Slider

ಸ್ಯಾಮ್ಸಂಗ್ ಎಫ್23 5ಜಿ ಸ್ಮಾರ್ಟ್ ಫೋನ್ ಹೇಗಿದೆ?


 ಸ್ಯಾಮ್ಸಂಗ್ ಅವರ ಗ್ಯಾಲಕ್ಸಿ ಎಫ್23 5ಜಿ ಭಾರತದಲ್ಲಿ ಬಿಡುಗಡೆ ಆಗಿದೆ. ಫ್ಲಿಪ್ ಕಾರ್ಟ್ ಅಲ್ಲಿ ಈ ಫೋನ್ ಲಭ್ಯವಿದೆ. ಈ ಬಜೆಟ್ 5ಜಿ ಫೋನ್ ವಿಶಿಷ್ಟತೆ ಏನು? ಬನ್ನಿ ನೋಡೋಣ.

ಚಿತ್ರಕೃಪೆ: ಸ್ಯಾಮ್ಸಂಗ್

{tocify} $title={ವಿಷಯ ಸೂಚಿ}

ಸ್ಯಾಮ್ಸಂಗ್ ಗ್ಯಾಲಕ್ಸಿ ಸ್ಮಾರ್ಟ್ ಫೋನುಗಳು ಹಲವು ಶ್ರೇಣಿಯಲ್ಲಿ ಮುಖ್ಯವಾಗಿ ಇವೆ. ಝೀ, ಎಸ್, ಎಂ ಹಾಗೂ ಎ ಸಿರೀಸ್ ಗಳು. ಝೀ ಮತ್ತು ಎಸ್ ಸಿರೀಸ್ ಗಳು ಅಲ್ಟ್ರಾ ಪ್ರಿಮಿಯಂ ಹಾಗೂ ಪ್ರಿಮಿಯಂ ರೇಂಜ್ ಆದರೆ, ಎ, ಎಫ್ ಹಾಗೂ ಎಂ ಸಿರೀಸ್ ಗಳು ಆರಂಭಿಕ, ಬಜೆಟ್, ಮಧ್ಯಮ ಶ್ರೇಣಿಗಳ ಫೋನ್ ಹೊಂದಿರುತ್ತವೆ.

ಇವು 0*, 1*, 2*, 3*, 4*, 5*, 7* ರೇಂಜ್ ಅಲ್ಲಿ ಲಭ್ಯ ಇದ್ದು, 0* ಆರಂಭಿಕ ಶ್ರೇಣಿ ಆದರೆ 5* / 7* ಇವು ಮಧ್ಯಮ ಶ್ರೇಣಿಯ ಫೋನ್ ಆಗಿವೆ.

ಉದಾಹರಣೆಗೆ ಗ್ಯಾಲಕ್ಸಿ ಎ ಶ್ರೇಣಿಯಲ್ಲಿ A03, A13, A23, A33, A43, A53, A73 ಫೋನ್ ಗಳು ಇರಲಿವೆ. ಇದೇ ಮಾರ್ಚ್ 17 2022ರಂದು A33, A53 ಮತ್ತು A73 ಘೋಷಿಸಲಾಗಿದೆ. ಇವೆಲ್ಲವೂ ಎಪ್ರಿಲ್ 2022ರ ವೇಳೆಗೆ ಮಾರುಕಟ್ಟೆಯಲ್ಲಿ ಸಿಗಲಿದೆ.

ಅಕಸ್ಮಾತ್ ನೀವು ಪ್ರಿಮಿಯಂ ಫೋನ್ ಹುಡುಕುತ್ತಿದ್ದರೆ ಐಫೋನ್ ಸ್ಟೋರ್ ಹಾಗೂ ಗ್ಯಾಲಕ್ಸಿ ಎಸ್ ಸ್ಟೋರ್ ಗೆ ಭೇಟಿ ನೀಡಿ.

ಗ್ಯಾಲಕ್ಸಿ ಎಫ್23 5ಜಿಯ ವಿಶಿಷ್ಟತೆ ಏನು? ಕ್ಯಾಮರಾ ಯಾವುದು? ಪರದೆ ಯಾವುದು? ಬನ್ನಿ ನೋಡೋಣ.

