Slider

ಚಾಟ್ ಜಿಪಿಟಿ : ಬದಲಾವಣೆಯ ಹರಿಕಾರ ಕ್ರಾಂತಿಕಾರಿ ಚಾಟ್ ಬೊಟ್

ಇಂದು ಇಂಟರ್ನೆಟ್ ಅಲ್ಲಿ ಅಪರಿಮಿತ ಮಾಹಿತಿ ಇವೆ. ಒಂದು ಪ್ರಶ್ನೆಗೆ ಉತ್ತರಕ್ಕಾಗಿ ಅಥವಾ ಒಂದು ಸಲಹೆಗಾಗಿ ಹಲವಾರು ತಾಣಗಳಿಗೆ ಭೇಟಿ ನೀಡಬೇಕು. ಯಾವುದು ಉತ್ತಮ ಎಂದು ನೀವೇ ನಿರ್ಧರಿಸಬೇಕು.

ನಿಮಗೆ ನಿಮ್ಮ ಪ್ರಶ್ನೆಗೆ ಉತ್ತರ ಕೊಡಬಲ್ಲ, ಸಲಹೆ ನೀಡಬಲ್ಲ, ದಿನನಿತ್ಯದ ಕೆಲಸಗಳಿಗೆ ಸಹಾಯ ಮಾಡಬಲ್ಲಒಂದು ಪರ್ಸನಲ್ ಅಸಿಸ್ಟೆಂಟ್ ಇದ್ರೆ, ಚೆನ್ನ ಅಂತ ಅನ್ನಿಸಿದೆಯಾ?

ಕೃತಿಕ ಬುದ್ಧಿಶಕ್ತಿ ಹಾಗೂ ಚಾಟ್ ಬೊಟ್ ತಂತ್ರಜ್ಞಾನದಲ್ಲಿ ಆದ ಇತ್ತೀಚಿನ ಬೆಳವಣಿಗೆಯಿಂದ ಈ ಕನಸು ನಿಜವಾಗಿದೆ.

ಚ್ಯಾಟ್ ಜಿಪಿಟಿ ಪರಿಚಯ

ಬನ್ನಿ ಕ್ರಾಂತಿಕಾರಕ ಚಾಟ್ ಬಟ್ ಆದ ಚಾಟ್ ಜಿಪಿಟಿ ಭೇಟಿ ಮಾಡಿ. ಇದು ಹಾಗೂ ಇದೇ ತಂತ್ರಜ್ಞಾನ ಬಳಸಿ ಬರಲಿರುವ ಇನ್ನೂ ಹಲವು ಚ್ಯಾಟ್ ಬೊಟ್ ಗಳು ನಾವು ಕಂಪ್ಯೂಟರ್ ಜೊತೆಗೆ ಹೇಗೆ ಸಂಭಾಷಿಸುತ್ತೇವೆ ಅನ್ನೋದನ್ನ ಬದಲಾಯಿಸಲಿದೆ.

ಚ್ಯಾಟ್ ಜಿಪಿಟಿ ಯು ಚ್ಯಾಟ್ ಬೊಟ್ ಆಗಿದ್ದು ಓಪನ್ ಎಐ ಕಂಪನಿ ಅಭಿವೃದ್ಧಿಪಡಿಸಿ ಇದನ್ನು ನವಂಬರ್ 2022 ರಲ್ಲಿ ಬಿಡುಗಡೆ ಮಾಡಿತು. ಇದನ್ನು ಓಪನ್ ಎಐನ ದೊಡ್ಡ ಭಾಷೆಯ ಮಾಡಲ್ ಬಳಸಿ ಅದರ ಮೇಲೆ ನಿರ್ಮಿಸಲಾಗಿದೆ.

ಮನುಷ್ಯರ ಹಾಗೆ ಬರೆಯಬಲ್ಲ ಹಾಗೂ ಅತ್ಯಂತ ವೇಗವಾಗಿ ಕಂಟೆಂಟ್ ಜನರೇಟ್ ಮಾಡುವ ಸಾಮರ್ಥ್ಯ ಮೆಚ್ಚುಗೆಗೆ ಪಾತ್ರವಾಗಿದೆ. 

