Slider

ಒಳ್ಳೆಯ ವೇಗದ ಲ್ಯಾಪ್ ಟಾಪ್ ಆರಿಸೋಕೆ 15 ಸೂತ್ರಗಳು

ಲ್ಯಾಪ್ ಟಾಪ್ ತಗೊಳ್ಳೋ ಮುನ್ನ ಕೆಲವು ವಿಚಾರಗಳನ್ನು ಗಮನದಲ್ಲಿಟ್ಟು ಕೊಂಡರೆ ಒಳ್ಳೆಯ ಲ್ಯಾಪ್ ಟಾಪ್ ನಿಮ್ಮದಾಗುವದು. ಯಾವುದೇ ಕಾರಣಕ್ಕೂ ಮಾರ್ಕೆಟಿಂಗ್ ತಂತ್ರಗಳಿಗೆ ಕಿವಿಗೊಡದೇ ಆರಿಸಿ.

ಬನ್ನಿ ಯಾವ ಯಾವ  ಸೂತ್ರಗಳನ್ನು ನೆನಪಿಡಬೇಕು ನೋಡೋಣ.

ಚಿತ್ರ ಕೃಪೆ: XPS ಇಂದ Unsplash

{tocify} $title={ವಿಷಯ ಸೂಚಿ}

ಸೂತ್ರ ೧: ಸೇಲ್ಸ್ ಮನ್ / ಅಂಗಡಿಯವರ ಮಾತು ಕೇಳಬೇಡಿ


ಚಿತ್ರ ಕೃಪೆ:  Hassan OUAJBIR ಇಂದ Unsplash

ಯಾವುದೇ ಕಾರಣಕ್ಕೂ ಬರೀ ಸೇಲ್ಸ್ ಮನ್ ಮಾತು ಕೇಳಿ ಲ್ಯಾಪ್ ಟಾಪ್ ಖರೀದಿ ಮಾಡಬೇಡಿ. ನಿಮ್ಮ ಸ್ವತಂತ್ರ ಅನಾಲಿಸಿಸ್ (ವಿಶ್ಲೇಷಣೆ) ಮಾಡಿ. ಯಾಕೆಂದರೆ ಸೇಲ್ಸ್ ಮನ್ ಗಳಿಗೆ ಯಾರೂ ತಗೊಳ್ಳದ, ಉಳಿದ ಹಳೇ ಸ್ಟಾಕ್ ನ ಲ್ಯಾಪ್ ಟಾಪ್ ಮಾಡೆಲ್ ಗಳನ್ನು ಖಾಲಿ ಮಾಡುವ ಗುರಿ ಇರುತ್ತದೆ.

ನಿಮ್ಮ ಗುರಿ ಬೇರೆ, ಉತ್ತಮ ಬೆಲೆಗೆ ಉತ್ತಮ ಲ್ಯಾಪ್ ಟಾಪ್ ಖರೀದಿ ಮಾಡುವದು!

ಅಷ್ಟೇ ಅಲ್ಲ ನಿಮ್ಮ ಅವಶ್ಯಕತೆ ಏನೆಂಬುದು ನಿಮಗೆ ಗೊತ್ತು. ಆ ಮಾಹಿತಿ ಯಾವ ಲ್ಯಾಪ್ ಟಾಪ್ ಸೂಕ್ತ ಅನ್ನುವ ನಿರ್ಧಾರ ಕೈಗೊಳ್ಳಲು ಅನುಕೂಲ.

ಸೂತ್ರ ೨: ಎಸ್ ಎಸ್ ಡಿ ಮೆಮರಿ ಇರಲಿ ಹಾರ್ಡ್ ಡಿಸ್ಕ್ ಬೇಡ

ಚಿತ್ರ ಕೃಪೆ: manseok Kim ಇಂದ Pixabay

ಎಸ್ ಎಸ್ ಡಿ (SSD) ಡ್ರೈವ್ ಇರದ ಕಂಪ್ಯೂಟರ್ ಕೊಳ್ಳಬೇಡಿ. ಬರೀ ಹಾರ್ಡ್ ಡಿಸ್ಕ್ (HDD) ಇರುವ ಲ್ಯಾಪ್ ಟಾಪ್ ಗಳು ತುಂಬಾ ಸ್ಲೋ ಇರುತ್ತವೆ. 

ಎಸ್. ಎಸ್. ಡಿ ಮೆಮರಿ ಕನಿಷ್ಟ ೨೫೬ ಗಿಗಾ ಬೈಟ್ ಮೆಮರಿ ಇರಲೇ ಬೇಕು. ನೀವು ವಿಡಿಯೋ ಏಡಿಟಿಂಗ್ / ಗೇಮಿಂಗ್ ಮಾಡುವವರಾದರೆ ಕನಿಷ್ಟ ೧ ಟೆರ್ರಾ ಬೈಟ್ ಇರಲಿ.

