ಅಂತೂ ಒನ್ ಪ್ಲಸ್ 10 ಪ್ರೋ 5ಜಿ ಫ್ಲ್ಯಾಗ್ ಶಿಪ್ ಫೋನ್ ಮಾರ್ಚ್ 31ಕ್ಕೆ ಭಾರತದಲ್ಲಿ ಬಿಡುಗಡೆ ಆಗುವದು ಪಕ್ಕಾ ಆಗಿದೆ. ಅಮೇಜಾನ್ ಅಲ್ಲೂ ಕೂಡಾ ಇದು ಮಾರಾಟವಾಗಲಿದೆ.
ಚಿತ್ರಕೃಪೆ: ಒನ್ ಪ್ಲಸ್
ಜನವರಿಯಲ್ಲಿ ಈ ಫೋನ್ ನ ವಿಶಿಷ್ಟತೆಯನ್ನು ಚೀನಾದಲ್ಲಿ ಬಿಡುಗಡೆ ಆದ ಫೋನ್ ಆಧಾರದ ಮೇಲೆ ಗಣಕಪುರಿಯಲ್ಲಿ ಪ್ರಕಟ ಆಗಿತ್ತು. ಅದನ್ನು ಇಲ್ಲಿ ಒನ್ ಪ್ಲಸ್ 10 ಪ್ರೋ 5ಜಿ ಫೋನ್ ಭಾರತದಲ್ಲಿ ಯಾವಾಗ? ಓದಿ. ಅವೆಲ್ಲ ಹಾಗೆಯೇ ಭಾರತದ ವರ್ಶನ್ ಅಲ್ಲೂ ಇರಲಿದೆ ಎನ್ನಲಾಗಿದೆ.
ಬೆಲೆ ಎಷ್ಟು?
ಬೆಲೆ 67ಸಾವಿರದಿಂದ 72 ಸಾವಿರ ಮೆಮರಿ ಆಧಾರದ ಮೇಲೆ ಇರಲಿದೆ ಎನ್ನಲಾಗಿದೆ. ಏನೆ ಇರಲಿ ಕಂಪನಿ ಇನ್ನೂ ಬೆಲೆಯ ಬಗ್ಗೆ ಮಾತನಾಡಿಲ್ಲ. ಆದರೆ ಒನ್ ಪ್ಲಸ್ 9 ಪ್ರೋ 5ಜಿ ಬೆಲೆ ಕೂಡಾ ಆರಂಭಿಕವಾಗಿ 65 ಸಾವಿರ ಇತ್ತು. ಮಾರ್ಚ್ ೩೧ರ ಬಿಡುಗಡೆ ಸಮಾರಂಭದಲ್ಲಿ ಕಂಪನಿ ಖಚಿತ ಪಡಿಸುವವರೆಗೆ ಕಾದು ನೋಡೋಣ.
ವಿಶಿಷ್ಟತೆ ಏನು?
120ಹರ್ಟ್ಜ್ ಅಮೋಲ್ಡ್ ಹಾಗೂ ಎಲ್ ಟಿ ಪಿ ಓ ತಂತಜ್ಞಾನದ ಜೊತೆಗೆ 6.7 ಇಂಚಿನ ದೊಡ್ಡ ಪರದೆ, ಸ್ನ್ಯಾಪ್ ಡ್ರಾಗನ್ 8 ಜೆನ್ 1 ಚಿಪ್ ಹಾಗೂ 5000ಎಂ ಎ ಎಚ್ ಬ್ಯಾಟರಿ 80ವ್ಯಾಟಿನ್ ಫಾಸ್ಟ್ ಚಾರ್ಚಿಂಗ್ ಇರಲಿದೆ.
ನೂರು ಕೋಟಿ ಬಣ್ಣದಲ್ಲಿ ಚಿತ್ರ ಸೆರೆ ಹಿಡಿಯುವ ಹ್ಯಾಸೆಲ್ ಬ್ಲೇಡ್ 2ನೇ ಪೀಳಿಗೆಯ 48 ಮೆಗಾ ಪಿಕ್ಸೆಲ್ , 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಮತ್ತು 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಗಳಿವೆ. ಮುಂಭಾಗದಲ್ಲಿ 32 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ.
ಒಕ್ಸಿಜನ್ ಒಎಸ್ 12 (ಅಂಡ್ರಾಯಿಡ್ 12 ಆಧಾರಿತ) ಇರಲಿದೆ.
ಚೀನಾದಲ್ಲಿಎರಡು ತಿಂಗಳ ಹಿಂದೆ ಬಿಡುಗಡೆ ಆಗಿದ್ದು ಭಾರತದಲ್ಲೂ ಹೆಚ್ಚು ಕಡಿಮೆ ಅದೇ ವಿಶಿಷ್ಟತೆ ಇರಲಿದೆ ಎನ್ನಲಾಗಿದೆ. ಅದನ್ನು ಇಲ್ಲಿ ಒನ್ ಪ್ಲಸ್ 10 ಪ್ರೋ 5ಜಿ ಫೋನ್ ಭಾರತದಲ್ಲಿ ಯಾವಾಗ? ವಿವರವಾಗಿ ಓದಿ.
ಬಿಡುಗಡೆ ಯಾವಾಗ?
ಮಾರ್ಚ್ 31 2022 ರ ಸಂಜೆ ಭಾರತೀಯ ಕಾಲಮಾನ 7:30ಕ್ಕೆ ಬಿಡುಗಡೆ ಸಮಾರಂಭ ಈ ತಾಣದಲ್ಲಿ ನೋಡಬಹುದು. ಎಪ್ರಿಲ್ 5 ರಂದು ಮಾರಾಟ ಆರಂಭ ಆಗಲಿದೆ ಎಂದು ಅಮೇಜಾನ್ ಅಲ್ಲಿ ಈಗಾಗಲೆ ಘೋಷಿಸಲಾಗಿದೆ.
ಈ ಕೆಳಗೆ ಅದರ ಟ್ರೇಲರ್ ಅನ್ನು ನೋಡಬಹುದು.
ನೀವು ಒನ್ ಪ್ಲಸ್ ಫೋನ್ ಬಳಸಿದ್ದೀರಾ? ನಿಮ್ಮ ಅನುಭವ ಏನು? ನೀವು ಯಾವ ಫೋನ್ ಬ್ರ್ಯಾಂಡ್ ಅಭಿಮಾನಿ? ಕಮೆಂಟ್ ಅಲ್ಲಿ ತಿಳಿಸಿ.
ಈ ಲೇಖನ ಹೇಗನಿಸಿತು? ಹೇಗೆ ಇನ್ನೂ ಇಂಪ್ರೂವ್ ಮಾಡಬಹುದು? ಕಮೆಂಟ್ ಹಾಕ್ತೀರಾ? ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅನಿಸಿಕೆ ಏನು? ತಿಳಿಸಿ.