ಓಪನ್ ಎಐ ಒಂದು ಕೃತಕ ಬುದ್ಧಿಶಕ್ತಿಯ ಬಗ್ಗೆ ಸಂಶೋಧನೆ ಮಾಡುವ ಪ್ರಯೋಗ ಶಾಲೆ ಆಗಿದ್ದು ಮೈಕ್ರೋಸಾಫ್ಟ್ ಇದರಲ್ಲಿ ಬಂಡವಾಳ ಹೂಡಿದ ದೊಡ್ಡ ಕಂಪನಿಯಾಗಿದೆ.

ಚ್ಯಾಟ್ ಜಿಪಿಟಿ ಜನಪ್ರಿಯತೆ

ಬಿಡುಗಡೆ ಆದ ಐದು ದಿನದಲ್ಲಿ ೧ ಮಿಲಿಯನ್ ಬಳಕೆದಾರರ ಪಡೆಯುವದರ ಮೂಲಕ ಚ್ಯಾಟ್ ಜಿಪಿಟಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಟೆಕ್ ಪ್ಲಾಟಫಾರಂ ಆಗಿ ಹೆಸರು ಮಾಡಿತು. ಬಿಡುಗಡೆ ಆದ ೨ ತಿಂಗಳಲ್ಲಿ ನೂರು ಮಿಲಿಯನ್ ಬಳಕೆದಾರರ ಪಡೆಯುವದರ ಮೂಲಕ ಹೆಸರು ಮಾಡಿದೆ.

ಈ ಅಮೋಘ ಜನಪ್ರಿಯತೆಗೆ ಮುಖ್ಯ ಕಾರಣ ಮನುಷ್ಯರಂತೆ ಉತ್ತರ ಕೊಡುವ ಸಾಮರ್ಥ್ಯ. ಏನನ್ನಾದರೂ ಬರೆಯುವ ಸಾಮರ್ಥ್ಯ.

ಚ್ಯಾಟ್ ಜಿಪಿಟಿಯ ಜನಪ್ರಿಯತೆಯಿಂದ ಸ್ಪೂರ್ತಿಗೊಂಡು ಗೂಗಲ್ ಹಾಗೂ ಮೆಟಾ ಕೂಡಾ ಅದೇ ರೀತಿಯ ಲಾರ್ಜ್ ಲಾಂಗ್ವೇಜ್ ಮಾಡೆಲ್( ದೊಡ್ಡ ಭಾಷೆ ಮಾದರಿ) ಆಧಾರಿತ ಚ್ಯಾಟ್ ಬಾಟ್ ನಿರ್ಮಿಸುತ್ತಾ ಇವೆ. ಗೂಗಲ್ ತನ್ನ ಚ್ಯಾಟ್ ಬಾಟ್ ಗೆ ಬಾರ್ಡ್ ಎಂಬ ಹೆಸರಿಟ್ಟಿದೆ.

ಕೃತಕ ಬುದ್ಧಿಶಕ್ತಿ ಎಂದರೇನು?


ಕೆಲವು ಕೆಲಸಗಳಿಗೆ ಮನುಷ್ಯನಿಗೆ ಇರುವಂತ ಬುದ್ಧಿಶಕ್ತಿ ಬೇಕು. ಕಲಿಕೆ, ತರ್ಕಶಕ್ತಿ ಹಾಗೂ ಸಮಸ್ಯೆ ಪರಿಹಾರ ಮಾಡುವಂತಹ ಸಾಮರ್ಥ್ಯ ಬೇಕು.

ಕೃತಕ ಬುದ್ಧಿಶಕ್ತಿಯನ್ನು ಕಂಪ್ಯೂಟರ್ ವಿಜ್ಞಾನದ ಒಂದು ವಿಭಾಗ. ಇದರ ಮುಖ್ಯ ಗುರಿ ಮನುಷ್ಯರಷ್ಟೇ ಬುದ್ದಿಶಕ್ತಿ ಇರುವ ಯಂತ್ರಗಳನ್ನು ತಯಾರಿಸುವುದು.