ಎಸ್ ಎಸ್ ಡಿ ಡ್ರೈವ್ ವೇಗ ಯಾವಾಗಲೂ ಜಾಸ್ತಿ. ಇದು ಇರುವ ಕಂಪ್ಯೂಟರ್ ಬೇಗ ಬೂಟ್ ಆಗುತ್ತೆ. ಅಷ್ಟೇ ಅಲ್ಲ ಎಪ್ ಗಳು ಫಾಸ್ಟ್ ಆಗಿ ಲೋಡ್ ಆಗುತ್ತವೆ. 

ಎಸ್ ಎಸ್ ಡಿ ಹಾಗೂ ಹಾರ್ಡ್ ಡಿಸ್ಕ್ ಎರಡೂ ಇದ್ದರೂ ಸರಿ. ಕನಿಷ್ಟ ೨೫೬ ಗಿಗಾ ಬೈಟ್ ಎಸ್ ಎಸ್ ಡಿ (SSD) ಮೆಮರಿ ಇರಲೇ ಬೇಕು. ಆದರೆ ನೆನಪಿಡಿ ಪೂರ್ತಿ ಎಸ್ ಎಸ್ ಡಿ ಇದ್ದರೆ ಯಾವಾಗಲೂ ಉತ್ತಮ.

ಸೂತ್ರ ೩: ಹೆಚ್ಚಿನ ರಾಮ್ ಮೆಮರಿ ಇರಲಿ

ಇಂದು ಕನಿಷ್ಟ ೮ಜಿಬಿ ರಾಮ್ (RAM) ಮೆಮರಿ ಇರಲೇ ಬೇಕು. ವಿಡಿಯೋ ಎಡಿಟಿಂಗ್ ಮಾಡಲು ಕಡಿಮೆ ಎಂದರೂ ೧೬ಜಿಬಿ ಇರಲೇ ಬೇಕು. ೩೨ ಅಥವಾ ೬೪ಜಿಬಿ ಇದ್ದರೆ ಉತ್ತಮ.

ನೆನಪಿಡಿ ಜಾಸ್ತಿ ರಾಮ್ ಮೆಮರಿ ಇದ್ದಷ್ಟು ಒಳ್ಳೆಯದು. 

ಯಾವ ಕಾರಣಕ್ಕೂ ಗೇಮಿಂಗ್ ಅಥವಾ ತುಂಬಾ ಪ್ರೊಸೆಸಿಂಗ್ ಅಥವಾ ವಿಡಿಯೋ/ಆಡಿಯೋ ಎಡಿಟಿಂಗ್ ಅಥವಾ ಕೋಡಿಂಗ್ ಅಥವಾ ೩ಡಿ ರೆಂಡರಿಂಗ್ ಮಾಡಲು ೧೬ ಜಿಬಿ ಗಿಂತ ಕಡಿಮೆಯ ಲ್ಯಾಪ್ ಟಾಪ್ ಕೊಳ್ಳದಿರಿ. ಅಕಸ್ಮಾತ್ ನಿಮ್ಮ ಬಜೆಟ್ ಅಲ್ಲಿ ಇಲ್ಲದಿದ್ದರೆ ಲ್ಯಾಪ್ ಟಾಪ್ ಬದಲಾಗಿ ಡೆಸ್ಕ್ ಟಾಪ್ ಖರೀದಿಸಿ.

ಸೂತ್ರ ೪: ಉತ್ತಮ ಹೈ ರಿಸಾಲ್ಯೂಶನ್ ಪರದೆ ಇರಲಿ

ಕನಿಷ್ಟ ಫುಲ್ ಎಚ್ ಡಿ ರಿಸೊಲ್ಯೂಶನ್ ಇದ್ದರೆ ಒಳ್ಳೆಯದು. ಕ್ಯೂ ಎಚ್ ಡಿ (೨೫೬೦ * ೧೪೪೦) ಅಥವಾ ೪ಕೆ (೩೮೪೦ * ೨೧೬೦) ಇದ್ದರೆ ಅತ್ಯುತ್ತಮ.