ಪ್ರಾಸೆಸರ್

ಇದೂ ಕೂಡಾ ೫ಜಿ ಫೋನ್ ಆಗಿದ್ದು ಸ್ನ್ಯಾಪ್ ಡ್ರಾಗನ್ 750ಜಿ ಯು 5ಜಿ ಮೊಬೈಲ್ ನೆಟ್ ವರ್ಕ್ ಸಪೋರ್ಟ್ ಇರುವ ಪ್ರಾಸೆಸರ್ ಆಗಿದೆ. ಕ್ರ್ಯೋ 570 ಸಿಪಿಯು ಹಾಗೂ ಎಡ್ರಿನೋ 619 ಜಿಪಿಯು ಇರುವ 8ಎನ್ ಎಂ ಪ್ರಾಸೆಸರ್ ಆಗಿದೆ.

ಬ್ಯಾಟರಿ

5000ಎಂ ಎ ಏಚ್ ನ ಬ್ಯಾಟರಿ ಇದ್ದು 25ವ್ಯಾಟ್ ಫಾಸ್ಟ್ ಚಾರ್ಜ್ ಸೌಲಭ್ಯ ಇದೆ. ಟೈಪ್-ಸಿ ಪೋರ್ಟ್ ಇದು ಚಾರ್ಜಿಂಗ್ ಗೆ ಬಳಸುತ್ತದೆ.

ಪರದೆ


6.6 ಇಂಚಿನ ಫುಲ್ ಎಚ್ಡಿ+ (2408 * 1080) ರೆಸೊಲ್ಯೂಶನ್ 400ಪಿಪಿಐ ನ 120 ಹರ್ಟ್ಜ್ ನ 16ಮಿಲಿಯನ್ ಬಣ್ಣಗಳ ಬೆಂಬಲ ಇರುವ ಟಿಎಫ್ಟಿ ಪರದೆ ಹೊಂದಿದೆ.

ಈ ಫೋನ್ ಪರದೆಯ ಸುರಕ್ಷತೆಗೆ ಗೋರಿಲ್ಲಾ ಗ್ಲಾಸ್ 5 ಹೊಂದಿದೆ.

ಡಿಸ್ಪ್ಲೆ ದೊಡ್ಡದಾಗಿದ್ದರೂ ಸುತ್ತ ಕಪ್ಪು ಪಟ್ಟಿ ಕೂಡಾ ಜಾಸ್ತಿ ಇದೆ. ಸೂಪರ್ ಅಮೋಲ್ಡ್ ತರಹ ಈ ಪರದೆ ವರ್ಣರಂಜಿತವಾಗಿಲ್ಲ.

ಕ್ಯಾಮೆರಾ


ಹಿಂದೆ 50ಎಂಪಿಯ ಎಫ್/1.8 ಮುಖ್ಯ ಕ್ಯಾಮರಾ ಹಾಗೂ 8ಮೆಗಾ ಪಿಕ್ಸೆಲ್ ನ ವೈಡ್ ಎಂಗಲ್ ಎಫ್/2.2 ಕ್ಯಾಮೆರಾ, 2ಎಂಪಿ ಮ್ಯಾಕ್ರೋ ಎಫ್/2.4 ಕ್ಯಾಮೆರಾ ಗಳಿವೆ.

ಆಪ್ಟಿಕಲ್ ಸ್ಥಿರೀಕರಣ ಇಲ್ಲ. ಒಟ್ಟಿನಲ್ಲಿ ಕ್ಯಾಮೆರಾ ಚೆನ್ನಾಗಿದೆ ಎನ್ನಬಹುದು.

ಹಿಂಭಾಗದ ಕ್ಯಾಮೆರಾದಿಂದ 4ಕೆ 30ಪಿ ವಿಡಿಯೋ ರೆಕಾರ್ಡಿಂಗ್ ಸಾಧ್ಯ.

