Slider

ಸ್ಯಾಮ್ಸಂಗ್ ಗ್ಯಾಲಕ್ಸಿ ಎ53 5ಜಿ ಬಿಡುಗಡೆ. ಅದರ ವಿಶಿಷ್ಟತೆ ಏನು?

ಸ್ಯಾಮ್ಸಂಗ್ ಅವರ ಗ್ಯಾಲಕ್ಸಿ ಎ53 5ಜಿ ಭಾರತದಲ್ಲಿ ಮಾರ್ಚ್ 17 ಕ್ಕೆ ಬಿಡುಗಡೆ ಆಗಿದೆ. ಈ 5ಜಿ ಫೋನ್ ವಿಶಿಷ್ಟತೆ ಏನು? ಬನ್ನಿ ನೋಡೋಣ.

ಚಿತ್ರಕೃಪೆ: ಸ್ಯಾಮ್ಸಂಗ್

{tocify} $title={ವಿಷಯ ಸೂಚಿ}

ಸ್ಯಾಮ್ಸಂಗ್ ಗ್ಯಾಲಕ್ಸಿ ಸ್ಮಾರ್ಟ್ ಫೋನುಗಳು ಹಲವು ಶ್ರೇಣಿಯಲ್ಲಿ ಮುಖ್ಯವಾಗಿ ಇವೆ. ಝೀ, ಎಸ್, ಎಂ ಹಾಗೂ ಎ ಸಿರೀಸ್ ಗಳು. ಝೀ ಮತ್ತು ಎಸ್ ಸಿರೀಸ್ ಗಳು ಅಲ್ಟ್ರಾ ಪ್ರಿಮಿಯಂ ಹಾಗೂ ಪ್ರಿಮಿಯಂ ರೇಂಜ್ ಆದರೆ, ಎ ಹಾಗೂ ಎಂ ಸಿರೀಸ್ ಗಳು ಆರಂಭಿಕ, ಬಜೆಟ್, ಮಧ್ಯಮ ಶ್ರೇಣಿಗಳ ಫೋನ್ ಹೊಂದಿರುತ್ತವೆ.

ಇವು 0*, 1*, 2*, 3*, 4*, 5*, 7* ರೇಂಜ್ ಅಲ್ಲಿ ಲಭ್ಯ ಇದ್ದು, 0* ಆರಂಭಿಕ ಶ್ರೇಣಿ ಆದರೆ 5* / 7* ಇವು ಮಧ್ಯಮ ಶ್ರೇಣಿಯ ಫೋನ್ ಆಗಿವೆ.

ಉದಾಹರಣೆಗೆ ಗ್ಯಾಲಕ್ಸಿ ಎ ಶ್ರೇಣಿಯಲ್ಲಿ A03, A13, A23, A33, A43, A53, A73 ಫೋನ್ ಗಳು ಇರಲಿವೆ. ಇದೇ ಮಾರ್ಚ್ 17 2022ರಂದು A33, A53 ಮತ್ತು A73 ಘೋಷಿಸಲಾಗಿದೆ. ಇವೆಲ್ಲವೂ ಎಪ್ರಿಲ್ 2022ರ ವೇಳೆಗೆ ಮಾರುಕಟ್ಟೆಯಲ್ಲಿ ಸಿಗಲಿದೆ.

ಅಕಸ್ಮಾತ್ ನೀವು ಪ್ರಿಮಿಯಂ ಫೋನ್ ಹುಡುಕುತ್ತಿದ್ದರೆ ಐಫೋನ್ ಸ್ಟೋರ್ ಹಾಗೂ ಗ್ಯಾಲಕ್ಸಿ ಎಸ್ ಸ್ಟೋರ್ ಗೆ ಭೇಟಿ ನೀಡಿ.

ಗ್ಯಾಲಕ್ಸಿ ಎ53 5ಜಿಯ ವಿಶಿಷ್ಟತೆ ಏನು? ಕ್ಯಾಮರಾ ಯಾವುದು? ಪರದೆ ಯಾವುದು? ಬನ್ನಿ ನೋಡೋಣ.

ಪ್ರಾಸೆಸರ್

ಇದೂ ಕೂಡಾ ೫ಜಿ ಫೋನ್ ಆಗಿದ್ದು ಯಾವ ಪ್ರೊಸೆಸರ್ ಎಂಬುದನ್ನು ಸ್ಯಾಮ್ಸಂಗ್ ಹೇಳಿಲ್ಲ. ಎಂಟು ಕೋರಿನ 5ಎನ್ ಎಂ ಹೊಚ್ಚ ಹೊಸ ಪ್ರೊಸೆಸರ್ ಎಂದಷ್ಟೇ ಹೇಳಿದೆ. 

