಾದ ಆಪ್ಟಿಕಲ್ ಫೈಬರ್, ೫ಜಿ, ೪ಜಿ, ೩ಜಿ ಗಳನ್ನು ಬಳಸಿ ಮಾಹಿತಿಗಳನ್ನು ಬೇರೆ ಕಂಪ್ಯೂಟರ್ ಗಳಿಗೆ ಕಳುಹಿಸ ಬಲ್ಲುದು. ಹಾಗೆಯೆ ಸಂವಹನ ಕೂಡಾ ಮಾಡ ಬಲ್ಲುದು.

ಇದೇ ಕಾರಣದಿಂದ ನಾವಿಂದು ಝೂಮ್, ಸ್ಕೈಪ್, ವಾಟ್ಸ್ ಅಪ್ ವಿಡಿಯೋ ಕಾನ್ಪೆರೆನ್ಸ್ ಮಾಡಲು ಸಾಧ್ಯವಾಗಿರುವದು. ಯೂಟ್ಯೂಬ್, ನೆಟ್ ಫ್ಲಿಕ್ಸ್ ಮೂಲಕ ವಿಡಿಯೋ ನೋಡಲು ಸಾಧ್ಯವಾಗಿರುವದು ಕಂಪ್ಯೂಟರ್ ಕೃಪೆ.

ಅನುಕೂಲ ೩. ನಿಖರತೆ

ಕಂಪ್ಯೂಟರ್ ಕೊಟ್ಟ ಆಜ್ಞೆಯನ್ನು ಚಾಚೂ ತಪ್ಪದೇ ಹಾಗೇ ಪಾಲಿಸುತ್ತೆ. ಅದಕ್ಕೆ ಮರೆವು ಇಲ್ಲ. (ತಾಂತ್ರಿಕ ಸಮಸ್ಯೆ ಹೊರತು ಪಡಿಸಿ)  ನಾವು ಮನುಷ್ಯರು ನೂರು ಸಂಖ್ಯೆಗಳನ್ನು ಕೂಡಿಸಿದರೆ ಸಮಯ ಜಾಸ್ತಿ ಬೇಕು ಹಾಗೂ ತಪ್ಪಾಗುವ ಸಾಧ್ಯತೆ ಇದೆ. 

ಕಂಪ್ಯೂಟರ್ ಸಾಫ್ಟವೇರ್ ಅಲ್ಲಿ ದೋಷ ಇರದಿದ್ದರೆ ನಿಖರವಾಗಿ ಲೆಕ್ಕ ಮಾಡಬಲ್ಲುದು. ನಿಖರತೆಯ ಕಾರಣದಿಂದ ಹಲವು ಕೆಲಸ ಗಳಿಗೆ ಕಂಪ್ಯೂಟರ್ ಆಪ್ತ ಬಾಂಧವ ಎನಿಸಿಕೊಂಡಿದೆ.

ಅನುಕೂಲ ೪. ಸಮಯ ಉಳಿತಾಯ

ಅತಿ ವೇಗದ ಕಾರಣ ಅದೆಂತ ಕೆಲ್ಸ ಇರಲಿ ಪಟ ಪಟನೆ ಮಾಡಿ ಕಂಪ್ಯೂಟರ್ ಕಡಿಮೆ ಟೈಮ್ ಅಲ್ಲಿ ಮಾಡಿ ಸಮಯ ಉಳಿತಾಯ ಮಾಡುತ್ತದೆ.

ಇಂದು ಚುನಾವಣೆಗಳಲ್ಲಿ ಲಕ್ಷಾಂತರ ಓಟುಗಳನ್ನು ಎಣಿಸಿ ದೇಶಾದ್ಯಂತ ವಿವಿಧ ಸೆಂಟರ್ ಗಳಿಂದ ಪಡೆದು ಒಂದೇ ದಿನದಲ್ಲಿ ಪ್ರಕಟ ಮಾಡಲು ಸಾಧ್ಯವಾಗಿರುವದೇ ಕಂಪ್ಯೂಟರ್ ಮೂಲಕ.

ಹೀಗೆ ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ ಮಾಡಿ ಕಂಪ್ಯೂಟರ್ ಸಮಯ ಉಳಿತಾಯ ಮಾಡುತ್ತದೆ.

ಅನುಕೂಲ ೫. ಕಡಿಮೆ ತಪ್ಪುಗಳು

ಕಂಪ್ಯೂಟರ್ ನ ಇಲೆಕ್ಟ್ರಾನಿಕ್ ಸರ್ಕ್ಯೂಟ್ ಗಳು, ಪ್ರಾಸೆಸರ್, ಮೆಮರಿ ಅತ್ಯಂತ ನಿಖರವಾಗಿ ಕೆಲಸ ಮಾಡುವದರಿಂದ ಫಲಿತಾಂಶದಲ್ಲಿ ತಪ್ಪುಗಳ ಸಂಭವನೀಯತೆ (ಪ್ರೊಬೆಬಾಲಿಟಿ) ತುಂಬಾ ಕಡಿಮೆ.

ಕೆಲವೊಮ್ಮೆ ಸಾಫ್ಟವೇರ್ ದೋಷ ಅಥವಾ ನೀಡಿದ ಮಾಹಿತಿ ಇನ್ ಪುಟ್ ದೋಷದಿಂದ ತಪ್ಪುಗಳು ಆಗುವ ಸಾಧ್ಯತೆ ಇದೆ. ಆದರೆ ಆ ದೋಷಕ್ಕೆ ಕಾರಣ ಮನುಷ್ಯನೇ ಹೊರತು ಕಂಪ್ಯೂಟರ್ ಅಲ್ಲ!

ಅನುಕೂಲ ೬. ಮಾಹಿತಿ ಸಂಗ್ರಹ, ಹುಡುಕಾಟ, ವಿಶ್ಲೇಷಣೆ (ಎನಾಲಿಸಿಸ್) ಮತ್ತು ರಕ್ಷಣೆ

ಅಗಾಧ ಮಾಹಿತಿ ಸಂಗ್ರಹ, ಅವುಗಳಲ್ಲಿ ಹುಡುಕಾಟ, ವಿಶ್ಲೇಷಣೆ ಕಂಪ್ಯೂಟರ್ ಗೆ ಬಾಳೆಹಣ್ಣು ಸುಲಿದಷ್ಟೇ ಸುಲಭ. ಈ ಕಾರಣದಿಂದ ನಮ್ಮ ಸ್ಮಾರ್ಟ್ ಫೋನಲ್ಲೂ ಸಹ ಸಾವಿರಾರು ಫೋಟೋಗಳು, ವಿಡಿಯೋ ರಕ್ಷಣೆ ಸಾಧ್ಯವಾಗಿದೆ.