ಮುಂದೆ 8ಮೆಗಾ ಪಿಕ್ಸೆಲ್ ನ ಸೆಲ್ಫಿ ಕ್ಯಾಮೆರಾ ಇದೆ. ಸ್ವಲ್ಪ ಸೆಲ್ಫಿ ಕ್ಯಾಮೆರಾ ಜಾಸ್ತಿ ಮೆಗಾಪಿಕ್ಸೆಲ್ ಇದ್ದರೆ ಒಳ್ಳೆಯದಿತ್ತು.

ಟೆಲೆಫೋಟೋ ಲೆನ್ಸ್ ಇಲ್ಲ. ಹಾಗೂ ಫುಲ್ ಎಚ್ಡಿ ೬೦ಪಿ ವಿಡಿಯೋ ಚಿತ್ರಿಕರಣ ಆಗದು. ಇವೆರಡು ಮೈನಸ್ ಪಾಯಿಂಟುಗಳು.

ಬಣ್ಣಗಳು

ತಿಳಿ ನೀಲಿ ಹಾಗೂ ಅಚ್ಚ ಹಸಿರು ಬಣ್ಣಗಳಲ್ಲಿ ಲಭ್ಯವಿರಲಿದೆ. 

ಸೆನ್ಸರ್ ಗಳು

ಸೈಡ್ ಫಿಂಗರ್ ಫ್ರಿಂಟ್ ಸೆನ್ಸರ್ ಇದೆ. ಗೈರೋ, ಜಿಯೋಮೆಗ್ನೆಟಿಕ್,ವರ್ಚುವಲ್  ಪ್ರೊಕ್ಸಿಮಿಟಿ, ಎಕ್ಸೆಲೊರೊಮೀಟರ್, ವರ್ಚುವಲ್ ಬೆಳಕಿನ ಸೆನ್ಸರ್ ಹೆಚ್ಚು ಕಡಿಮೆ ಎಲ್ಲ ಸಾಮಾನ್ಯ ಸೆನ್ಸರ್ ಇದರಲ್ಲಿದೆ.

ಸಂಪರ್ಕ

ಎನ್ ಎಫ್ ಸಿ ಇದೆ. 3.5 ಆಡಿಯೋ ಜ್ಯಾಕ್ ಈ ಫೋನ್ ಅಲ್ಲಿಇದೆ. ಡ್ಯುಯಲ್ ಬ್ಯಾಂಡ್ ವೈಫೈ ಇದೆ. ಜಿಪಿ ಎಸ್ ಇದೆ.

ಎರಡು 5ಜಿ ಸಿಮ್  ಸಪೋರ್ಟ್ ಇದೆ. ೫ಜಿ / ೪ಜಿ / ೩ಜಿ/ ೨ಜಿ ಎಲ್ಲ ಸಪೋರ್ಟ್ ಇದೆ.  ಬ್ಲ್ಯೂಟೂತ್ 5.0 ಇದೆ.

ಸ್ಟೋರೇಜ್ ಮತ್ತು ಮೆಮರಿ

1 ಟೆರ್ರಾ ಬೈಟ್ ವರೆಗಿನ ಮೈಕ್ರೋ ಎಸ್ ಡಿ ಕಾರ್ಡ್ ಅನ್ನು ಈ ಫೋನ್ ಜೊತೆ ಬಳಸಬಹುದು.

4ಜಿಬಿ + 128ಜಿಬಿ, 6ಜಿಬಿ + 128ಜಿಬಿ ವರ್ಶನ್ ಗಳಿವೆ.

ಆಕಾರ

198 ಗ್ರಾಂ ತೂಕದ ಈ ಫೋನ್ 165.5ಮಿಲಿ ಮೀ ಎತ್ತರ, 77ಮಿಮಿ ಅಗಲ, 8.4ಮಿಮಿ ದಪ್ಪ ಇದೆ.

ಸಾಫ್ಟವೇರ್

ಅಂಡ್ರಾಯಿಡ್ 12 ಆಧಾರಿತ ಒನ್ ಯುಐ ಆಪರೇಟಿಂಗ್ ಸಿಸ್ಟೆಮ್ ಇದೆ. 