ಯಂತ್ರ ಕಲಿಕೆ (ಮಷೀನ್ ಲರ್ನಿಂಗ್) ಎನ್ನುವುದು ಈ ಕೃತಕ ಬುದ್ಧಿಶಕ್ತಿ ವಿಭಾಗದಲ್ಲಿ ಬಳಕೆಯಾಗುತ್ತಿರುವ ಮುಖ್ಯ ತಂತ್ರಜ್ಞಾನ.

ಈ ಯಂತ್ರ ಕಲಿಕೆ ತಂತ್ರಜ್ಞಾನದಲ್ಲಿ ಮಾಹಿತಿಯನ್ನು ಓದಿ ಕಲಿತು ತನ್ನ ಬುದ್ಧಿಶಕ್ತಿ ಹೆಚ್ಚಿಸಿಕೊಳ್ಳುವ ತರಬೇತಿಯನ್ನು ಗಣಕಯಂತ್ರಗಳಿಗೆ ನೀಡಲಾಗುತ್ತದೆ. ಚ್ಯಾಟ್ ಜಿಪಿಟಿ ಈ ಕೃತಕ ಬುದ್ಧಿಶಕ್ತಿಯ ಸಾಮರ್ಥ್ಯಕ್ಕೆ ಒಂದು ಉತ್ತಮ ಉದಾಹರಣೆ ಎನ್ನಬಹುದು.

ಇದು ಕೂಡ ಯಂತ್ರ ಕಲಿಕೆಯನ್ನು ಬಳಕೆದಾರರು ಕೇಳುವ ಪ್ರಶ್ನೆಗೆ ಉತ್ತರ ನೀಡಲು, ಅದನ್ನು ಇನ್ನೂ ಉತ್ತಮ ಮಾಡಲು ಬಳಸುತ್ತದೆ.

ಈ ಕೃತಕ ಬುದ್ಧಿಶಕ್ತಿ ಕಂಪ್ಯೂಟರಿಗೆ ಚಿತ್ರದಲ್ಲಿ ವಸ್ತು ವ್ಯಕ್ತಿ ಗುರುತಿಸುವ, ಸಾಮಾನ್ಯ ಭಾಷೆ ಅರ್ಥಮಾಡಿಕೊಳ್ಳುವ ಹಾಗೂ ಮಾಹಿತಿ ಆಧಾರದ ಮೇಲೆ ನಿರ್ಧಾರ ಮಾಡುವ ಶಕ್ತಿ ನೀಡುತ್ತದೆ.

ಚಾಟ್ ಬೊಟ್ ಎಂದರೇನು?

ಮನುಷ್ಯರ ಜೊತೆ ಚಾಟ್ ವಿಂಡೋ ಮೂಲಕ ಸಂಭಾಷಣೆ ಗಳಿಸುವಂತೆ ವಿನ್ಯಾಸ ಮಾಡಿರುವ ಕಂಪ್ಯೂಟರ್ ಪ್ರೋಗ್ರಾಂಗೆ ಚ್ಯಾಟ್ ಬಾಟ್ ಎನ್ನುತ್ತಾರೆ. 

ಚ್ಯಾಟ್ ಬೊಟ್ ಅನ್ನು ಈ ಮುಂದಿನ ಕೆಲಸಗಳಿಗೆ ಬಳಸಬಹುದು.

  • ಗ್ರಾಹಕರ ಸೇವೆ 
  • ಕಸ್ಟಮರ್ ಸರ್ವಿಸ್ 
  • ಪರ್ಸನಲ್ ಅಸಿಸ್ಟೆಂಟ್ 
  • ಶಿಕ್ಷಣಕ್ಕಾಗಿ

ಚ್ಯಾಟ್ ಬೊಟ್ ಅಲ್ಲಿ ಮುಖ್ಯವಾಗಿ ಎರಡು ವಿಧ.