ವಿಡಿಯೋ ಅಥವಾ ಫೋಟೋ ಎಡಿಟಿಂಗ್ ಮಾಡುವವರಾದರೆ ಹೆಚ್ಚಿನ ಕಲರ್ ಗ್ಯಾಮಟ್ ಸಪೋರ್ಟ್ (ಡಿಸಿಐ ಪಿ೩ - DCI P3) ಇರುವ ಪರದೆ ಬೇಕು. ಕಲರ್ ಗ್ರೇಡಿಂಗ್ ಸಂದರ್ಭದಲ್ಲಿ ಇದು ಸಹಾಯಕ.

ಇಲ್ಲಾಂದ್ರೆ ಬೇರೆ ಮಾನಿಟರ್ ಬಳಸಿ ಕೂಡಾ ಕಲರ್ ಗ್ರೇಡಿಂಗ್ ಮಾಡಬಹುದು. ಅದಕ್ಕೆ ಪ್ಲ್ಯಾನ್ ಮಾಡಿ.

ಸೂತ್ರ ೫: ಉತ್ತಮ ಸಂಪರ್ಕ ಪೋರ್ಟ್ ಇರಲಿ

ಚಿತ್ರ ಕೃಪೆ: juliangvm ಇಂದ Pixabay 

ಡ್ಯುಯಲ್ ಬ್ಯಾಂಡ್ ವೈಫೈ ಅಂದ್ರೆ ೫ಗಿಗಾ ಹರ್ಟ್ಜ್ ಬ್ಯಾಂಡ್ ವಿಡ್ತ್ ಇರುವ ವೈಫೈ ಇರಬೇಕು. ಸಿಂಗಲ್ ಬ್ಯಾಂಡ್ ೨.೪ಗಿಗಾ ಹರ್ಟ್ಜ್ ಬೇಡ.

ಬ್ಲ್ಯೂ ಟೂತ್, ಯು ಎಸ್ ಬಿ 3.0 ( ಕನಿಷ್ಟ ೨ ಪೋರ್ಟ್), ಯು. ಎಸ್. ಬಿ - ಸಿ ಪೋರ್ಟ್, ೩,೫ ಆಡಿಯೋ ಜ್ಯಾಕ್, ಎಚ್ ಡಿ ಎಂ ಐ ಪೋರ್ಟ್ ಸಹ ಇರಬೇಕು.

ಸೂತ್ರ ೬: ವೇಗದ ಪ್ರಾಸೆಸರ್ ಇರಲಿ

ಚಿತ್ರ ಕೃಪೆ: Bruno /Germany ಇಂದ  Pixabay 

ಗೇಮಿಂಗ್, ವಿಡಿಯೋ ಎಡಿಟಿಂಗ್ ಅಥವಾ ಫೋಟೋ ಪ್ರಾಸೆಸಿಂಗ್ ಮಾಡಲು ಎಂಟು ಕೋರ್ ಪ್ರಾಸೆಸರ್ ಇರಲೇ ಬೇಕು. ಇಂಟೆಲ್ ಐ-9 ಅಥವಾ ಎ ಎಂ ಡಿ ರೈಜೆನ್ (7 / 9) ಇದ್ದರೆ ಉತ್ತಮ. 

ಇಲ್ಲಾಂದ್ರೂ ಕನಿಷ್ಟ ನಾಲ್ಕು ಕೋರ್ ಆದ್ರೂ ಇರಲಿ. ಅದು ನಿಮ್ಮ ಲ್ಯಾಪ್ ಟಾಪ್ ಜಾಸ್ತಿ ವರ್ಷ ಉಪಯುಕ್ತ ಆಗಿರುವಂತೆ ನೋಡಿ ಕೊಳ್ಳುತ್ತೆ.

ಸೂತ್ರ ೭: ಪ್ರತ್ಯೇಕ ಶಕ್ತಿಶಾಲಿ ಜಿಪಿಯು ಇರಲಿ

ಚಿತ್ರ ಕೃಪೆ: Jacek Abramowicz ಇಂದ Pixabay 

ಎಕ್ಸ್ಟರ್ನಲ್ ಜಿಪಿಯು ಇದ್ದರೆ ಉತ್ತಮ. ಗೇಮಿಂಗ್, ವಿಡಿಯೋ / ಫೋಟೋ ಎಡಿಟಿಂಗ್ ಮಾಡಲು ಇಂಟೆಲ್ ಐರಿಸ್ ಎಕ್ಸ್ ಇ ಸಿರೀಸ್ ಅಥವಾ ಎನ್ವಿಡಿಯಾ ೩*** ಸಿರೀಸ್ ಇದ್ದರೆ ಉತ್ತಮ.