 ಸಾಧಾರಣ ಟಿಎಫ್ಟಿ ಸ್ಕ್ರೀನ್, ವೇಗದ ಪ್ರಾಸೆಸರ್, ಉತ್ತಮ ಕ್ಯಾಮೆರಾ, ಸಾಧಾರಣ ಸೆಲ್ಫಿ ಕ್ಯಾಮೆರಾ, ಜಾಸ್ತಿ ಮೆಮರಿ, ಎಲ್ಲ ರೀತಿಯ ಸೆನ್ಸರ್ ಗಳು ಲಭ್ಯವಿದೆ.  ನೆನಪಿಡಿ ಇದು ಬಜೆಟ್ ಶ್ರೇಣಿಯ ಫೋನ್ ಆಗಿದೆ. 

ಲಾಭಗಳು

  • ಉತ್ತಮ ಹಿಂದಿನ ಕ್ಯಾಮೆರಾ. 
  • ಉತ್ತಮ ಪರದೆ - ೧೨೦ಹರ್ಟ್ಜ್ ಟಿಎಫ್ಟಿ. ಆದರೆ ಇದು ಅಮೋಲ್ಡ್ ಪರದೆಯಷ್ಟು ಉತ್ತಮ ಅಲ್ಲ.
  • ೩.೫ ಆಡಿಯೋ ಜ್ಯಾಕ್ ಇದೆ.
  • ದೊಡ್ಡ ೫೦೦೦ ಎಂಎ ಎಚ್ ಬ್ಯಾಟರಿ
  • ವೇಗದ ಪ್ರಾಸೆಸರ್
  • ೫ಜಿ ಸೌಲಭ್ಯ
  • ಎಲ್ಲ ಸೆನ್ಸರ್ ಗಳು ಇವೆ
  • ಎಸ್ ಡಿ ಕಾರ್ಡ್ ಸಹ ಬಳಸಬಹುದು
  • ಫಾಸ್ಟ್ ಚಾರ್ಜಿಂಗ್ ಇದೆ. 
  • ೪ಕೆ ವಿಡಿಯೋ ರೆಕಾರ್ಡಿಂಗ್ ಸಾಧ್ಯ.

ಕೊರತೆಗಳು

  • ಸೆಲ್ಫಿ ಕ್ಯಾಮೆರಾ ಕೇವಲ 8 ಮೆಗಾ ಪಿಕ್ಸೆಲ್ ಮಾತ್ರ
  • ಆಪ್ಟಿಕಲ್ ಸ್ಟೆಬಿಲೈಜೇಶನ್ ಇಲ್ಲ.
  • ಟೆಲಿಫೋಟೋ ಕ್ಯಾಮೆರಾ ಇಲ್ಲ.
  • ೬೦ಪಿ ವಿಡಿಯೋ ರೆಕಾರ್ಡಿಂಗ್ ಫುಲ್ ಎಚ್ಡಿ ಅಲ್ಲಿ ಅಥವಾ ೪ಕೆ ಅಲ್ಲಿ ಆಗದು.
  • ೮ಕೆ ವಿಡಿಯೋ ರೆಕಾರ್ಡಿಂಗ್ ಸಾಧ್ಯ ಇಲ್ಲ.
  • ಪರದೆ ಎಚ್ಡಿಆರ್ ಬೆಂಬಲ ಇಲ್ಲ.
  • ಪರದೆ ಸೂಪರ್ ಅಮೋಲ್ಡ್ ಅಲ್ಲ.
  • ಜಾರ್ಜರ್ ಫೋನ್ ಜೊತೆ ಬರಲ್ಲ. ಅದನ್ನು ಮತ್ತು ಖರೀದಿಸಬೇಕು.
  • ಕಡಿಮೆ ಬೆಳಕಿನಲ್ಲಿ ಸಾಧಾರಣ ಫೋಟೋಗ್ರಾಫಿ.