ಗೂಗಲ್ ನಂತಹ ಸರ್ಚ್ ದೈತ್ಯ  ಹಲವು ಬಿಲಿಯನ್ ಗೂ ಹೆಚ್ಚು ಅಂತರ್ಜಾಲ ಪುಟದಿಂದ ಲೀಲಾಜಾಲವಾಗಿ ಮಾಹಿತಿ ಹುಡುಕಿ ಕ್ಷಣಾರ್ಧದಲ್ಲಿ ನಿಮ್ಮ ಮುಂದೆ ಇಡಬಲ್ಲುದು!

ಅನುಕೂಲ ೭. ಪರಿಸರ ರಕ್ಷಣೆ

ಕಂಪ್ಯೂಟರ್ ಒಂದು ಇಲೆಕ್ಟ್ರಾನಿಕ್ ಯಂತ್ರ ಆಗಿರುವದರಿಂದ ಸಾಕಷ್ಟು ಕಸ ಅದು ಹಳತಾಗಿ ಹಾಳಾದಾಗ ಆಗುತ್ತೆ. ಹಾಗಿದ್ದರೆ ಹೇಗೆ ಪರಿಸರ ಸಂರಕ್ಷಣೆ ಆಗುತ್ತೆ ಎಂದು ಯೋಚನೆ ಮಾಡ್ತಾ ಇದೀರಾ?

ಅಗಾಧ ಮಾಹಿತಿ ಅದು ಅಕ್ಷರ ಇರಬಹುದು, ವಿಡಿಯೋ ಇರಬಹುದು, ಆಡಿಯೋ ಇರಬಹುದು ಎಲ್ಲ ಕಂಪ್ಯೂಟರ್ ರಕ್ಷಣೆ ಮಾಡಿ ಬೇಕಾದಾಗ ನೀಡಬಲ್ಲುದು.

ಇಂದು ಕೋಟ್ಯಂತರ ಪುಸ್ತಕಗಳು, ಹಾಡುಗಳು, ಲಕ್ಷಾಂತರ ಸಿನಿಮಾ ಹಾಗೂ ಕೋಟ್ಯಂತರ ವಿಡಿಯೋಗಳು ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್ ಅಲ್ಲಿ ಲಭ್ಯವಿದೆ. ಬೇಕಾದುದ್ದನ್ನು ಡೌನ್ ಲೋಡ್ ಮಾಡಿ ಓದಬಹುದು, ವೀಕ್ಷಣೆ ಮಾಡಬಹುದು. ಸರ್ಚ್ ಮಾಡಿ ಬೇಕಾದ ಮಾಹಿತಿ ಪಡೆಯಬಹುದು.

ಕಡಿಮೆಯಾದ ಕಾಗದ, ಕ್ಯಾಸೆಟ್ ಬಳಕೆ

ಪರಿಣಾಮ? ಇಂದು ಪೇಪರ್ ಮುದ್ರಣ ಅನಿವಾರ್ಯತೆ ಕಡಿಮೆ ಆಗಿದೆ. ಕಾಗದದ ಬಳಕೆ ಕಡಿಮೆ ಆಗಿ ಮರಗಳ ರಕ್ಷಣೆ ಆಗಿದೆ. ಅದೇ ರೀತಿ ಆಡಿಯೋ ಕ್ಯಾಸೆಟ್, ವಿಡಿಯೋ ಕ್ಯಾಸೆಟ್ ಗ್ರಾಹಕರ ಬಳಕೆ ನಿಂತು ಅವುಗಳ ಉತ್ಪಾದನೆ ಹಾಗೂ ಬಳಸಿ ಬಿಸಾಕಿದ ಕ್ಯಾಸೆಟ್, ಸಿಡಿ ಕಸಗಳ ಪ್ರಮಾಣ ಕಡಿಮೆ ಆಗಿದೆ.

ಕಡಿಮೆಯಾದ ನೋಟಿನ ಬಳಕೆ

ಡಿಜಿಟಲ್ ಕರೆನ್ಸಿ ಕೂಡಾ ನೋಟಿನ ಅವಶ್ಯಕತೆ ಬಳಕೆ ಕಡಿಮೆ ಮಾಡಿದೆ.

ಕಾಗದ ಕಡತ ಕಡಿಮೆ ಬಳಕೆ, ನೋಟಿನ ಮುದ್ರಣ ಕಡಿತ ಇವೆಲ್ಲಾ ಪರಿಸರಕ್ಕೆ ಎಷ್ಟು ಒಳ್ಳೆಯದು ಅಲ್ವಾ?

ಕಡಿಮೆಯಾದ ಓಡಾಟ

ಅಷ್ಟೇ ಅಲ್ಲ ಎಷ್ಟೋ ಬಾರಿ ವಿಡಿಯೋ ಕಾಲ್ ಗಳಿಂದ ಓಡಾಟ ಮಾಡುವ ಅಗತ್ಯ ಕೂಡಾ ಕಡಿಮೆ ಆಗಿದೆ. ವಾಹನ ಓಡಾಟ, ಇಂಧನ ಬಳಕೆ ಕೂಡಾ ಕಡಿಮೆ ಆಗಿ ನಮ್ಮ ಪರಿಸರಕ್ಕೆ ಒಳಿತು.

ಕಡಿಮೆಯಾದ ವಸ್ತುಗಳ ವೇಸ್ಟೇಜ್

ಕ್ಲೌಡ್ ಕಂಪ್ಯೂಟಿಂಗ್ ಅಪ್ಲಿಕೇಶನ್ ಗಳಿ ತತ್ಕಾಲಕ್ಕೆ ಎಷ್ಟು ಬೇಕೋ ಅಷ್ಟೇ ಮೆಮರಿ, ಸಿಪಿಯು ಬಳಸಿ ಒಪ್ಟಿಮೈಜೇಶನ್ ಮಾಡುತ್ತದೆ. 

ಈ-ಕಾಮರ್ಸ್ ಗಳು ಕಂಪ್ಯೂಟರ್ ಬಳಸಿ ಗ್ರಾಹಕರಿಗೆ ಬೇಕಾಗುವ ಸಾಮಗ್ರಿಗಳ ಅಂದಾಜು ಹಾಕಿ ಮಾರುಕಟ್ಟೆಯಲ್ಲಿ ಅನಗತ್ಯವಾಗಿ ವಸ್ತುಗಳು ಕೊಳೆತು ಹಾಳಾಗುವದನ್ನು ಕಡಿಮೆ ಮಾಡುತ್ತದೆ.

ಕಂಪ್ಯೂಟರ್ ಗ್ರಾಫಿಕ್ಸ್ ಕೂಡಾ ಪರಿಸರ ಉತ್ತಮ. ಹೇಗೆ ಅನ್ನುವದನ್ನು ಮುಂದೆ ಹೇಳುತ್ತೇನೆ.

