ಈ ತಿಂಗಳ ಮೊದಲ ವಾರ ಸ್ಯಾಮಸಂಗ್ ಗ್ಯಾಲಕ್ಸಿ ಸೋರ್ಸ್ ಕೋಡ್ ಕದ್ದ ಘಟನೆ ವರದಿ ಆಗಿತ್ತು. ಆ ಹ್ಯಾಕ್ ಮಾಡಿದ್ದ ಗುಂಪಾದ ಲಾಪ್ಸುಸ್$ (Lapsus$) ಅವರೇ ಮೈಕ್ರೋ ಸಾಫ್ಟ್ ನ ಭದ್ರ ಕೋಟೆಗೆ ಕನ್ನ ಹಾಕಿ ಹಲವು ವೆಬ್ ಎಪ್ ಗಳ ಸೋರ್ಸ್ ಕೋಡ್ ಕದ್ದಿದ್ದಾರೆ.
ಈ ಲಾಪ್ಸುಸ್$ ಹ್ಯಾಕರ್ ಗುಂಪು ಮಾರ್ಚ್ 22ರಂದು ತಮ್ಮ ಟೆಲಿಗ್ರಾಂ ಚಾನೆಲ್ ಅಲ್ಲಿ ಅಝ್ಯೂರ್ ಡೆವ್ ಆಪ್ಸ್ ನ ಸ್ಕ್ರೀನ್ ಶಾಟ್ ಹಾಕಿ ಮೈಕ್ರೋಸಾಫ್ಟಿನ ಸೋರ್ಸ್ ಕೋಡ್ ಕದ್ದಿರುವದನ್ನು ಘಂಟಾ ಘೋಷವಾಗಿ ಹೇಳಿದ್ದರು.
ತಕ್ಷಣ ಮೈಕ್ರೊಸಾಫ್ಟ್ ಎತ್ತೆಚ್ಚು ಕೊಂಡು ಹ್ಯಾಕರ್ ಗಳು ಬಳಸುತ್ತಿದ್ದ ಯೂಸರ್ ಐಡಿ ಅನ್ನು ಬ್ಲಾಕ್ ಮಾಡಿ ಹೆಚ್ಚಿನ ಡಾಟಾ ಲೀಕ್ ಆಗುವದನ್ನು ತಡೆದಿದ್ದಾರೆ. ಆದರೆ ಅಷ್ಟರಲ್ಲೇ ಸುಮಾರು 37ಜಿಬಿಯಷ್ಟು ಕೋಡ್ ಹ್ಯಾಕರ್ ಗಳು ಡೌನ್ ಲೋಡ್ ಮಾಡಿ ಆಗಿತ್ತು.
ಇದನ್ನು ಮೈಕ್ರೋ ಸಾಫ್ಟ್ ಮಾರ್ಚ್ 22ರಂದು ಖಚಿತ ಪಡಿಸಿ ಯಾವ ರೀತಿ ಈ ಹ್ಯಾಕರ್ ಗುಂಪು ಮೈಕ್ರೋ ಸಾಫ್ಟ್ ಅಝ್ಯೂರ್ ಡೆವ್ ಆಪ್ಸ್ ಗೆ ಪ್ರವೇಶಿಸಿದರು ಹಾಗೂ ಆ ಗುಂಪು ಯಾವ ಯಾವ ಟೆಕ್ನಿಕ್ ಬಳಸಿ ಹ್ಯಾಕ್ ಮಾಡುತ್ತಾರೆ, ಅದನ್ನು ಹೇಗೆ ತಡೆಯಬಹುದು ಎಂಬುದನ್ನು ಈ ಲೇಖನದಲ್ಲಿ ವಿವರ ವಾಗಿ ಪ್ರಕಟಿಸಿದ್ದಾರೆ.
ಸುಮಾರು 37 ಜಿಬಿ ಗಾತ್ರದ ಈ ಝಿಪ್ ಫೈಲ್ ಅಲ್ಲಿ ಬಿಂಗ್ ಸರ್ಚ್, ಬಿಂಗ್ ಮ್ಯಾಪ್ ಹಾಗೂ ಕೊರ್ಟಾನಾ ಸೇರಿದಂತೆ ಹಲವು ಪ್ರಾಜೆಕ್ಟ್ ಕೋಡ್ ಇದೆ ಎಂದು ಹೇಳಲಾಗಿದೆ.
ಮಲ್ಟಿಫ್ಯಾಕ್ಟರ್ ಅಥೆಂಟಿಕೇಶನ್ ಗೆ ಎಸ್ ಎಂ ಎಸ್ ಬಳಸಿರುವದರಿಂದ ಸೋಶಿಯಲ್ ಇಂಜಿನಿಯರಿಂಗ್ ಹಾಗೂ ಸಿಮ್ ಸ್ವಾಪಿಂಗ್ ಟೆಕ್ನಿಕ್ ಬಳಸಿ ಈ ಹ್ಯಾಕ್ ಮಾಡಿರುವ ಸಾಧ್ಯತೆ ಇದೆ ಎಂದು ಕೂಡಾ ತನ್ನ ವರದಿಯಲ್ಲಿ ಹೇಳಿದೆ.
ಒಟ್ಟಿನಲ್ಲಿ ಇತ್ತೀಚಿನ ತಿಂಗಳಲ್ಲಿ ಲಾಪ್ಸುಸ್$ (Lapsus$) ಹ್ಯಾಕರ್ ಗುಂಪು ತುಂಬಾ ಖತರ್ ನಾಕ್ ಆಗಿದೆ. ಎನ್ವಿಡಿಯಾ, ಸ್ಯಾಮಸಂಗ್, ಯುಬಿಸಾಫ್ಟ್, ಮೈಕ್ರೋಸಾಫ್ಟ್ ಹೀಗೆ ಹಲವು ಕಂಪನಿಗಳ ನೆಟ್ ವರ್ಕ್ ಗೆ ಲಗ್ಗೆ ಹಾಕಿ ಡಾಟಾ ಕದ್ದು ಸಿಂಹ ಸ್ವಪ್ನವಾಗಿದ್ದಾರೆ.
ಇಂದು ಹ್ಯಾಕಿಂಗ್ ಮಾಡುವವರು ತುಂಬಾ ಅಡ್ವಾನ್ಸ್ಡ್ ಆಗಿದ್ದಾರೆ. ಅದಕ್ಕೆ ತಕ್ಕಂತೆ ಕಂಪನಿಗಳು ಸುರಕ್ಷತೆ ಹೆಚ್ಚಿಸ ಬೇಕಾದದ್ದು ಇಂದಿನ ಅಗತ್ಯ. ಸ್ವಲ್ಪ ಏಮಾರಿದರೆ ಡಾಟಾ ಲೀಕ್ ಆಗಿ ವ್ಯಾಪಾರದಲ್ಲಿ ನಷ್ಟ ಆದೀತು. ಅಲ್ವಾ? ಏನಂತೀರಾ?
ಸ್ಯಾಮಸಂಗ್ ಗ್ಯಾಲಕ್ಸಿ ಸೋರ್ಸ್ ಕೋಡ್ ಕದ್ದ ಘಟನೆ ಬಗ್ಗೆ ಕೂಡಾ ಓದಿ.
ಈ ಲೇಖನ ಹೇಗನಿಸಿತು? ಹೇಗೆ ಇನ್ನೂ ಇಂಪ್ರೂವ್ ಮಾಡಬಹುದು? ಕಮೆಂಟ್ ಹಾಕ್ತೀರಾ? ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅನಿಸಿಕೆ ಏನು? ತಿಳಿಸಿ.