ಸೂತ್ರ ೮: ಉತ್ತಮ ಬ್ರಾಂಡ್ ನದ್ದು ಖರೀದಿಸಿ

ಯಾವಾಗಲೂ ಉತ್ತಮ ಬ್ರ್ಯಾಂಡ್ ಲ್ಯಾಪ್ ಟಾಪ್ ಖರೀದಿಸಿ. ಉತ್ತಮ ಬ್ರ್ಯಾಂಡ್ ನಿಮಗೆ ಗುಣಮಟ್ಟದ ಭರವಸೆಯ ಜೊತೆ ಉತ್ತಮ ಸಪೋರ್ಟ್ ನೀಡುತ್ತದೆ.

ಈ ಕೆಳಗಿನ ಎಲ್ಲಾ ಲ್ಯಾಪ್ ಟಾಪ್ ಬ್ರಾಂಡ್ ಗಳು ಉತ್ತಮ ಎನ್ನುವದು ನನ್ನ ಅನಿಸಿಕೆ.

 • ಡೆಲ್ (DELL)
 • ಎಚ್ ಪಿ (HP)
 • ಎಪಲ್ (Apple)
 • ಲಿನೊವೋ (Lenovo)
 • ಎಸುಸ್ (Asus)
 • ಏಸರ್ (Acer)
 • ಮೈಕ್ರೋಸಾಫ್ಟ್ (Microsoft)
 • ಎಲ್ಜಿ (LG)

ಸೂತ್ರ ೯: ವಿಂಡೋಸ್ ೧೧ ಸಪೋರ್ಟ್ ಇರಲಿ

ಚಿತ್ರ ಕೃಪೆ: Holger Langmaier ಇಂದ Pixabay 

ಈ ೨೦೨೨ರಲ್ಲಿ ವಿಂಡೋಸ್ ೧೧ ಸಪೋರ್ಟ್ ಇಲ್ಲದ ವಿಂಡೋಸ್ ಲ್ಯಾಪ್ ಟಾಪ್ ಖರೀದಿಸಬೇಡಿ. ವಿಂಡೋಸ್ ೧೦ ಆಪರೇಟಿಂಗ್ ಸಿಸ್ಟೆಮ್ ೬ ವರ್ಷ ಹಳೆಯದು ೨೦೨೫ಕ್ಕೆ ಸಪೋರ್ಟ್ ಮುಗಿಯಲಿದೆ. ಹಾಗೂ ವಿಂಡೋಸ್ ೧೧ ಹೊಸತಾಗಿದ್ದು ಹಲವು ಇಂಪ್ರೂವ್ ಮೆಂಟ್ಸ್ ಇದೆ.

ಸೂತ್ರ ೧೦: ಲ್ಯಾಪ್ ಟಾಪ್ ಹೊದಿಕೆ ಗಟ್ಟಿ ಆಗಿರಲಿ

ಲ್ಯಾಪ್ ಟಾಪ್ ಕವರ್(ಹೊದಿಕೆ) ಲೋಹದ್ದಾದರೆ ಉತ್ತಮ. ಅಲ್ಯುಮಿನಿಯಂ, ಮ್ಯಾಗ್ನಿಸಿಯಂ ಮಿಶ್ರ ಲೋಹಗಳ ಹೊದಿಕೆ ಇರುವ ಲ್ಯಾಪ್ ಟಾಪ್ ಸಿಗುತ್ತಿದ್ದು ಅವು ಬಾಳಿಕೆ ಬರುತ್ತವೆ.

ಕಾರ್ಬನ್ ಫೈಬರ್ ಕೂಡಾ ಪರವಾಗಿಲ್ಲ. ಆದರೆ ಪ್ಲಾಸ್ಟಿಕ್ ಹೊದಿಕೆ ನೀವು ಬಜೆಟ್ ಅಲ್ಲಿದ್ದರೆ ಖರೀದಿಸಿ.

ಎಷ್ಟೋ ಬಾರಿ ಲ್ಯಾಪ್ ಟಾಪ್ ನೀವು ಬಯಸಿದ ಕೆಲಸವನ್ನು ವೇಗವಾಗಿ ಮಾಡ ಬಲ್ಲುದೋ ಅನ್ನುವದೇ ಮುಖ್ಯ. ಕಾಸ್ಮೆಟಿಕ್ ವಿಚಾರದಲ್ಲಿ ಖಂಡಿತ ಹೊಂದಿಕೆ ಮಾಡಿ ಕೊಳ್ಳ ಬಹುದು. ಬಾಳಿಕೆ ಬರುವಂತಹ ತೀರಾ ಕಳಪೆ ಅಲ್ಲದ ಹೊದಿಕೆ ಆಗಿದ್ದರೆ ಸಾಕು.