ಎ೫೨ ೫ಜಿ ಮಾದರಿಯಲ್ಲಿ ಕೆಲವು ಮಾರುಕಟ್ಟೆಯಲ್ಲಿ ಕ್ವಾಲಕಾಂ ಪ್ರಾಸೆಸರ್ ಹಾಗೂ ಇನ್ನು ಕೆಲವು ಕಡೆ ಎಕ್ಸಿನೋಸ್ ೧೨೦೦ ಚಿಪ್ ಸೆಟ್ ಬಳಸಲಿದೆ ಎನ್ನಲಾಗಿದೆ.

ಬ್ಯಾಟರಿ

5000ಎಂ ಎ ಏಚ್ ನ ಬ್ಯಾಟರಿ ಇದ್ದು 25ವ್ಯಾಟ್ ಫಾಸ್ಟ್ ಚಾರ್ಜ್ ಸೌಲಭ್ಯ ಇದೆ. ಟೈಪ್-ಸಿ ಪೋರ್ಟ್ ಇದು ಚಾರ್ಜಿಂಗ್ ಗೆ ಬಳಸುತ್ತದೆ.

ಪರದೆ


6.5 ಇಂಚಿನ ಫುಲ್ ಎಚ್ಡಿ+ (2400 * 1080) ರೆಸೊಲ್ಯೂಶನ್ 405ಪಿಪಿಐ120 ಹರ್ಟ್ಜ್ ನ 800ನಿಟ್ಸ್ ಬ್ರೈಟ್ನೆಸ್ ಇರುವ ಸೂಪರ್ ಅಮೋಲ್ಡ್ ಪರದೆ ಹೊಂದಿದೆ.

ಎಚ್ಡಿಆರ್ ಬೆಂಬಲ ಇಲ್ಲ. ಇದು ಒಂದು ಸಣ್ಣ ನೆಗೆಟಿವ್ ಪಾಯಿಂಟ್. ಆದರೆ ಹೆಚ್ಚಿನವರಿಗೆ ಸ್ಮಾರ್ಟ್ ಫೋನ್ ಅಲ್ಲಿ ಈ ಫೀಚರ್ ಅವಶ್ಯಕತೆ ಇಲ್ಲ.

ಐಪಿ67 ದೂಳು ಹಾಗೂ ನೀರಿನ ಸುರಕ್ಷತೆ ಹೊಂದಿರುವ ಈ ಫೋನ್ ಪರದೆಯ ಸುರಕ್ಷತೆಗೆ ಗೋರಿಲ್ಲಾ ಗ್ಲಾಸ್ 5 ಹೊಂದಿದೆ.

ಕ್ಯಾಮೆರಾ

ಹಿಂದೆ 64ಎಂಪಿಯ ಎಫ್/1.8 ಮುಖ್ಯ ವೈಡ್ ಕ್ಯಾಮರಾ ಆಪ್ಟಿಕಲ್ ಸ್ಥಿರೀಕರಣದ ಜೊತೆಗೆ ಹಾಗೂ 12ಮೆಗಾ ಪಿಕ್ಸೆಲ್ ನ ಅಲ್ಟ್ರಾ ವೈಡ್ ಎಂಗಲ್ ಎಫ್/2.2 ಕ್ಯಾಮೆರಾ, 5ಎಂಪಿ ಮ್ಯಾಕ್ರೋ ಎಫ್/2.4 ಕ್ಯಾಮೆರಾ ಮತ್ತು 5ಎಂಪಿ ಆಳ (ಡೆಪ್ತ್) ಕ್ಯಾಮೆರಾ ಗಳಿವೆ.

ಆಪ್ಟಿಕಲ್ ಸ್ಥಿರೀಕರಣ ಇರುವದರಿಂದ ವಿಡಿಯೋಗಳನ್ನು ಯಾವುದೇ ರೀತಿಯ ಶೇಕ್ ಆಗದಂತೆ ತೆಗೆಯಬಹುದು. ಫೋಟೋ ಕೂಡಾ ಶೇಕ್ ಆಗಿ ಬ್ಲರ್ ಆಗುವದು ತಪ್ಪುತ್ತೆ.

ಹಿಂಭಾಗದ ಕ್ಯಾಮೆರಾದಿಂದ 4ಕೆ 30ಪಿ ಅಥವಾ ಫುಲ್ ಎಚ್ಡೀ 30ಪಿ ವಿಡಿಯೋ ರೆಕಾರ್ಡಿಂಗ್ ಸಾಧ್ಯ.