ನಿಯಮ ಆಧಾರಿತ

ಇವು ಒಂದಿಷ್ಟು ನಿಗದಿಪಡಿಸಿದ ರೂಲ್ ಆಧಾರದ ಮೇಲೆ ಕೆಲಸ ಮಾಡುತ್ತವೆ 

ಯಂತ್ರ ಕಲಿಕೆ ಆಧಾರಿತ 

ಮೆಷಿನ್ ಲರ್ನಿಂಗ್ ಬಳಸುವ ಕಾಲಕ್ರಮೇಣ ತಮ್ಮ ಉತ್ತಮವಾಗಿ ಉತ್ತರ ನೀಡಲು ಆರಂಭಿಸುತ್ತವೆ.

ಚಾಟ್ ಬೊಟ್ ಇತಿಹಾಸ

ಚಾಟ್ ಬೊಟ್ ಇದೇನು ಹೊಸ ವಿದ್ಯಮಾನ ಅಲ್ಲ! ಹಲವು ದಶಕಗಳಿಂದ ಇವೆ. ಮೊದಲ ಚಾಟ್ ಬೊಟ್ ಎಲಿಝಾ ನಿರ್ಮಿಸಿದ್ದು, 1960ರಲ್ಲಿ ಜೋಸೆಫ್ ವಿಷನ್ ಬೌಮ್ ಎಂಬ ಎಂಐಟಿಯ ಗಣಕ ವಿಜ್ಞಾನಿ.

ಎಲಿಜಾ ಬಳಕೆದಾರರ ಜೊತೆ ಚಾಟಿಂಗ್ ಮಾಡಲು, ಮೊದಲೇ ನಿಗದಿ ಪಡಿಸಿದ ಪ್ರತಿಕ್ರಿಯೆ ಬಯಸುವ ಪ್ರೋಗ್ರಾಮ್ ಆಗಿತ್ತು.

ಅನಂತರ ಚಾಟ್ ಬೊಟ್ ಗಳು ವಿಕಸನ ಆಗುತ್ತಾ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡವು. ಇದಕ್ಕೆ ಮಷೀನ್ ಲರ್ನಿಂಗ್ (ಯಂತ್ರ ಕಲಿಕೆ) ಹಾಗೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಶಕ್ತಿ) ಗೆ ಧನ್ಯವಾದ ಹೇಳಲೇಬೇಕು.

ಹಾಗೆಯೇ ಚಾಟ್ ಬೊಟ್ ಗಳ ಬಳಕೆ ಕೂಡ ಜಾಸ್ತಿ ಆಗುತ್ತಾ ಹೋಯಿತು. 

ಚ್ಯಾಟ್ ಬೊಟ್ ಲಾಭಗಳೇನು? 

ಚಾಟ್ ಬೊಟ್ ಗಳನ್ನು ಯಾವುದೇ ಸಮಯದಲ್ಲಿ ಎಲ್ಲಿಂದ ಬೇಕಾದರೂ ಬಳಸಬಹುದು. ಇದು ಬಳಕೆದಾರರಿಗೆ ಅನುಕೂಲಕರ.

ವೇಗ: ಚ್ಯಾಟ್ ಬೊಟ್ ಗಳು ತಕ್ಷಣ ಪ್ರಶ್ನೆಗೆ ಉತ್ತರ ಕೊಡುವದು ಅಥವಾ ಹೇಳಿದ ಕೆಲಸ ಮಾಡುತ್ತದೆ. ಇದರಿಂದ ಸಮಯ ಹಾಗೂ ಶ್ರಮ ಎರಡು ಉಳಿತಾಯ.

ನಿಖರ: ಚ್ಯಾಟ್ ಬೊಟ್ ಗಳು  ತಮ್ಮಲ್ಲಿರುವ ಅಪರಿಮಿತ ಮಾಹಿತಿ ಹಾಗೂ ಕೃತಕ ಬುದ್ಧಿಶಕ್ತಿ ಬಳಸಿ ನಿಖರ ಉತ್ತರ ನೀಡುತ್ತದೆ.

ವೈಯಕ್ತಿಕರಣ: ಬೇರೆ ಬೇರೆ ಜನರಿಗೆ ಸೂಕ್ತವಾಗುವಂತೆ ಬದಲಾವಣೆ ಮಾಡಬಹುದಾಗಿದೆ .