ಬರೆಯುತ್ತಾ ಹೋದರೆ ಇನ್ನೂ ಇದೆ.  ಅಂತೂ ಕಂಪ್ಯೂಟರ್ ಪರಿಸರ ಸ್ನೇಹಿ ಹೇಗೆ ಗೊತ್ತಾಯ್ತಲ್ಲ?

ಅನುಕೂಲ ೮. ಶಿಕ್ಷಣ

ಇಂದು ಜಗತ್ತಿನ ಹೆಚ್ಚಿನ ಮುಕ್ತ ಮಾಹಿತಿ ಕಂಪ್ಯೂಟರ್ ಅಲ್ಲಿ ಲಭ್ಯವಿದೆ. ಯಾರೂ ಬೇಕಾದರೂ ಓದಿ ಕಲಿಯಬಹುದು. ನೋಡಿ ಅರಿಯಬಹುದು. ವಿಕಿಪಿಡಿಯಾ, ಬ್ರಿಟಾನಿಕಾ ವಿಶ್ವಕೋಶ, ಯೂಟ್ಯೂಬ್, ಯುಡೆಮಿ ಹೀಗೆ ಹಲವು ಉಚಿತ ಹಾಗೂ ಹಣ ನೀಡಿ ಪಡೆಯುವ ಶಿಕ್ಷಣ ಸೌಲಭ್ಯಗಳಿವೆ.

ಒಬ್ಬ ಮನಸ್ಸು ಮಾಡಿದರೆ ಪ್ರಪಂಚದ ಯಾವ ಮೂಲೆಗೆ ಬೇಕಾದರೂ ಸ್ಕೈಪ್, ಝೂಮ್ ಕಾಲ್ ಮೂಲಕ ಇನ್ನೊಬ್ಬರಿಗೆ ಕಲಿಸಬಹುದು.

ಅನುಕೂಲ ೯. ಹಣ ಸಂಪಾದನೆ

ಕಂಪ್ಯೂಟರ್ ಹಲವು ಮಾರ್ಗಗಳ ಮೂಲಕ ಹಣ ಗಳಿಸುವ ಅವಕಾಶ ನೀಡುತ್ತದೆ. ವ್ಲಾಗ್ಗಿಂಗ್, ಬ್ಲಾಗ್ಗಿಂಗ್, ಕಲಿಸುವದು, ಹಾಡುವದು, ನಟಿಸುವದು, ಕೋಡಿಂಗ್ ಹೀಗೆ ಹಲವು ವಿಧಾನದ ಮೂಲಕ ಹಣ ಗಳಿಸಲು ಅನುಕೂಲ ಮಾಡುತ್ತದೆ.

ಅನುಕೂಲ ೧೦. ಮಾನಿಟರಿಂಗ್ / ಕಂಟ್ರೋಲ್

ಬಾಹ್ಯಾಕ್ಷಾಶದಲ್ಲಿರುವ ಸೆಟಲೈಟ್ ಮಾನಿಟರ್ ಮಾಡಬೇಕೆ? ಕ್ಷುದ್ರ ಗ್ರಹಳು (ಅಸ್ಟೆರೊಯಿಡ್) ಭೂಮಿಯ ವಾತಾವರಣ ಪ್ರವೇಶ ಮಾಡುತ್ತಾ ಎಂಬ ಮುನ್ಸೂಚನೆ, ಹವಾಮಾನದ ಟ್ರ್ಯಾಕಿಂಗ್, ಹಡಗು / ವಿಮಾನ / ಟ್ರಕ್ / ಕಾರಿನ ಟ್ರ್ಯಾಕಿಂಗ್, ಬೇರೆ ಗ್ರಹಗಳ ಬಗ್ಗೆ ಸಂಶೋಧನೆ.

ಅಣುವಿದ್ಯುತ್ ಸ್ಥಾವರ ಮಾನಿಟರಿಂಗ್ - ಕಂಟ್ರೋಲ್, ವಿಮಾನ ಕಂಟ್ರೋಲ್, ಕಾರನ್ನು ಆಟೋಮ್ಯಾಟಿಕ್ ಚಲಾಯಿಸುವದು, ವಾಹನಗಳ ಬಿಡಿ ಭಾಗಗಳ ಕಂಟ್ರೋಲ್, ಹೋಂ ಆಟೋಮೇಶನ್.

ಹೀಗೆ ಹಲವು ರಂಗಗಳಲ್ಲಿ ಕಂಪ್ಯೂಟರ್ ಕಂಟ್ರೋಲ್ ಹಾಗೂ ಮಾನಿಟರಿಂಗ್ ಸಲುವಾಗಿ ಕಂಪ್ಯೂಟರ್ ಬಳಕೆ ಆಗುತ್ತಿದೆ.

ಅನುಕೂಲ ೧೧. ಮನೋರಂಜನೆ

ಬಹುಶಃ ನೀವು ಕಂಪ್ಯೂಟರ್ ಅನ್ನು ವಿಡಿಯೋ ನೋಡಲು, ಹಾಡು ಕೇಳಲು, ಸೋಶಿಯಲ್ ಮಿಡಿಯಾ ಬಳಸಿದಷ್ಟು ಇನ್ನೇನಕ್ಕೂ ಬಳಸುವದು ಕಡಿಮೆ. ಯೂಟ್ಯೂಬ್, ಫೇಸ್ ಬುಕ್, ಇನ್ಸ್ಟಾಗ್ರಾಂ, ಟ್ವಿಟ್ಟರ್, ಪಿಂಟ್ರೆಸ್ಟ್ ನಿಮ್ಮ ಮನೋರಂಜನೆಗೆ ಮಿತಿ ಇಲ್ಲ.

ಕೋಟ್ಯಂತರ ಪುಸ್ತಕ, ಸಿನಿಮಾ, ಧಾರಾವಾಹಿ ಎಲ್ಲವನ್ನೂ ಮನೆಯಲ್ಲೇ ಕುಳಿತು ಓದಬಹುದು / ನೋಡಬಹುದು.

ಅನುಕೂಲ ೧೨. ಮನೆಯಲ್ಲೇ ಅಂಗಡಿ

ವಿಶೇಷತವಾಗಿ ಈ ಕಾಮರ್ಸ್ ಮಾಡಿರುವ ಕ್ರಾಂತಿಗೆ ಸಮ ಇಲ್ಲ. ಬೇಕಾದ ವಸ್ತುಗಳು ಮನೆಗೇ ತರಿಸುವ ಈ ಸೌಲಭ್ಯ ಕಂಪ್ಯೂಟರ್ ನ ಕೊಡುಗೆ. 