ಮುಂದೆ 32ಮೆಗಾ ಪಿಕ್ಸೆಲ್ ನ ಪಂಚ್ ಹೋಲ್ ಸೆಲ್ಫಿ ಕ್ಯಾಮೆರಾ ಇದೆ.

ಟೆಲೆಫೋಟೋ ಲೆನ್ಸ್ ಇಲ್ಲ. ಹಾಗೂ ಫುಲ್ ಎಚ್ಡಿ ೬೦ಪಿ ವಿಡಿಯೋ ಚಿತ್ರಿಕರಣ ಆಗದು. ಇವೆರಡು ಮೈನಸ್ ಪಾಯಿಂಟುಗಳು.

ಸ್ಯಾಮ್ಸಂಗ್ ಗ್ಯಾಲಕ್ಸಿ ಎ53 5ಜಿಯ ಕ್ಯಾಮೆರಾ ಲೇಔಟ್ ನ ಒಂದು ನೋಟ ಕೆಳಗಿನ ಚಿತ್ರದಲ್ಲಿ ನೋಡಬಹುದು.

ಬಣ್ಣಗಳು

ಬಿಳಿ, ತಿಳಿ ಕೇಸರಿ, ತಿಳಿ ನೀಲಿ ಹಾಗೂ ಕಪ್ಪು ಬಣ್ಣಗಳಲ್ಲಿ ಲಭ್ಯವಿರಲಿದೆ. 

ಸೆನ್ಸರ್ ಗಳು

ಸೈಡ್ ಫಿಂಗರ್ ಫ್ರಿಂಟ್ ಸೆನ್ಸರ್ ಇದೆ. ಹೆಚ್ಚು ಕಡಿಮೆ ಎಲ್ಲ ಸಾಮಾನ್ಯ ಸೆನ್ಸರ್ ಇದರಲ್ಲಿದೆ.

ಸಂಪರ್ಕ

ಎನ್ ಎಫ್ ಸಿ ಇದೆ. 3.5 ಆಡಿಯೋ ಜ್ಯಾಕ್ ಈ ಫೋನ್ ಅಲ್ಲಿ ಇಲ್ಲ.

ಎರಡು 5ಜಿ ಸಿಮ್  ಸಪೋರ್ಟ್ ಇದೆ. ೫ಜಿ / ೪ಜಿ / ೩ಜಿ/ ೨ಜಿ ಎಲ್ಲ ಸಪೋರ್ಟ್ ಇದೆ.  ಬ್ಲ್ಯೂಟೂತ್ 5.1 ಇದೆ.

ಸ್ಟೋರೇಜ್ ಮತ್ತು ಮೆಮರಿ

1 ಟೆರ್ರಾ ಬೈಟ್ ವರೆಗಿನ ಮೈಕ್ರೋ ಎಸ್ ಡಿ ಕಾರ್ಡ್ ಅನ್ನು ಈ ಫೋನ್ ಜೊತೆ ಬಳಸಬಹುದು.

6ಜಿಬಿ + 128ಜಿಬಿ, 8ಜಿಬಿ + 128ಜಿಬಿ ವರ್ಶನ್ ಗಳಿವೆ.

ಆಕಾರ

189 ಗ್ರಾಂ ತೂಕದ ಈ ಫೋನ್ 159.6ಮಿಲಿ ಮೀ ಎತ್ತರ, 74.8ಮಿಮಿ ಅಗಲ, 8.1ಮಿಮಿ ದಪ್ಪ ಇದೆ.

ಸಾಫ್ಟವೇರ್

ಅಂಡ್ರಾಯಿಡ್ 12 ಆಧಾರಿತ ಒನ್ ಯುಐ ಆಪರೇಟಿಂಗ್ ಸಿಸ್ಟೆಮ್ ಇದೆ. 

 ಉತ್ತಮ ಸ್ಕ್ರೀನ್, ವೇಗದ ಪ್ರಾಸೆಸರ್, ಉತ್ತಮ ಕ್ಯಾಮೆರಾ, ಜಾಸ್ತಿ ಮೆಮರಿ, ಎಲ್ಲ ರೀತಿಯ ಸೆನ್ಸರ್ ಗಳು ಲಭ್ಯವಿದೆ. ಒಟ್ಟಿನಲ್ಲಿ ಇದು ಹಣಕ್ಕೆ ತಕ್ಕ ಮೌಲ್ಯ ಫೋನ್ ಎನ್ನಬಹುದು. ನೆನಪಿಡಿ ಇದು ಉನ್ನತ ಶ್ರೇಣಿಯ ಫೋನ್ ಆಗಿದೆ. 