ಕೊನೆಯ ಮಾತು

ಒಟ್ಟಿನಲ್ಲಿ ಸ್ಯಾಮ್ಸಂಗ್ ಅವರ ಗ್ಯಾಲಕ್ಸಿ ಎಫ್23 5ಜಿ ಸ್ಮಾರ್ಟ್ ಫೋನ್ ಹಣಕ್ಕೆ ತಕ್ಕ ಮೌಲ್ಯ ನೀಡುವ ಬಜೆಟ್ ಶ್ರೇಣಿಯ ಫೋನ್ ಎನ್ನ ಬಹುದು. ನಿಮ್ಮ ಬಜೆಟ್ 16-17 ಸಾವಿರದ ಇದ್ದರೆ ಈ ಫೋನ್ ಒಕೆ. ಆದರೆ ಚಾರ್ಜರ್ ಅಥವಾ ಇಯರ್ ಫೋನ್ ಅನ್ನು ಪ್ರತ್ಯೇಕವಾಗಿ ಖರೀದಿ ಮಾಡಬೇಕು. ಸೆಲ್ಫಿ ಕ್ಯಾಮೆರಾ ಬರಿ 8ಮೆಗಾ ಪಿಕ್ಸೆಲ್. ಪರದೆ ಅಮೋಲ್ಡ್ ಅಲ್ಲ. ಇವು ದೊಡ್ಡ ಕೊರತೆ.

ಐಕ್ಯೂ ಝೀ 6 6ಜಿ, ರಿಯಲ್ ಮಿ ನಾರ್ಝೋ ೫೦, ರೆಡ್ ಮಿ ನೋಟ್ ೧೧ಟಿ 5ಜಿ ಫೋನ್ ಗಳು ಕೂಡಾ ಇದೇ ಬಜೆಟ್ ಅಲ್ಲಿದೆ. ಚಾರ್ಜರ್ ಪ್ರತ್ಯೇಕವಾಗಿ ಖರೀದಿಸಬೇಕಿಲ್ಲ. ಸೆಲ್ಫಿ ಕ್ಯಾಮೆರಾ ಹೆಚ್ಚಿನ ಮೆಗಾ ಪಿಕ್ಸೆಲ್ ಇರುತ್ತೆ. ಅವನ್ನೂ ಒಮ್ಮೆ ನೋಡಿ ಆಮೇಲೆ ನಿರ್ಧರಿಸಿ.

ನಿಮ್ಮ ಬಜೆಟ್ 25 ಸಾವಿರದ ವರೆಗೆ ಇದ್ದರೆ ನೀವು ಸ್ಯಾಮ್ ಸಂಗ್ ಎಂ52 ೫ಜಿ ಕಡೆ ಒಮ್ಮೆ ನೋಡಿ. ಅದರಲ್ಲಿ ಸ್ನ್ಯಾಪ್ ಡ್ರಾಗನ್ 778ಜಿ ಪ್ರಾಸೆಸರ್, ೧೨೦ಹರ್ಟ್ಜ್ ನ ಸೂಪರ್ ಅಮೋಲ್ಡ್ ತೆರೆ, 64ಮೆಗಾ ಪಿಕ್ಸೆಲ್ ಮುಖ್ಯ ಕ್ಯಾಮೆರಾ, 12ಎಂಪಿ 123 ಡಿಗ್ರೀ ವೈಡ್ ಕ್ಯಾಮೆರಾ, 5ಎಂಪಿ ಮ್ಯಾಕ್ರೋ ಕ್ಯಾಮೆರಾ ಹಿಂದೆ, 32ಮೆಗಾ ಪಿಕ್ಸೆಲ್ ಮುಂದೆ ಕ್ಯಾಮೆರಾ, 4ಕೆ ವಿಡಿಯೋ ರೆಕಾರ್ಡಿಂಗ್ ಹಿಂದಿನ ಕ್ಯಾಮೆರಾ ಮೂಲಕ ಎಲ್ಲ  ಇದೆ. ಆದರೆ ಅದರಲ್ಲಿ 3.5 ಆಡಿಯೋ ಜ್ಯಾಕ್ ಇಲ್ಲ.

ಗ್ಯಾಲಕ್ಸಿ ಎ ಸಿರೀಸ್ ನ ಎಲ್ಲ ಫೋನ್ ಅನ್ನು ಅಮೇಜಾನ್ ಅಲ್ಲಿ ನೋಡಲು ಇಲ್ಲಿ ಕ್ಲಿಕ್ ಮಾಡಿ.