ಸೂತ್ರ ೧೧: ಡೆಸ್ಕ್ ಟಾಪ್

ಈ ಕೆಳಗಿನ ಕೆಲಸಗಳು ತುಂಬಾ ಜಾಸ್ತಿ ಪ್ರಾಸೆಸಿಂಗ್ ಪವರ್ ಬೇಡುತ್ತವೆ.
 • ವಿಡಿಯೋ ಗೇಮಿಂಗ್
 • ಆಡಿಯೋ ಎಡಿಟಿಂಗ್
 • ವಿಡಿಯೋ ಎಡಿಟಿಂಗ್
 • ೩ಡಿ ರೆಂಡರಿಂಗ್ /  ಮೊಡೆಲಿಂಗ್
 • ಕ್ಯಾಡ್ / ಕ್ಯಾಮ್
 • ೩ಡಿ ಎನಿಮೇಶನ್
 • ರಿಯಲ್ ಟೈಮ್ ವಿಡಿಯೋ ಪ್ರಾಸೆಸಿಂಗ್
 • ಸೈಂಟಿಫಿಕ್ ಕ್ಯಾಲ್ಕುಲೇಶನ್

ಇವೆಲ್ಲಕ್ಕೆ ಒಂದು ಲ್ಯಾಪ್ ಟಾಪ್ ಬದಲಾಗಿ ಪಿಸಿ ಡೆಸ್ಕ್ ಟಾಪ್ ಖರೀದಿಸುವದು ಉತ್ತಮ. ಇದರಿಂದ ಹಲವು ಲಾಭಗಳಿವೆ. ಅದೇ ಲ್ಯಾಪ್ ಟಾಪ್ ನ ಬೆಲೆಗೆ ನೀವು ಜಾಸ್ತಿ ಮೆಮರಿ, ಹೆಚ್ಚು ಶಕ್ತಿಶಾಲಿ ಪ್ರಾಸೆಸರ್ / ಜಿಪಿಯು, ಉತ್ತಮ ಪರದೆ ಕೊಳ್ಳಬಹುದು.

ಅಷ್ಟೇ ಅಲ್ಲ ಡೆಸ್ಕ್ ಟಾಪ್ ಅಪ್ ಗ್ರೇಡ್ ಅಥವಾ ರಿಪೇರಿ ಸುಲಭ. ಡೆಸ್ಕ್ ಟಾಪ್ ಕೂಲಿಂಗ್ ಸಹ ಚೆನ್ನಾಗಿರುವದರಿಂದ ಹೆಚ್ಚು ಹೆಚ್ಚು ಪ್ರಾಸೆಸಿಂಗ್ ಮಾಡಬಹುದು.

ನಿಮಗೆ ಪೋರ್ಟಬಿಲಿಟಿ ಅಗತ್ಯ ಇಲ್ಲದಿದ್ದರೆ ಡೆಸ್ಕ್ ಟಾಪ್ ಲ್ಯಾಪ್ ಟಾಪ್ ಗಿಂತಲೂ ಅತ್ಯುತ್ತಮ ಆಯ್ಕೆ.

ಒಮ್ಮೆ ನೀವು ಉತ್ತಮ ಗಳಿಕೆ ಮಾಡಲು ಆರಂಭಿಸಿದ ಮೇಲೆ ಬೇಕಾದರೆ ಒಂದು ಲ್ಯಾಪ್ ಟಾಪ್ ಅನ್ನು ಸಹ ಕೊಳ್ಳಬಹುದು.

ಸೂತ್ರ ೧೨: ಗೇಮಿಂಗ್ ಲ್ಯಾಪ್ ಟಾಪ್

ಚಿತ್ರ ಕೃಪೆ: Hello Lightbulb ಇಂದ Unsplash

ಸಾಮಾನ್ಯವಾಗಿ ಗೇಮಿಂಗ್ ಲ್ಯಾಪ್ ಟಾಪ್ ಹೈ ಸ್ಪೀಡ್ ಅಲ್ಲಿ ರನ್ ಆಗಲು ಡಿಸೈನ್ ಮಾಡಿರುತ್ತಾರೆ. ಸಿಪಿಯು / ಜಿಪಿಯು ಕೂಲಿಂಗ್ ಚೆನ್ನಾಗಿದ್ದು ಹೀಟ್ ಬೇಗ ಕಡಿಮೆ ಆಗುವಂತೆ ವಿನ್ಯಾಸ ಇರುತ್ತದೆ. ಶಕ್ತಿಶಾಲಿ ಜಿಪಿಯು ಇದ್ದು ಇವು ವಿಡಿಯೋ ಎಡಿಟಿಂಗ್ / ಕೋಡಿಂಗ್ ನಂತಹ ಕಾರ್ಯಕ್ಕೂ ಸೂಕ್ತ.