ಕೇವಲ ಗ್ರಾಹಕರಷ್ಟೇ ಅಲ್ಲ ತಯಾರಕರು, ಮಾರಾಟಗಾರರು, ಕೂರಿಯರ್ ಹೀಗೆ ಎಲ್ಲವೂ ಕಂಪ್ಯೂಟರ್ ನೆಟವರ್ಕ್ ಸಹಾಯದಿಂದ ನಿಖರವಾಗಿ ತಲುಪಿಸುತ್ತವೆ.

ಆರ್ಟಿಫಿಶಿಯಲ್ ಹಾಗೂ ಮಶೀನ್ ಲರ್ನಿಂಗ್ ಯಾವ ವಸ್ತುವಿಗೆ ಯಾವ ಸಮಯದಲ್ಲಿ ಯಾವ ಊರಲ್ಲಿ ಬೇಡಿಕೆ ಎಷ್ಟು ಎಂಬ ಮುನ್ಸೂಚನೆ ಕೂಡಾ ನೀಡುತ್ತದೆ. ಈ ಡಾಟಾ ಬಳಸಿ ಮೊದಲೇ ಎಷ್ಟು ವಸ್ತು ತಯಾರಿಸಬೇಕು, ಎಲ್ಲಿ ಎಷ್ಟು ಸ್ಟಾಕ್ ಇಡಬೇಕು ಎಂಬ ಅಂದಾಜು ಹಾಕ ಬಹುದು. ಇದರಿಂದ ವಸ್ತು ಹಾಳಾಗುವದೂ ಕೂಡಾ ತಪ್ಪುತ್ತದೆ.

ಅನುಕೂಲ ೧೩. ಆಟೋಮೇಶನ್

ಹಲವು ಕೆಲಸಗಳನ್ನು ಕಂಪ್ಯೂಟರ್ ಆಟೊಮೇಟಿಕ್ ಆಗಿ ಮಾಡ ಬಲ್ಲುದು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ದಿಶಕ್ತಿ), ಮಶೀನ್ ಲರ್ನಿಂಗ್ (ಯಂತ್ರದ ಕಲಿಕೆ) ಇವೆಲ್ಲ ತಂತ್ರಜ್ಞಾನಗಳು ಅದೆಷ್ಟೋ ಕೆಲಸವನ್ನು ತಾನೇ ಕಲಿತು ಮಾಡಬಲ್ಲುದು. ಇಂದು ತಾನೇ ಅರಿತು ಕೋಡಿಂಗ್ ಮಾಡಬಲ್ಲ ಕಂಪ್ಯೂಟರ್ ಅನ್ವೇಷಣೆ ನಡೆಯುತ್ತಿದೆ.

ಕಡಿಮೆ ಜನರು, ಕಡಿಮೆ ಸಮಯದಲ್ಲಿ ಹೆಚ್ಚಿನ ಕೆಲ್ಸ ಮುಗಿಸಬಹುದು.ಇದು ಖರ್ಚನ್ನು ಕಡಿಮೆ ಮಾಡುವದಕ್ಕೆ ಸಹಾಯ ಮಾಡುತ್ತದೆ.

ಅನುಕೂಲ ೧೪. ಗ್ರಾಫಿಕ್ಸ್ ಮತ್ತು ವಿಡಿಯೋ ಎಡಿಟಿಂಗ್

 ಧಾರಾವಾಹಿಗಳಲ್ಲಿ, ಸಿನಿಮಾಗಳಲ್ಲಿ ಹಿನ್ನೆಲೆ, ದೊಡ್ಡ ಸ್ಪೋಟ, ಬಿಲ್ಡಿಂಗ್ ನಾಶ, ಪ್ರಾಣಿಗಳ ಬಳಕೆ ಎಲ್ಲಾ ಕಂಪ್ಯೂಟರ್ ಗ್ರಾಫಿಕ್ಸ್ ಬಳಸುವದರಿಂದ ಅದೆಷ್ಟು ಪರಿಸರಕ್ಕೆ ಸಹಾಯಕ ಅಲ್ವಾ? 

ಊಹೆ ಮಾಡಿ ಸಿನಿಮಾಗಳಿಗೆ ಎಲ್ಲ ಕಡೆ ನಿಜವಾದ ಸೆಟ್ ಹಾಕಿದ್ದರೆ, ನಿಜಕ್ಕೂ ಬಾಂಬ್ ಸ್ಪೋಟ ಎಲ್ಲ ಕಡೆ ಮಾಡಿದ್ದರೆ ಆಗುತ್ತಿದ್ದ ಪರಿಸರ ಹಾನಿ ಅಷ್ಟಿಷ್ಟಲ್ಲ.

ಎಲ್ಲ ಕೇವಲ ಕಂಪ್ಯೂಟರ್ ನ ವರ್ಚುವಲ್ (ಕಾಲ್ಪನಿಕ) ಪ್ರಪಂಚದಲ್ಲಿ ನಡೆಯುವದರಿಂದ ಖರ್ಚೂ ಕಡಿಮೆ, ಯಾವ ವಸ್ತು ಹಾಳಾಗದು.

ಅನುಕೂಲ ೧೫.  ದಾರಿ ತೋರಿಸುವದು

ಬಹುಶಃ ನೀವು ಮ್ಯಾಪ್ ಆಪ್ ಬಳಸಿರಬಹುದು ಅಥವಾ ಅದನ್ನು ಬೇರೆಯವರು ಬಳಸಿರುವದನ್ನಾದರೂ ನೋಡಿರಬಹುದು. ಹೋಗ ಬೇಕಾದ ಜಾಗದ ವಿಳಾಸ ಹಾಕಿ ಲೊಕೇಶನ್ ಆರಿಸಿ ಕೊಂಡರೆ ಆಯ್ತು. 

ಹೋಗುವ ದಾರಿ, ಅದರಲ್ಲಿನ ಅಡೆ ತಡೆಗಳು, ವಾಹನ ಸಂದಣಿ (ಟ್ರಾಫಿಕ್) ಎಲ್ಲ ಗಮನದಲ್ಲಿಟ್ಟು ಎಡ-ಬಲ ಎಂದು ಮಾರ್ಗ ತೋರಿಸಿ ನಿಮಗೆ ಮಾರ್ಗ ದರ್ಶನ ಮಾಡುತ್ತೆ. ಅಲ್ವಾ? 

ಇದೂ ಕೂಡಾ ನಿಮ್ಮ ಸ್ಮಾರ್ಟ್ ಫೋನ್ ಕಂಪ್ಯೂಟರ್ ಜೊತೆ ಸೆಟಲೈಟ್ ಜಿಪಿಎಸ್, ಮ್ಯಾಪ್ ಸರ್ವರ್ ಹೀಗೆ ಹಲವು ಕಂಪ್ಯೂಟರ್ ಗಳ ಹೊಂದಾಣಿಕೆಯ ಫಲಿತಾಂಶ ಇದು.

