Slider

ಹ್ಯಾಕರ್ ಗಳು ಕದ್ದ ಸ್ಯಾಮ್ಸಂಗ್ ಗ್ಯಾಲಕ್ಸಿ ಸೋರ್ಸ್ ಕೋಡ್

ಸ್ಯಾಮ್ಸಂಗ್ ಗ್ಯಾಲಕ್ಸಿ ಸಾಧನದ ಸೋರ್ಸ್ ಕೋಡ್ ಅನ್ನು ಹ್ಯಾಕರ್ ಗಳು ಕದ್ದಿದ್ದಾರೆ ಎಂಬ ಸುದ್ದಿ ಮಾರ್ಚ್ ಮೊದಲ ವಾರದಲ್ಲಿ ಸ್ಪೋಟವಾಗಿತ್ತು.

ಈಗ 7 ಮಾರ್ಚ್ 2022 ರಂದು ಸ್ಯಾಮ್ಸಂಗ್ ಅದು ನಿಜವೆಂದು ಖಚಿತ ಪಡಿಸಿದೆ.

ಎನ್ವಿಡಿಯಾ ಅನ್ನು ಇತ್ತೀಚೆಗೆ ಹ್ಯಾಕ್ ಮಾಡಿದ್ದ ಗುಂಪಾದ ಲಾಪ್ಸುಸ್$ (Lapsus$) ಅವರೇ ತಾವು ಮಾಡಿದ್ದು ಎಂದು ಹೇಳಿಕೊಂಡಿದೆ.

ಸ್ಯಾಮ್ಸಂಗ್ ಎಂಕ್ರಿಪ್ಶನ್ ಹಾಗೂ ಬಯೋ ಮೆಟ್ರಿಕ್ ಫೀಚರ್ ಗಳನ್ನು ಗ್ಯಾಲಕ್ಸಿ ಸಾಧನಗಳಿಗೆ ನೀಡುವ ಬರೆದಿರುವ ಸೋರ್ಸ್ ಕೋಡ್ ಸಹ ಹ್ಯಾಕ್ ಆಗಿರುವ ಡಾಟಾದಲ್ಲಿ ಸೇರಿದೆ.

ಸುಮಾರು 190 ಜಿಬಿ ಗಾತ್ರದ ಡಾಟಾ ಇದ್ದು ಟೋರೆಂಟ್ ತಾಣಗಳಲ್ಲಿ ಮುಕ್ತವಾಗಿ ಲಭ್ಯ ಇದೆ ಎನ್ನಲಾಗಿದೆ.

ಇದರಲ್ಲಿ ಗ್ರಾಹಕರ ಹಾಗೂ ಸ್ಯಾಮ್ಸಂಗ್ ಉದ್ಯೋಗಿಗಳ ಯಾವುದೇ ಮಾಹಿತಿ ಸೇರಿಲ್ಲ ಎಂದು ಕಂಪನಿ ತಿಳಿಸಿದೆ.

ಹ್ಯಾಕರ್ ಗಳ ಗುಂಪು ಬೂಟ್ ಲೋಡರ್ ಸೋರ್ಸ್ ಕೋಡ್, ಬಯೋ ಮೆಟ್ರಿಕ್ ಅಥೆಂಟಿಕೇಶನ್ ಗೆ ಸಂಬಂಧಪಟ್ಟ ಅಲ್ಗಾರಿತಂ ಕೂಡಾ ಇದೆ ಎಂದು ಹ್ಯಾಕರ್ ಗುಂಪು ತಿಳಿಸಿದೆ. ಸ್ಯಾಮ್ಸಂಗ್ ನ ಸುರಕ್ಷತಾ ಪ್ಲಾಟ ಫಾರ್ಮ್ ಕ್ನೊಕ್ಸ್ (Knox) ಸೋರ್ಸ್ ಕೋಡ್ ಕೂಡಾ ಇದೆ ಎನ್ನಲಾಗುತ್ತಿದೆ.

ಸ್ಯಾಮ್ಸಂಗ್ ಏನೂ ತೊಂದರೆ ಆಗದು ಮುಂದೆ ಹೀಗಾಗದಂತೆ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದೆ. ಆದರೂ ಹ್ಯಾಕರುಗಳಿಗೆ ಕೋಡ್ ಲಭ್ಯ ಇರುವದರಿಂದ ಸುರಕ್ಷತೆಯ ಲೋಪ ದೋಷ ಪತ್ತೆ ಮಾಡಿ ಅದನ್ನು ದುರುಪಯೋಗ ಮಾಡುವ ಸಾಧ್ಯತೆ ಇದೆ.

ಈ ಲೇಖನ ಹೇಗನಿಸಿತು? ಹೇಗೆ ಇನ್ನೂ ಇಂಪ್ರೂವ್ ಮಾಡಬಹುದು? ಕಮೆಂಟ್ ಹಾಕ್ತೀರಾ? ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅನಿಸಿಕೆ ಏನು? ತಿಳಿಸಿ.

Advertisement

blogger
© ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ, ಅನುಮತಿ ಇಲ್ಲದೇ ಲೇಖನಗಳನ್ನು ನಕಲು ಮಾಡುವಂತಿಲ್ಲ.
ವಿಸ್ಮಯನಗರಿ.ಕಾಂ