Slider

ಭಾಯ್ ಲ್ಯಾಂಗ್ ಎಂಬ ಹಿಂದಿ ಪ್ರೊಗ್ರಾಮಿಂಗ್ ಲ್ಯಾಂಗ್ವೇಜ್

ನೀವು ಸಾಫ್ಟವೇರ್ ಇಂಜಿನಿಯರ್ ಆಗಿದ್ದರೆ ನಿಮಗೆ ಜಾವಾಸ್ಕ್ರಿಪ್ಟ್, ಜಾವಾ, ಸಿ, ಸಿ++, ಸಿ# ಪ್ರೊಗ್ರಾಮಿಂಗ್ ಭಾಷೆ ಬಗ್ಗೆ ಗೊತ್ತಿರಬಹುದು.

ನಿಮಗೆ ಭಾಯ್ ಲ್ಯಾಂಗ್ ಗೊತ್ತಾ? ಬನ್ನಿ ತಿಳಿಯೋಣ.

ಇದೊಂದು ಆಟಿಕೆ ಪ್ರೊಗ್ರಾಮಿಂಗ್ ಭಾಷೆ ಆಗಿದ್ದು ಹಿಂದಿಯ "ಭಾಯ್" ಅಂದ್ರೆ ಅಣ್ಣ ಎಂದರ್ಥದ ಪದ ಈ ಭಾಷೆ ಬಳಸಿ ಪ್ರೊಗ್ರಾಮಿಂಗ್ ಮಾಡುವದಕ್ಕೆ ಅವಕಾಶ ಮಾಡಿ ಕೊಡುತ್ತದೆ. ಇದು ಟೈಪ್ ಸ್ಕ್ರಿಪ್ಟ್ ಭಾಷೆಯನ್ನು ಬಳಸಿ ಡೆವೆಲಪ್ ಮಾಡಲಾಗಿದೆ.

ಈ ಭಾಷೆಯಲ್ಲಿ ಬರೆದ ಕೋಡಿಂಗ್ ತುಂಬಾ ತಮಾಷೆ ಆಗಿರುತ್ತೆ. ಹೇಗೆ ಎಂಬುದನ್ನು ಮುಂದೆ ನೋಡೋಣ.

ಹಲವು ವರ್ಷಗಳ ಹಿಂದೆ ಅಮೇಜಾನ್ ಅಲ್ಲಿ ಕೆಲಸ ಮಾಡುವ ಅನಿಕೇತ್ ಸಿಂಘ್ ಹಾಗೂ ಗ್ರೋವ್ ನಲ್ಲಿ ಕೆಲಸ ಮಾಡುವ ರಿಷಭ್ ತ್ರಿಪಾರ್ಟಿ ಸಾಫ್ಟವೇರ್ ಇಂಜಿನಿಯರ್ ಸ್ನೇಹಿತರು ತಮಾಷೆಗಾಗಿ ತಮ್ಮೊಳಗೆ ಭಾಯ್ ಪದ ಬಳಸಿ ಈ ತರಹ ಕೋಡಿಂಗ್ ಮಾಡಬಹುದು ಎಂದು ಹಾಸ್ಯ ಮಾಡುತ್ತಿದ್ದರು.

ಇತ್ತೀಚೆಗೆ ಅದನ್ನು ಕಾರ್ಯರೂಪಕ್ಕೆ ತಂದರು. ಈ ಭಾಷೆಯನ್ನು ಭಾಯ್ ಲ್ಯಾಂಗ್ ವೆಬ್ ತಾಣದಲ್ಲಿ ಟ್ರೈ ಮಾಡಬಹುದು.

ಈ ಮುಂದಿನ ಕಮಾಂಡ್ ಬಳಸಿ ನಿಮ್ಮ ಲೋಕಲ್ ಮಶೀನ್ ಅಲ್ಲಿ ಇನ್ಸ್ಟಾಲ್ ಮಾಡಿ ಕೋಡಿಂಗ್ ಗೆ ಬಳಸ ಬಹುದು.

npm i -g bhailang

ಪ್ರೊಗ್ರಾಮ್ hi bhai ನಿಂದ ಆರಂಭವಾಗಿ bye bhai ನೊಂದಿಗೆ ಮುಕ್ತಾಯವಾಗುತ್ತದೆ.

ಕೋಡಿಂಗ್ ಅಲ್ಲಿ ತಪ್ಪಾದಾಗ

ಏನಾದ್ರು ತಪ್ಪು ಮಾಡಿದ್ರೆ ಅರೆ ಭಾಯ್ ಭಾಯ್ ಭಾಯ್ > ಕ್ಯಾ ಕರ್ ರಹಾ ಹೈ ತು? ಎಂದು ಸಂದೇಶ ಬರುತ್ತೆ. ಶಾರ್ಕ್ ಟ್ಯಾಂಕ್ ಇಂಡಿಯಾ ನೋಡುಗರಿಗೆ ಅಶ್ನೀರ್ ಗ್ರೋವರ್ ಅವರ "ಅರೆ ಭಾಯ್ ಕ್ಯಾ ಕರ್ ರಹಾ ಹೈ ತು" ಎನ್ನುವದು ಪರಿಚಿತ ಡೈಲಾಗ್. ಅದರಿಂದ ಸ್ಪೂರ್ತಿ ಪಡೆದಂತಿದೆ.