ಕಂಪ್ಯೂಟರ್ ಕೊರತೆ ಏನು?

ಒಂದು ವಸ್ತುವನ್ನು ಒಳ್ಳೆಯ ಕೆಲಸಕ್ಕೂ ಬಳಸ ಬಹುದು. ಕೆಟ್ಟ ಕೆಲ್ಸಕ್ಕೂ ಸಹ ಉಪಯೋಗಿಸಬಹುದು. ಅಲ್ವಾ?

ಕಂಪ್ಯೂಟರ್ ಏನು ಬೇರೆ ಅಲ್ಲ. ಮಿತಿ ಮೀರಿದರೆ, ಎಚ್ಚರ ತಪ್ಪಿದರೆ ಅದೂ ಕೂಡಾ ಅಪಾಯಕಾರಿ.

ಕಂಪ್ಯೂಟರ್ ಅನನುಕೂಲತೆ ಅಥವಾ ತೊಂದರೆ ಏನು? ಬನ್ನಿ ನೋಡೋಣ.

ಕೊರತೆ ೧. ದೇಹ / ಆರೋಗ್ಯಕ್ಕೆ ಮಾರಕ

ಕಂಪ್ಯೂಟರ್ ಅನ್ನು ಎಡಬಿಡದೇ ಗೇಮಿಂಗ್, ಕೋಡಿಂಗ್ ಇತ್ಯಾದಿಗಳಿಗೆ ವಿಶ್ರಾಂತಿಯಿಲ್ಲದೇ ಬಳಸುವದು ಆರೋಗ್ಯಕ್ಕೆ ಒಳ್ಳೆಯದಲ್ಲ. ಮೌಸ್, ಕೀಲಿಮಣೆ, ಪರದೆ ಜಾಸ್ತಿ ಬಳಸಿದಾಗ ಕೈಗೆ ಹಾಗೂ ಕಣ್ಣಿಗೆ ತೊಂದರೆ ಆಗಬಹುದು.

ತುಂಬಾ ಹೊತ್ತು ಕೂರುವದರಿಂದ ಬೆನ್ನಿನ ಸಮಸ್ಯೆಗಳು ಆರಂಭವಾಗಬಹುದು.

ಸ್ಮಾರ್ಟ್ ಫೊನ್ ಹಾಗೂ ಟ್ಯಾಬ್ ಏನು ಬೇರೆ ಏನಲ್ಲ. ಅವುಗಳ ಅತಿ ಬಳಕೆ ಕಣ್ಣು ಹಾಗೂ ಕುತ್ತಿಗೆಯ ಸಮಸ್ಯೆಗೆ ಕಾರಣ ಆಗ ಬಹುದು.

ಕೊರತೆ ೨. ವೈರಸ್ ಆಕ್ರಮಣ (ಅಟ್ಯಾಕ್)

ವೈರಸ್ ಅನ್ನುವದು ಮನುಷ್ಯರೇ ಮಾಡುವ ತೊಂದರೆ. ಕಳ್ಳ-ಕಾಕರು ಹ್ಯಾಕರು ಕೆಟ್ಟ ಸಾಫ್ಟವೇರ್ ಬರೆದು ಕಳುಹಿಸಿ ಕಂಪ್ಯೂಟರ್ ಪ್ರವೇಶ ಮಾಡಿ ಪಾಸ್ ವರ್ಡ್, ಕಾರ್ಡ್ ವಿವರ, ಹಣ ಹೀಗೆ ಅಮೂಲ್ಯ ಮಾಹಿತಿ ಕದಿಯುತ್ತಾರೆ.

ಎಂಟಿವೈರಸ್, ಎಂಟಿಮಾಲ್ವೇರ್ ಬಳಸಿ ತಕ್ಕ ಮಟ್ಟಿಗೆ ಜಾಗ್ರತ ವಾಗಿದ್ದರೆ ಈ ವೈರಸ್ ಸಮಸ್ಯೆ ಎದುರಿಸ ಬಹುದು.

ಕೊರತೆ ೩. ಹ್ಯಾಕಿಂಗ್ ಸಮಸ್ಯೆ

ಹ್ಯಾಕರ್ ಗಳ ಕೆಲ್ಸ ಏನೆಂದರೆ ಅಪ್ಲಿಕೇಶನ್ ಗಳನ್ನು ಕಂಪ್ಯೂಟರ್ ಜಾಲವನ್ನು ಭೇದಿಸಿ ಅಲ್ಲಿನ ಮಾಹಿತಿ ಕದಿಯುವದು, ಮಾಹಿತಿ ಬದಲಾಯಿಸುವ ಕೆಲ್ಸ ಮಾಡುತ್ತಾರೆ. ಇದೂ ಕೂಡಾ ಮನುಷ್ಯ ನಿರ್ಮಿತ ಸಮಸ್ಯೆ. 

ಎಥಿಕಲ್ ಹ್ಯಾಕರ್ (ನೈತಿಕ ಕನ್ನ ಹಾಕುವವರು ಅಥವಾ ಒಳ್ಳೆಯ ಹ್ಯಾಕರ್) ಜಾಲವನ್ನು ಭೇದಿಸಲು ಪ್ರಯತ್ನಿಸಿ ಕಳ್ಳ ಮಾರ್ಗ ಇದೆಯಾ ನೋಡುತ್ತಾರೆ. ಕಳ್ಳ ದಾರಿ ಇದ್ದರೆ ತಿಳಿಸಿ ಹೇಗೆ ಮುಚ್ಚುವದು ಎಂದು ತಿಳಿಸುತ್ತಾರೆ.

ಕೊರತೆ ೪. ಗ್ರಾಫಿಕ್ ಕಂಟೆಂಟ್

ಗಾಳಿ ಬರಲಿ ಎಂದು ಕಿಟಕಿ ತೆಗೆದರೆ ಸೊಳ್ಳೆ ಬರುವ ಹಾಗೆ ಕಂಪ್ಯೂಟರ್ ಜಾಲದಲ್ಲಿ ಒಳ್ಳೆಯ ವಿಷಯದ ಜೊತೆ ಕೆಟ್ಟ ವಿಷಯಗಳು ಸಹ ಇವೆ. ಹಿಂಸೆ, ಅಶ್ಲೀಲತೆ, ದುರ್ ವ್ಯವಹಾರಗಳಿವೆ. ಅವುಗಳಿಂದ ದೂರ ಇದ್ದೂ ಎಚ್ಚರಿಕೆಯಿಂದ ಇರಬೇಕು.