ಸುಸ್ತಾಗಲ್ಲ: ಕಂಪ್ಯೂಟರ್ ಹಾರ್ಡವೇರ್ ಇದ್ದರೆ ಸಾಕು ೨೪ ಗಂಟೆ ಕೆಲಸ ಮಾಡಬಲ್ಲುದು. ರೆಸ್ಟ್ ಬೇಡ.

ಚ್ಯಾಟ್ ಜಿಪಿಟಿ ಕೂಡ ಒಂದು ಚಾಟ್ ಬೊಟ್ ಆಗಿದ್ದು ಈ ಮೇಲಿನ ಲಾಭಗಳನ್ನು ಹೊಂದಿದೆ.

ಚ್ಯಾಟ್ ಜಿಪಿಟಿಯು ವಿಜ್ಞಾನ ಇತಿಹಾಸ ತಂತ್ರಜ್ಞಾನ ವೈದ್ಯಕೀಯ ಹೀಗೆ ವಿಭಿನ್ನ ವಿಷಯಗಳ ಪ್ರಶ್ನೆ ಸಮಸ್ಯೆಗಳಿಗೆ ಉತ್ತರ ನೀಡಬಲ್ಲದು. ಪುಸ್ತಕ, ಸಿನಿಮಾ, ರೆಸ್ಟೋರೆಂಟ್ಗಳು ಹಾಗೂ ಪ್ರವಾಸಿ ತಾಣಗಳ ಬಗ್ಗೆ ಸಲಹೆ ನೀಡಬಲ್ಲದು. ಅಷ್ಟೇ ಅಲ್ಲ ಪರ್ಸನಲ್ ಅಸಿಸ್ಟೆಂಟ್ ತರಹ ಶೆಡ್ಯೂಲಿಂಗ್, ನೆನಪಿಸುವುದು ಮತ್ತು ಅಲಾರಾಂ ಗಳನ್ನು ಸಹ ಇಡಬಲ್ಲದು.

ಚಾಟ್ ಜಿಪಿಟಿಯ ಮಿತಿಗಳು

ಕೇವಲ ತರಬೇತಿ ನೀಡಲ್ಪಟ್ಟ ಮಾಹಿತಿಗಳ ಬಗ್ಗೆ ಮಾತ್ರ ಉತ್ತರ ಹಾಗೂ ಪರಿಹಾರ ನೀಡಬಹುದು.

ಎಲ್ಲಾ ಭಾಷೆ ಹಾಗೂ ಉಪಭಾಷೆ ತಿಳಿಯದು.

ಚಾಟ್ ಬಾಟಗಳಿಗೆ ಭಾವನೆ ಅರ್ಥ ಆಗದು. ಕೆಲವೊಮ್ಮೆ ಕನಿಕರದಿಂದ ಉತ್ತರ ಕೊಡಲಾಗದು.

ಇಂಟರ್ನೆಟ್ ಸಂಪರ್ಕ ಇರದಿದ್ದರೆ ಕೆಲಸ ಮಾಡದು.

ಚಾಟ್ ಜಿಪಿಟಿ ಏನೇನು ಕೆಲಸ ಮಾಡುವುದು?

ಉತ್ತರ ಕೊಡುವುದು

ಅನೇಕ ವಿಷಯಗಳ ಬಗ್ಗೆ ಪ್ರಶ್ನೆಗಳ ಉತ್ತರ ಕೊಡಬಲ್ಲದು.

ಸಂಭಾಷಣೆ ನಡೆಸುವುದು

ವಿವಿಧ ವಿಷಯಗಳ ಬಗ್ಗೆ ಬಳಕೆದಾರರ ಜೊತೆ ಸಂಭಾಷಣೆ ಕೂಡ ನಡೆಸಬಲ್ಲದು.

ಬರಹ ಬರೆಯುವದು

ಯಾವುದೇ ವ್ಯಾಕರಣ ದೋಷ ಇಲ್ಲದೇ ಆಂಗ್ಲ ಭಾಷೆಯಲ್ಲಿ ಚ್ಯಾಟ್ ಜಿಪಿಟಿ ಬರೆಯಬಲ್ಲುದು. ಕಥೆ, ಕವನ, ಕಾದಂಬರಿ, ಪುಸ್ತಕ, ಬ್ಲಾಗ್, ಲೇಖನ, ಸಂಶೋಧನಾ ಪೇಪರ್, ಈಮೇಲ್ ಹೀಗೆ ದೊಡ್ಡ ಪಟ್ಟಿ ಇದೆ.