ಲಾಭಗಳು

  • ಉತ್ತಮ ಕ್ಯಾಮೆರಾ. 
  • ಉತ್ತಮ ಪರದೆ - ೧೨೦ಹರ್ಟ್ಜ್ ಸೂಪರ್ ಅಮೋಲ್ಡ್.
  • ಆಪ್ಟಿಕಲ್ ಸ್ಟೆಬಿಲೈಜೇಶನ್ ಇದೆ.
  • ದೊಡ್ಡ ೫೦೦೦ ಎಂಎ ಎಚ್ ಬ್ಯಾಟರಿ
  • ವೇಗದ ಪ್ರಾಸೆಸರ್
  • ೫ಜಿ ಸೌಲಭ್ಯ
  • ಎಲ್ಲ ಸೆನ್ಸರ್ ಗಳು ಇವೆ
  • ಎಸ್ ಡಿ ಕಾರ್ಡ್ ಸಹ ಬಳಸಬಹುದು
  • ಫಾಸ್ಟ್ ಚಾರ್ಜಿಂಗ್ ಇದೆ. 
  • ೪ಕೆ ವಿಡಿಯೋ ರೆಕಾರ್ಡಿಂಗ್ ಸಾಧ್ಯ.

ಕೊರತೆಗಳು

  • ೩.೫ ಆಡಿಯೋ ಜ್ಯಾಕ್ ಇಲ್ಲ.
  • ಟೆಲಿಫೋಟೋ ಕ್ಯಾಮೆರಾ ಇಲ್ಲ.
  • ೬೦ಪಿ ವಿಡಿಯೋ ರೆಕಾರ್ಡಿಂಗ್ ಆಗದು.
  • ೮ಕೆ ವಿಡಿಯೋ ರೆಕಾರ್ಡಿಂಗ್ ಸಾಧ್ಯ ಇಲ್ಲ.
  • ಪರದೆ ಎಚ್ಡಿಆರ್ ಹಾಗೂ ಡಿಸಿಐ-ಪಿ೩ ಬಣ್ಣದ ಬೆಂಬಲ ಇಲ್ಲ.

ಕೊನೆಯ ಮಾತು

ಒಟ್ಟಿನಲ್ಲಿ ಸ್ಯಾಮ್ಸಂಗ್ ಅವರ ಗ್ಯಾಲಕ್ಸಿ ಎ53 5ಜಿ ಸ್ಮಾರ್ಟ್ ಫೋನ್ ಹಣಕ್ಕೆ ತಕ್ಕ ಮೌಲ್ಯ ನೀಡುವ ಉನ್ನತ ಶ್ರೇಣಿಯ ಫೋನ್ ಎನ್ನ ಬಹುದು. ನಿಮ್ಮ ಬಜೆಟ್ 35 ಸಾವಿರದ ಇದ್ದರೆ ಈ ಫೋನ್ ಉತ್ತಮ.

ಗ್ಯಾಲಕ್ಸಿ ಎ ಸಿರೀಸ್ ನ ಎಲ್ಲ ಫೋನ್ ಅನ್ನು ಅಮೇಜಾನ್ ಅಲ್ಲಿ ನೋಡಲು ಇಲ್ಲಿ ಕ್ಲಿಕ್ ಮಾಡಿ.

ನಿಮ್ಮ ಬಜೆಟ್ 25 ಸಾವಿರದ ವರೆಗೆ ಇದ್ದರೆ ನೀವು ಸ್ಯಾಮ್ ಸಂಗ್ ಎಂ52 ೫ಜಿ ಕಡೆ ಒಮ್ಮೆ ನೋಡಿ. ಅದರಲ್ಲಿ ಸ್ನ್ಯಾಪ್ ಡ್ರಾಗನ್ 778ಜಿ ಪ್ರಾಸೆಸರ್, ೧೨೦ಹರ್ಟ್ಜ್ ನ ಸೂಪರ್ ಅಮೋಲ್ಡ್ ತೆರೆ, 64ಮೆಗಾ ಪಿಕ್ಸೆಲ್ ಮುಖ್ಯ ಕ್ಯಾಮೆರಾ, 12ಎಂಪಿ 123 ಡಿಗ್ರೀ ವೈಡ್ ಕ್ಯಾಮೆರಾ, 5ಎಂಪಿ ಮ್ಯಾಕ್ರೋ ಕ್ಯಾಮೆರಾ ಹಿಂದೆ, 32ಮೆಗಾ ಪಿಕ್ಸೆಲ್ ಮುಂದೆ ಕ್ಯಾಮೆರಾ, 4ಕೆ ವಿಡಿಯೋ ರೆಕಾರ್ಡಿಂಗ್ ಹಿಂದಿನ ಕ್ಯಾಮೆರಾ ಮೂಲಕ ಎಲ್ಲ  ಇದೆ. ಆದರೆ ಅದರಲ್ಲಿ ಕೂಡಾ 3.5 ಆಡಿಯೋ ಜ್ಯಾಕ್ ಇಲ್ಲ.