ನಿಮಗೆ ಶಕ್ತಿಶಾಲಿ ಲ್ಯಾಪ್ ಟಾಪ್ ಬೇಕಿದ್ದಲ್ಲಿ ಗೇಮಿಂಗ್ ಲ್ಯಾಪ್ ಟಾಪ್ ಸೂಕ್ತ.

ಸೂತ್ರ ೧೩: ಕ್ರೋಮ್ ಬುಕ್

ಅಕಸ್ಮಾತ್ ಲ್ಯಾಪ್ ಟಾಪ್ ನಿಮಗೆ ಕೇವಲ ಈಮೇಲ್ ಚೆಕ್ ಮಾಡಲು, ಬ್ರೌಸ್ ಮಾಡಲು ಹೀಗೆ ಲೈಟ್ ವೇಟ್ ಕೆಲ್ಸಕ್ಕೆ ಮಾತ್ರ ಬೇಕಿದ್ದರೆ ಕ್ರೋಮ್ ಬುಕ್ ಖರೀದಿಸಬಹುದು. ಅವುಗಳ ಬೆಲೆ ಕಡಿಮೆ. ಆದರೆ ಕೋಡಿಂಗ್ /  ಗೇಮಿಂಗ್ / ವಿಡಿಯೋ ಎಡಿಟಿಂಗ್ ಮುಂತಾದ ಕೆಲಸಗಳಿಗೆ ಅವು ಸೂಕ್ತ ಅಲ್ಲ.

ಸೂತ್ರ ೧೪: ಎಪಲ್ ಮ್ಯಾಕ್ ಬುಕ್

ಚಿತ್ರ ಕೃಪೆ: Mia Baker ಇಂದ Unsplash

ಅಕಸ್ಮಾತ್ ನಿಮ್ಮ ಬಳಿ ವಿಫುಲ ವಾದ ಹಣ ಇದ್ದರೆ ಉತ್ತಮ ಅನುಭವಕ್ಕಾಗಿ ಮ್ಯಾಕ್ ಬುಕ್ ಖರೀದಿಸಿ.

ನೆನಪಿಡಿ ಇವು ವ್ಯಾಲ್ಯೂ ಫಾರ್ ಮನಿ ಲ್ಯಾಪ್ ಟಾಪ್ ಅಲ್ಲ. ಇವು ಪ್ರಿಮಿಯಂ ಲ್ಯಾಪ್ ಟಾಪ್ ಗಳು. ಇವುಗಳ ರಿಪೇರಿ ಮತ್ತು ಮೆಂಟೆನನ್ಸ್ ಜಾಸ್ತಿ.  ಅಪ್ ಗ್ರೇಡ್ ಕೂಡಾ ಕಷ್ಟ. ಹಾರ್ಡ್ ಕೋರ್ ವಿಡಿಯೋ ಗೇಮಿಂಗ್ ಗೆ ಕೂಡಾ ಮ್ಯಾಕ್ ಬುಕ್ ಸೂಕ್ತ ಅಲ್ಲ.

ವಿಡಿಯೋ ಎಡಿಟಿಂಗ್ ಗೆ ಮ್ಯಾಕ್ ಬುಕ್ ಪ್ರೋ ಎಂ೧ಎಕ್ಸ್ ಅಥವಾ ಹೆಚ್ಚಿನದು ಉತ್ತಮ. ಬರೀ ಎಂ೧ ಚಿಪ್ ವೃತ್ತಿಪರ ಎಡಿಟಿಂಗ್ ಗೆ ಅಷ್ಟೊಂದು ಉಚಿತವಲ್ಲ.

ಮ್ಯಾಕ್ ಬುಕ್ ರೆಟಿನಾ ಪರದೆ ಹೊಂದಿದ್ದು ಡಿಸಿಐ - ಪಿ೩ ಕಲರ್ ಗ್ಯಾಮಟ್ ಹೊಂದಿದೆ. ಇದು ಅತ್ಯುತ್ತಮ ಪರದೆ ತಂತ್ರಜ್ಞಾನ. ಅಷ್ಟೇ ಅಲ್ಲ ಉತ್ತಮ ಟಚ್ ಪ್ಯಾಡ್ ಹಾಗೂ ಕೀಲಿಮಣೆ ಸಹ ಇದೆ.