ಕೆಲಸಕ್ಕೆ ಸಹಾಯ

ಅಲಾರಾಂ ಇಡುವುದು ನೆನಪಿಸುವುದು. ಪರ್ಸನಲ್ ಅಸಿಸ್ಟೆಂಟ್ ತರ ಕೆಲಸ ಮಾಡುವುದು. ಸಲಹೆ ನೀಡುವುದು. ಸಿನಿಮಾ ಪುಸ್ತಕ ಪ್ರವಾಸಿ ತಾಣ ಹೋಟೆಲ್ ಬಗ್ಗೆ ಸಲಹೆ ನೀಡುವುದು.

ಗ್ರಾಹಕರ ಸೇವೆ

ಗ್ರಾಹಕರ ಸಾಮಾನ್ಯ ಸಮಸ್ಯೆಗಳಿಗೆ ಪರಿಹಾರ ಮೊದಲಾದವುಗಳನ್ನು ನೀಡುವುದು.

ಆಟ ಆಡುವುದು

ಬೇಸರ ಆಗಿದೆಯಾ? ಚ್ಯಾಟ್ ಜಿಪಿಟಿ ಜೊತೆ ಆಟ ಕೂಡಾ ಆಡಬಹುದು.

ಶಿಕ್ಷಣಕ್ಕೆ ಬಳಕೆ

ವಿಜ್ಞಾನ, ವೈದ್ಯಕೀಯ, ಹಣಕಾಸು ಹೀಗೆ ಎಲ್ಲಾ ವಿಷಯದ ಮಾಹಿತಿ ತಿಳಿಯಲು ಚ್ಯಾಟ್ ಜಿಪಿಟಿ ಸೂಕ್ತ. ಯಾವ ವಿಷಯ ಹೇಳಿ, ಆ ವಿಷಯದ ಮೇಲೆ ಪ್ರಬಂಧ, ನಿಬಂಧ ಎಲ್ಲಾ ಬರೆದು ಕ್ಷಣಾರ್ಧದಲ್ಲಿ ನಿಮ್ಮ ಮುಂದಿಡ ಬಲ್ಲುದು.

ಕೋಡಿಂಗ್

ಯಾವ ರೀತಿಯ ಕೋಡ್ ಬರೆಯ ಬೇಕು ಹೇಳಿ ನಿಮಗೆ ಆ ಕೋಡ್ ಬರೆದು ನೀಡಬಲ್ಲುದು. 

ಚ್ಯಾಟ್ ಜಿಪಿಟಿ ಬಳಸುವುದು ಹೇಗೆ?

ಚ್ಯಾಟ್ ಜಿಪಿಟಿ ಬಳಕೆ ತುಂಬಾ ಸುಲಭ. 