ಎರರ್ ಮೆಸೆಜ್:

❌ Arre Bhai Bhai Bhai !!!
> kya kar rha hai tu??...Unexpected token: "bye bhai", expected : ";"

ಅಕ್ಷರ ಪ್ರಿಂಟ್ ಮಾಡೋದು ಹೇಗೆ?


ಹಾಗೆಯೆ ಏನಾದ್ರು ಪ್ರಿಂಟ್ ಮಾಡಲು bol bhai (ಬೋಲ್ ಭಾಯ್) ಬಳಸಬಹುದು.

ಉದಾ:

bol bhai "ಗಣಕಪುರಿ ತಾಣ - ಇದು ಕಂಪ್ಯೂಟರ್ ಜಗತ್ತು";

ವೇರಿಯೇಬಲ್ ಡಿಕ್ಲೇರ್ ಮಾಡೋದು ಹೇಗೆ?

ಇನ್ನು ವೇರಿಯೇಬಲ್ ಡಿಕ್ಲೇರ್ ಮಾಡಲು  bhai ye hai (ಭಾಯ್ ಯೆ ಹೈ) ಅಂದ್ರೆ ಸಾಕು.

ಉದಾ:

bhai ye hai a = 2;

bhai ye hai a = 3;

ಇಫ್ ಎಲ್ಸ್ ಕಂಡೀಶನ್ ಹೇಗೆ?

ಇನ್ನು ಇಫ್ ಎಲ್ಸ್ ಕಂಡೀಶನ್ ಗೆ agar bhai  - nahi to bhai (ಅಗರ್ ಭಾಯ್ - ನಹಿ ತೋ ಭಾಯ್) ಇದೆ.

ಉದಾ

    agar bhai (b ==1) {

      bol bhai "ಗಣಕಪುರಿ";

    } nahi to bhai (b == 2) {

      bol bhai "ಪದಮಂಜರಿ";

    }

ಲೂಪ್ ಗಳು ಹೇಗೆ?

ಲೂಪ್ ಗಳಿಗೆ jab tak bhai (ಜಬ್ ತಕ್ ಭಾಯ್)  ಇದೆ.

ಉದಾ:

bhai ye hai index = 0;

jab tak bhai (index < 5) {

    bol bhai b;

    b += 1;

}

ಒಟ್ಟಿನಲ್ಲಿ ಈ ಭಾಯ್ ಭಾಷೆ ಸೋಶಿಯಲ್ ಮಿಡಿಯಾದಲ್ಲಿ ಹಲವು ಜೋಕ್ ಗಳನ್ನು ಹುಟ್ಟು ಹಾಕಿದ್ದು ವೈರಲ್ ಆಗಿದೆ. ಇದನ್ನು ಸಿರಿಯಸ್ ಪ್ರೊಗ್ರಾಮಿಂಗ್ ಗೆ ಬಳಸಲು ಆಗದಿರಬಹುದು. ಆದರೆ ಈ ಪರಿಕಲ್ಪನೆಯಲ್ಲಿ ಕ್ರಿಯಾಶೀಲತೆ ಇದೆ ಅಲ್ವಾ? ಏನಂತೀರಾ?

ನಮ್ಮ ಕನ್ನಡದಲ್ಲೂ ಇದೇ ರೀತಿ ಮಾಡಿದ್ರೆ ಈ ಕೆಳಗಿನ ರೀತಿ ಇರುತ್ತಾ? ಗೊತ್ತಿಲ್ಲ.

ಹೈ ಅಣ್ಣಾ

ಹೇಳು ಅಣ್ಣಾ "ಗಣಕಪುರಿ ತಾಣ - ಇದು ಕಂಪ್ಯೂಟರ್ ಜಗತ್ತು";

ಬೈ ಅಣ್ಣಾ

ಭಾಯ್ ಲ್ಯಾಂಗ್ ಬಗ್ಗೆ ಏನಂತಾ ಅನಿಸಿತು ನಿಮಗೆ? ಕಮೆಂಟ್ ಮೂಲಕ ತಿಳಿಸಿ. ಈ ಭಾಷೆಯನ್ನು ಭಾಯ್ ಲ್ಯಾಂಗ್ ವೆಬ್ ತಾಣದಲ್ಲಿ ನೀವೇ ಟ್ರೈ ಮಾಡಬಹುದು.

ಈ ಲೇಖನ ಹೇಗನಿಸಿತು? ಹೇಗೆ ಇನ್ನೂ ಇಂಪ್ರೂವ್ ಮಾಡಬಹುದು? ಕಮೆಂಟ್ ಹಾಕ್ತೀರಾ? ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅನಿಸಿಕೆ ಏನು? ತಿಳಿಸಿ.

Advertisement

blogger
© ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ, ಅನುಮತಿ ಇಲ್ಲದೇ ಲೇಖನಗಳನ್ನು ನಕಲು ಮಾಡುವಂತಿಲ್ಲ.
ವಿಸ್ಮಯನಗರಿ.ಕಾಂ