ಕೊರತೆ ೫. ಜನರಿಗೆ ಕಡಿಮೆ ಉದ್ಯೋಗ

ಕಂಪ್ಯೂಟರ್ ತನ್ನ ವೇಗ, ನಿಖರತೆ, ಮಾಹಿತಿ ಸಂಗ್ರಹ, ನೆಟ್ ವರ್ಕ್ ಸಾಮರ್ಥ್ಯದಿಂದ ಅತ್ಯಂತ ಕಡಿಮೆ ಖರ್ಚಿನಲ್ಲಿ ಹೆಚ್ಚು ಕೆಲಸ ಮಾಡುತ್ತದೆ. ಇದು ಒಂದು ರೀತಿಯಲ್ಲಿ ಕೋಡಿಂಗ್, ಟೆಸ್ಟಿಂಗ್, ಆಪರೇಟಿಂಗ್ ಉದ್ಯೋಗ ಹುಟ್ಟು ಹಾಕಿದ್ದರೂ ಅನೇಕ ಕೆಲಸವನ್ನು ಮಾಡುವದರ ಮೂಲಕ ಉದ್ಯೋಗಗಳ ಅವಕಾಶವನ್ನು ಕಡಿಮೆ ಮಾಡಿದೆ.

ಕೊರತೆ ೬. ಬೆಲೆ ಜಾಸ್ತಿ

ಕಂಪ್ಯೂಟರ್ ದುಬಾರಿ. ನಿಜ ಸ್ಮಾರ್ಟ್ ಫೋನ್ ಇತ್ಯಾದಿಗಳು ಕಡಿಮೆ ದರಕ್ಕೆ ಲಭ್ಯ ಇದ್ದರೂ ಉತ್ತಮ ಕ್ಷಮತೆಯ ಸ್ಮಾರ್ಟ್ ಫೋನ್ ದುಬಾರಿ ಆಗಿದೆ. ಅದೇ ರೀತಿ ಡೆಸ್ಕ್ ಟಾಪ್, ಲ್ಯಾಪ್ ಟಾಪ್ ಗಳಿಗೂ ಇದು ಅನ್ವಯ ಆಗುತ್ತದೆ.

ಕೊರತೆ ೭. ಪರಿಸರಕ್ಕೆ ಮಾರಕ

ಕಂಪ್ಯೂಟರ್ ಒಂದು ಇಲೆಕ್ಟ್ರಾನಿಕ್ ಯಂತ್ರ. ಇದರ ತಯಾರಿಕೆಗೆ ಪ್ಲಾಸ್ಟಿಕ್, ಲೋಹ ಹೀಗೆ ಹಲವು ಮೂಲ ವಸ್ತುಗಳು ಬೇಕಿರುತ್ತದೆ. ಇದರ ತಯಾರಿಕೆ ಹಲವು ಹಾನಿಕಾರಕ ರಾಸಾಯನಿಕ ವಾತಾವರಣಕ್ಕೆ ಬಿಡುಗಡೆ ಆಗುತ್ತದೆ.

ಅಷ್ಟೇ ಅಲ್ಲ ಅದು ಕೆಲಸ ನಿಲ್ಲಿಸಿದಾಗ ಇವೆಲ್ಲದರ ಮರುಬಳಕೆ ಸರಿಯಾಗಿ ಮಾಡದಿದ್ದರೆ ಪರಿಸರದಲ್ಲಿ ತ್ಯಾಜ್ಯ ಹೆಚ್ಚುತ್ತದೆ.

ಕೊರತೆ ೮. ಸಮಯ ವ್ಯರ್ಥ

ಎಷ್ಟೋ ಜನ ಸ್ಮಾರ್ಟ್ ಫೋನ್, ಟ್ಯಾಬ್, ಲ್ಯಾಪ್ ಟಾಪ್ ನಲ್ಲಿ ಅಷ್ಟೇನು ಉಪಯುಕ್ತವಲ್ಲದ ಕೆಲ್ಸಕ್ಕೆ ಸಮಯ ವ್ಯರ್ಥ ಮಾಡುತ್ತಾರೆ. ಗೇಮಿಂಗ್, ಸೋಶಿಯಲ್ ಮಿಡಿಯಾ, ಮೂವಿ, ಹಾಡುಗಳು, ವಿಡಿಯೋ ಹೀಗೆ ಮಿತಿ ಮೀರಿದರೆ ಸಮಯ ಹೋಗಿದ್ದು ತಿಳಿಯದು. ಈ ರೀತಿಯಲ್ಲಿ ಸಮಯ ವ್ಯರ್ಥ ವಾಗದಂತೆ ಮಿತಿಯಲ್ಲಿ ಬಳಸಿದರೆ ಈ ಸಮಸ್ಯೆ ಆಗದು.

ಕೊರತೆ ೯. ದ್ವೇಷ, ವಿಷ ಕಾರುವ ಚರ್ಚೆಗಳು, ಮಾರ್ಕೆಟಿಂಗ್ ಕಂಟೆಂಟ್, ಸುಳ್ಳು ಕಂಟೆಂಟ್

ಇದು ಕಂಪ್ಯೂಟರ್ ನ ಕೊರತೆ ಅಲ್ಲ ಆದರೆ ಕಂಪ್ಯೂಟರ್ ಅಲ್ಲಿ ಲಭ್ಯ ವಿರುವ ಸೋಶಿಯಲ್ ಮಿಡಿಯಾ(ಸಾಮಾಜಿಕ ತಾಣ) ಗಳ ತೊಂದರೆ ಹಾಗೂ ಇತರ ತಾಣಗಳ ತೊಂದರೆ.

ಸೋಶಿಯಲ್ ಮಿಡಿಯಾದಲ್ಲಿ ಮುಕ್ತವಾಗಿ ಅನಿಸಿಕೆ ಹಂಚಿಕೊಳ್ಳ ಬಹುದು. ಕೆಲವರು ಮಾರು ವೇಷದಲ್ಲಿ ಬಂದು ಕಮೆಂಟ್ ಹಾಕುತ್ತಾರೆ. ಸಿಟ್ಟು ಬಂದಾಗ ಅವಾಚ್ಯ ಶಬ್ದ ಬಳಸಲೂ ಹಿಂಜರಿಯರು.
ಈ ರೀತಿ ಕಂಪ್ಯೂಟರ್ ದ್ವೇಷ ಪ್ರಸಾರಕ್ಕೂ ಕಾರಣವಾಗುವ ಸಾಧ್ಯತೆ ಇದೆ.

ಅದೇ ರೀತಿ ಕೆಲವರು ಗೌಪ್ಯವಾಗಿಡ ಬೇಕಾದ ವಿಷಯಗಳನ್ನು, ಮನದೊಳಗಿರುವ ಆಕ್ರೋಶವನ್ನು ಬಹಿರಂಗವಾಗಿ ಹಿಂದೆ ಮುಂದೆ ನೋಡದೇ ಹಂಚುವ ಸಾಧ್ಯತೆ ಇದೆ. 