ನಿಮ್ಮ ಬಜೆಟ್ 40 ಸಾವಿರದ ಹತ್ತಿರ ಇದ್ದರೆ ಒನ್ ಪ್ಲಸ್ 9ಆರ್ ಟಿ 5ಜಿ ಕೂಡಾ ಒಮ್ಮೆ ನೋಡಿ. 30ಸಾವಿರ ಕ್ಕೆ ಒನ್ ಪ್ಲಸ್ ನೊರ್ಡ್ 2 5ಜಿ ಇದೆ. ನಿಮಗೆ ಕಾಸಿಗೆ ತಕ್ಕ ಕಜ್ಜಾಯ ಸಿಗುವದಂತೂ ಗ್ಯಾರಂಟಿ. 

ಇನ್ನು ಒನ್ ಪ್ಲಸ್ 9 ಪ್ರೋ 5ಜಿ  ಫ್ಲ್ಯಾಗ್ ಶಿಪ್ ಫೋನ್ ಸಹ ಇದೆ. ಇದೇ ಮಾರ್ಚ್ ಅಲ್ಲಿ ಒನ್ ಪ್ಲಸ್ 10 ಪ್ರೋ 5ಜಿ ಕೂಡಾ ಮಾರುಕಟ್ಟೆಗೆ ಬರಲಿದೆ. ಆಗ ಒನ್ ಪ್ಲಸ್ 9 ಪ್ರೋ 5ಜಿ ಬೆಲೆ ಕೂಡಾ ಕಡಿಮೆ ಆದರೂ ಆಶ್ಚರ್ಯ ಇಲ್ಲ.

ಅಕಸ್ಮಾತ್ ನಿಮಗೆ 5ಜಿ ಬೇಡ ಎಂದರೆ 4ಜಿ ಇರೋ ಫೋನ್ ಅನ್ನು ಕಡಿಮೆ ಬೆಲೆಗೆ ಸಹ ಖರೀದಿಸಬಹುದು. ಯಾಕೆಂದರೂ ಇನ್ನೂ ಭಾರತದಕ್ಕೆ ೫ಜಿ ಬಂದಿಲ್ಲ. ಅವುಗಳ ಬೆಲೆಯೂ ಜಾಸ್ತಿ. ಹಾಗೂ ಡ್ಯುಯಲ್ ಬ್ಯಾಂಡ್ ವೈಫೈ ಇರುವ ಫೋನ್ ಖರೀದಿಸಿದರೆ ವೈಫೈ ಅಲ್ಲೇ ಜಾಸ್ತಿ ವೇಗದ ಇಂಟರ್ನೆಟ್ ಪಡೆದುಕೊಳ್ಳಬಹುದು. ಪೋಕೊ ಎಂ೪ ಪ್ರೋ ಇದರ ೪ಜಿ ವರ್ಶನ್ ಕೂಡಾ ಮಾರುಕಟ್ಟೆಗೆ ಬರಲಿದೆ. ಅದು ಅಮೋಲ್ಡ್ ತೆರೆ ಹೊಂದಿರಲಿದೆ.

ನೀವು ಗ್ಯಾಲಕ್ಸಿ ಎ53 5ಜಿ ಫೋನ್ ಬಳಸಿದ್ದೀರಾ? ನಿಮ್ಮ ಅನಿಸಿಕೆ ಏನು?

ಈ ಲೇಖನ ಹೇಗನಿಸಿತು? ಹೇಗೆ ಇನ್ನೂ ಇಂಪ್ರೂವ್ ಮಾಡಬಹುದು? ಕಮೆಂಟ್ ಹಾಕ್ತೀರಾ? ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅನಿಸಿಕೆ ಏನು? ತಿಳಿಸಿ.

Advertisement

blogger
© ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ, ಅನುಮತಿ ಇಲ್ಲದೇ ಲೇಖನಗಳನ್ನು ನಕಲು ಮಾಡುವಂತಿಲ್ಲ.
ವಿಸ್ಮಯನಗರಿ.ಕಾಂ