  1. ಚ್ಯಾಟ್ ಜಿಪಿಟಿಯ ಈ ತಾಣಕ್ಕೆ ಭೇಟಿ ಕೊಡಿ. (https://chat.openai.com/chat)
  2. ಗೂಗಲ್ ಅಥವಾ ಮೈಕ್ರೋಸಾಫ್ಟ್ ಅಕೌಂಟ್ ಬಳಸಿ ಲಾಗಿನ್ ಆಗಿ. 
  3. ನಿಮ್ಮ ಪ್ರಶ್ನೆ ಅಥವಾ ವಾಕ್ಯ ಬರೆದು ಉತ್ತರಕ್ಕೆ ಕಾಯಿರಿ
  4. ಚಾಟ್ ಜಿಪಿಟಿ ನೈಜ ಉತ್ತರವನ್ನು ನೀಡುವುದು. 
  5. ಚ್ಯಾಟ್ ಜಿಪಿಟಿಗೆ ಮತ್ತೆ ಮತ್ತೆ ಪ್ರಶ್ನೆ ಕೇಳಬಹುದು. ಅದು ನಿಮ್ಮ ಕೆಲವು ನಿಮಿಷಗಳ ಹಿಂದೆ ಕೇಳಿದ ಪ್ರಶ್ನೆ ನೆನಪಿಟ್ಟಿರುತ್ತದೆ.
ನಿಮಗೆ ಏನು ಬೇಕು ಆ ಪ್ರಶ್ನೆ ಸಧ್ಯಕ್ಕೆ ಇಂಗ್ಲೀಷ್ ಅಲ್ಲಿ ಕೇಳಬೇಕು. ಪ್ರಶ್ನೆ ವಿವರ ವಾಗಿರಲಿ. ಯಾವ ರೀತಿಯಲ್ಲಿ ಬರೆಯಬೇಕು? ಏನೇನಿರಬೇಕು? ಎಲ್ಲ ಕೇಳಬಹುದು. ಕಥೆ, ಕವನ, ಈಮೇಲ್, ಕವರ್ ಲೆಟರ್, ಯಾವುದೋ ಪಿಡಿಎಫ಼್ ಸಾರಾಂಶ, ಚಿತ್ರ ಗುರುತಿಸುವಿಕೆ, ನಿಬಂಧ, ಪ್ರಬಂಧ, ಲೇಖನ, ಕೋಡಿಂಗ್, ಸಮಸ್ಯೆ, ಸಲಹೆ ಹೀಗೆ ಏನು ಬೇಕಾದರೂ ಕೇಳಬಹುದು. ಎಷ್ಟು ಸಾಧ್ಯವೋ ಅಷ್ಟು ನಿಮ್ಮ ಪ್ರಶ್ನೆ ವಿವರವಾಗಿರಲಿ.

ಉದಾಹರಣೆಗೆ ಪರಿಸರ ಮಾಲಿನ್ಯದ ಬಗ್ಗೆ ಗ್ರೇಡ್ ೭, ಕಾಲೇಜ್ ಸ್ಟುಡೆಂಟ್ ಹಾಗೂ ವಿಜ್ಞಾನಿ ತರಹ ಬರೆಯಲು ಹೇಳಿದೆ. ಆಗ ಬೇರೆ ಬೇರೆ ಸಂಕೀರ್ಣತೆಯಲ್ಲಿ ಬರೆಯಿತು!
ಈಮೇಲ್ ಉದಾಹರಣೆ


ಬಿಂಗ್ ಹಾಗೂ ಚ್ಯಾಟ್ ಜಿಪಿಟಿ

ಬಿಂಗ್.ಕಾಂ ಚ್ಯಾಟ್ ಜಿಪಿಟಿ ಬಳಸಿ ಚ್ಯಾಟ್ ವಿಭಾಗ ಆರಂಭಿಸಿದೆ. ಅದು ಇನ್ನೂ ಎಲ್ಲರಿಗೂ ಲಭ್ಯವಿಲ್ಲ.
ಅದೂ ಕೂಡಾ ಹೆಚ್ಚು ಕಡಿಮೆ ಚ್ಯಾಟ್ ಜಿಪಿಟಿ ತರಹ ಆದರೆ ಹೊಸ ಮಾಹಿತಿ ಆಧಾರದ ಮೇಲೆ ಉತ್ತರ ನೀಡಲಿದೆ. ಚ್ಯಾಟ್ ಜಿಪಿಟಿ ೨೦೨೧ರ ವರೆಗಿನ ಡಾಟಾ ಅವಲಂಭಿಸಿದ್ದರೆ ಬಿಂಗ್ ಚ್ಯಾಟ್ ಹೊಸ ಸುದ್ದಿ ಡಾಟಾ ಕೂಡಾ ಬಳಸುತ್ತದೆ.

ಉದಾಹರಣೆಗೆ ಹೊಸ ಬಿಂಗ್ ಅಲ್ಲಿ ನಾನು ಶೆರ್ಲಾಕ್ಸ್ ಹೋಂ ನ ಒಂದು ಪುಸ್ತಕದ ಸಾರಾಂಶ ಹೇಳಲು ಹೇಳಿದಾಗ ಕೆಲವೇ ಸೆಕಂಡುಗಳಲ್ಲಿ  ಸಮ್ಮರಿ ನನ್ನ ಮುಂದಿತ್ತು. ಇದು ವಿಸ್ಮಯವೇ ಸರಿ. ಮುಂದೆ ನಾವು ವೆಬ್ ಸರ್ಚ್ ಮಾಡುವ ವಿಧಾನದಲ್ಲಿ ಭಾರಿ ಬದಲಾವಣೆ ಆಗಲಿದೆ.