ಇನ್ನೂ ಕೆಲ ಸಮಯ ವ್ಯವಸ್ಥಿತವಾಗಿ ಸುಳ್ಳು ಕಂಟೆಂಟ್ ಹಾಕಿ ಕುತಂತ್ರ ಮಾಡುವವರು, ಸೈಕಾಲಜಿ ಅರಿತು ಜನಕ್ಕೆ ಮರುಳು ಮಾಡುವ ಮಾರ್ಕೆಟಿಂಗ್ ಹಾಗೂ ಕುತಂತ್ರಿಗಳ ಕಂಟೆಂಟ್ ಗೂ ಇಲ್ಲಿ ಕೊರತೆಯಿಲ್ಲ.

ಹಂಸ ಕ್ಷೀರದ ನ್ಯಾಯದಂತೆ ಒಳ್ಳೆಯದನ್ನು ನೋಡಿ ಕೆಟ್ಟದ್ದನ್ನು ದೂರ ತಳ್ಳುವ ಜಾಣ್ಮೆ ನೀವು ತೋರಬೇಕು.

ಕೊನೆಯ ಮಾತು

ಒಟ್ಟಿನಲ್ಲಿ ಕಂಪ್ಯೂಟರ್ ಅಗಾಧ ಮಾಹಿತಿ ರಕ್ಷಿಸಲು, ಸಂಸ್ಕರಿಸಲು, ಬೇಕಾದಾಗ ಹೊರ ಪಡೆಯಲು ಸಹಾಯ ಮಾಡುವ ಯಂತ್ರ. ಇದು ಕೆಲಸ ಮಾಡುವದೇ ಗಣಿತ ಹಾಗೂ ತರ್ಕದ ಆಧಾರದ ಮೇಲೆ. ಮೊದ ಮೊದಲು ಬರೀ ಲೆಕ್ಕಾಚಾರಕ್ಕೆ ಬಳಸಲ್ಪಡುತ್ತಿದ್ದ ಈ ಯಂತ್ರ ಇಂದು ಮಾಡದ ಕೆಲಸ ಕಡಿಮೆ ಎನ್ನಬಹುದು. ವಿಡಿಯೋ/ಆಡಿಯೋ ಎಡಿಟಿಂಗ್, ವಿಡಿಯೋ ಗೇಮಿಂಗ್ ಹೀಗೆ ಹಲವು ರಂಗಗಳಲ್ಲಿ ಅವಿಭಾಜ್ಯ ಅಂಗವಾಗಿದೆ.

ಕಂಪ್ಯೂಟರ್ ನ ಇತ್ತೀಚಿನ ರೂಪ ಆದ ಸ್ಮಾರ್ಟ್ ಫೋನ್ ಇಂದು ಪ್ರತಿ ಮನೆಯಲ್ಲೂ ಪ್ರತಿಯೊಬ್ಬರ ಕೈಯಲ್ಲೂ ರಾರಾಜಿಸುತ್ತಿದೆ! ಭವಿಷ್ಯದಲ್ಲಿ ಇದು ಯಾವ ರೂಪ ತಳೆಯುತ್ತೋ ಆ ಬ್ರಹ್ಮನೇ ಬಲ್ಲ.

ಕಂಪ್ಯೂಟರ್ ಏನು? ಉದಾಹರಣೆಗಳು ಯಾವು? ಅನುಕೂಲ ಹಾಗೂ ಅನನಕೂಲ ಏನು ಅನ್ನುವದರ ಬಗ್ಗೆ ಈ ಲೇಖನ ಓದಿ ಅರಿತಿರಿ. ಮುಂದಿನ ಲೇಖನ ದಲ್ಲಿ ಕಂಪ್ಯೂಟರ್ ಬಗೆಗಳ ಬಗ್ಗೆ ವಿವರವಾಗಿ ತಿಳಿಯೋಣ.

ಈ ಲೇಖನ ಹೇಗನಿಸಿತು? ಹೇಗೆ ಇನ್ನೂ ಇಂಪ್ರೂವ್ ಮಾಡಬಹುದು? ಕಮೆಂಟ್ ಹಾಕ್ತೀರಾ? ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ?

ಚಿತ್ರಕೃಪೆ: Joshua Woroniecki ಅವರು Pixabay ತಾಣದಿಂದ

ಮತ್ತೆ ಮತ್ತೆ ಕೇಳುವ ಪ್ರಶ್ನೆಗಳು

ಪ್ರಶ್ನೆ: ಕಂಪ್ಯೂಟರ್‌ಗಳ ಇತಿಹಾಸ ಏನು?

ಉತ್ತರ: 19 ನೇ ಶತಮಾನದ ಆರಂಭದಲ್ಲಿ ಮೊದಲು ಕಂಪ್ಯೂಟರ್‌ಗಳನ್ನು  ಆವಿಷ್ಕಾರ ಮಾಡಲಾಯ್ತು. ಅತ್ಯಂತ ಹಳೆಯ ಯಾಂತ್ರಿಕ ಕಂಪ್ಯೂಟರ್ ಚಾರ್ಲ್ಸ್ ಬ್ಯಾಬೇಜ್ ವಿನ್ಯಾಸಗೊಳಿಸಿದ ವಿಶ್ಲೇಷಣಾತ್ಮಕ (ಎನಾಲಿಟಿಕಲ್) ಎಂಜಿನ್‌. ಮೊದಲ ಎಲೆಕ್ಟ್ರಾನಿಕ್ ಕಂಪ್ಯೂಟರ್, ENIAC ಅನ್ನು 1945 ರಲ್ಲಿ ನಿರ್ಮಿಸಲಾಯಿತು ಮತ್ತು ಇದನ್ನು ಮಿಲಿಟರಿ ಲೆಕ್ಕಾಚಾರಗಳಿಗೆ ಬಳಸಲಾಯಿತು.

ಪ್ರಶ್ನೆ: ವಿವಿಧ ರೀತಿಯ ಕಂಪ್ಯೂಟರ್‌ಗಳು ಯಾವುವು? 

ಉತ್ತರ: ಕಂಪ್ಯೂಟರ್ ಗಳು ಹಲವು ರೀತಿಯಲ್ಲಿ ಲಭ್ಯವಿದೆ. ಮುಖ್ಯವಾಗಿ

  • ಪರ್ಸನಲ್ ಕಂಪ್ಯೂಟರ್‌ಗಳು
  • ಲ್ಯಾಪ್‌ಟಾಪ್‌ಗಳು
  • ಟ್ಯಾಬ್ಲೆಟ್‌ಗಳು
  • ಸ್ಮಾರ್ಟ್‌ಫೋನ್‌ಗಳು
  • ಸರ್ವರ್‌ಗಳು
  • ಮೇನ್‌ಫ್ರೇಮ್‌ಗಳು ಇತ್ಯಾದಿ.