ನಿಜ ಮ್ಯಾಕ್ ಬುಕ್ ಪ್ರಿಮಿಯಂ ಅನುಭವ ನೀಡುತ್ತೆ ಅನ್ನುವದರಲ್ಲಿ ಎರಡು ಮಾತಿಲ್ಲ ಆದರೆ ಇವುಗಳ ಖರ್ಚು ಜಾಸ್ತಿ. ಇದಕ್ಕಿಂತ ಕಡಿಮೆ ಬೆಲೆಗೆ ಇದಕ್ಕೂ ಶಕ್ತಿಶಾಲಿ ಲ್ಯಾಪ್ ಟಾಪ್ ವಿಂಡೋಸ್ ಅಲ್ಲಿ ಸಿಗುತ್ತದೆ. ವಿಂಡೋಸ್ ಲ್ಯಾಪ್ಟಾಪ್ ಅಪ್ ಗ್ರೇಡ್ ಹಾಗೂ ರಿಪೇರಿ ಸಾಧ್ಯ ಹಾಗೂ ಅದರ ಖರ್ಚು ಕಡಿಮೆ.

ಒಟ್ಟಿನಲ್ಲಿ ಯಾವುದೇ ಹಣದ ಸಮಸ್ಯೆ ಇಲ್ಲವೆಂದರೆ ಮ್ಯಾಕ್ ಬುಕ್ ಖರೀದಿಸಿ. ನಿಮಗೆ ಅದು ಉತ್ತಮ ಅನುಭವ ಕೊಡುವದು. ಆದರೆ ಬರೀ ಎಂ೧ ಚಿಪ್ ಹಾಗೂ ೮ಜಿಬಿಯನ್ನು ೪ಕೆ ವಿಡಿಯೋ ಎಡಿಟಿಂಗ್ ಗೆ ಖರೀದಿ ಮಾಡ  ಬೇಡಿ. ಅದು ಸಾಕಾಗದು.

ಸೂತ್ರ ೧೫: ತೀರಾ ದುಬಾರಿ ಲ್ಯಾಪ್ ಟಾಪ್ ಖರೀದಿಸಬೇಡಿ

ಲ್ಯಾಪ್ ಟಾಪ್ ಬೆಲೆ 20 ಸಾವಿರದಿಂದ ಮೂರುವರೆ ಲಕ್ಷದವರೆಗೆ ಇದೆ. 

ದಯಮಾಡಿ ತೀರಾ ದುಬಾರಿ ಲ್ಯಾಪ್ ಟಾಪ್ ನಿಮ್ಮ ಬಳಿ ಹಣದ ಖಜಾನೆ ಇದ್ದ ಹೊರತು ಖರೀದಿ ಮಾಡಬೇಡಿ. ಈಗ ಕಂಪನಿಗಳು ಲ್ಯಾಪ್ ಟಾಪ್ ಮೇಲೆ ಕೇವಲ ೧ ವರ್ಷ ವಾರಂಟಿ ಮಾತ್ರ ಕೊಡುತ್ತವೆ. ಅದರ ನಂತರ ನೀವುಂಟು ನಿಮ್ಮ ಲ್ಯಾಪ್ ಟಾಪ್ ಉಂಟು.

ಅಷ್ಟೇ ಅಲ್ಲ ಪರದೆ ಒಡೆದದ್ದು ಅಥವಾ ವೋಲ್ಟೇಜ್ ನಿಂದ ಸುಟ್ಟಿದ್ದು ಎಲ್ಲಾ ನೀವೇ ಭರಿಸಬೇಕು. ನಿಮ್ಮ ಬಳಿ ಅಷ್ಟು ಆದಾಯ ಇದ್ದರೆ ಸರಿ ಇಲ್ಲಾಂದ್ರೆ ವ್ಯಾಲ್ಯೂ ಫಾರ್ ಮನಿ ಲ್ಯಾಪ್ ಟಾಪ್ / ಡೆಸ್ಕ್ ಟಾಪ್ ಖರೀದಿಯೇ ಉತ್ತಮ.

ಗೇಮಿಂಗ್ ಡೆಸ್ಕ್ ಟಾಪ್ ಗಳು ಲ್ಯಾಪ್ ಟಾಪ್ ಗಿಂತ  ಹೆವಿ ವಿಡಿಯೋ ಎಡಿಟಿಂಗ್ ಕೆಲಸಗಳಿಗೆ ಉತ್ತಮ. ಡೆಸ್ಕ್ ಟಾಪ್ ಇನ್ನೂ ಸುಲಭವಾಗಿ ಅಪ್ ಗ್ರೇಡ್ ಮಾಡಬಹುದು. ಆರಾಮವಾಗಿ ೬೪ಜಿಬಿ ವರೆಗೆ ರಾಮ್ ಬಳಸಬಹುದು. ಆದರೆ ಪೋರ್ಟಬಿಲಿಟಿ ಇರುವದಿಲ್ಲ. ಅಂದರೆ ನಿಮಗೆ ಟ್ರಾವೆಲ್ ಮಾಡುತ್ತಾ ಇರುವಾಗ ಡೆಸ್ಕ್ ಟಾಪ್ ಒಯ್ಯಲು ಆಗುವದಿಲ್ಲ!