ನಿಮ್ಮ ಬಜೆಟ್ 40 ಸಾವಿರದ ಹತ್ತಿರ ಇದ್ದರೆ ಒನ್ ಪ್ಲಸ್ 9ಆರ್ ಟಿ 5ಜಿ ಕೂಡಾ ಒಮ್ಮೆ ನೋಡಿ. 30ಸಾವಿರ ಕ್ಕೆ ಒನ್ ಪ್ಲಸ್ ನೊರ್ಡ್ 2 5ಜಿ ಇದೆ. ನಿಮಗೆ ಕಾಸಿಗೆ ತಕ್ಕ ಕಜ್ಜಾಯ ಸಿಗುವದಂತೂ ಗ್ಯಾರಂಟಿ. 

ಇನ್ನು ಒನ್ ಪ್ಲಸ್ 9 ಪ್ರೋ 5ಜಿ  ಫ್ಲ್ಯಾಗ್ ಶಿಪ್ ಫೋನ್ ಸಹ ಇದೆ. ಇದೇ ಮಾರ್ಚ್ ಅಲ್ಲಿ ಒನ್ ಪ್ಲಸ್ 10 ಪ್ರೋ 5ಜಿ ಕೂಡಾ ಮಾರುಕಟ್ಟೆಗೆ ಬರಲಿದೆ. ಆಗ ಒನ್ ಪ್ಲಸ್ 9 ಪ್ರೋ 5ಜಿ ಬೆಲೆ ಕೂಡಾ ಕಡಿಮೆ ಆದರೂ ಆಶ್ಚರ್ಯ ಇಲ್ಲ.

ಅಕಸ್ಮಾತ್ ನಿಮಗೆ 5ಜಿ ಬೇಡ ಎಂದರೆ 4ಜಿ ಇರೋ ಫೋನ್ ಅನ್ನು ಕಡಿಮೆ ಬೆಲೆಗೆ ಸಹ ಖರೀದಿಸಬಹುದು. ಯಾಕೆಂದರೂ ಇನ್ನೂ ಭಾರತದಕ್ಕೆ ೫ಜಿ ಬಂದಿಲ್ಲ. ಅವುಗಳ ಬೆಲೆಯೂ ಜಾಸ್ತಿ. ಹಾಗೂ ಡ್ಯುಯಲ್ ಬ್ಯಾಂಡ್ ವೈಫೈ ಇರುವ ಫೋನ್ ಖರೀದಿಸಿದರೆ ವೈಫೈ ಅಲ್ಲೇ ಜಾಸ್ತಿ ವೇಗದ ಇಂಟರ್ನೆಟ್ ಪಡೆದುಕೊಳ್ಳಬಹುದು. ಪೋಕೊ ಎಂ೪ ಪ್ರೋ ಇದರ ೪ಜಿ ವರ್ಶನ್ ಕೂಡಾ ಮಾರುಕಟ್ಟೆಗೆ ಬರಲಿದೆ. ಅದು ಅಮೋಲ್ಡ್ ತೆರೆ ಹೊಂದಿರಲಿದೆ.

ನೀವು ಗ್ಯಾಲಕ್ಸಿ ಎಫ್23 5ಜಿ ಫೋನ್ ಬಳಸಿದ್ದೀರಾ? ನಿಮ್ಮ ಅನಿಸಿಕೆ ಏನು?

ಈ ಲೇಖನ ಹೇಗನಿಸಿತು? ಹೇಗೆ ಇನ್ನೂ ಇಂಪ್ರೂವ್ ಮಾಡಬಹುದು? ಕಮೆಂಟ್ ಹಾಕ್ತೀರಾ? ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅನಿಸಿಕೆ ಏನು? ತಿಳಿಸಿ.

Advertisement

blogger
© ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ, ಅನುಮತಿ ಇಲ್ಲದೇ ಲೇಖನಗಳನ್ನು ನಕಲು ಮಾಡುವಂತಿಲ್ಲ.
ವಿಸ್ಮಯನಗರಿ.ಕಾಂ