ಪ್ರಶ್ನೆ: ಕಂಪ್ಯೂಟರ್‌ಗಳು ಡೇಟಾವನ್ನು ಹೇಗೆ ಸಂಗ್ರಹಿಸುತ್ತವೆ? 

ಉತ್ತರ: ಕಂಪ್ಯೂಟರ್‌ಗಳು ಹಾರ್ಡ್ ಡಿಸ್ಕ್ ಡ್ರೈವ್‌ಗಳು, ಸಾಲಿಡ್ ಸ್ಟೇಟಿಕ್ ಡ್ರೈವ್‌ಗಳು ಮತ್ತು ಫ್ಲ್ಯಾಷ್ ಡ್ರೈವ್‌ಗಳಂತಹ ವಿವಿಧ ರೀತಿಯಲ್ಲಿ ಡೇಟಾವನ್ನು ಸಂಗ್ರಹಿಸುತ್ತವೆ. ಕ್ಲೌಡ್ ಸಂಗ್ರಹಣೆಯನ್ನು ಕೂಡಾ ಮಾಹಿತಿ ಉಳಿಸಲು ಬಳಸುತ್ತಾರೆ.

ಪ್ರಶ್ನೆ: ವೈರಸ್‌ಗಳು ಮತ್ತು ಮಾಲ್‌ವೇರ್‌ಗಳಿಂದ ನನ್ನ ಕಂಪ್ಯೂಟರ್ ಅನ್ನು ನಾನು ಹೇಗೆ ರಕ್ಷಿಸಿಕೊಳ್ಳಬಹುದು? 

ಉತ್ತರ: ವೈರಸ್ ಹಾಗೂ ಮಾಲ್ ವೇರ್ ಗಳಿಂದ ಕಂಪ್ಯೂಟರ್ ಅನ್ನು ರಕ್ಷಿಸಲು ಮುಖ್ಯವಾಗಿ ಈ ಮುಂದಿನ ವಿಧಾನಗಳನ್ನು ಅನುಸರಿಸಿರಿ.

  • ಆಂಟಿವೈರಸ್ ಸಾಫ್ಟ್‌ವೇರ್ ಅನ್ನು ಸ್ಥಾಪಿಸಿ, ಬಳಸಿ.
  • ನಿಮ್ಮ ಆಪರೇಟಿಂಗ್ ಸಿಸ್ಟಂ ಮತ್ತು ಸಾಫ್ಟ್‌ವೇರ್ ಅನ್ನು ಆಗಾಗ ನವೀಕರಿಸಿ.
  • ಅನುಮಾನಾಸ್ಪದ ಇಮೇಲ್ ಲಗತ್ತುಗಳನ್ನು ಓಪನ್ ಮಾಡ ಬೇಡಿ.
  • ವಿಶ್ವಾಸಾರ್ಹವಲ್ಲದ ಮೂಲಗಳಿಂದ ಸಾಫ್ಟ್‌ವೇರ್ ಡೌನ್‌ಲೋಡ್ ಮಾಡ ಬೇಡಿ, ಬಳಸ ಬೇಡಿ.

ಪ್ರಶ್ನೆ: ನನ್ನ ಕಂಪ್ಯೂಟರ್‌ನ ಕಾರ್ಯಕ್ಷಮತೆಯನ್ನು ನಾನು ಹೇಗೆ ಸುಧಾರಿಸಬಹುದು?

ಉತ್ತರ: ಕಂಪ್ಯೂಟರ್ ಅನ್ನು ವೇಗ ಮಾಡಲು ಹಲವು ಉಪಾಯಗಳಿವೆ. 

  • ಹೆಚ್ಚಿನ RAM ಅನ್ನು ಸೇರಿಸುವ ಮೂಲಕ ವೇಗಗೊಳಿಸಬಹುದು.
  • ಹಾರ್ಡ್ ಡಿಸ್ಕ್ ನಿಂದ ಸಾಲಿಡ್ ಸ್ಟೇಟ್ ಡ್ರೈವ್‌ಗೆ ಅಪ್‌ಗ್ರೇಡ್ ಮಾಡುವ ಮೂಲಕ ಕಂಪ್ಯೂಟರ್ ಸ್ಪೀಡ್ ಜಾಸ್ತಿ ಆಗುತ್ತೆ.
  • ಬಳಕೆಯಾಗದ ಪ್ರೋಗ್ರಾಂಗಳನ್ನು ಅನ್‌ಇನ್‌ಸ್ಟಾಲ್ ಮಾಡುವ ಮೂಲಕ ಅನವಶ್ಯಕವಾಗಿ ರನ್ ಆಗುವ ಬ್ಯಾಕ್ ಗ್ರೌಂಡ್ ಪ್ರಾಸೆಸ್ ಗಳನ್ನು ಕಡಿಮೆ ಮಾಡಿ ವೇಗ ಮಾಡ ಬಹುದು.
  • ನಿಮ್ಮ ಕಂಪ್ಯೂಟರ್ ಅನ್ನು ಮಾಲ್‌ವೇರ್ ಮತ್ತು ವೈರಸ್‌ಗಳಿಂದ ಮುಕ್ತವಾಗಿಟ್ಟರೆ ಕೂಡಾ ಕಂಪ್ಯೂಟರ್ ವೇಗ ಆದೀತು.

ಪ್ರಶ್ನೆ: ಅತಿಯಾದ ಕಂಪ್ಯೂಟರ್ ಬಳಕೆಯ ಅಪಾಯಗಳೇನು?

ಉತ್ತರ: ಅತಿಯಾದ ಕಂಪ್ಯೂಟರ್ ಬಳಕೆಯು ದೈಹಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಉದಾಹರಣೆಗೆ ಕಣ್ಣಿನ ಆಯಾಸ, ಬೆನ್ನು ನೋವು ಮತ್ತು ಕಾರ್ಪಲ್ ಟನಲ್ ಸಿಂಡ್ರೋಮ್. 

ಇದು ಸಾಮಾಜಿಕ ಪ್ರತ್ಯೇಕತೆ, ವ್ಯಸನ ಮತ್ತು ದೈಹಿಕ ಚಟುವಟಿಕೆಯ ಕೊರತೆಗೆ ಕೂಡಾ ಕಾರಣವಾಗಬಹುದು.


© ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ, ಅನುಮತಿ ಇಲ್ಲದೇ ಲೇಖನಗಳನ್ನು ನಕಲು ಮಾಡುವಂತಿಲ್ಲ.
ವಿಸ್ಮಯನಗರಿ.ಕಾಂ