ಕೊನೆಯ ಮಾತು

ಒಟ್ಟಿನಲ್ಲಿ ಚ್ಯಾಟ್ ಜಿಪಿಟಿ ಒಂದು ಕ್ರಾಂತಿಕಾರಕ ಚ್ಯಾಟ್ ಬೊಟ್ ಆಗಿದೆ. ನಾವು ಕಂಪ್ಯೂಟರ್ ಬಳಸುವ ರೀತಿಯಲ್ಲಿ ಕ್ರಾಂತಿ ಉಂಟು ಮಾಡುತ್ತಿದೆ. ಮುಂದುವರೆದ ಕೃತಕ ಬುದ್ಧಿಶಕ್ತಿ,  ಸಾಮಾನ್ಯ ಭಾಷೆ ಪ್ರಾಸೆಸಿಂಗ್ ಮೂಲಕ ಚ್ಯಾಟ್ ಬೊಟ್ ಶಕ್ತಿ ಶಾಲಿ ಟೂಲ್ ಆಗಿದೆ.

ಇದನ್ನು ಬಳಸಿಕೊಂಡು ನಿಮ್ಮ ಮಾಹಿತಿ, ಈಮೇಲ್ ಮೊದಲಾದ ಹಲವು ಕೆಲಸ ಸುಲಭಗೊಳಿಸಬಹುದು.

ಇದು ಕೇವಲ ಆರಂಭಿಕ ಮಾತ್ರ. ಇನ್ನು ೫ ರಿಂದ ಹತ್ತು ವರ್ಷದಲ್ಲಿ ಚ್ಯಾಟ್ ಜಿಪಿಟಿ ಬಳಸಿದ ತಂತ್ರಜ್ಞಾನ ಬಳಸಿ ಇನ್ನೂ ಹಲವು ಸೇವೆ ಬರಲಿವೆ. ಗೂಗಲ್ ಹಾಗೂ ಮೆಟಾ (ಫೇಸ್ ಬುಕ್) ಕಂಪನಿ ಈಗಾಗಲೆ ಘೋಷಣೆ ಮಾಡಿವೆ. ಇವು ಮುಂಬರುವ ದಿನಗಳಲ್ಲಿ ನಾವು ಮಾಡುವ ಕೆಲಸಗಳಲ್ಲಿ ಎಐ ಟೂಲ್ ಒಂದು ಮುಖ್ಯ ಪಾತ್ರ ವಹಿಸಲಿದೆ.

ಈಗಾಗಲೇ ಅನೇಕ ವೃತ್ತಿಪರರು ಚ್ಯಾಟ್ ಜಿಪಿಟಿ ಬಳಸಿ ಅದರಿಂದ ಆಗುವ ಸಮಯ ಉಳಿತಾಯ, ವೇಗ ಕಂಡು ಕೊಳ್ಳಲಾರಂಭಿಸಿದ್ದಾರೆ. ನೀವು ಟ್ರೈ ಮಾಡಿದ್ದೀರಾ?

ಇದೇ ವಿಷಯದ ಬಗ್ಗೆ ಬರೆದ ಇನ್ನೊಂದು ಲೇಖನ ಕೂಡಾ ಇದೆ. ಅದನ್ನು ಇಲ್ಲಿ ಓದಿ

Image by Gerd Altmann from Pixabay

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅನಿಸಿಕೆ ಏನು? ತಿಳಿಸಿ.

Advertisement

blogger
© ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ, ಅನುಮತಿ ಇಲ್ಲದೇ ಲೇಖನಗಳನ್ನು ನಕಲು ಮಾಡುವಂತಿಲ್ಲ.
ವಿಸ್ಮಯನಗರಿ.ಕಾಂ