ಸೂತ್ರ ೧೬: ವೋಲ್ಟೇಜ್ ಸ್ಟೆಬಿಲೈಜರ್ ಬಳಸಿ

ನಿಮ್ಮ ಊರಲ್ಲಿ ಹೈ ವೋಲ್ಟೇಜ್ ಅಥವಾ ಲೋ ವೋಲ್ಟೇಜ್ ಪ್ರಾಬ್ಲಂ ಇದ್ದರೆ ತಪ್ಪದೇ ವೋಲ್ಟೇಜ್ ಸ್ಟೆಬಿಲೈಜರ್ ಬಳಸಿ. ಇದು ನಿಮ್ಮ ಲ್ಯಾಪ್ ಟಾಪ್ ಅನ್ನು ರಕ್ಷಿಸುತ್ತದೆ.

ಕೊನೆಯ ಮಾತು

ಲ್ಯಾಪ್ ಟಾಪ್ ನಿಮ್ಮ ಕೆಲಸಕ್ಕೆ ಅನುಕೂಲ ಇರುವಂತೆ ವಿನ್ಯಾಸ ಗೊಳಿಸಿದ್ದನ್ನು ಮಾತ್ರ ಖರೀದಿಸಿ. ನೆನಪಿಡಿ ಸಾಮಾನ್ಯ ಲ್ಯಾಪ್ ಟಾಪ್ ಅಲ್ಲಿ ಗೇಮಿಂಗ್ / ೪ಕೆ ವಿಡಿಯೋ ಎಡಿಟಿಂಗ್ ಸಾಧ್ಯವಿಲ್ಲ. ಒಮ್ಮೆ ಖರೀದಿಸಿದ ಮೇಲೆ ರಾಮ್ ಮೆಮರಿ ಬಿಟ್ಟರೆ ಇನ್ನಾವುದೂ ಅಪ್ ಗ್ರೇಡ್ ಸಾಧ್ಯವಿಲ್ಲ. ಕೆಲವೊಂದರಲ್ಲಿ ಅದೂ ಸಹ ಆಗದು.

ನೀವು ವಿದ್ಯಾರ್ಥಿ ಆಗಿದ್ದರೆ ಕನಿಷ್ಟ ಕೋಡಿಂಗ್ ಆಗುವಂತಹ ಲ್ಯಾಪ್ ಟಾಪ್ ಖರೀದಿಸಿ. ಪದೇ ಪದೇ ಹೊಸ ಮಾಡೆಲ್ ಅಪ್ ಗ್ರೇಡ್ ಮಾಡುವ ಕೆಲಸ ಮಾಡ ಬೇಡಿ. ನಾಜೂಕಾಗಿ ಬಳಸಿ. 

ಇನ್ನೊಂದು ಲೇಖನದಲ್ಲಿ ನನ್ನ ಆಯ್ಕೆಯ ಲ್ಯಾಪ್ ಟಾಪ್ ಯಾವುದಕ್ಕೆ ಅವು ಸೂಕ್ತ ಅನ್ನುವ ಪಟ್ಟಿ ನೀಡ್ತಿನಿ ಒಕೆ ನಾ?

ನಿಮ್ಮ ಉತ್ತಮ ಲ್ಯಾಪ್ ಟಾಪ್ ಹುಡುಕಾಟ ಯಶಸ್ಸಾಗಲಿ ಎಂಬುದು ನಿಮ್ಮ ಹಾರೈಕೆ.

ಈ ಲೇಖನ ಹೇಗನಿಸಿತು? ಹೇಗೆ ಇನ್ನೂ ಇಂಪ್ರೂವ್ ಮಾಡಬಹುದು? ಕಮೆಂಟ್ ಹಾಕ್ತೀರಾ? ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅನಿಸಿಕೆ ಏನು? ತಿಳಿಸಿ.

Advertisement

blogger
© ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ, ಅನುಮತಿ ಇಲ್ಲದೇ ಲೇಖನಗಳನ್ನು ನಕಲು ಮಾಡುವಂತಿಲ್ಲ.
ವಿಸ್ಮಯನಗರಿ.ಕಾಂ